47 ವರ್ಷಗಳ ಬಳಿಕ ಅರುಣಾಚಲ ಪ್ರದೇಶ ಸರಕಾರದಿಂದ ಧಾರ್ಮಿಕ ಸ್ವಾತಂತ್ರ್ಯ ಕಾಯಿದೆ ಜಾರಿಗೆ ತರಲಿದೆ !

ಇಟಾನಗರ (ಅರುಣಾಚಲ ಪ್ರದೇಶ) – ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಾಂಡು ಅವರು ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ರಾಜ್ಯದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಕಾಯಿದೆಯನ್ನು ಮರುಸ್ಥಾಪಿಸುವ ಸುಳಿವು ನೀಡಿದ್ದಾರೆ. ‘ಈ ಕಾಯಿದೆಯ ಜಾರಿಯಿಂದ ಅರುಣಾಚಲ ಪ್ರದೇಶದ ಸಂಸ್ಕೃತಿಯನ್ನು ಕಾಪಾಡಲು ಸಹಾಯವಾಗುವುದು’, ಎಂದು ಹೇಳಿದ್ದಾರೆ. ಈ ಕಾಯಿದೆಯನ್ನು 1978 ರಲ್ಲಿ ಮಾಡಲಾಗಿತ್ತು, ಅದು ಇಲ್ಲಿಯವರೆಗೂ ಜಾರಿಗೆ ಬಂದಿಲ್ಲ. ಬಲವಂತವಾಗಿ ಅಥವಾ ಆಮಿಷ ಇತ್ಯಾದಿಗಳ ಮೂಲಕ ಯಾವುದೇ ಪ್ರಕಾರದ ಮತಾಂತರದ ವಿರುದ್ಧ ಪರಿಣಾಮಕಾರಿ ಕ್ರಮ ಕೈಗೊಳ್ಳುವುದಕ್ಕಾಗಿ ಈ ಕಾಯಿದೆಯನ್ನು ಮಾಡಲಾಗಿದೆ.

ಅರುಣಾಚಲ ಪ್ರದೇಶದಲ್ಲಿ ಈ ಕಾಯಿದೆ ಮಾಡಿದಾಗ ಅಲ್ಲಿ ಕ್ರೈಸ್ತ ಮಿಷನರಿಗಳು ಸಾಕಷ್ಟು ಕ್ರಿಯಾಶೀಲರಾಗಿದ್ದರು. ಜನರನ್ನು ಕ್ರೈಸ್ತರನ್ನಾಗಿ ಮಾಡಲು ದೊಡ್ಡ ಪಿತೂರಿಯಿತ್ತು; ಆದರೆ ಇದನ್ನು ತಡೆಯಲು ವಿಧಾನಸಭೆಯಲ್ಲಿ ಈ ಕಾನೂನು ಜಾರಿಗೆ ಬಂದರೂ 47 ವರ್ಷಗಳಿಂದ ಅದರ ಕಾರ್ಯಾಚರಣೆ ಆಗಿಲ್ಲ’, ಎಂದರು.

ಸಂಪಾದಕೀಯ ನಿಲುವು

47 ವರ್ಷಗಳಿಂದ ಕಾನೂನು ಜಾರಿಯಾಗದಿರುವುದು ನಾಚಿಕೆಗೇಡಿನ ಸಂಗತಿ. ಇದಕ್ಕೆ ಕಾರಣರಾದವರ ವಿರುದ್ಧ ಏನು ಕ್ರಮ ಕೈಗೊಳ್ಳುತ್ತಾರೆ, ಇದನ್ನು ತಿಳಿಸಬೇಕು !