ಕಳೆದ ಕೆಲವು ದಿನಗಳಿಂದ ‘ಕೊರೊನಾದ ಸೋಂಕು ಪುನಃ ಹರಡಬಹುದು’, ಎಂಬ ಸುದ್ದಿಗಳು ಬರುತ್ತಿವೆ. ಬಹಳಷ್ಟು ಜನರು ‘ನಾವು ಯಾವ ಆಯುರ್ವೇದಿಕ ಔಷಧಿಗಳನ್ನು ತೆಗೆದುಕೊಳ್ಳಬೇಕು ?’ ಎಂದು ಕೇಳಿದರು. ಇದರ ಉತ್ತರ ಮುಂದಿನಂತಿದೆ.
೧. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ನಿಯಮಿತ ಪ್ರಯತ್ನ ಆವಶ್ಯಕ
ಕೊರೊನಾದ ಸುದ್ದಿಗಳಿಂದ ಗಾಬರಿಯಾಗದೇ ‘ರಾತ್ರಿ ಸಮಯದಲ್ಲಿ ಸಾಕಷ್ಟು ನಿದ್ದೆ ಮಾಡುವುದು ಮತ್ತು ಬೆಳಗ್ಗೆ ಅಲ್ಪೋಪಹಾರವನ್ನು ಸೇವಿಸದೇ ಕನಿಷ್ಠ ಅರ್ಧ ಗಂಟೆ ವ್ಯಾಯಾಮ ಮಾಡುವುದು’, ಈ ೨ ಕೃತಿಗಳನ್ನು ನಿಯಮಿತವಾಗಿ ಮಾಡಬೇಕು. ಇದರಿಂದ ಶರೀರದ ಕ್ಷಮತೆ ಹೆಚ್ಚಾಗುತ್ತದೆ. ಔಷಧಿಗಳನ್ನು ಸೇವಿಸಿದರೆ ಶರೀರದ ರೋಗನಿರೋಧಕ ಶಕ್ತಿ ಒಂದೇ ರಾತ್ರಿಯಲ್ಲಿ ಹೆಚ್ಚಾಗುವುದಿಲ್ಲ. ಅದಕ್ಕಾಗಿ ನಿಯಮಿತ ಪ್ರಯತ್ನವನ್ನೇ ಮಾಡಬೇಕಾಗುತ್ತದೆ.
೨. ಸ್ವಂತ ಮನಸ್ಸಿನಂತೆ ಔಷಧಿ ಸೇವಿಸುವುದನ್ನು ತಡೆಗಟ್ಟಿ
ಕೊರೊನಾದ ಹಿಂದಿನ ಅಲೆಗಳಲ್ಲಿ ಜನರು ಭಯದಿಂದ ‘ತ್ರಿಕಟು ಚೂರ್ಣ’ದಂತಹ ಆಯುರ್ವೇದಿಕ ಔಷಧಿಗಳನ್ನು ತಮ್ಮ ಮನಸ್ಸಿಗನುಸಾರ ದೀರ್ಘ ಕಾಲ ಮುಂದುವರಿಸಿದುದರಿಂದ ಮೂಲವ್ಯಾಧಿಯಂತಹ ರೋಗವು ಅಂಟಿರುವ ಅನೇಕ ಘಟನೆಗಳು ಘಟಿಸಿವೆ. ಆದುದರಿಂದ ಸ್ವಂತ ಮನಸ್ಸಿನಂತೆ ಔಷಧಿಗಳನ್ನು ತೆಗೆದುಕೊಳ್ಳುವುದನ್ನು ತಡೆಗಟ್ಟಿ.
೩. ವೈದ್ಯರು ಸಿಗುವವರೆಗೆ ಲಕ್ಷಣಗಳಿಗನುಸಾರ ಆಯುರ್ವೇದಿಕ ಚಿಕಿತ್ಸೆ
ಕೊರೊನಾದ ಹಿನ್ನೆಲೆಯಲ್ಲಿ ಶೀತ, ಕೆಮ್ಮು ಮತ್ತು ಜ್ವರ ಇವುಗಳಿಗೆ ಸ್ಥಳೀಯ ವೈದ್ಯರಿಂದ ಸೂಕ್ತ ಚಿಕಿತ್ಸೆಯನ್ನು ಪಡೆಯಬೇಕು. ವೈದ್ಯರು ಸಿಗುವವರೆಗೆ ಲಕ್ಷಣಗಳಿಗನುಸಾರ ಮುಂದಿನ ಚಿಕಿತ್ಸೆ ಮಾಡಬೇಕು. ‘ಮುಂದಿನ ಚಿಕಿತ್ಸೆಗಳು ವೈದ್ಯರಿಗೆ ಪರ್ಯಾಯವಲ್ಲ’ ಎಂಬುದನ್ನು ಗಮನದಲ್ಲಿಡಬೇಕು.
೩ ಅ. ಶೀತ ಮತ್ತು ಕೆಮ್ಮು : ‘ಸನಾತನ ಚಂದ್ರಾಮೃತ ರಸ’ ಈ ಔಷಧದ ೧-೨ ಗುಳಿಗೆಗಳನ್ನು ದಿನದಲ್ಲಿ ೪-೫ ಸಲ ಜಗಿದು ತಿನ್ನಬೇಕು.
೩ ಆ. ಶೀತ, ಕೆಮ್ಮು ಮತ್ತು ಜ್ವರ : ೧ ಲೀಟರ್ ಕುಡಿಯುವ ಬಿಸಿ ನೀರಿನಲ್ಲಿ ಚಹಾದ ಕಾಲು ಚಮಚದಷ್ಟು ಪ್ರಮಾಣದಲ್ಲಿ ‘ಸನಾತನ ಶುಂಠಿ ಚೂರ್ಣ’ವನ್ನು ಹಾಕಿ ಆ ನೀರನ್ನು ದಿನವಿಡೀ ಸ್ವಲ್ಪ
ಸ್ವಲ್ಪವಾಗಿ ಕುಡಿಯಬೇಕು.
೩ ಇ. ಜ್ವರ : ‘ಸನಾತನ ತ್ರಿಭುವನಕೀರ್ತಿ ರಸ’ ಈ ಔಷಧದ ೧-೧ ಗುಳಿಗೆಯನ್ನು ಪುಡಿ ಮಾಡಿ ದಿನದಲ್ಲಿ ೨-೩ ಸಲ ಚಹಾದ ಕಾಲು ಚಮಚದಷ್ಟು ಜೇನುತುಪ್ಪದಲ್ಲಿ ಅಥವಾ ತುಳಸಿ ರಸದಲ್ಲಿ ಸೇರಿಸಿ ನೆಕ್ಕಬೇಕು.
೩ ಈ. ಜ್ವರವು ಬಂದು ಹೋದಾಗ ಬರುವ ಆಯಾಸ : ‘ಸನಾತನ ಲಘುಮಾಲಿನಿ ವಸಂತ’, ‘ವಸಂತ ಮಾಲತಿ (ಸ್ವರ್ಣ)’, ‘ಮಹಾಲಕ್ಷ್ಮಿವಿಲಾಸ ರಸ’, ‘ಸಂಶಮನಿ ವಟಿ’ ಇವುಗಳ ಪೈಕಿ ಯಾವುದೇ ಒಂದು ಔಷಧದ ೧ ಗುಳಿಗೆಯನ್ನು ಪುಡಿ ಮಾಡಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಚಹಾದ ಕಾಲು ಚಮಚದಷ್ಟು ಜೇನುತುಪ್ಪದಲ್ಲಿ ಸೇರಿಸಿ ನೆಕ್ಕಬೇಕು. ಮೇಲಿನ ಎಲ್ಲ ಚಿಕಿತ್ಸೆಗಳನ್ನು ೫ ರಿಂದ ೭ ದಿನಗಳ ಕಾಲ ಮಾಡಬೇಕು.
೪. ಲೇಖನಮಾಲೆಯಲ್ಲಿ ನೀಡಿದಂತೆ ಕೃತಿ ಮಾಡುವುದು ಸಾಧ್ಯವಾಗದಿದ್ದರೆ ಅಡಚಣೆಗಳನ್ನು ತಿಳಿಸಿ !
ಬಾಯಾರಿಕೆಯಾದಾಗ ಬಾವಿಯನ್ನು ತೋಡಲು ಹೋದರೆ ಲಾಭವಾಗುವುದಿಲ್ಲ. ಎಲ್ಲ ರೀತಿಯ ರೋಗಗಳನ್ನು ಪ್ರತಿರೋಧಿಸುವ ಕ್ಷಮತೆ ನಿರ್ಮಾಣವಾಗಬೇಕೆಂದು ‘ಆರೋಗ್ಯಶಾಲಿ ಜೀವನಕ್ಕಾಗಿ ಆಯುರ್ವೇದ’ ಈ ಲೇಖನಮಾಲೆಯಲ್ಲಿ ನೀಡಿದಂತೆ ಪ್ರತಿದಿನ ಕೃತಿಯನ್ನು ಮಾಡಬೇಕು. ಕೃತಿ ಮಾಡಲು ಏನಾದರೂ ಅಡಚಣೆ ಇದ್ದರೆ ಅದನ್ನು [email protected] ಈ ವಿಳಾಸಕ್ಕೆ ತಿಳಿಸಬೇಕು.
– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ (೨೩.೧೨.೨೦೨೨)