‘ಬ್ರೆಕ್‌ಫಾಸ್ಟ್ (ಬೆಳಗ್ಗೆ ಉಪಹಾರ ಮಾಡುವುದು)’ ಇದು ನಮ್ಮ ಸಂಸ್ಕೃತಿ ಅಲ್ಲ !

‘ಬೆಳಗ್ಗೆ ಎದ್ದಕೂಡಲೇ ವ್ಯಾಯಾಮ ಮಾಡದೇ ಚಹಾ ಕುಡಿಯುವುದು ಅಥವಾ ಉಪಹಾರ ಮಾಡುವುದು’, ಇದು ನಮ್ಮ ಸಂಸ್ಕೃತಿ ಅಲ್ಲ. ತಿಂದಿರುವ ಆಹಾರ ಸರಿಯಾಗಿ ಪಚನವಾಗಲು ಹೊಟ್ಟೆಯಲ್ಲಿನ ಅಗ್ನಿ (ಪಚನಶಕ್ತಿ) ಒಳ್ಳೆಯ ರೀತಿಯಲ್ಲಿ ಹೊತ್ತಿಕೊಂಡಿರಬೇಕು.

ಆರೋಗ್ಯಶಾಲಿ ಜೀವನಕ್ಕಾಗಿ ಆಯುರ್ವೇದ

ಕೆಲವೊಮ್ಮೆ ಸೇವೆಯ ನಿಮಿತ್ತ ರಾತ್ರಿ ಜಾಗರಣೆ ಮಾಡಬೇಕಾಗುತ್ತದೆ. ರಾತ್ರಿಯ ಊಟ ಬೇಗ ಆಗಿರುವುದರಿಂದ ಜಾಗರಣೆಯಾದಾಗ ರಾತ್ರಿ ಹಸಿವಾಗುತ್ತದೆ. ಇಂತಹ ಸಮಯದಲ್ಲಿ ಶೇವು, ಚಿವಡಾ ಇವುಗಳಂತಹ ಪದಾರ್ಥಗಳನ್ನು ತಿನ್ನಬಾರದು. ಜಾಗರಣೆಯಾದಾಗ ಹೊಟ್ಟೆಯಲ್ಲಿ ಪಿತ್ತ ಹೆಚ್ಚಾಗಿರುತ್ತದೆ.

ಊಟ ಮಾಡುವಾಗ ನೀರು ಕುಡಿಯಬೇಕೋ ಅಥವಾ ಕುಡಿಯಬಾರದು ?

‘ಊಟ ಮಾಡುವಾಗ ಅಗತ್ಯಕ್ಕನುಸಾರ ಮಧ್ಯ ಮಧ್ಯ ಸ್ವಲ್ಪ ಸ್ವಲ್ಪ ನೀರನ್ನು ಕುಡಿಯಬೇಕು’, ಎಂದು ಆಯುರ್ವೇದದಲ್ಲಿ ಹೇಳಲಾಗಿದೆ.

ಆರೋಗ್ಯಶಾಲಿ ಜೀವನಕ್ಕಾಗಿ ಆಯುರ್ವೇದ

‘ಕೇವಲ ‘ಪ್ರತಿದಿನ ವ್ಯಾಯಾಮವನ್ನು ಮಾಡುವುದು’ ಮತ್ತು ‘ದಿನಕ್ಕೆ ೨ ಬಾರಿ ಆಹಾರವನ್ನು ತೆಗೆದುಕೊಳ್ಳುವುದು’, ಈ ಎರಡೇ ವಿಷಯಗಳನ್ನು ನಿತ್ಯ ಆಚರಣೆಯಲ್ಲಿಟ್ಟರೆ, ಮಾತ್ರ ದೇಹವು ಆರೋಗ್ಯವಾಗಿರುತ್ತದೆ. ಬೇರೆ ಏನು ಮಾಡುವ ಅಗತ್ಯವಿಲ್ಲ, ಈ ೨ ಕೃತಿಗಳಿಗೆ ಅಷ್ಟು ಮಹತ್ವವಿದೆ.’

ಸನಾತನದ ಆಯುರ್ವೇದಿಕ ಔಷಧಗಳು

ಇಲ್ಲಿ ಪ್ರಾಥಮಿಕ ಉಪಚಾರವನ್ನು ಕೊಟ್ಟಿದೆ. ೭ ದಿನಗಳಲ್ಲಿ ಕಡಿಮೆಯಾಗದಿದ್ದರೆ ವೈದ್ಯರ ಸಲಹೆಯನ್ನು ಪಡೆಯಬೇಕು. ಸನಾತನ ಸಂಸ್ಥೆಯ ಯಷ್ಟಿಮಧ (ಜೇಷ್ಠ ಮಧ) ಚೂರ್ಣ ಲಭ್ಯವಿದೆ. ಇದರ ಇತರ ರೋಗಗಳ ಮೇಲಿನ ಉಪಯೋಗವನ್ನು ಆ ಡಬ್ಬಿಯ ಜೊತೆಗಿರುವ ಚೀಟಿಯಲ್ಲಿ ಕೊಡಲಾಗಿದೆ.

ಇತರರ ನಿದ್ರೆ ಹಾಳಾಗದಂತೆ ನೋಡಿಕೊಳ್ಳಿ !

‘ನ ಶಯಾನಂ ಪ್ರಬೋಧಯೇತ್ |’ (ಯಾಜ್ಞವಲ್ಕ್ಯಸ್ಮೃತಿ, ಅಧ್ಯಾಯ ೧, ಶ್ಲೋಕ ೧೩೮)

ನೀರಿನ ಬದಲು ಶರಬತ್ತು ಕುಡಿಯಬಹುದೇ ?

ಬೆಲ್ಲದ ಪದಾರ್ಥಗಳನ್ನು ಮೇಲಿಂದ ಮೇಲೆ ತಿನ್ನುತ್ತಿದ್ದರೆ ಪ್ರತಿದಿನವೂ ಆ ಪದಾರ್ಥಗಳನ್ನು ತಿನ್ನುವ ಇಚ್ಛೆಯಾಗುತ್ತಿರುತ್ತದೆ. ಆದುದರಿಂದ ಶರಬತ್ತಿನ ಬದಲಾಗಿ ಸಾಮಾನ್ಯ ನೀರನ್ನೇ ಕುಡಿಯಬೇಕು.

ಬಿಸಿನೀರು ಕುಡಿಯಬೇಕೋ ತಣ್ಣೀರು ಕುಡಿಯಬೇಕೋ ?

ಚಳಿಗಾಲದಲ್ಲಿ ಬಿಸಿನೀರು, ಬೇಸಿಗೆಯಲ್ಲಿ ತಣ್ಣೀರನ್ನು ಕುಡಿಯಬೇಕು.

ತಡರಾತ್ರಿಯ ಜಾಗರಣೆಯಿಂದ ತೊಂದರೆಯಾಗಬಾರದೆಂದು, ಇದನ್ನು ಮಾಡಿರಿ !

ರಾತ್ರಿಯ ಊಟ ಬೇಗ ಆಗಿರುವುದರಿಂದ ಜಾಗರಣೆಯಾದಾಗ ರಾತ್ರಿ ಹಸಿವಾಗುತ್ತದೆ. ಇಂತಹ ಸಮಯದಲ್ಲಿ ಶೇವು, ಚಿವಡಾ ಇವುಗಳಂತಹ ಪದಾರ್ಥಗಳನ್ನು ತಿನ್ನಬಾರದು. ಜಾಗರಣೆಯಾದಾಗ ಹೊಟ್ಟೆಯಲ್ಲಿ ಪಿತ್ತ ಹೆಚ್ಚಾಗಿರುತ್ತದೆ. ಇಂತಹ ಸಮಯದಲ್ಲಿ ಎಣ್ಣೆಯುಕ್ತ ಮತ್ತು ಖಾರಯುಕ್ತ ಪದಾರ್ಥಗಳನ್ನು ತಿನ್ನುವುದರಿಂದ ಪಿತ್ತದ ಪ್ರಮಾಣ ಇನ್ನೂ ಹೆಚ್ಚಾಗುತ್ತದೆ.

ಪೂರ್ವ ಅಥವಾ ದಕ್ಷಿಣ ಈ ದಿಕ್ಕುಗಳಲ್ಲಿ ತಲೆ ಇಟ್ಟು ಮಲಗಬೇಕು ! (ನಾಲ್ಕು ದಿಕ್ಕುಗಳಲ್ಲಿ ತಲೆ ಇಟ್ಟು ಮಲಗಿದರೆ ಆಗುವ ಪರಿಣಾಮ )

ಇಷ್ಟವಾಗುವ ಯಾವುದೇ ಪದಾರ್ಥಗಳು ಪಚನವಾಗುತ್ತಿದ್ದರೆ, ಸೇವಿಸಲು ಯಾವುದೇ ಅಡಚಣೆಯಿಲ್ಲ; ಆದರೆ ಆ ಪದಾರ್ಥಗಳನ್ನು ಊಟದ ಸಮಯದಲ್ಲಿಯೇ ತಿನ್ನಬೇಕು. ಅವೇಳೆಯಲ್ಲಿ ತಿನ್ನಬಾರದು. ಈ ನಿಯಮವನ್ನು ಪಾಲಿಸಿದರೆ ಶರೀರ ಆರೋಗ್ಯಗಿರಲು ಸಹಾಯವಾಗುತ್ತದೆ ಮತ್ತು ಸಾಧನೆಯೂ ಒಳ್ಳೆಯದಾಗುತ್ತದೆ.