ಪರಾತ್ಪರ ಗುರು ಡಾ. ಆಠವಲೆಯವರ ಅನುಗ್ರಹ, ಅವರ ಮಾರ್ಗದರ್ಶನ ಮತ್ತು ಅವರ ಸಂಕಲ್ಪ ಮತ್ತು ಅಸ್ತಿತ್ವದಿಂದಾಗುವ ಧರ್ಮ ಸ್ಥಾಪನೆಯ ಕಾರ್ಯದ ಬಗ್ಗೆ ನಾನು ಅನುಭವಿಸಿದ ಅಂಶಗಳನ್ನು ಕೆಳಗೆ ನೀಡಿದ್ದೇನೆ.
೧. ಪರಾತ್ಪರ ಗುರು ಡಾ. ಆಠವಲೆ ಇವರ ಸಾರ್ವಜನಿಕ ಪ್ರವಚನ ಕೇಳಿದ ನಂತರ ಸನಾತನದ ಕಾರ್ಯದಲ್ಲಿ ಸಹಭಾಗಿ ಆಗುವುದು
ನಾನು ೧೯೯೮ ರಲ್ಲಿ ಗೋವಾದ ಕುಡಚಡೆ ಯಲ್ಲಿ ಪ.ಪೂ. ಡಾ. ಆಠವಲೆಯವರ ಸಾರ್ವಜನಿಕ ಪ್ರವಚನ ಕೇಳಿದ್ದೆ. ಆಗಿನಿಂದ ನಾನು ಸನಾತನ ಸಂಸ್ಥೆಯ ಕಾರ್ಯದಲ್ಲಿ ಸಹಭಾಗಿ ಆಗಿದ್ದೇನೆ. ಸನಾತನದ ಸತ್ಸಂಗಕ್ಕೆ ಹೋಗಿದ್ದಕ್ಕೆ ನನಗೆ ಅಧ್ಯಾತ್ಮದ ಜ್ಞಾನ ಸಿಕ್ಕಿತು. ನನಗೆ ಆ ಜ್ಞಾನ ಇತರರಿಗೆ ಹೇಳುವ ಅವಕಾಶ ಹಾಗೂ ಸ್ಪೂರ್ತಿ ಸಿಕ್ಕಿತು. ಈ ರೀತಿಯಲ್ಲಿ ಅನೇಕ ಸಾಧಕರು ಈಗ ಪ್ರವಚನ ನೀಡುತ್ತಿದ್ದಾರೆ. ಇದು ಪರಾತ್ಪರ ಗುರು ಡಾಕ್ಟರರ ಕೃಪೆಯಾಗಿದೆ.
೨. ಪರಾತ್ಪರ ಗುರು ಡಾ. ಆಠವಲೆಯವರು ಪವಾಡಗಳನ್ನು ಮಾಡುವುದರಲ್ಲಿ ಶಕ್ತಿಯನ್ನು ವ್ಯರ್ಥ ಮಾಡಬಾರದು, ಎಂದು ಹೇಳುವುದು
ಆ ಸಮಯದಲ್ಲಿ ಸನಾತನದ ಸೇವಾಕೇಂದ್ರವು ಫೋಂಡಾದಲ್ಲಿತ್ತು. ನನಗೆ ಪ.ಪೂ. ಡಾಕ್ಟರರ ಕೆಲವು ಉಪನ್ಯಾಸಗಳಿಗೆ ಭಾಗವಹಿಸುವ ಅವಕಾಶ ಸಿಕ್ಕಿತ್ತು, ಜೊತೆಗೆ ಸಾಧಕರಿಗಾಗಿ ಮಾಡುತ್ತಿರುವ ಮಾರ್ಗದರ್ಶನದಿಂದ ನನಗೆ ಲಾಭವಾಯಿತು. ಅವರ ಒಂದು ಮಾರ್ಗದರ್ಶನದಲ್ಲಿ ಮುಂದಿನಂತೆ ಹೇಳಿದರು, ನಾನು ಪವಾಡಗಳನ್ನು ಮಾಡುವಲ್ಲಿ ಶಕ್ತಿಯನ್ನು ವ್ಯರ್ಥ ಮಾಡಲು ಬಯಸುವುದಿಲ್ಲ; ಆದರೆ ಇಂದು ನಾನು ನಿಮಗೆ ಮೊದಲ ಮತ್ತು ಅಂತಿಮ ಪವಾಡವನ್ನು ತೋರಿಸುತ್ತೇನೆ. ಅವರು ತಮ್ಮ ಕೈ ಮುಷ್ಟಿಯನ್ನು ಬಿಗಿದರು. ಅವರು ಕೆಲವು ಸಾಧಕರನ್ನು ತಮ್ಮ ಮುಷ್ಟಿಯನ್ನು ಬಿಡಿಸುವಂತೆ ಹೇಳಿದರು. ಸಾಧಕರು ಪ್ರಯತ್ನ ಮಾಡಿದರೂ ಪ.ಪೂ. ಡಾಕ್ಟರರವರ ಮುಷ್ಟಿಯನ್ನು ಬಿಡಿಸಲು ಸಾಧ್ಯವಾಗಲಿಲ್ಲ. (ಸಿದ್ಧಿಯನ್ನು ಸಾಧಿಸುವುದು ಸಾಧನೆಯಲ್ಲಿ ಒಂದು ಹಂತವಾಗಿದೆ. ಸಿದ್ಧಿಯನ್ನು ಪಡೆದ ನಂತರ ಅಹಂಕಾರ ಹೆಚ್ಚಾಗಿ ಸಾಧನೆಯಲ್ಲಿ ಕುಸಿತವಾಗುವ ಅಪಾಯವಿದೆ. ಇದಕ್ಕಾಗಿ ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರಿಗೆ ಸಿದ್ಧಿಯಲ್ಲಿ ಸಿಲುಕಿಕೊಳ್ಳಬೇಡಿ ಎಂದು ಹೇಳುತ್ತಾರೆ. – ಸಂಕಲನಕಾರರು)
೩. ಸನಾತನ ಸಂಸ್ಥೆಯ ಸೂಕ್ಷ್ಮದ ಕಾರ್ಯವು ಸಮಾಜದ ಜನ ಸಾಮಾನ್ಯರ ಗಮನಕ್ಕೆ ಬರುವುದಿಲ್ಲ. ಇದು ಸಂತರು ಮತ್ತು ಕೆಲವು ಸಾಧಕರ ಗಮನಕ್ಕೆ ಮಾತ್ರ ಬರುತ್ತದೆ ಎಂದು ಒಮ್ಮೆ ಪ.ಪೂ.ಡಾ. ಆಠವಲೆ ಅವರು ಹೇಳಿದ್ದರು.
೪. ಪರಾತ್ಪರ ಗುರು ಡಾ. ಆಠವಲೆಯವರು ಈಶ್ವರಿ ರಾಜ್ಯದ ಸ್ಥಾಪನೆಗಾಗಿ ಸಂತರನ್ನು ರೂಪಿಸಿದರು
ಈಶ್ವರಿ ರಾಜ್ಯವನ್ನು ತರಲು ೧೦೦ ಸಂತರ ಅವಶ್ಯಕತೆ ಇದೆ. ಅದಕ್ಕಾಗಿ ಸಾಧಕರು ಪರಾಕಾಷ್ಠೆಯ ಪ್ರಯತ್ನವನ್ನು ಮಾಡಬೇಕು, ಎಂಬ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ಇಲ್ಲಿಯವರೆಗೆ, ಗುರುದೇವರು (ಪರಾತ್ಪರ ಗುರು ಡಾಕ್ಟರ್) ೧೨೦ ಕ್ಕೂ ಹೆಚ್ಚು ಸಂತರನ್ನು ರೂಪಿಸಿದ್ದಾರೆ ಮತ್ತು ಸಾವಿರಾರು ಸಾಧಕರು ಸಂತರಾಗುವ ಮಾರ್ಗದಲ್ಲಿದ್ದಾರೆ. ಗುರುದೇವರು ಸಮಾಜದಲ್ಲಿ ಧರ್ಮ ಮತ್ತು ರಾಷ್ಟ್ರಕ್ಕಾಗಿ ಕಾರ್ಯಾ ಮಾಡುತ್ತಿರುವ ವ್ಯಕ್ತಿಗಳ ಆಧ್ಯಾತ್ಮಿಕ ಮಟ್ಟವನ್ನು ಗುರುತಿಸಿ ಅವರನ್ನು ಸಂತರೆಂದು ಜಗತ್ತಿಗೆ ಪರಿಚಯಿಸಿದ್ದಾರೆ ಮತ್ತು ಇಬ್ಬರು ಬಾಲಕರನ್ನು ಬಾಲಕಸಂತರೆಂದು ಪರಿಚಯಿಸಿದ್ದಾರೆ.
ಪರಾತ್ಪರ ಗುರು ಡಾ. ಆಠವಲೆಯವರಿಗೆ ಜಯವಾಗಲಿ !
ಈ ಮನೋಗತವನ್ನು ವ್ಯಕ್ತಪಡಿಸಿಕೊಂಡಿದ್ದಕ್ಕಾಗಿ ನಾನು ಗುರುಚರಣಗಳಲ್ಲಿ ಕೃತಜ್ಞನಾಗಿದ್ದೇನೆ.
– ಶ್ರೀ. ಶ್ರೀರಾಮ ಖೇಡೆಕರ, ನಾಗೇಶಿ, ಫೋಂಡಾ, ಗೋವಾ. (೨೦.೫.೨೦೨೨)