|

ಅರುಣಾಚಲ ಪ್ರದೇಶ – ಭಾರತೀಯ ಸೇನೆಯ ‘ಗಜರಾಜ್ ಕಾರ್ಪ್ಸ್’ (ಗಜರಾಜ್ ಪಥಕ) ಒಂದು ‘ಇನ್-ಹೌಸ್ ಹೈ ಆಲ್ಟಿಟ್ಯೂಡ್ ಮೋನೋರೈಲ್ ಸಿಸ್ಟಮ್’ ಅನ್ನು ಅಭಿವೃದ್ಧಿಪಡಿಸಿದೆ. ಅರುಣಾಚಲ ಪ್ರದೇಶದ ಕಡಿದಾದ ಪರ್ವತ ಪ್ರದೇಶದಲ್ಲಿ ೧೬ ಸಾವಿರ ಅಡಿ ಎತ್ತರದಲ್ಲಿ ಈ ಮೋನೋರೈಲ್ (ಸಣ್ಣ ಆಧುನಿಕ ರೈಲುಗಾಡಿ) ಅನ್ನು ಓಡಿಸಲಾಗಿದೆ. ಇದರಿಂದ ಸೈನಿಕರಿಗೆ ಅಗತ್ಯವಿರುವ ವಸ್ತುಗಳನ್ನು ತ್ವರಿತವಾಗಿ ತಲುಪಿಸಲು ಸಾಧ್ಯವಾಗಲಿದೆ.
🚨Big Milestone in Arunachal Pradesh
The Indian Army’s Gajraj Battalion has launched a monorail system at 16,000 ft altitude – a remarkable engineering feat in one of the toughest terrains
This breakthrough will significantly boost logistics and ensure faster assistance in… pic.twitter.com/JENy59mnhV
— Sanatan Prabhat (@SanatanPrabhat) November 15, 2025
ಸೈನಿಕರ ಸಮಯ ಮತ್ತು ಶ್ರಮ ಉಳಿಯುತ್ತದೆ, ಅಪಾಯ ಕಡಿಮೆಯಾಗುತ್ತದೆ !
ಈ ಹೊಸ ವ್ಯವಸ್ಥೆಯು ರಸ್ತೆಗಳು ಅಥವಾ ಇತರ ವಾಹನಗಳು ಲಭ್ಯವಿಲ್ಲದ ಹಿಮಾಲಯದ ಕಾಮೆಂಗ್ ಪ್ರದೇಶದಲ್ಲಿ ಸರಬರಾಜು ಮಾಡಲು ಭಾರತೀಯ ಸೇನೆಗೆ ಸಹಾಯ ಮಾಡುತ್ತಿದೆ. ಪರ್ವತಗಳಲ್ಲಿನ ಕಿರಿದಾದ ರಸ್ತೆಗಳು, ಸಡಿಲವಾದ ಬಂಡೆಗಳು, ಅನಿರೀಕ್ಷಿತ ಹವಾಮಾನ ಮತ್ತು ಸೀಮಿತ ಆಮ್ಲಜನಕದಿಂದಾಗಿ, ಚಿಕ್ಕ ದೂರವೂ ಸಹ ದೂರದ ಮತ್ತು ಕಷ್ಟಕರವೆನಿಸುತ್ತದೆ. ಅನೇಕ ಬಾರಿ ಸೈನಿಕರು ವಿವಿಧ ಅಗತ್ಯ ವಸ್ತುಗಳನ್ನು ತಮ್ಮ ಬೆನ್ನಿನ ಮೇಲೆ ಹೊತ್ತುಕೊಂಡು ಹೋಗಬೇಕಾಗಿತ್ತು. ಅದಕ್ಕಾಗಿ ಸಮಯ ಮತ್ತು ಶ್ರಮ ತಗಲುತಿತ್ತು. ಈಗ ಮೋನೋರೈಲ್‌ನಿಂದಾಗಿ ಸಮಯ ಮತ್ತು ಶ್ರಮ ಎರಡೂ ಉಳಿತಾಯವಾಗಲಿದೆ ಮತ್ತು ಅಪಾಯವೂ ಕಡಿಮೆಯಾಗಲಿದೆ.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ