ಎಲ್ಲೆಡೆಯ ವಿದ್ಯಾರ್ಥಿ-ಸಾಧಕರಿಗೆ ಸನಾತನದ ಆಶ್ರಮದಲ್ಲಿರಲು ಅಮೂಲ್ಯ ಅವಕಾಶ !
೧. ಭಾವೀಪೀಳಿಗೆಯ ಮೇಲೆ ಸಾಧನೆಯ ಸಂಸ್ಕಾರ ಆಗಲು ರಜೆಯಲ್ಲಿ ಮಕ್ಕಳನ್ನು ಸನಾತನದ ಆಶ್ರಮಕ್ಕೆ ಕಳುಹಿಸಿ !
ಸಾಧಕ-ಪೋಷಕರೇ, ತಮ್ಮ ಮಕ್ಕಳು ಅಂದರೆ ಹಿಂದೂ ರಾಷ್ಟ್ರದ ಮುಂದಿನ ಪೀಳಿಗೆ ! ಈ ಪೀಳಿಗೆಯ ಮೇಲೆ ಸುಸಂಸ್ಕಾರ ಮಾಡುವುದು ಮತ್ತು ಅವರ ಮನಸ್ಸಿನಲ್ಲಿ ಸಾಧನೆಯ ಬೀಜ ಬಿತ್ತುವುದು ಅಗತ್ಯವಾಗಿದೆ ಮುಂದಿನ ಪೀಳಿಗೆಯನ್ನು ಈಗಿ ನಿಂದಲೇ ರೂಪಿಸಿದರೆ ಈ ಮಕ್ಕಳು ಹಿಂದೂ ರಾಷ್ಟ್ರದ ಸಜ್ಜನ ನಾಗರಿಕರಾಗುವರು ! ಕೆಲವೇ ದಿನಗಳಲ್ಲಿ ಶಾಲೆ ಹಾಗೂ ಮಹಾ ವಿದ್ಯಾಲಯದ ಶಿಕ್ಷಣವನ್ನು ಪಡೆಯುವ ವಿದ್ಯಾರ್ಥಿಗಳಿಗೆ ಬೇಸಿಗೆಯ ರಜೆ ಸಿಗಲಿದೆ. ಈ ಕಾಲಾವಧಿಯಲ್ಲಿ ವಿದ್ಯಾರ್ಥಿ-ಸಾಧಕರಿಗೆ ರಾಮನಾಥಿ ಮತ್ತು ದೇವದ ಇಲ್ಲಿನ ಆಶ್ರಮದಲ್ಲಿ ಅದೇ ರೀತಿ ಮಂಗಳೂರಿನಲ್ಲಿದ್ದು ಆಶ್ರಮ ಜೀವನ ಅನುಭವಿಸುವ ಸುವರ್ಣಾವಕಾಶವಿದೆ. ಸಾಧಕ-ಪೋಷಕರು ೧೩ ಕ್ಕಿಂತ ಮೇಲಿನ ವಯಸ್ಸಿನ ತಮ್ಮ ಮಕ್ಕಳನ್ನು ಹತ್ತಿರದ ಆಶ್ರಮಕ್ಕೆ ಕಳುಹಿಸಬಹುದು. ಆಶ್ರಮದಲ್ಲಿ ವಿವಿಧ ಪ್ರಕಾರದ ಸೇವೆಗಳಲ್ಲಿ ಸಹಾಯ ಮಾಡುವುದರಿಂದ ಅವರಿಗೆ ಅನೇಕ ಅಂಶಗಳು ಕಲಿಯಲು ಸಿಗುತ್ತದೆ ಹಾಗೆಯೇ ಅವರಿಗೆ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ಆಸಕ್ತಿ ಮೂಡುವುದು.
೨. ಆಶ್ರಮಗಳಲ್ಲಿ ಲಭ್ಯವಿರುವ ಸೇವೆಗಳು
೨ ಅ. ಸನಾತನ-ನಿರ್ಮಿತ ಗ್ರಂಥಗಳ ವಿಷಯದಲ್ಲಿನ ಸೇವೆ : ಕನ್ನಡ ಭಾಷೆಯ ಬೆರಳಚ್ಚು ಮಾಡುವುದು, ಬರಹಗಳನ್ನು ಅನುವಾದ ಮತ್ತು ಶುದ್ಧಲೇಖನ ಮಾಡುವುದು, ಗ್ರಂಥಗಳ ಸಂರಚನೆ ಮಾಡುವುದು, ಗ್ರಂಥಕ್ಕಾಗಿ ಮುಖಪುಟಗಳನ್ನು ನಿರ್ಮಿಸಲು ಗಣಕಯಂತ್ರಗಳಲ್ಲಿನ ಛಾಯಾಚಿತ್ರಗಳ ಮೇಲೆ ಪ್ರಕ್ರಿಯೆ ಮಾಡುವುದು, ರೇಖಾಚಿತ್ರ (ಔಟ್‌ಲೈನ್) ತಯಾರಿಸುವುದು, ಸಾತ್ತ್ವಿಕ ಕಲಾಕೃತಿ ನಿರ್ಮಿಸುವುದು.
೨ ಆ. ನಿಯತಕಾಲಿಕೆಗೆ ಸಂಬಂಧಿಸಿದ ಸೇವೆಗಳು : ವಾರ್ತೆಗಳನ್ನು ಸಂಕಲನ ಮಾಡುವುದು, ಜಾಹೀರಾತಿನ ಸಂರಚನೆ ಮಾಡುವುದು.
೨ ಇ. ಧ್ವನಿಚಿತ್ರೀಕರಣದ ಕುರಿತು : ಚಿತ್ರೀಕರಣ ಮಾಡುವುದು, ಛಾಯಾಚಿತ್ರಗಳನ್ನು ತೆಗೆಯುವುದು, ‘ರೆಕಾರ್ಡಿಂಗ್ ಮಾಡುವುದು. ಚಿತ್ರೀಕರಣದ ಸಂಕಲನ, ಆಂಗ್ಲ ಭಾಷೆಯಲ್ಲಿ ಬೆರಳಚ್ಚು ಮಾಡುವುದು.
೨ ಈ. ಅಮೂಲ್ಯ ವಸ್ತುಗಳನ್ನು ಸಂಗ್ರಹಿಸಿಡುವ ಕುರಿತು : ಭಾರತದಾದ್ಯಂತ ವೈಶಿಷ್ಟ್ಯಪೂರ್ಣ ವಸ್ತು, ಅದೇ ರೀತಿ ಸಂತರು ಉಪಯೋಗಿಸಿದ ವಸ್ತುಗಳನ್ನು ಜೋಪಾನ ಮಾಡಲು ಬಿಸಿಲಿನಲ್ಲಿಟ್ಟು ಒಣಗಿಸುವುದು, ಈ ವಸ್ತುಗಳನ್ನು ನೋಂದಣಿ ಮತ್ತು ಪ್ಯಾಕಿಂಗ್ ಮಾಡುವುದು, ಅದೇ ರೀತಿ ಸ್ಕ್ಯಾನಿಂಗ್ ಮಾಡುವುದು. ಇದರೊಂದಿಗೆ ಗಣಕಯಂತ್ರ ದುರುಸ್ತಿ, ಗ್ರಂಥಾಲಯ, ಅಡುಗೆಮನೆ, ಕಟ್ಟಡ ಕಾಮಗಾರಿ, ಜಾಲತಾಣ ಇತ್ಯಾದಿಗಳಿಗೆ ಸಂಬಂಧಿಸಿದ ಸೇವೆಯೂ ಲಭ್ಯವಿದೆ.
ವಿದ್ಯಾರ್ಥಿ-ಸಾಧಕರ ಸ್ವಭಾವ, ಆಸಕ್ತಿ, ಕೌಶಲ್ಯ, ಸೇವೆ ಕಲಿಯುವ ಸಾಮರ್ಥ್ಯ ಹಾಗೂ ಮನೆಗೆ ಹೋದನಂತರ ಅವರು ಸೇವೆಗಾಗಿ ನೀಡಬಹುದಾದ ಸಮಯ ಈ ಅಂಶಗಳ ವಿಚಾರವನ್ನು ಮಾಡಿ ಅವರಿಗೆ ಸೇವೆ ಕಲಿಸಲಾಗುವುದು. ಈ ಸೇವೆಯನ್ನು ಕಲಿಯಲು ಅವರಿಗೆ ಆಶ್ರಮದಲ್ಲಿ ಎಷ್ಟುದಿನ ಇರಲು ಸಾಧ್ಯವೋ ಅಷ್ಟು ದಿನ ಅವರು ಇರಬಹುದು.
ಈ ಮೇಲಿನ ಸೇವೆಗಳಲ್ಲಿ ಸಹಾಯ ಮಾಡಿ ಧರ್ಮ ಕಾರ್ಯದಲ್ಲಿ ಅಳಿಲು ಸೇವೆ ಮಾಡಲು ಬಯಸುವ ವಿದ್ಯಾರ್ಥಿ
– ಸಾಧಕರು ಜಿಲ್ಲಾಸೇವಕರ ಮುಖಾಂತರ ಆಶ್ರಮಸೇವಕರನ್ನು ಸಂಪರ್ಕಿಸಬೇಕು.
ಜಿಲ್ಲಾಸೇವಕರೇ, ವಿದ್ಯಾರ್ಥಿ-ಸಾಧಕರನ್ನು ಆಶ್ರಮಕ್ಕೆ ಕಳುಹಿಸುವ ಮುನ್ನ ಮುಂದಿನ ಅಂಶಗಳನ್ನು ಗಮನದಲ್ಲಿಡಿ !ಜಿಲ್ಲಾಸೇವಕರು ವಿದ್ಯಾರ್ಥಿ ಸಾಧಕರನ್ನು ಆಯ್ಕೆ ಮಾಡುವಾಗ ಅವರು ಆಶ್ರಮಜೀವನದಲ್ಲಿ ಸೇವೆಯಲ್ಲಿನ ಸಿಕ್ಕಿದ ತರಬೇತಿಯ ಲಾಭವನ್ನು ಪಡೆದು ಸೇವೆಗಾಗಿ ಸಮಯ ಕೊಡಬಹುದು, ಅಂತಹವರ ಆಯೋಜನೆ ಮಾಡಬೇಕು. ವಿದ್ಯಾರ್ಥಿ-ಸಾಧಕರು ಜಿಲ್ಲೆಗಳಿಂದ ಆಶ್ರಮಕ್ಕೆ ಬರುವುದು ಖಾತ್ರಿಯಾದ ನಂತರ ಇತರ ಮಾಹಿತಿಯೊಂದಿಗೆ ಅವರ ಸ್ವಭಾವದೋಷ ಮತ್ತು ಗುಣಗಳನ್ನೂ ತಿಳಿಸಿ, ಇದರಿಂದ ‘ಸ್ವಭಾವದೋಷಗಳ ಹೇಗೆ ಹಿಡಿತ ಸಾಧಿಸಬೇಕು’, ಈ ಬಗ್ಗೆ ದಿಶೆ ನೀಡಿ ಸಾಧನೆಯಲ್ಲಿ ಸಹಾಯ ಮಾಡಬಹುದು. |
ಇತರ ಮಹತ್ವದ ಸೂಚನೆಗಳು
೧. ‘ಆಶ್ರಮದಲ್ಲಿದ್ದು ವಿದ್ಯಾರ್ಥಿ-ಸಾಧಕರ ಕೆಟ್ಟ ಅಭ್ಯಾಸ, ಅದರಿಂದ ಸಮಷ್ಟಿಯ ದೃಷ್ಟಿಯಲ್ಲಿ ಹಾನಿಯಾಗಬಹುದಾದ ಸ್ವಭಾವದೋಷಗಳು ಕಡಿಮೆಯಾಗಿ ಅವರಲ್ಲಿ ಸಾಧಕತ್ವ ನಿರ್ಮಾಣವಾಗಲಿದೆ’, ಈ ವಿಚಾರದಿಂದ ಪೋಷಕರು ಸಾಧನೆ ಮತ್ತು ಸೇವೆ ಮಾಡಲು ಇಚ್ಛೆಯಿಲ್ಲದ ಮಕ್ಕಳನ್ನು ಆಶ್ರಮಕ್ಕೆ ಕಳುಹಿಸಬೇಡಿ.
೨. ಆಶ್ರಮಕ್ಕೆ ಬರುವ ಬಗ್ಗೆ ಆಶ್ರಮದಿಂದ ಖಚಿತವಾದ ಮೇಲೆಯೇ ಮುಂಗಡ ಟಿಕೇಟ್ ಕಾಯ್ದಿರಿಸುವಿಕೆ ಮಾಡಬೇಕು. ಆಶ್ರಮಕ್ಕೆ ಬರಲು ವಾಹನಗಳನ್ನು ಕಾಯ್ದಿರಿಸುವಿಕೆ ಮಾಡುವಾಗಲೇ ಮರಳಿ ಹೋಗುವ ಕಾಯ್ದಿರಿಸುವಿಕೆಯನ್ನು ಮಾಡಬೇಕು, ಕೊನೆಯ ಕ್ಷಣದಲ್ಲಿ ಟಿಕೆಟ್ ಸಿಗಲು ಅಡಚಣೆ ಬರಬಹುದು.
೩. ಆಶ್ರಮದಲ್ಲಿರಲು ಬರುವಾಗ ವಿದ್ಯಾರ್ಥಿ-ಸಾಧಕರು ತಮ್ಮ ಹಾಸುವ ಮತ್ತು ಹೊದಿಯುವ ಬಟ್ಟೆ ಅದೇ ರೀತಿ ಅವರು ತೆಗೆದುಕೊಳ್ಳುತ್ತಿರುವ ಔಷಧಿಗಳನ್ನು ಜೊತೆಯಲ್ಲಿ ತರಬೇಕು.