ಯಾರಾದರೂ ನಮ್ಮನ್ನು ಹೊಗಳಿದರೆ ಅದರಲ್ಲಿ ಸಿಲುಕದೆ ಸಾಧನೆಯಲ್ಲಿ ಮುಂದುವರಿಯಲು ಹೇಗೆ ಪ್ರಯತ್ನಿಸಬೇಕು ? ಈ ಬಗ್ಗೆ ಸೌ. ಸುಪ್ರಿಯಾ ಸುರ್ಜಿತ ಮಾಥುರ ಅವರು ಮಾಡಿದ ಮಾರ್ಗದರ್ಶನ !

ಸೌ. ಸುಪ್ರಿಯಾ ಮಾಥೂರ

‘ಒಬ್ಬರು ನಮ್ಮನ್ನು ಹೊಗಳಿದರೆ ಅದನ್ನು ಹೇಗೆ ನೋಡುವುದರಿಂದ ಸಾಧನೆಯಲ್ಲಿ ಪ್ರಯೋಜನಕಾರಿಯಾಗುತ್ತದೆ ? ಮತ್ತು ‘ಹೊಗಳಿಕೆಯಲ್ಲಿ ಸಿಲುಕದೆ ನಾವು ಸಾಧನೆಯಲ್ಲಿ ಹೇಗೆ ಮುನ್ನಡೆಯಬಹುದು ? ಈ  ಬಗ್ಗೆ ಸೌ. ಸುಪ್ರಿಯಾ ಸುರ್ಜಿತ ಮಾಥುರ ಅವರಿಂದ (ಆಧ್ಯಾತ್ಮಿಕ ಮಟ್ಟ ೬೭ ಶೇ., ವಯಸ್ಸು ೪೦ ವರ್ಷ) ಕಲಿಯಲು ಸಿಕ್ಕಿದ ಅಂಶಗಳನ್ನು ಮುಂದೆ ನೀಡಲಾಗಿದೆ.

ಸೌ. ಸಮಿಧಾ ಪಾಲಶೇತಕರ

೧.‘ಯಾರೋ ನಮ್ಮನ್ನು ಹೊಗಳಿದರೆ, ಅಹಂಕಾರ ಹೆಚ್ಚಾಗುತ್ತದೆ, ಎಂಬುದು ತಪ್ಪು ತಿಳುವಳಿಕೆಯಾಗಿದೆ !

ಸೌ. ಸುಪ್ರಿಯಾ ಅವರು ಹೇಳಿದರು, “ಗುಣವು ದೇವರ ಕೊಡುಗೆಯಾಗಿದೆ. ಆದ್ದರಿಂದ ಆ ಸಂದರ್ಭದಲ್ಲಿ ಬರುವ ಅನುಭೂತಿ, ಕಲಿಯಲು ಸಿಕ್ಕಿದ ಅಂಶಗಳು ಅಥವಾ ಆ ಸಂದರ್ಭದಲ್ಲಾದ ಉತ್ತಮ ಪ್ರಯತ್ನಗಳನ್ನು ಬರೆದು ಕೊಟ್ಟರೆ ಇತರ ಸಾಧಕರಿಗೆ ಪ್ರಯತ್ನಿಸಲು ಸುಲಭವಾಗುತ್ತದೆ. ನಾನು ಬರೆದು ಕೊಟ್ಟರೆ, ನನ್ನ ಅಹಂಕಾರವು ಹೆಚ್ಚಾಗುತ್ತದೆ ಎಂದು ಅನೇಕ ಬಾರಿ ಸಾಧಕರ ಮನಸ್ಸಿನಲ್ಲಿ ‘ಯಾರೋ ನಮ್ಮನ್ನು ಹೊಗಳಿದರೆಂದರೆ ನಮ್ಮ ಅಹಂಕಾರ ಹೆಚ್ಚಾಗುತ್ತದೆ ಎಂಬ ಭೀತಿಯಿರುತ್ತದೆ. ಇದು ತಪ್ಪು ತಿಳುವಳಿಕೆಯಾಗಿದೆ.

೨. ನಮ್ಮ ಪ್ರಶಂಸೆಯನ್ನು ಸ್ವಕರ್ತೃತ್ವದ ಭಾವನೆಯಿಂದ ಕೇಳುವುದರಿಂದಾಗುವ ಪರಿಣಾಮ

‘ನಾವು ಎಲ್ಲಿ ತಪ್ಪುತ್ತೇವೆ ?, ಅಂದರೆ ನಾವು ನಮ್ಮ ಸ್ವಕರ್ತೃತ್ವದ ವಿಚಾರದಿಂದ ಕೇಳುತ್ತೇವೆ ಮತ್ತು ಮನೋರಾಜ್ಯದಲ್ಲಿ ವಿಹರಿಸಿ ‘ನಾನು ಹೇಗೆ ಚೆನ್ನಾಗಿ ಕೆಲಸ ಮಾಡುತ್ತಿದ್ದೇನೆ ! ಎಂದು ವಿಚಾರ ಮಾಡುತ್ತಿರುತ್ತೇವೆ. ಇದರಿಂದ ಸ್ವಯಂ-ಕೇಂದ್ರಿತ ಕೋಶ ರಚನೆ ಆಗುತ್ತದೆ. ಅದರ ಪರಿಣಾಮವಾಗಿ ಯಾರಾದರೂ ನಮಗೆ ಏನನ್ನಾದರೂ ಕಲಿಸುವುದು ಕನಿಷ್ಠವೆಂದು ಅನಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಯಾರಾದರೂ ನಮಗೆ ತಪ್ಪು ಹೇಳಿದರೆ ಕೋಪ ಬರುತ್ತದೆ ಮತ್ತು ಮನಸ್ಸು ನಿರಾಶವಾಗುತ್ತದೆ. ಈ ಚಕ್ರದಲ್ಲಿ ಸಿಲುಕಿಕೊಂಡು ನಾವು ಸಾಧನೆಯಿಂದ ದೂರ ಹೋಗುತ್ತೇವೆ. ಪ್ರಯತ್ನಗಳ ದಿಶೆ ಯೋಗ್ಯವಿಲ್ಲದ ಕಾರಣ ‘ನಾವು ಚೆನ್ನಾಗಿ ಕೆಲಸ ಮಾಡುತ್ತಿದ್ದೇವೆ ಎಂಬ ಭ್ರಮೆಯಲ್ಲಿ ಸಾಧನೆಯ ಅನೇಕ ವರ್ಷಗಳು ವ್ಯರ್ಥವಾಗುತ್ತವೆ.

೩. ಕೃತಿಯ ಸ್ತರದಲ್ಲಿ ಹೇಗೆ ಪ್ರಯತ್ನಿಸುವುದು ?

ಪ್ರಶಂಸೆ ಮಾಡಿದ ನಂತರ ‘ದೇವರಿಗೆ ಕೊಡಲು ನಮ್ಮ ಬಳಿ ಏನಿದೆ ಹಾಗೂ ಗುರುಗಳಿಗೆ ಏನು ಇಷ್ಟವಾಗುತ್ತದೆ ?, ಎಂಬ ರಹಸ್ಯ ಬಹಿರಂಗವಾಗುತ್ತದೆ. ‘ನಮ್ಮಲ್ಲಿರುವ ಗುರುಗಳಿಗೆ ಇಷ್ಟವಾಗುವ ಗುಣಗಳನ್ನು ಇನ್ನೂ ನಾವು ಹೇಗೆ ಗುರುಗಳಿಗೆ ಅರ್ಪಿಸಬಹುದು ? ಮತ್ತೆ ಹೇಗೆ ಗುಣವೃದ್ಧಿ ಮಾಡಬಹುದು ?, ಎಂದು ಪ್ರಯತ್ನಗಳನ್ನು ತಳಮಳದಿಂದ ಮಾಡಿದರೆ, ವೇಗವಾಗಿ ಈಶ್ವರಪ್ರಾಪ್ತಿಯ ದಿಶೆಯಲ್ಲಿ ಪ್ರಯಾಣವಾಗುತ್ತದೆ. ನಾವು ಮುಂದಿನ ವ್ಯಕ್ತಿಗೆ ಇದು ಈಶ್ವರನ ಅಥವಾ ಗುರುಗಳ ಸಹಾಯದಿಂದಲೆ ಆಗಿದೆ, ಎಂದು ಸಹಜವಾಗಿ ಹೇಳಬಹುದು. ಇದ್ದರಿಂದ ಅದರ ಕರ್ತೃತ್ವದ ಭಾವನೆ ನಮ್ಮಲ್ಲಿರುವುದಿಲ್ಲ.

೪. ವೈಚಾರಿಕ ಸ್ತರದಲ್ಲಿ ಹೇಗೆ ಪ್ರಯತಿಸಬೇಕು ?

ಅ. ಎದುರಿನ ವ್ಯಕ್ತಿ (ಸಾಧಕ) ನಮ್ಮಲ್ಲಿರುವ ಗುಣಗಳನ್ನು ಪ್ರಶಂಸೆ ಮಾಡಿದಾಗ ನಮಗೆ ನಮ್ಮ ಕ್ಷಮತೆ ಗೊತ್ತಿರುತ್ತದೆ. ಆಗ ನಮ್ಮತ್ತ ವಸ್ತುನಿಷ್ಠವಾಗಿ ನೋಡಲು ಬರಬೇಕು.

ಆ. ‘ನಾವು ಮಾಡುತ್ತಿರುವ ಪ್ರಯತ್ನಗಳು; ಹಾಗೆಯೇ ನಮ್ಮಲ್ಲಿರುವ ಗುಣಗಳು, ಇವು ಈಶ್ವರನ ಕೊಡುಗೆಗಳಾಗಿವೆ ಇದು ಅವರ ಕೃಪೆಯಾಗಿದೆ, ಎಂಬುದು ಗಮನದಲ್ಲಿರಬೇಕು.

ಇ. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮಲ್ಲಿರುವ ಸ್ವಭಾವದೋಷ ಹಾಗೂ ಅಹಂ ತೆಗೆದು ಹಾಕಲು ನಾವು ಅಸಮರ್ಥರಾಗಿದ್ದೇವೆ, ಎಂಬುದು ಮನಸ್ಸಿಗೆ ಅರಿವಾದರೆ, ನಮ್ಮಲ್ಲಿರುವ ಅಹಂ ಹೆಚ್ಚಾಗದೆ ನಾವು ಸಹಜಾವಸ್ಥೆಯಲ್ಲಿರಬಹುದು.

ಪ.ಪೂ. ಭಕ್ತರಾಜ ಮಹಾರಾಜರು ಒಂದು ಭಜನೆಯಲ್ಲಿ ಮುಂದಿನಂತೆ ಹೇಳಿದ್ದಾರೆ – ಧನವೆಲ್ಲವನ್ನೂ ಒಂದು ವೇಳೆ ಸಮರ್ಪಿಸಿದರೂ ಯಾರ ಕೃಪೆಯಿಂದ ಅದು ಪ್ರಾಪ್ತವಾಯಿತು ಎಂದು ಇಂದಿಗೂ ನನಗೆ ಏಕೆ ಅರ್ಥವಾಗಿಲ್ಲ, ನಿನಗೆ ಅದನ್ನು ಹೇಗೆ ಅರ್ಪಿಸಲಿ ? ನಿಮ್ಮ ಸೇವೆಯನ್ನು ಹೇಗೆ ಮಾಡಲಿ  ನಾಥಾ ಹೇಗೆ ಸೇವೆಯನ್ನು ಮಾಡಲಿ.

‘ಹೇ ಗುರುದೇವರೇ, ಇದೆಲ್ಲವು ನನಗೆ ಕಲಿಯಲು ಸಿಕ್ಕಿತು ಹಾಗೂ ನೀವೇ ನನ್ನಿಂದ ಇದನ್ನು ಬರೆಯಿಸಿಕೊಂಡಿದ್ದೀರಿ, ಅದಕ್ಕಾಗಿ ನಿಮ್ಮ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆ !

– ಸೌ. ಸಮಿಧಾ ಸಂಜಯ ಪಾಲಶೇತಕರ, ಪನವೆಲ