ಆರೋಗ್ಯಶಾಲಿ ಜೀವನಕ್ಕಾಗಿ ಆಯುರ್ವೇದ

ವೈದ್ಯ ಮೇಘರಾಜ ಪರಾಡಕರ್

‘ಮಲವಿಸರ್ಜನೆ’ಯಾಗಲು ೧ ತಂಬಿಗೆ ನೀರು ಕುಡಿಯುವ ಅಭ್ಯಾಸವಿದ್ದರೆ ಅದನ್ನು ಬಿಡಿ

‘ಬೆಳಗ್ಗೆ ಎದ್ದ ನಂತರ ನೀರು ಕುಡಿದಾಗಲೇ ಮಲವಿಸರ್ಜನೆಯಾಗುತ್ತದೆ’, ಎಂಬ ಅಭ್ಯಾಸ ಇದ್ದರೂ, ಬೆಳಗಿನ ಈ ನೀರಿನ ರೂಢಿಯನ್ನು ನಿಲ್ಲಿಸಬೇಕು. ನೀರು ಕುಡಿದು ಮಲವಿಸರ್ಜನೆ ಆಗುವುದಕ್ಕಿಂತ ಜಠರಾಗ್ನಿ (ಪಚನಶಕ್ತಿ) ಚೆನ್ನಾಗಿ ಆಗುವುದು ಮಹತ್ವದ್ದಾಗಿದೆ. ಅದು ಚೆನ್ನಾಗಿದ್ದರೆ, ಸರಿಯಾದ ಸಮಯದಲ್ಲಿ ತಾನಾಗಿಯೇ ಮಲವಿಸರ್ಜನೆಯಾಗುತ್ತದೆ, ಅದರೊಂದಿಗೆ ಆರೋಗ್ಯವೂ ಚೆನ್ನಾಗಿರುತ್ತದೆ.’

ಊಟ ಮಾಡುವಾಗ ನೀರು ಕುಡಿಯಬೇಕೋ ಬೇಡವೋ ?

‘ಗೋದಿಹಿಟ್ಟನ್ನು ನಾದುವಾಗ ನೀರು ಕಡಿಮೆಯಾದರೆ, ಅದು ಗಟ್ಟಿಯಾಗುತ್ತದೆ ಮತ್ತು ಚಪಾತಿಯನ್ನು ಲಟ್ಟಿಸಲು ಕಠಿಣವೆನಿಸುತ್ತದೆ. ನೀರು ಹೆಚ್ಚಾದರೆ, ಹಿಟ್ಟು ತೆಳ್ಳಗಾಗುತ್ತದೆ ಮತ್ತು ಅದು ಚಪಾತಿಮಣೆಗೆ ಅಂಟುತ್ತದೆ. ಗೋದಿಹಿಟ್ಟನ್ನು ನಾದುವಾಗ ನೀರಿನ ಪ್ರಮಾಣವು ಸರಿಯಾಗಿದ್ದರೆ ಮಾತ್ರ ಚಪಾತಿಗಳು ಸರಿಯಾಗಿ ಮಾಡಲು ಬರುತ್ತವೆ. ಆಹಾರವು ಸರಿಯಾಗಿ ಪಚನವಾಗಲು ಸಹ ಅದು ಹೆಚ್ಚು ಗಟ್ಟಿ ಅಥವಾ ತೆಳ್ಳಗೆ ಇರಬಾರದು. ಆದುದರಿಂದ ‘ಊಟ ಮಾಡುವಾಗ ಅಗತ್ಯಕ್ಕನುಸಾರ ಮಧ್ಯ ಮಧ್ಯ ಸ್ವಲ್ಪ ಸ್ವಲ್ಪ ನೀರನ್ನು ಕುಡಿಯಬೇಕು’, ಎಂದು ಆಯುರ್ವೇದದಲ್ಲಿ ಹೇಳಲಾಗಿದೆ.’

– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೧.೧೧.೨೦೨೨)