‘ಬ್ರೆಕ್‌ಫಾಸ್ಟ್ (ಬೆಳಗ್ಗೆ ಉಪಹಾರ ಮಾಡುವುದು)’ ಇದು ನಮ್ಮ ಸಂಸ್ಕೃತಿ ಅಲ್ಲ !

ಆರೋಗ್ಯಶಾಲಿ ಜೀವನಕ್ಕಾಗಿ ಆಯುರ್ವೇದ

ವೈದ್ಯ ಮೇಘರಾಜ ಪರಾಡಕರ್

‘ಬೆಳಗ್ಗೆ ಎದ್ದಕೂಡಲೇ ವ್ಯಾಯಾಮ ಮಾಡದೇ ಚಹಾ ಕುಡಿಯುವುದು ಅಥವಾ ಉಪಹಾರ ಮಾಡುವುದು’, ಇದು ನಮ್ಮ ಸಂಸ್ಕೃತಿ ಅಲ್ಲ. ತಿಂದಿರುವ ಆಹಾರ ಸರಿಯಾಗಿ ಪಚನವಾಗಲು ಹೊಟ್ಟೆಯಲ್ಲಿನ ಅಗ್ನಿ (ಪಚನಶಕ್ತಿ) ಒಳ್ಳೆಯ ರೀತಿಯಲ್ಲಿ ಹೊತ್ತಿಕೊಂಡಿರಬೇಕು. ಕೇವಲ ಹಸಿವು ಆಗುವುದು, ಎಂದರೆ ಅಗ್ನಿ ಹೊತ್ತಿಕೊಂಡಿದೆ, ಎಂದು ತಿಳಿಯಬಾರದು. ಸೂರ್ಯನು ಮೇಲೆ ಬಂದು ಅಕ್ಕಪಕ್ಕದ ಮಂಜು ಹೋದ ನಂತರವೇ ಯಾವರೀತಿ ಕಸ ಕಡ್ಡಿಗಳನ್ನು ಸಹಜವಾಗಿ ಸುಡಬಹುದೋ, ಅದೇ ರೀತಿ ಸೂರ್ಯನು ಮೇಲೆ ಬಂದನಂತರ ಆಹಾರವೂ ಸರಿಯಾಗಿ ಪಚನವಾಗುತ್ತದೆ. ಆದುದರಿಂದ ಉಪಹಾರವನ್ನು (ಬೆಳಗಿನ ತಿಂಡಿಯನ್ನು) ಮಾಡದೇ ಬೆಳಗ್ಗೆ ೧೧ ಗಂಟೆಯ ನಂತರ ಚನ್ನಾಗಿ ಹಸಿವಾದಾಗ ನೇರವಾಗಿ ಊಟವನ್ನು ಮಾಡುವುದೇ ಉತ್ತಮ.’ (೧೦.೧೨.೨೦೨೨)

ಬೆಳಗಿನ ಉಪಹಾರ ಬಿಡಲು ಸುಲಭ ಉಪಾಯ

‘ಒಂದು ವೇಳೆ ನೀವು ಪ್ರತಿದಿನ ಬೆಳಗ್ಗೆ ೮ ಗಂಟೆಗೆ ಉಪಹಾರ (ಬೆಳಗಿನ ತಿಂಡಿ) ಮಾಡುತ್ತಿದ್ದರೆ, ಮುಂದಿನ ೨-೩ ದಿನ ಅದನ್ನು ೮.೩೦ ಗಂಟೆಗೆ ಮಾಡಬೇಕು. ಹೀಗೆ ಪ್ರತಿ ೨-೩ ದಿನಗಳಿಗೊಮ್ಮೆ ಉಪಾಹಾರದ ಸಮಯವನ್ನು ೩೦ ನಿಮಿಷಗಳಷ್ಟು ಮುಂದೆ ದೂಡುತ್ತಿರಬೇಕು. ಈ ಸಮಯವು ಯಾವಾಗ ಬೆಳಗ್ಗೆ ೧೧ ಗಂಟೆಯ ಸಮೀಪ ಬರುವುದೋ, ಆಗ ನೇರವಾಗಿ ಊಟವನ್ನು ಮಾಡಬೇಕು. ಉಪಹಾರವನ್ನು ಮಾಡುವುದು ಶರೀರದ ದೃಷ್ಟಿಯಿಂದ ಆವಶ್ಯಕವಿಲ್ಲ. ಈ ರೀತಿಯಲ್ಲಿ ನಿಧಾನವಾಗಿ ಮತ್ತು ನಿಯಮಿತ ಪ್ರಯತ್ನಿಸಿದರೆ ಉಪಹಾರವನ್ನು ಸಹಜವಾಗಿ ಬಿಡಬಹುದು.

ಉಪಹಾರವನ್ನು ನಿಲ್ಲಿಸಿದಾಗ ಬೆಳಗ್ಗೆ ಮಧುಮೇಹಕ್ಕಾಗಿ ತೆಗೆದುಕೊಳ್ಳುವ ಮಾತ್ರೆಗಳನ್ನು ಮುಂದುವರೆಸಿದರೆ ಕೆಲವೊಮ್ಮೆ ರಕ್ತದಲ್ಲಿನ ಸಕ್ಕರೆಯು ಆವಶ್ಯಕತೆಗಿಂತ ಕಡಿಮೆಯಾಗಬಹುದು. ಆದುದರಿಂದ ಮಧುಮೇಹದ ರೋಗಿಗಳು ‘ಉಪಹಾರವನ್ನು ಬಿಡುವುದಿದ್ದರೆ ಬೆಳಗಿನ ಮಧುಮೇಹದ ಮಾತ್ರೆಗಳನ್ನು ಅಥವಾ ಇನ್ಸುಲಿನ್ ಯಾವಾಗ ತೆಗೆದುಕೊಳ್ಳಬೇಕು’, ಎಂಬುದನ್ನು ಆ ಕ್ಷೇತ್ರದಲ್ಲಿನ ತಜ್ಞ ವೈದ್ಯರಲ್ಲಿ ಅಥವಾ ಆಧುನಿಕ ವೈದ್ಯರಲ್ಲಿ ಕೇಳಿಕೊಳ್ಳಬೇಕು.’ (೧೦.೧೨.೨೦೨೨)

ಜ್ವರ ಬಂದಾಗ ಯಾವ ನೀರನ್ನು ಕುಡಿಯಬೇಕು ?

‘ಜ್ವರ ಬಂದಾಗ ತಣ್ಣೀರು ಕುಡಿಯಬಾರದು. ಒಂದು ಲೀಟರ್ ನೀರಿನಲ್ಲಿ ಕಾಲು ಚಮಚದಷ್ಟು (ಚಹಾದ ಚಮಚದಷ್ಟು) ‘ಸನಾತನ ಮುಸ್ತಾ’ (ನಾಗರಮೋತ) ಚೂರ್ಣವನ್ನು ಹಾಕಿ ೫ ನಿಮಿಷ ನೀರನ್ನು ಕುದಿಸಬೇಕು. ಈ ನೀರನ್ನು ಥರ್ಮಾಸಿನಲ್ಲಿಟ್ಟು ಬಾಯಾರಿಕೆಯಾದಾಗ ಸ್ವಲ್ಪ ಬೆಚ್ಚಗೆ ಮಾಡಿ ಕುಡಿಯಬೇಕು. ಈ ನೀರನ್ನು ಕುಡಿಯುವುದರಿಂದ ಜ್ವರ ಕಡಿಮೆಯಾಗಲು ಸಹಾಯವಾಗುತ್ತದೆ ಮತ್ತು ಶಕ್ತಿಯೂ ಉಳಿದುಕೊಳ್ಳತ್ತದೆ.’ (೧೩.೧೧.೨೦೨೨)

ಮೂಳೆಗಳ ಆರೋಗ್ಯ ಚೆನ್ನಾಗಿರಲು ಪ್ರತಿದಿನ ಬಿಸಿಲಿನಲ್ಲಿ ಶರೀರವನ್ನು ಒಡ್ಡಿರಿ !

‘ಈಗ ಮೂಳೆಗಳ ಗಟ್ಟಿತನವನ್ನು ಅಳೆಯುವ ಪರೀಕ್ಷಣೆಯನ್ನು (ಬೋನ್ ಮಿನರಲ್ ಡೆನ್ಸಿಟಿ ಟೆಸ್ಟ) ಮಾಡಿದರೆ ಬಹಳಷ್ಟು ಜನರ ಮೂಳೆಗಳ ಗಟ್ಟಿತನ ಕಡಿಮೆ ಆಗಿರುವುದು ಗಮನಕ್ಕೆ ಬರುತ್ತದೆ. ಇದಕ್ಕೆ ಒಂದು ಮುಖ್ಯ ಕಾರಣವೆಂದರೆ ಬದಲಾಗಿರುವ ಜೀವನ ಶೈಲಿಯಿಂದ ಮೈಮೇಲೆ ಬಿಸಿಲು ಬೀಳದಿರುವುದು. ಬಿಸಿಲು (ಸೂರ್ಯಪ್ರಕಾಶ) ನೇರವಾಗಿ ಚರ್ಮಕ್ಕೆ ತಗಲಿದರೆ ‘ಡಿ’ ಜೀವ ಸತ್ವ ನಿರ್ಮಾಣವಾಗುತ್ತದೆ. ‘ಡಿ’ ಜೀವಸತ್ವವು ಮೂಳೆಗಳ ಆರೋಗ್ಯಕ್ಕಾಗಿ ಅತ್ಯಂತ ಅವಶ್ಯಕವಾಗಿದೆ. ಆದುದರಿಂದ ಪ್ರತಿಯೊಬ್ಬರೂ ಪ್ರತಿದಿನ ಬೆಳಗ್ಗೆ ೯.೩೦ ಗಿಂತ ಮೊದಲು ಅಥವಾ ಮಧ್ಯಾಹ್ನ ೪.೩೦ ರ ನಂತರ ಕನಿಷ್ಟಪಕ್ಷ ೧೫ ನಿಮಿಷಗಳ ಕಾಲವಾದರೂ ಎಳೆ ಬಿಸಿಲಿನಲ್ಲಿ ಕುಳಿತುಕೊಳ್ಳಬೇಕು. ಯಾರಿಗೆ ಕುಳಿತುಕೊಳ್ಳಲು ಸಾಧ್ಯವಿಲ್ಲವೂ, ಅವರು ಮಲಗಿಕೊಂಡು ಬಿಸಿಲಿನ ಉಪಾಯ ಮಾಡಿದರೂ ನಡೆಯುತ್ತದೆ.’ (೨೭.೧೧.೨೦೨೨)

ಬಾಸುಂದಿ, ಪಾಯಸ ಇತ್ಯಾದಿ ಹಾಲಿನ ಪದಾರ್ಥಗಳೊಂದಿಗೆ ಹುಳಿ ಮತ್ತು ಉಪ್ಪಿನ ಪದಾರ್ಥಗಳನ್ನು ತಿನ್ನಬಾರದು !

‘ಬಾಸುಂದಿ, ಪಾಯಸ, ಪೇಡೆ, ಐಸ್‌ಕ್ರೀಮ್ ಇತ್ಯಾದಿ ಹಾಲಿನ ಪದಾರ್ಥಗಳೊಂದಿಗೆ ಹುಳಿ ಅಥವಾ ಉಪ್ಪಿನ ಪದಾರ್ಥಗಳನ್ನು ತಿನ್ನಬಾರದು. ಪುರಿ, ಚಪಾತಿ, ಬ್ರೆಡ್ ಮತ್ತು ಇತರ ಸಿಹಿ ಪದಾರ್ಥಗಳೊಂದಿಗೆ ಈ ಹಾಲಿನ ಪದಾರ್ಥಗಳನ್ನು ತಿನ್ನಬಹುದು. ಓರ್ವ ಸಂಬಂಧಿಕರ ಮನೆಯ ಸಮಾರಂಭದಲ್ಲಿ ಊಟದಲ್ಲಿ ಇತರ ಪದಾರ್ಥಗಳೊಂದಿಗೆ ಬಾಸುಂದಿ ಮತ್ತು ಪುನರ್ಪುಳಿ (ಕೋಕಮ್) ಸಾರು ಈ ಪದಾರ್ಥಗಳಿದ್ದವು. ಆ ದಿನ ಆ ಪದಾರ್ಥಗಳನ್ನು ಒಟ್ಟಿಗೆ ತಿಂದುದರಿಂದ ಎಲ್ಲರಿಗೂ ವಾಂತಿ ಮತ್ತು ಭೇದಿಯಾಗಿ ಅವರನ್ನು ಆಸ್ಪತ್ರೆಗೆ ಸೇರಿಸಬೇಕಾಯಿತು. ಆದುದರಿಂದ ಊಟ ಮಾಡುವಾಗ ಹಾಲಿನ ಪದಾರ್ಥಗಳಿದ್ದರೆ ಎಚ್ಚರ ವಹಿಸಬೇಕು.’

– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೪.೧೨.೨೦೨೨)

‘ಆರೋಗ್ಯಕರ ಜೀವನಕ್ಕಾಗಿ ಆಯುರ್ವೇದ’ ಈ ಲೇಖನಮಾಲಿಕೆಯಲ್ಲಿ ಕೊಟ್ಟಿರುವಂತೆ ಕೃತಿಯನ್ನು ಮಾಡಿ ಬಂದ ಅನುಭವವನ್ನು ತಿಳಿಸಲು ಅಥವಾ ಈ ಕುರಿತು ಏನಾದರೂ ತಿಳಿಸುವುದಿದ್ದರೆ

ಸಂಪರ್ಕದ ವಿಳಾಸ  – ವೈದ್ಯ ಮೇಘರಾಜ ಪರಾಡಕರ

ವಿಳಾಸ : ೨೪/ಬ, ಸನಾತನ ಆಶ್ರಮ, ರಾಮನಾಥಿ, ಫೊಂಡಾ, ಗೋವಾ. ಪಿನ್ – ೪೦೩೪೦೧

ವಿ ಅಂಚೆ : [email protected]