
ಇಟಾನಗರ (ಅರುಣಾಚಲ ಪ್ರದೇಶ)/ಭುವನೇಶ್ವರ (ಒಡಿಶಾ) – ಅರುಣಾಚಲ ಪ್ರದೇಶ ಮತ್ತು ಒಡಿಶಾದಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ, ಬಾಲಕಿಯರು ಮತ್ತು ಮಹಿಳೆಯರ ಮೇಲೆ ಬಲಾತ್ಕಾರ ಮತ್ತು ಲೈಂಗಿಕ ದೌರ್ಜನ್ಯ ಎಸಗಿದ ಕಾಮುಕರನ್ನು ಜನಸಮೂಹವು ಹತ್ಯೆ ಮಾಡಿದೆ.
ಅರುಣಾಚಲ ಪ್ರದೇಶದಲ್ಲಿ ಪೊಲೀಸ್ ಠಾಣೆಗೆ ನುಗ್ಗಿ ಬಲಾತ್ಕಾರಿಯ ಹತ್ಯೆ
1. ಅರುಣಾಚಲ ಪ್ರದೇಶದ ಲೋವರ ದಿಬಾಂಗ್ ಕಣಿವೆಯಲ್ಲಿ ಓರ್ವ ಬಲಾತ್ಕಾರಿ ಯುವಕನಿಗೆ ಥಳಿಸಲಾಗಿದೆ. ಈ ಸಂಪೂರ್ಣ ಘಟನೆ ರೋಯಿಂಗ್ ನಗರದ ಪೊಲೀಸ್ ಠಾಣೆಯ ಹೊರಗೆ ಪೊಲೀಸರ ಸಮ್ಮುಖದಲ್ಲಿ ನಡೆದಿದೆ.
2. ಈ ಯುವಕನ ಮೇಲೆ 20 ಕ್ಕೂ ಹೆಚ್ಚು ಬಾಲಕಿಯರ ಮೇಲೆ ಬಲಾತ್ಕಾರ ಮತ್ತು ಲೈಂಗಿಕ ದೌರ್ಜನ್ಯ ಎಸಗಿದ ಆರೋಪವಿತ್ತು. ಅವನು ಬಾಲಕಿಯರ ಹಾಸ್ಟೆಲ್ ಗೆ ನುಗ್ಗಿ ಅವರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದನು. ಕೆಲವು ಸಂತ್ರಸ್ತ ಬಾಲಕಿಯರು ಹೊಟ್ಟೆ ನೋವಿನ ಬಗ್ಗೆ ದೂರು ನೀಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.
3. ಪೊಲೀಸರು, ಆರೋಪಿಯನ್ನು ಪೊಲೀಸ್ ಠಾಣೆಗೆ ಕರೆತರಲಾಯಿತು, ತದನಂತರ ನೂರಾರು ಜನರ ಗುಂಪು ಪೊಲೀಸ್ ಠಾಣೆಗೆ ನುಗ್ಗಿ ಆ ಯುವಕನನ್ನು ಹೊರಗೆಳೆದು ಥಳಿಸಿದೆ, ಎಂದು ಹೇಳಿದರು. ಯುವಕನನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಆದರೆ ವೈದ್ಯರು ಪರೀಕ್ಷಿಸಿದ ನಂತರ ಆತ ಸಾವನ್ನಪ್ಪಿದ್ದಾನೆ ಎಂದು ಘೋಷಿಸಿದ್ದಾರೆ.
Mob Justice or Desperation? 😡
In Arunachal Pradesh, a teen rape accused was lynched by a mob.
In Odisha, women who were his victims killed a 60-year-old rapist & burned his body. 🔥
With rapists not facing swift and severe punishment, mobs are increasingly taking the law into… pic.twitter.com/4WRqWxKP64
— Sanatan Prabhat (@SanatanPrabhat) July 13, 2025
ಒಡಿಶಾದಲ್ಲಿ ಸಂತ್ರಸ್ತ ಮಹಿಳೆಯರು ಬಲಾತ್ಕಾರಿಯನ್ನು ಕೊಂದು, ಅವನ ದೇಹವನ್ನು ಅರಣ್ಯದಲ್ಲಿ ಸುಟ್ಟರು

ಒಡಿಶಾ ರಾಜ್ಯದ ಗಜಪತಿ ಜಿಲ್ಲೆಯಲ್ಲಿ 60 ವರ್ಷದ ಬಲಾತ್ಕಾರಿಯೊಬ್ಬನನ್ನು ಕೊಂದು ಆತನ ದೇಹವನ್ನು ಸುಡಲಾಗಿದೆ. ಈ ಪ್ರಕರಣದಲ್ಲಿ 8 ಮಹಿಳೆಯರು ಮತ್ತು 2 ಪುರುಷರು ಸೇರಿದಂತೆ 10 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಗ್ರಾಮದಿಂದ ಸುಮಾರು 2 ಕಿ.ಮೀ ದೂರದಲ್ಲಿರುವ ಅರಣ್ಯದ ಸಮೀಪದ ಬೆಟ್ಟದಿಂದ ಮೃತನ ಅಸ್ಥಿಪಂಜರ ಮತ್ತು ಬೂದಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತ ಎಲ್ಲಾ ಮಹಿಳೆಯರು ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರು ಎಂದು ಪೊಲೀಸರು ತಿಳಿಸಿದ್ದಾರೆ.
ವಿಧವೆಯ ಮೇಲೆ ಬಲಾತ್ಕಾರ ಮಾಡಿದ ನಂತರ ಕಾಮುಕನನ್ನು ಕೊಲ್ಲಲು ಮಹಿಳೆಯರ ನಿರ್ಧಾರ
ಪೊಲೀಸರು, ಹತ್ಯೆಯಾದ ವ್ಯಕ್ತಿ ಬಹಳ ಸಮಯದಿಂದ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದನು. ಜೂನ್ 3 ರಂದು, ಅವನು 52 ವರ್ಷದ ವಿಧವೆಯ ಮೇಲೆ ಬಲಾತ್ಕಾರ ಎಸಗಿದ್ದಾನೆ. ಈ ಘಟನೆ ಬೆಳಕಿಗೆ ಬಂದ ನಂತರ, ಮಹಿಳೆಯರು ಸಭೆ ಸೇರಿ ಆರೋಪಿಯನ್ನು ಕೊಲ್ಲಲು ನಿರ್ಧರಿಸಿದರು. ಈ ಎಲ್ಲಾ ಮಹಿಳೆಯರು ಆರೋಪಿಯ ಮನೆಗೆ ಹೋಗಿದ್ದಾರೆ. ಆ ಸಮಯದಲ್ಲಿ ಅವನು ಮಲಗಿದ್ದನು. ನಂತರ ಮಹಿಳೆಯರು ಆರೋಪಿಯ ಮೇಲೆ ಕೊಡಲಿಯಿಂದ ಹಲ್ಲೆ ನಡೆಸಿ ಕೊಂದುಹಾಕಿದ್ದಾರೆ ಮತ್ತು ನಂತರ ಅವನ ದೇಹವನ್ನು ಅರಣ್ಯಕ್ಕೆ ಕೊಂಡೊಯ್ದು ಸುಟ್ಟುಹಾಕಿದ್ದಾರೆ, ಎಂದು ಪೊಲೀಸರು ತಿಳಿಸಿದ್ದಾರೆ.
ಸಂಪಾದಕೀಯ ನಿಲುವುಭಾರತದಲ್ಲಿ ಬಲಾತ್ಕಾರಿಗಳಿಗೆ ತಕ್ಷಣವೇ ಮತ್ತು ಕಠಿಣ ಶಿಕ್ಷೆ ಸಿಗದಿರುವುದರಿಂದ, ಅನೇಕ ಸ್ಥಳಗಳಲ್ಲಿ ಗುಂಪು ಕಾನೂನನ್ನು ಕೈಗೆತ್ತಿಕೊಂಡು ಬಲಾತ್ಕಾರಿಗಳನ್ನು ಹತ್ಯೆ ಮಾಡುವ ಘಟನೆಗಳು ಹೆಚ್ಚುತ್ತಿವೆ. ಇದನ್ನು ಪರಿಗಣಿಸಿ, ಬಲಾತ್ಕಾರಿಗಳ ವಿರುದ್ಧ ತ್ವರಿತವಾಗಿ ವಿಚಾರಣೆ ನಡೆಸಿ ಕಠಿಣ ಶಿಕ್ಷೆ ವಿಧಿಸಲು ಸರಕಾರ ಕ್ರಮ ಕೈಗೊಳ್ಳುವುದೇ? |
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”