ಬಾಸುಂದಿ, ಪಾಯಸ ಇತ್ಯಾದಿ ಹಾಲಿನ ಪದಾರ್ಥಗಳೊಂದಿಗೆ ಹುಳಿ ಮತ್ತು ಉಪ್ಪಿನ ಪದಾರ್ಥಗಳನ್ನು ತಿನ್ನಬಾರದುತಡೆಯಬೇಕು !

ವೈದ್ಯ ಮೇಘರಾಜ ಮಾಧವ ಪರಾಡಕರ

‘ಬಾಸುಂದಿ, ಪಾಯಸ, ಪೇಡೆ, ಐಸ್‌ಕ್ರೀಮ್ ಇತ್ಯಾದಿ ಹಾಲಿನ ಪದಾರ್ಥಗಳೊಂದಿಗೆ ಹುಳಿ ಅಥವಾ ಉಪ್ಪಿನ ಪದಾರ್ಥಗಳನ್ನು ಇರತಿನ್ನಬಾರದು. ಪುರಿ, ಚಪಾತಿ, ಬ್ರೆಡ್ ಮತ್ತು ಇತರ ಸಿಹಿ ಪದಾರ್ಥಗಳೊಂದಿಗೆ ಈ ಹಾಲಿನ ಪದಾರ್ಥಗಳನ್ನು ತಿನ್ನಬಹುದು. ಓರ್ವ ಸಂಬಂಧಿಕರ ಮನೆಯ ಸಮಾರಂಭದಲ್ಲಿ ಊಟದಲ್ಲಿ ಇತರ ಪದಾರ್ಥಗಳೊಂದಿಗೆ ಬಾಸುಂದಿ ಮತ್ತು ಪುನರ್ಪುಳಿ (ಕೋಕಮ್) ಸಾರು ಈ ಪದಾರ್ಥಗಳಿದ್ದವು. ಆ ದಿನ ಆ ಪದಾರ್ಥಗಳನ್ನು ಒಟ್ಟಿಗೆ ತಿಂದುದರಿಂದ ಎಲ್ಲರಿಗೂ ವಾಂತಿ ಮತ್ತು ಭೇದಿಯಾಗಿ ಅವರನ್ನು ಆಸ್ಪತ್ರೆಗೆ ಸೇರಿಸಬೇಕಾಯಿತು. ಆದುದರಿಂದ ಊಟ ಮಾಡುವಾಗ ಹಾಲಿನ ಪದಾರ್ಥಗಳಿದ್ದರೆ ಎಚ್ಚರ ವಹಿಸಬೇಕು.’
– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೪.೧೨.೨೦೨೨)