
ಇಟಾನಗರ (ಅರುಣಾಚಲ ಪ್ರದೇಶ) – ಅಕ್ಟೋಬರ್ 24 ರಂದು ‘ಅರುಣಾಚಲ ಪ್ರದೇಶ ಇಂಡಿಜಿನಸ್ ಯೂತ್ ಆರ್ಗನೈಸೇಷನ್’ ನೇತೃತ್ವದಲ್ಲಿ ‘ಆಲ್ ಕ್ಯಾಪಿಟಲ್ ಕಾಂಪ್ಲೆಕ್ಸ್ ಯೂತ್ ವೆಲ್‌ಫೇರ್ ಅಸೋಸಿಯೇಷನ್’ ಮತ್ತು ‘ಆಲ್ ನಹರ್ಲಾಗುನ್ ಯೂತ್ ವೆಲ್‌ಫೇರ್ ಅಸೋಸಿಯೇಷನ್’ ನ ನೂರಾರು ಯುವ ಕಾರ್ಯಕರ್ತರು ರಸ್ತೆಗೆ ಇಳಿದು ಬಾಂಗ್ಲಾದೇಶಿ ಅಕ್ರಮ ವಲಸಿಗರು ಮತ್ತು ಅಕ್ರಮ ಮಸೀದಿಗಳ ವಿರುದ್ಧ ಪ್ರತಿಭಟನೆ ನಡೆಸಿದರು. ಅವರ ಕೈಯಲ್ಲಿ ಬಾಂಗ್ಲಾದೇಶಿ ವಲಸಿಗರು ಹಿಂದಿರುಗಿ ಹೋಗಿ ಮತ್ತು ಅರುಣಾಚಲ ಪ್ರದೇಶವನ್ನು ಉಳಿಸಿ ಎಂಬ ಘೋಷಣೆಗಳ ಫಲಕಗಳಿದ್ದವು. ಈ ಸಂದರ್ಭದಲ್ಲಿ, ‘ಸರಕಾರವು 15 ದಿನಗಳಲ್ಲಿ ಕ್ರಮ ಕೈಗೊಳ್ಳದಿದ್ದರೆ, ರಾಜ್ಯವ್ಯಾಪಿ ಪ್ರತಿಭಟನೆಯನ್ನು ಪ್ರಾರಂಭಿಸಲಾಗುವುದೆಂಬ ಎಚ್ಚರಿಕೆಯನ್ನು ನೀಡಲಾಯಿತು.
ಅರುಣಾಚಲದಲ್ಲಿ ಮಿಷನರಿಗಳಿಂದ ಮತಾಂತರ ಮತ್ತು ಮುಸ್ಲಿಮರ ಅಕ್ರಮ ವಲಸೆ
ಮ್ಯಾನ್ಮಾರ್ ಗಡಿಯ ಸಮೀಪವಿರುವ ಅರುಣಾಚಲ ಪ್ರದೇಶದಲ್ಲಿ ಪ್ರಸ್ತುತ ಕ್ರೈಸ್ತ ಮಿಷನರಿಗಳಿಂದ ಮತಾಂತರ ಮತ್ತು ಮುಸ್ಲಿಮರ ಅಕ್ರಮ ವಲಸೆಯಿಂದ ಎರಡು ಗಂಭೀರ ಸಮಸ್ಯೆಗಳು ಸೃಷ್ಟಿಯಾಗಿವೆ. ಈ ನುಸುಳುವಿಕೆಯಿಂದಾಗಿ ಸ್ಥಳೀಯ ಸಮುದಾಯವು ತೊಂದರೆಗೊಳಗಾಗಿದ್ದು, ಯುವಕರಲ್ಲಿ ಆಕ್ರೋಶ ಭುಗಿಲೆದ್ದಿದೆ. ಇಟಾನಗರ ಮತ್ತು ನಹರ್ಲಾಗುನ್ ನಗರಗಳಲ್ಲಿ ಮುಸ್ಲಿಮರು ಅಕ್ರಮವಾಗಿ ಭೂಮಿಯನ್ನು ಆಕ್ರಮಿಸಿಕೊಂಡು 15 ರಿಂದ 20 ಮಸೀದಿಗಳು ಮತ್ತು ಧಾರ್ಮಿಕ ಸ್ಥಳಗಳನ್ನು ನಿರ್ಮಿಸಿದ್ದಾರೆ. ಸರ್ಕಾರವು ಅವುಗಳನ್ನು ತಕ್ಷಣವೇ ತೆರವುಗೊಳಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಅರುಣಾಚಲದ ಸಾಂಸ್ಕೃತಿಕ ಗುರುತಿಗೆ ಅಪಾಯ
‘ಅರುಣಾಚಲ ಪ್ರದೇಶ ಇಂಡಿಜಿನಸ್ ಯೂತ್ ಆರ್ಗನೈಸೇಷನ್’ ಅಧ್ಯಕ್ಷರಾದ ತಾರೋ ಸೋನಂ ಲಿಯಾಕ್ ಅವರು ಮಾತನಾಡಿ, ಪ್ರತಿದಿನ ಸುಮಾರು 1-2 ಸಾವಿರ ಮುಸ್ಲಿಮರು ‘ಇನ್ನರ್ ಲೈನ್ ಪರ್ಮಿಟ್’ (ನೆರೆಯ ದೇಶಗಳ ನಾಗರಿಕರಿಗೆ ಭಾರತೀಯ ಭೂಮಿಯೊಳಗೆ ಸ್ವಲ್ಪ ದೂರದವರೆಗೆ ಪ್ರವೇಶಿಸಲು ನೀಡುವ ಪರವಾನಗಿ) ತೋರಿಸಿ ಅರುಣಾಚಲ ಪ್ರದೇಶವನ್ನು ಪ್ರವೇಶಿಸುತ್ತಿದ್ದಾರೆ ಎಂದು ಹೇಳಿದರು. ಈ ಜನರು ಪರವಾನಗಿಯನ್ನು ತೋರಿಸುತ್ತಾರೆ; ಆದರೆ ನಂತರ ಜನಸಂದಣಿಯಲ್ಲಿ ಅಡಗಿ ಕುಳಿತು ತಮ್ಮ ಮೂಲ ಸ್ಥಳಕ್ಕೆ ಹಿಂತಿರುಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಹೆಚ್ಚುತ್ತಿರುವ ಇಸ್ಲಾಮಿಕ್ ಜನಸಂಖ್ಯೆಯಿಂದಾಗಿ ರಾಜ್ಯದ ಜನಸಂಖ್ಯಾ ಸ್ವರೂಪ ಬದಲಾಗುತ್ತಿದ್ದು, ಸಾಂಸ್ಕೃತಿಕ ಮತ್ತು ಸಾಮಾಜಿಕ ಸುರಕ್ಷತೆಗೆ ಗಂಭೀರ ಅಪಾಯ ಉಂಟಾಗಿದೆ. ಹೊರಗಿನವರ ಹೆಚ್ಚುತ್ತಿರುವ ಸಂಖ್ಯೆಯಿಂದಾಗಿ ಮಾದಕವಸ್ತು ಮತ್ತು ವ್ಯಸನದ ಸಮಸ್ಯೆಗಳು ಹೆಚ್ಚುತ್ತಿದ್ದು, ಸ್ಥಳೀಯ ಯುವಕರು ಈ ಸುಳಿಯಲ್ಲಿ ಸಿಲುಕುತ್ತಿದ್ದಾರೆ. ಸರಕಾರವು ಸಮಯಕ್ಕೆ ಸರಿಯಾಗಿ ಕ್ರಮ ಕೈಗೊಳ್ಳದಿದ್ದರೆ, ಅರುಣಾಚಲದ ಸಾಂಸ್ಕೃತಿಕ ಗುರುತಿಗೆ ಅಪಾಯವಿದೆ.
ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಪತ್ರ ಸಲ್ಲಿಕೆ!
ಈ ಸಮಸ್ಯೆಗಳ ಕುರಿತು ಪ್ರತಿಭಟನಾ ನಿರತ ಸಂಸ್ಥೆಗಳು ಅರುಣಾಚಲ ಪ್ರದೇಶದ ಮುಖ್ಯ ಕಾರ್ಯದರ್ಶಿಗೆ ಎರಡು ಪುಟಗಳ ಮನವಿಯನ್ನು ಸಲ್ಲಿಸಿವೆ. ಈ ಪತ್ರದಲ್ಲಿ ‘ರಾಜಧಾನಿ ಪ್ರದೇಶದ ಎಲ್ಲಾ ಅಕ್ರಮ ಮಸೀದಿಗಳು ಮತ್ತು ಮದರಸಾಗಳನ್ನು ತಕ್ಷಣವೇ ತೆರವುಗೊಳಿಸಬೇಕು ಮತ್ತು ಬಾಂಗ್ಲಾದೇಶಿ ವಲಸಿಗರನ್ನು ಗಡೀಪಾರು ಮಾಡಬೇಕೆಂದು ಬೇಡಿಕೆ ಇಡಲಾಗಿದೆ. ‘13,730 ಮುಸ್ಲಿಮರು ವಾಸಿಸುತ್ತಿದ್ದಾರೆ, ಇವರಲ್ಲಿ ಶೇ. 20% ರಷ್ಟು ಮಂದಿ ಬಾಂಗ್ಲಾದೇಶಿಯರಾಗಿದ್ದು, ಸ್ಥಳೀಯ ಜನರಿಗೆ ಗಂಭೀರ ಅಪಾಯವನ್ನುಂಟುಮಾಡುತ್ತಿದ್ದಾರೆ, ಜೊತೆಗೆ ರಾಜ್ಯ ಸರಕಾರದ ಮಾಹಿತಿಯೊಂದಿಗೆ 10ಕ್ಕಿಂತ ಹೆಚ್ಚು ಅಕ್ರಮ ಮಸೀದಿಗಳನ್ನು ನಡೆಸಲಾಗುತ್ತಿದೆ. ಆದ್ದರಿಂದ, ಈ ಪ್ರದೇಶದಲ್ಲಿ ಕೇವಲ ಎರಡು ಅಧಿಕೃತ ಮಸೀದಿಗಳಿಗೆ ಮಾತ್ರ ಅನುಮತಿ ನೀಡಬೇಕು ಮತ್ತು ಉಳಿದ ಎಲ್ಲಾ ಮಸೀದಿಗಳನ್ನು ತೆಗೆದುಹಾಕಬೇಕೆಂದು ಈ ಪತ್ರದ ಮೂಲಕ ಮನವಿ ಮಾಡಲಾಗಿದೆ.
ಸಾಪ್ತಾಹಿಕ ಮಾರುಕಟ್ಟೆಗಳ ಮೇಲೆ ನಿರ್ಬಂಧಗಳ ಬೇಡಿಕೆ
ರಾಜಧಾನಿ ಪ್ರದೇಶ ಮತ್ತು ಸುತ್ತ-ಮುತ್ತಲಿನ ದೊಯಿಮುಖ್, ಹೊಳೋಂಗಿ ಮುಂತಾದ ಪ್ರದೇಶಗಳಲ್ಲಿ ಸಾಪ್ತಾಹಿಕ ಮಾರುಕಟ್ಟೆಗಳನ್ನು ನಿಷೇಧಿಸಬೇಕೆಂದು ಸಹ ಬೇಡಿಕೆ ಇಡಲಾಗಿದೆ. ಈ ಮಾರುಕಟ್ಟೆಗಳಿಗೆ ಹೆಚ್ಚಿನ ಸಂಖ್ಯೆಯ ಅಕ್ರಮ ವಲಸಿಗರು ವ್ಯಾಪಾರಿಗಳಾಗಿ ಬರುತ್ತಾರೆ ಮತ್ತು ಬಾಡಿಗೆ ಕೊಠಡಿಗಳಲ್ಲಿ ವಾಸಿಸುತ್ತಾರೆ, ಇದರಿಂದಾಗಿ ಸ್ಥಳೀಯ ವ್ಯಾಪಾರಿಗಳಿಗೆ ದೊಡ್ಡ ಅಪಾಯ ಉಂಟಾಗಿದೆ.
ಇನ್ನರ್ ಲೈನ್ ಪರ್ಮಿಟ್ ನ ದುರುಪಯೋಗವೇ ಹೆಚ್ಚು
ಗಡಿನಾಡಿನ ರಾಜ್ಯವಾಗಿರುವುದರಿಂದ, ಅರುಣಾಚಲ ಪ್ರದೇಶದಲ್ಲಿ ಹೊರಗಿನ ನಾಗರಿಕರ ಪ್ರವೇಶಕ್ಕಾಗಿ ಇನ್ನರ್ ಲೈನ್ ಪರ್ಮಿಟ್ ಕಡ್ಡಾಯವಾಗಿದೆ; ಆದರೆ ಈ ಅನುಮತಿಯನ್ನು ದುರುಪಯೋಗ ಪಡಿಸಿಕೊಂಡು ದೊಡ್ಡ ಪ್ರಮಾಣದಲ್ಲಿ ಅಕ್ರಮ ವಸಾಹತುಗಳನ್ನು ನಿರ್ಮಿಸಲಾಗುತ್ತಿದೆ, ಇದರಿಂದಾಗಿ ರಾಜ್ಯದ ಮೂಲ ಪರಂಪರೆಗೆ ಗಂಭೀರ ಅಪಾಯ ಉಂಟಾಗಿದೆ ಎಂದು ಸ್ಥಳೀಯ ಸಂಸ್ಥೆಗಳು ಕಳವಳ ವ್ಯಕ್ತಪಡಿಸಿವೆ.
ಸಂಪಾದಕೀಯ ನಿಲುವುಸ್ಥಳೀಯರು ಇಂತಹ ಪ್ರತಿಭಟನೆಗಳನ್ನೇಕೆ ಮಾಡಬೇಕಾಗಿದೆ? ಸರಕಾರ ಈ ಸುಳುಕೋರರನ್ನು ಏಕೆ ಹೊರಹಾಕುತ್ತಿಲ್ಲ? ಅಕ್ರಮ ಮಸೀದಿಗಳ ವಿರುದ್ಧ ಏಕೆ ಕ್ರಮ ಕೈಗೊಳ್ಳುತ್ತಿಲ್ಲ? |
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ