‘ಸಾಧನೆಯಲ್ಲಿ ಸ್ಥಿರವಾಗಿ ಉಳಿಯುವುದು’, ಇದು ಸಾಧನೆಯಲ್ಲಿನ ಪರೀಕ್ಷೆಯೇ ಆಗಿದೆ !

(ಪೂ.) ಶ್ರೀ. ಸಂದೀಪ ಆಳಶಿ,

ಸದ್ಯ ಪ್ರಾಪಂಚಿಕ ಅಡಚಣೆಗಳಿಂದ ಕೆಲವು ಕ್ರಿಯಾಶೀಲ ಅಥವಾ ಪೂರ್ಣವೇಳೆ ಸಾಧನೆ ಮಾಡುವ ಸಾಧಕರ ಮನಸ್ಸಿನಲ್ಲಿ ಶಿಕ್ಷಣ, ನೌಕರಿ, ಸಂಸಾರ ಮುಂತಾದವುಗಳ ಬಗ್ಗೆ ವಿಚಾರಗಳು ತೀವ್ರವಾಗಿ ಬರುತ್ತಿವೆ. ಕೆಲವರಿಗೆ ನಮ್ಮ ಬಳಿ ಹಣವಿಲ್ಲ, ಭವಿಷ್ಯದಲ್ಲಿ ನಮ್ಮದು ಹೇಗಾಗುವುದು ?, ಎಂಬ ವಿಚಾರದಿಂದ ಅಸುರಕ್ಷಿತ ಅನಿಸುತ್ತಿದೆ. ಕೆಲವರಿಗೆ ಸಾಧನೆ ಮತ್ತು ಸೇವೆಯನ್ನು ಮಾಡುವುದರ ಬಗ್ಗೆ ಬೇಸರ ಬರುತ್ತಿದ್ದು, ಸುಖ ವಿಲಾಸದ ಜೀವನ ನಡೆಸುವ ಮಾಯೆಯ ಜೀವನದ ಆಸಕ್ತಿ ಉಂಟಾಗಿದೆ. ಹೀಗೆ ಕಾರಣಗಳು ಬೇರೆ ಬೇರೆ ಇದ್ದರೂ ಸಾಧನೆ ಮಾಡಿ ಈಶ್ವರಪ್ರಾಪ್ತಿಯನ್ನು ಮಾಡಿಕೊಳ್ಳುವ ಧ್ಯೇಯದಿಂದ ಸಾಧಕರು ವಿಚಲಿತರಾಗಿದ್ದಾರೆ ಎಂಬ ಕಾರಣವು ಅತ್ಯಂತ ಹೆಚ್ಚು ಸಂಪೂರ್ಣ ನಿಜವಾಗಿವೆ. ಸದ್ಯ ತೀವ್ರ ಆಪತ್ಕಾಲ ಇರುವುದರಿಂದ ಅನಿಷ್ಟ ಶಕ್ತಿಗಳ ಪ್ರಭಾವ ಹೆಚ್ಚಾಗಿದ್ದು ಅವುಗಳೂ ಸಾಧಕರನ್ನು ಸಾಧನಾಮಾರ್ಗದಿಂದ ಕೆಳಗಿಳಿಸಲು ಶಕ್ತಿಮೀರಿ ಪ್ರಯತ್ನಿಸುತ್ತಿವೆ. ಇಂತಹ ಸಮಯದಲ್ಲಿ ಸಾಧನೆಯಲ್ಲಿ ಸ್ಥಿರವಾಗಿ ಉಳಿಯುವುದು ಸಾಧನೆಯಲ್ಲಿನ ಪರೀಕ್ಷೆಯೆ ಆಗಿದೆ, ಎಂದು ತಿಳಿದು ಸಾಧಕರು ಆ ಅಡಚಣೆಗಳನ್ನು ಜಯಿಸುವುದು ಆವಶ್ಯಕವಾಗಿದೆ. ಈ ಸಂದರ್ಭದಲ್ಲಿ ಮುಂದಿನ ಕೆಲವು ದೃಷ್ಟಿಕೋನಗಳು ಉಪಯೋಗವಾಗಬಹುದು.

ಗುರುಗಳ ಬೋಧನೆಯೊಂದಿಗೆ ಏಕರೂಪವಾಗುವ ಮಹತ್ವ !

‘ಗುರುಗಳ ಸ್ಥೂಲ ರೂಪವೆಂದರೆ ಅವರ ದೇಹ, ಮತ್ತು ಸೂಕ್ಷ್ಮ ರೂಪವೆಂದರೆ ಅವರ ಬೋಧನೆ ! ಸಾಧಕರು ಗುರುಗಳ ಸ್ಥೂಲ ರೂಪದೊಂದಿಗೆ ಅಲ್ಲ, ಸೂಕ್ಷ್ಮ ರೂಪದೊಂದಿಗೆ ಏಕರೂಪರಾಗಬಹುದು. ಗುರುಗಳ ಸೂಕ್ಷ್ಮ ರೂಪದಲ್ಲಿ ಅಂದರೆ ಬೊಧನೆಯೊಂದಿಗೆ ಏಕರೂಪವಾಗಲು ಗುರುಗಳು ನೀಡಿದ ಬೋಧನೆಯನ್ನು ಸತತವಾಗಿ ಆಚರಣೆಯಲ್ಲಿ ತರುವುದು ಮಹತ್ವದ್ದಾಗಿರುತ್ತದೆ. ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ಸನಾತನ ಸಂಸ್ಥೆಯ ಸ್ಥಾಪನೆ ಆದಾಗಿನಿಂದ ಸಾಧಕರಿಗೆ ಎಲ್ಲ ಅಂಗಗಳಿಂದ ಸಾಧನೆಯನ್ನು ಕಲಿಸುತ್ತಿದ್ದಾರೆ. ‘ಅವರ ಬೋಧನೆಯನ್ನು ನಾವು ನಿಜವಾಗಿಯೂ ಪ್ರತಿದಿನ ಆಚರಣೆಯಲ್ಲಿ ತರುತ್ತಿದ್ದೇವೇನು ?’, ಎಂಬುದನ್ನು ಸಾಧಕರು ಅಂತರ್ಮುಖರಾಗಿ ವಿಚಾರ ಮಾಡಬೇಕು.’

– (ಪೂ.) ಸಂದೀಪ ಆಳಶಿ (೭.೨.೨೦೨೨)

೧. ಮಹಾಯುದ್ಧ, ನೈಸರ್ಗಿಕ ಆಪತ್ತು ಮುಂತಾದ ಸ್ವರೂಪದಲ್ಲಿನ ಮಹಾಭಯಂಕರ ಆಪತ್ಕಾಲ ಶೀಘ್ರದಲ್ಲಿಯೇ ಆರಂಭವಾಗಲಿಕ್ಕಿದೆ. ಆ ಕಾಲದಲ್ಲಿ ಹಣ, ಮನೆ ಇತ್ಯಾದಿಗಳಲ್ಲ, ಕೇವಲ ಸಾಧನೆಯ ಸಂರಕ್ಷಕ-ಕವಚವೇ ಉಪಯೋಗವಾಗಲಿಕ್ಕಿದೆ. ಆದುದರಿಂದ ಈಗ ಸಾಧನೆಗೆ ಪ್ರಾಧಾನ್ಯತೆಯನ್ನು ನೀಡಲೇಬೇಕು.

೨. ಬಹಳಷ್ಟು ಜನರಿಗೆ ಹೊರಗಿನ ಚಟಪಟಿತ (ಖಾರ-ಮಸಾಲೆಯುಕ್ತ) ಪದಾರ್ಥಗಳನ್ನು ತಿನ್ನುವುದು, ಹೊರಗಿನ ಪಾನೀಯಗಳನ್ನು ಕುಡಿಯುವುದು, ದುಬಾರಿ ಉಡುಪು, ದುಬಾರಿ ಸಂಚಾರಿವಾಣಿ ಇತ್ಯಾದಿ ಬೇಕಾಗಿರುತ್ತವೆ. ನಮ್ಮ ಅವಶ್ಯಕತೆಗಳನ್ನು ಕಡಿಮೆ ಮಾಡಿದರೆ, ಇರುವುದರಲ್ಲಿಯೆ ನಾವು ಸಮಾಧಾನದಲ್ಲಿರಬಹುದು.

೩. ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ಸಾಧಕಾವಸ್ಥೆಯಲ್ಲಿರುವಾಗ ತಮ್ಮದೆಲ್ಲವನ್ನೂ ಗುರುಚರಣಗಳಲ್ಲಿ ಅರ್ಪಣೆ ಮಾಡಿದ್ದರು. ಆ ಸಮಯದಲ್ಲಿ ಅವರು ಹಣ ಸಂಪಾದನೆಗಾಗಿ ತಮ್ಮ ಚಿಕಿತ್ಸಾಲಯವನ್ನು ನಡೆಸುತ್ತಿದ್ದರು ಮತ್ತು ಅದರಿಂದ ಸಿಗುವ ಹಣದಿಂದ ಮನೆ ಖರ್ಚಿಗೆ ಅವಶ್ಯಕತೆ ಇರುವಷ್ಟೆ ಇಟ್ಟುಕೊಂಡು ಉಳಿದ ಹಣವನ್ನು ಅಧ್ಯಾತ್ಮ ಪ್ರಸಾರಕ್ಕಾಗಿ ಖರ್ಚು ಮಾಡುತ್ತಿದ್ದರು. ಒಮ್ಮೆ ಗುರುಗಳು ಅವರ ಪರೀಕ್ಷೆ ಮಾಡಿದರು. ಚಿಕಿತ್ಸಾಲಯವನ್ನು ನಡೆಸುತ್ತಿದ್ದರೂ ಸ್ವಲ್ಪವೂ ಹಣ ಸಿಗುತ್ತಿರಲಿಲ್ಲ. ಆದರೂ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಉಳಿತಾಯ ಮಾಡಿಟ್ಟ ಹಣದಿಂದ ಅಧ್ಯಾತ್ಮಪ್ರಸಾರದ ಕಾರ್ಯವನ್ನು ಮುಂದುವರಿಸಿದರು. ಅನಂತರ ಅವರಿಗೆ ಎಂತಹ ಅನುಭೂತಿಗಳು ಬಂದವೆಂದರೆ, ಕೈಯಲ್ಲಿ ಒಂದು ಪೈಸೆಯೂ ಇಲ್ಲದಿರುವಾಗ ಅನಿರೀಕ್ಷಿತವಾಗಿ ಎಲ್ಲಿಂದಾದರೂ ಹಣದ ವ್ಯವಸ್ಥೆ ಆಗುತ್ತಿತ್ತು ಮತ್ತು ಆ ದಿನದ ಕಾರ್ಯ ಪೂರ್ಣವಾಗುತ್ತಿತ್ತು. ಗುರುಗಳು ಅವರಿಗೆ ಎಂದಿಗೂ ಉಪವಾಸ ಬೀಳುವ ಪ್ರಸಂಗವನ್ನು ತರಲಿಲ್ಲ ಅಥವಾ ಅಧ್ಯಾತ್ಮಪ್ರಸಾರದ ಕಾರ್ಯ ಭಂಗವಾಗಲಿಲ್ಲ ! ಇಂದು ಸಾಧಕರಿಗೆ ವಿಷ್ಣುಸ್ವರೂಪ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ಗುರುಗಳಾಗಿ ಲಭಿಸಿರುವಾಗ ಸಾಧಕರು ಅವರ ಮೇಲೆ ಸಂಪೂರ್ಣ ಶ್ರದ್ಧೆಯನ್ನಿಟ್ಟರೆ, ಅವರಿಗೂ ಅಂತಹ ಅನುಭೂತಿಗಳು ಬರಲಿಕ್ಕಿಲ್ಲವೇ ?

ಪ.ಪೂ. ಭಕ್ತರಾಜ ಮಹಾರಾಜರು ಒಂದು ಭಜನೆಯಲ್ಲಿ ಹೀಗೆ ಹೇಳಿದ್ದಾರೆ –

ಬ್ರೀದ್ ತುಝೆ ಸತ್ಯ | ಜಾಣೆ ಮೀ ತ್ರಿವಾರ |

ಭಕ್ತಾಂಚಾ ತೂ ಭಾರ್ | ವಾಹೀ ಸದಾ ||

ಭಕ್ತವತ್ಸಲ ಪ್ರಭುವಿನ ಭಕ್ತವಾತ್ಸಲ್ಯದ ಅನುಭೂತಿಗಳು ಬರಲು ಭಕ್ತವತ್ಸಲನಲ್ಲಿ ಶ್ರದ್ಧೆಯನ್ನೇ ಇಡಬೇಕಾಗುತ್ತದೆ !

೪. ಸಾಧನೆಯನ್ನು ಮಾಡುವಾಗ ಸಾಧನೆಯ ಪ್ರಯತ್ನದ ವರದಿಯನ್ನು ಜವಾಬ್ದಾರ ಸಾಧಕರಿಗೆ ಕೊಡಬೇಕಾಗುತ್ತದೆ. ಸೇವೆಯನ್ನು ಮಾಡುವಾಗ ಕಾರ್ಯಪದ್ಧತಿ ಮತ್ತು ಸಮಯಮಿತಿಯನ್ನು ಪಾಲಿಸಬೇಕಾಗುತ್ತದೆ. ಇದನ್ನೆಲ್ಲ ಮಾಡಲು ಬೇಸರ ಬರುತ್ತದೆ ಎಂದು ನಾವು ಸುಖದ ಜೀವನದ ಬೇರೆ ಬೇರೆ ಮಾರ್ಗಗಳನ್ನು ಹುಡುಕಲು ಪ್ರಾರಂಭಿಸಿದರೆ, ನಾವೇ ನಮ್ಮ ಕಾಲಿನ ಮೇಲೆ ಕೊಡಲಿಯೇಟು ಹಾಕಿದಂತಾಗಬಹುದು. ಇದರ ಕಾರಣವೇನೆಂದರೆ, ಕೇವಲ ತಾತ್ಕಾಲಿಕ ಸುಖವನ್ನು ನೀಡುವ ಈ ಮಾಯಾಜಾಲದಲ್ಲಿ ಹೆಚೆಚ್ಚು ಸಿಲುಕಿ ನಾವು ನಿಜವಾದ ಆನಂದದಿಂದ ಶಾಶ್ವತವಾಗಿ ದೂರ ಹೋಗಬಹುದು. ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರಂತಹ ಶ್ರೇಷ್ಠ ಮೋಕ್ಷಗುರು ನಮ್ಮ ಜೀವನದಲ್ಲಿ ಬರುವುದೆಂದರೆ, ಇದು ನಮ್ಮ ಅನೇಕ ಜನ್ಮಗಳ ಮಹಾಭಾಗ್ಯವೇ ಆಗಿದೆ. ಈ ಸುವರ್ಣಾವಕಾಶದ ಲಾಭವನ್ನು ಪಡೆದು ನಮ್ಮ ಜೀವನವನ್ನು ಸಾರ್ಥಕಗೊಳಿಸದಿದ್ದರೆ ನಮ್ಮಂತಹ ನತದೃಷ್ಟರು ನಾವೇ ಆಗಬಹುದು  !

ಸಾಧಕರೆ, ಜಾಗರೂಕರಾಗಿರಿ ! ಮಾಯೆಯ ಪ್ರಲೋಭನೆ ಗಳಿಗೆ (ಆಮಿಷಗಳಿಗೆ)  ಬಲಿಯಾಗಬೇಡಿ ಮತ್ತು ಸಾಧನೆಯನ್ನು ಬಿಡುವುದು ಅಥವಾ ಕಡಿಮೆ ಮಾಡುವುದು  ಹೀಗೆ ಮಾಡಬೇಡಿ. ಸಾಧನೆ ಮತ್ತು ಸೇವೆಯನ್ನು ಮಾಡುವಾಗ ಬರುವ ಅಡಚಣೆಗಳ ವಿಷಯವನ್ನು ಮತ್ತು ಮನಸ್ಸಿನಲ್ಲಿ ಬರುವ ವ್ಯಾವಹಾರಿಕ ವಿಷಯಗಳ ಬಗ್ಗೆ ಜವಾಬ್ದಾರ ಸಾಧಕರು ಅಥವಾ ಮಾರ್ಗದರ್ಶಕ ಸಂತರೊಂದಿಗೆ ಮಾತನಾಡಿಕೊಳ್ಳಿ ಮತ್ತು ಅದರಿಂದ ಹೊರಗೆ ಬರಲು ಪ್ರಯತ್ನಿಸಿರಿ !

– (ಪೂ.) ಸಂದೀಪ ಆಳಶಿ (೬.೩.೨೦೨೩)

ಕೆಟ್ಟ ಶಕ್ತಿ : ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ-ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ, ಉದಾ. ಅಸುರರು, ರಾಕ್ಷಸರು, ಪಿಶಾಚಿ, ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ, ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.

ಸೂಕ್ಷ್ಮದಲ್ಲಿ ಕಾಣಿಸುವುದು, ಕೇಳಿಸುವುದು ಇತ್ಯಾದಿ (ಪಂಚ ಸೂಕ್ಷ್ಮಜ್ಞಾನೇಂದ್ರಿಯಗಳಿಂದ ಜ್ಞಾನಪ್ರಾಪ್ತಿಯಾಗುವುದು) : ಕೆಲವು ಸಾಧಕರ ಅಂತರ್ದೃಷ್ಟಿ ಜಾಗೃತವಾಗುತ್ತದೆ, ಅಂದರೆ ಸಾಮಾನ್ಯವಾಗಿ ಕಣ್ಣಿಗೆ ಕಾಣದಂತಹವುಗಳು ಅವರಿಗೆ ಸೂಕ್ಷ್ಮದಲ್ಲಿ ಗೋಚರಿಸುತ್ತವೆ ಮತ್ತು ಇನ್ನು ಕೆಲವರಿಗೆ ಸೂಕ್ಷ್ಮದಲ್ಲಿನ ನಾದ ಅಥವಾ ಶಬ್ದಗಳು ಕೇಳಿಸುತ್ತವೆ.

ಈ ವಾರದ ಸಂಚಿಕೆಯಲ್ಲಿ ನೀಡಿದ ಸಾಧಕರ ಅನುಭೂತಿಗಳು ‘ಭಾವವಿದ್ದಲ್ಲಿ ದೇವ’ ಎಂಬಂತೆ ಆಯಾ ಸಾಧಕರಿಗೆ ಬಂದ  ವೈಯಕ್ತಿಕ  ಅನುಭೂತಿಯಾಗಿದ್ದು ಅದು ಎಲ್ಲರಿಗೂ ಬರುತ್ತದೆ ಎಂದೇನಿಲ್ಲ. – ಸಂಪಾದಕರು