ಅಖಿಲ ಮನುಕುಲವನ್ನು ರೂಪಿಸುವ, ಅದ್ವಿತೀಯ ಜ್ಞಾನದಾತ, ಮೋಕ್ಷಗುರು ಮತ್ತು ಜಗದ್ಗುರು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !

ಈಶ್ವರಿ ರಾಜ್ಯವನ್ನು ತರಲು ೧೦೦ ಸಂತರ ಅವಶ್ಯಕತೆ ಇದೆ. ಅದಕ್ಕಾಗಿ ಸಾಧಕರು ಪರಾಕಾಷ್ಠೆಯ ಪ್ರಯತ್ನವನ್ನು ಮಾಡಬೇಕು, ಎಂಬ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ಇಲ್ಲಿಯವರೆಗೆ, ಗುರುದೇವರು (ಪರಾತ್ಪರ ಗುರು ಡಾಕ್ಟರ್) ೧೨೦ ಕ್ಕೂ ಹೆಚ್ಚು ಸಂತರನ್ನು ರೂಪಿಸಿದ್ದಾರೆ ಮತ್ತು ಸಾವಿರಾರು ಸಾಧಕರು ಸಂತರಾಗುವ ಮಾರ್ಗದಲ್ಲಿದ್ದಾರೆ.

ಸಾಧಕರೇ, ಸುಖಭೋಗಗಳಲ್ಲಿ ರಮಿಸಿ ಸಾಧನೆಯ ಹಾನಿಯನ್ನು ಮಾಡಬೇಡಿ !

‘ಭೂತಕಾಲ ಅಥವಾ ಭವಿಷ್ಯಕಾಲದಲ್ಲಿ ರಮಿಸುವುದೆಂದರೆ’ ‘ವರ್ತಮಾನ ಕಾಲದ ಪರಿಸ್ಥಿತಿ ಸ್ವೀಕರಿಸಲು ಬರದಿರುವುದು.’ ಸದ್ಯ ತೀವ್ರ ಆಪತ್ಕಾಲ ನಡೆಯುತ್ತಿರುವುದರಿಂದ ಕೆಟ್ಟ ಶಕ್ತಿಗಳ ತೊಂದರೆ ಹೆಚ್ಚಾಗಿದ್ದು ಅವು ಸಾಧಕರ ಮನಸ್ಸು ಮತ್ತು ಬುದ್ಧಿಯ ಮೇಲೆ ಆವರಣ ಹಾಕಿ ಮೇಲಿನಂತೆ ಮಾಯೆಯಲ್ಲಿ ಸಿಲುಕಿಸಲು ಪ್ರಯತ್ನಿಸುತ್ತಿವೆ.

ಸನಾತನದ ಮೊದಲನೇ ಬಾಲಸಂತರಾದ ಪೂ. ಭಾರ್ಗವರಾಮ ಪ್ರಭು (ವಯಸ್ಸು ೬) ಇವರು ಅನಾರೋಗ್ಯದಲ್ಲಿದ್ದಾಗ ಅರಿವಾದ ಅವರ ಸಹನಶೀಲತೆ, ಸ್ಥಿರತೆ ಮತ್ತು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಮೇಲಿನ ದೃಢ ಶದ್ಧೆ !

ಪೂ. ಭಾರ್ಗವರಾಮ ಇವರಿಗೆ ಮಾತನಾಡುವಾಗ ತೊಂದರೆ ಆಗುತ್ತಿದ್ದರೂ ಆಧುನಿಕ ವೈದ್ಯರು ಕೇಳಿದ ಎಲ್ಲ ಪ್ರಶ್ನೆಗಳಿಗೆ ಅವರು ಸ್ವತಃ ಉತ್ತರಗಳನ್ನು ಕೊಟ್ಟರು.

ಜಿಜ್ಞಾಸುಗಳನ್ನು ಸಂಪರ್ಕಿಸುವ ಸೇವೆಯು ಪರಿಣಾಮಕಾರಿಯಾಗಲು ಮಾಡಬೇಕಾದ ಪ್ರಯತ್ನಗಳ ಬಗ್ಗೆ ಶ್ರೀ. ಧನಂಜಯ ಹರ್ಷೆ ಇವರ ಚಿಂತನೆ !

ಜಿಜ್ಞಾಸುವಿನ ಸಕಾರಾತ್ಮಕ ಭಾಗ ಗಮನಕ್ಕೆ ಬರುತ್ತದೆ. ಜಿಜ್ಞಾಸುವಿನಲ್ಲಾದ ಬದಲಾವಣೆಯ ಅಭ್ಯಾಸವಾಗಿ ಅವನಿಗೆ ಸಾಧನೆಗಾಗಿ ಆಗಾಗ ಪ್ರೋತ್ಸಾಹ ನೀಡಲು ಸಾಧ್ಯವಾಗುತ್ತದೆ.

ಗೃಹಸ್ಥ ಜೀವನವೆಂದರೆ ಕುಟುಂಬ, ಇದನ್ನು ಈಶ್ವರನು ನೀಡಿದ ಜವಾಬ್ದಾರಿ ಎಂದು ತಿಳಿಯಬೇಕು !

‘ಒಂದು ವೇಳೆ ನೀವು ಗೃಹಸ್ಥ ಜೀವನವನ್ನು ಅಂದರೆ ಕುಟುಂಬವನ್ನು ಸ್ವೀಕರಿಸಿದ್ದರೆ, ವಿವಾಹ ಮಾಡಿಕೊಂಡು ಒಂದು ಪರಿವಾರದಲ್ಲಿ ವಾಸಿಸುತ್ತಿದ್ದರೆ, ನೀವು ಕೇವಲ ಒಂದು ಸಾಮಾಜಿಕ ಪರಂಪರೆಯ ಪಾಲನೆ ಮಾಡುತ್ತಿರುವಿರಿ ಅಥವಾ ನಿಮ್ಮ ಕುಟುಂಬವು, ಕುಟುಂಬದವರ ನಿರ್ಣಯದ ಪರಿಣಾಮವಾಗಿದೆ ಎಂದು ತಿಳಿಯಬೇಡಿರಿ.

ಯಾರಾದರೂ ನಮ್ಮನ್ನು ಹೊಗಳಿದರೆ ಅದರಲ್ಲಿ ಸಿಲುಕದೆ ಸಾಧನೆಯಲ್ಲಿ ಮುಂದುವರಿಯಲು ಹೇಗೆ ಪ್ರಯತ್ನಿಸಬೇಕು ? ಈ ಬಗ್ಗೆ ಸೌ. ಸುಪ್ರಿಯಾ ಸುರ್ಜಿತ ಮಾಥುರ ಅವರು ಮಾಡಿದ ಮಾರ್ಗದರ್ಶನ !

‘ನಮ್ಮಲ್ಲಿರುವ ಗುರುಗಳಿಗೆ ಇಷ್ಟವಾಗುವ ಗುಣಗಳನ್ನು ಇನ್ನೂ ನಾವು ಹೇಗೆ ಗುರುಗಳಿಗೆ ಅರ್ಪಿಸಬಹುದು ? ಮತ್ತೆ ಹೇಗೆ ಗುಣವೃದ್ಧಿ ಮಾಡಬಹುದು ?, ಎಂದು ಪ್ರಯತ್ನಗಳನ್ನು ತಳಮಳದಿಂದ ಮಾಡಿದರೆ, ವೇಗವಾಗಿ ಈಶ್ವರಪ್ರಾಪ್ತಿಯ ದಿಶೆಯಲ್ಲಿ ಪ್ರಯಾಣವಾಗುತ್ತದೆ.

‘ಮೇಧಾ-ದಕ್ಷಿಣಾಮೂರ್ತಿ ಯಾಗದ ಭಾವಸಮಾರಂಭದ ಚೈತನ್ಯಮಯ ಛಾಯಾಚಿತ್ರಗಳು

ಸಪ್ತರ್ಷಿ ಜೀವನಾಡಿಪಟ್ಟಿಯ ಮಾಧ್ಯಮದಿಂದ ಸಪ್ತರ್ಷಿಗಳ ಆಜ್ಞೆಯಂತೆ ದೇವದ್ ಇಲ್ಲಿನ ಸನಾತನದ ಆಶ್ರಮದಲ್ಲಿ ಫಾಲ್ಗುಣ ಕೃಷ್ಣ ದಶಮಿ, ಅಂದರೆ ೧೭  ಮಾರ್ಚ್ ಈ ದಿನದಂದು ಭಗವಾನ ಶಿವನ ಗುರುರೂಪವಾಗಿರುವ ಶ್ರೀ ದಕ್ಷಿಣಾಮೂರ್ತಿ ದೇವತೆಯ ಕೃಪೆಗಾಗಿ ‘ಮೇಧಾ ದಕ್ಷಿಣಾಮೂರ್ತಿಯಾಗವು ಅತ್ಯಂತ ಭಾವಪೂರ್ಣ ವಾತಾವರಣದಲ್ಲಿ ನೆರವೇರಿತು.

ವಿದ್ಯಾರ್ಥಿ ಸಾಧಕರೇ, ಬೇಸಿಗೆಯ ರಜೆಯಲ್ಲಿ ಚೈತನ್ಯಮಯ ಆಶ್ರಮ ಜೀವನವನ್ನು ಅನುಭವಿಸಿ ಮತ್ತು ಆಂತರ್ಯದಲ್ಲಿ ಸಾಧನೆಯ ಬೀಜವನ್ನು ಬಿತ್ತಿ ಹಿಂದೂ ರಾಷ್ಟ್ರಕ್ಕೆ ಪಾತ್ರರಾಗಿ !

ಭಾವೀಪೀಳಿಗೆಯ ಮೇಲೆ ಸಾಧನೆಯ ಸಂಸ್ಕಾರ ಆಗಲು ರಜೆಯಲ್ಲಿ ಮಕ್ಕಳನ್ನು ಸನಾತನದ ಆಶ್ರಮಕ್ಕೆ ಕಳುಹಿಸಿ !

‘ಸಾಧನೆಯಲ್ಲಿ ಸ್ಥಿರವಾಗಿ ಉಳಿಯುವುದು’, ಇದು ಸಾಧನೆಯಲ್ಲಿನ ಪರೀಕ್ಷೆಯೇ ಆಗಿದೆ !

ಸದ್ಯ ಪ್ರಾಪಂಚಿಕ ಅಡಚಣೆಗಳಿಂದ ಕೆಲವು ಕ್ರಿಯಾಶೀಲ ಅಥವಾ ಪೂರ್ಣವೇಳೆ ಸಾಧನೆ ಮಾಡುವ ಸಾಧಕರ ಮನಸ್ಸಿನಲ್ಲಿ ಶಿಕ್ಷಣ, ನೌಕರಿ, ಸಂಸಾರ ಮುಂತಾದವುಗಳ ಬಗ್ಗೆ ವಿಚಾರಗಳು ತೀವ್ರವಾಗಿ ಬರುತ್ತಿವೆ. ಕೆಲವರಿಗೆ ನಮ್ಮ ಬಳಿ ಹಣವಿಲ್ಲ, ಭವಿಷ್ಯದಲ್ಲಿ ನಮ್ಮದು ಹೇಗಾಗುವುದು ?, ಎಂಬ ವಿಚಾರದಿಂದ ಅಸುರಕ್ಷಿತ ಅನಿಸುತ್ತಿದೆ.

ಸಾಧಕರೇ, ‘ಸಮರ್ಪಣಾಭಾವ’ವನ್ನು ಹೆಚ್ಚಿಸಿ ಶ್ರೀರಾಮಸ್ವರೂಪ ಗುರುಗಳ ಅವತಾರಿ ಕಾರ್ಯದಲ್ಲಿ ಅರ್ಪಿಸಿಕೊಳ್ಳಿ ಮತ್ತು ಅವರ ಆಜ್ಞಾಪಾಲನೆಯನ್ನು ಮಾಡಿ ತಮ್ಮ ಉದ್ಧಾರ ಮಾಡಿಕೊಳ್ಳಿ !

‘ರಾಮಸೇತುವಿನ ನಿರ್ಮಾಣ ನಡೆಯುತ್ತಿದ್ದಾಗ ಕಡಲತೀರದಲ್ಲಿ ಶ್ರೀರಾಮನು ಒಂದು ಶಿವಲಿಂಗವನ್ನು ಸ್ಥಾಪಿಸಿದನು. ‘ರಾವಣನನ್ನು ವಧಿಸಿ ಸೀತೆಯನ್ನು ಲಂಕೆಯಿಂದ ಕರೆತರುವಲ್ಲಿ ಯಶಸ್ಸು ಲಭಿಸಲಿ’, ಈ ಉದ್ದೇಶದಿಂದ ಶ್ರೀರಾಮನು ಶಿವಶಂಕರನನ್ನು ಪೂಜಿಸಿದನು. ಶ್ರೀರಾಮನ ಈ ಆರಾಧನೆಯಿಂದ ಪ್ರಸನ್ನನಾದ ಭಗವಾನ ಶಿವಶಂಕರನು ಶ್ರೀರಾಮನ ಮುಂದೆ ಪ್ರತ್ಯಕ್ಷನಾದನು.