ಜಿಜ್ಞಾಸುಗಳನ್ನು ಸಂಪರ್ಕಿಸುವ ಸೇವೆಯು ಪರಿಣಾಮಕಾರಿಯಾಗಲು ಮಾಡಬೇಕಾದ ಪ್ರಯತ್ನಗಳ ಬಗ್ಗೆ ಶ್ರೀ. ಧನಂಜಯ ಹರ್ಷೆ ಇವರ ಚಿಂತನೆ !

ಶ್ರೀ. ಧನಂಜಯ ಹರ್ಷೆ

‘ಸಾಧಕರು ಜಿಜ್ಞಾಸುಗಳನ್ನು ಸಾಧನೆಯತ್ತ ಹೊರಳಿಸುವ ಉದ್ದೇಶದಿಂದ ಅವರ ಅಧ್ಯಯನ ಅಥವಾ ನಿರೀಕ್ಷಣೆಯನ್ನು ಈಶ್ವರನ ಅನುಸಂಧಾನದಲ್ಲಿದ್ದು ಸಹಜಭಾವದಿಂದ ಮಾಡಬೇಕು. ಅದಕ್ಕಾಗಿ ಸಾಧಕರು ಈಶ್ವರನಲ್ಲಿ ಪ್ರಾರ್ಥನೆ ಮಾಡಿ ಅವನಿಗೆ ಶರಣಾಗಬೇಕು. ‘ಈಶ್ವರನೇ, ನೀನೇ ನನಗೆ ಜಿಜ್ಞಾಸುಗಳ ಅಧ್ಯಯನ ಮತ್ತು ನಿರೀಕ್ಷಣೆಯನ್ನು ಮಾಡಲು ಕಲಿಸು, ಹೀಗೆ ಈಶ್ವರನಲ್ಲಿ ಪ್ರಾರ್ಥಿಸಿದರೆ ಈಶ್ವರನು ಸಾಧಕರಿಗೆ ಜಿಜ್ಞಾಸುಗಳ ಬಗ್ಗೆ ಅನೇಕ ವಿಷಯಗಳನ್ನು ನಿರೀಕ್ಷಣೆ ಮಾಡಲು ಕಲಿಸುತ್ತಾನೆ. ಜಿಜ್ಞಾಸುಗಳನ್ನು ಸಂಪರ್ಕಿಸುವ ಸೇವೆ ಪರಿಣಾಮಕಾರಿಯಾಗಲು ಈಶ್ವರನು ನನ್ನಿಂದ ಮಾಡಿಸಿಕೊಂಡ ಚಿಂತನೆಯನ್ನು ಇಲ್ಲಿ ಕೊಡುತ್ತಿದ್ದೇನೆ.     

(ಭಾಗ ೧)

ಜಿಜ್ಞಾಸುಗಳನ್ನು ಸಂಪರ್ಕಿಸುವಾಗಿನ ಸಂಗ್ರಹದಲ್ಲಿನ ಒಂದು ಛಾಯಾಚಿತ್ರ

೧. ಜಿಜ್ಞಾಸುಗಳ ಸಂಪರ್ಕ

೧ ಅ. ಜಿಜ್ಞಾಸುಗಳ ವಯಸ್ಸು ಮತ್ತು ಸ್ಥಿತಿಯನ್ನರಿತು ಅವರೊಂದಿಗೆ ಮಾತನಾಡುವುದು : ಜಿಜ್ಞಾಸುಗಳನ್ನು ಸಂಪರ್ಕಿಸುವ ಸೇವೆಯನ್ನು ಮಾಡುವಾಗ ‘ನನಗೆ ಜಿಜ್ಞಾಸುಗಳಿಗೆ ಸಾಧನೆಯಲ್ಲಿ ಸಹಾಯ ಮಾಡಲಿಕ್ಕಿದ್ದು, ಅದರಿಂದ ನನಗೂ ಕಲಿಯಲಿಕ್ಕಿದೆ, ಎಂಬ ಅರಿವಿರುವುದು ಸಾಧಕರಿಗೆ ಅಷ್ಟೇ ಮಹತ್ವದ್ದಾಗಿದೆ. ಜಿಜ್ಞಾಸುಗಳ ವಯಸ್ಸು ಮತ್ತು ಅವರ ಸ್ಥಿತಿಯನ್ನರಿತು ಅದಕ್ಕನುಸಾರ ಅವರನ್ನು ಸಂಪರ್ಕಿಸಬೇಕು. ಒಮ್ಮೆ ನಾನು ಓರ್ವ ಜಾಹೀರಾತುದಾರರ ಮನೆಗೆ ಹೋಗಿದ್ದೆ. ಮನೆಯಲ್ಲಿ ಅವರು, ಅವರ ಪತ್ನಿ ಮತ್ತು ಇಬ್ಬರು ಮಕ್ಕಳಿದ್ದರು. ಮರುದಿನ ಆ ಮಕ್ಕಳ ಪರೀಕ್ಷೆ ಇತ್ತು; ಆದ್ದರಿಂದ ನಾನು ಆ ಮಕ್ಕಳಿಗೆ ‘ನೀವು ಅಭ್ಯಾಸ ಮಾಡಲು ಹೋಗಬಹುದು ಎಂದು ಹೇಳಿದೆ; ಆದರೆ ನಮ್ಮ ಮಾತುಗಳನ್ನು ಕೇಳುತ್ತಾ ಆ ಮಕ್ಕಳು ಕೊನೆಯವರೆಗೆ ಅಲ್ಲಿಯೇ ನಿಂತರು. ಆಮೇಲೆ ಅವರು ಸನಾತನದ ಕೆಲವು ಗ್ರಂಥಗಳನ್ನು ಆಯ್ದು ಖರೀದಿಸಿದರು. ಅದರಿಂದ ನನಗೆ ‘ಆ ಮಕ್ಕಳೂ ಜಿಜ್ಞಾಸುಗಳಾಗಿದ್ದಾರೆ, ಎಂಬುದು ಗಮನಕ್ಕೆ ಬಂದಿತು .

೧ ಆ. ಜಿಜ್ಞಾಸುಗಳ ಪ್ರಕೃತಿಯನ್ನು ಗುರುತಿಸುವುದು

೧ ಆ ೧. ಸಾಧನೆಯ ಆಸಕ್ತಿ : ಸಾಧಕರು ಜಿಜ್ಞಾಸುಗಳನ್ನು ಮುಂದಿನಂತೆ ಅಧ್ಯಯನ ಮಾಡಬಹುದು, ‘ಜಿಜ್ಞಾಸುಗಳಿಗೆ ಸಾಧನೆಯ ಆಸಕ್ತಿ ಇದೆಯೆ ? ಆಸಕ್ತಿ ಇದ್ದರೆ, ಸಾಧನೆಯ ಬಗ್ಗೆ ಅವರ ವಿಚಾರಗಳು ಹೇಗಿವೆ ? ಅವರಿಗೆ ಯಾವ ದೇವತೆಯ ಮೇಲೆ ಶ್ರದ್ಧೆ ಇದೆ ? ಅವರು ಯಾವ ಸಾಧನೆಯನ್ನು ಮಾಡುತ್ತಾರೆ ಅಥವಾ ಅವರಿಗೆ ರಾಷ್ಟ್ರ ಮತ್ತು ಧರ್ಮ ಇವುಗಳಲ್ಲಿ ಯಾವ ವಿಷಯದಲ್ಲಿ ಹೆಚ್ಚು ಆಸಕ್ತಿ ಇದೆ ? ಇತ್ಯಾದಿ.

೧ ಆ ೨. ಜಿಜ್ಞಾಸುಗಳಿಗೆ ‘ಸನಾತನ ಸಂಸ್ಥೆಯ ಬಗೆಗಿರುವ ಅಭಿಪ್ರಾಯವನ್ನು ತಿಳಿದುಕೊಳ್ಳುವುದು : ಜಿಜ್ಞಾಸುಗಳಿಗೆ ‘ಸನಾತನ ಸಂಸ್ಥೆಯ ಬಗ್ಗೆ ಸಕಾರಾತ್ಮಕ ಅಭಿಪ್ರಾಯವಿದ್ದರೆ, ಸಂಸ್ಥೆಯ ಕುರಿತಾದ ವಿಚಾರಗಳು ಒಳ್ಳೆಯದಿದ್ದರೆ ಆಗ ಸಂಸ್ಥೆಯ ಯಾವ ವಿಷಯ ಇಷ್ಟವಾಗುತ್ತದೆ ? ಉದಾ. ಸನಾತನದ ಗ್ರಂಥಗಳು, ಸಾತ್ತ್ವಿಕ ಉತ್ಪಾದನೆಗಳು, ಸತ್ಸಂಗ, ರಾಷ್ಟ್ರ-ಧರ್ಮ ವಿಷಯದ ಕಾರ್ಯ, ಎಂಬುದನ್ನು ತಿಳಿದುಕೊಂಡು ಅದಕ್ಕನುಸಾರ ನಾವು ಅವರನ್ನು ಕೃತಿಶೀಲರನ್ನಾಗಿಸಬಹುದು.

೨. ಜಿಜ್ಞಾಸುಗಳ ಅಧ್ಯಯನ ಮಾಡಿ ಅವರಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಬರೆದಿಟ್ಟುಕೊಳ್ಳುವುದು

ಜಿಜ್ಞಾಸುಗಳನ್ನು ನಿಯಮಿತವಾಗಿ ಸಂಪರ್ಕಿಸುವಾಗ ಅವರಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಆಯಾ ಸಮಯದಲ್ಲಿ ಮತ್ತು ನಿರ್ದಿಷ್ಟವಾಗಿ ಬರೆದಿಡಬೇಕು, ಉದಾ. ಸಾಧಕನು ಜಿಜ್ಞಾಸುವನ್ನು ಮೊದಲ ಸಂಪರ್ಕದಲ್ಲಿ ಅವನಿಗೆ ಆಧ್ಯಾತ್ಮಿಕ ಪ್ರಗತಿಗಾಗಿ ಕುಲದೇವಿಯ ಅಥವಾ ಪೂರ್ವಜರ ತೊಂದರೆಗಳನ್ನು ದೂರಗೊಳಿಸಲು ದತ್ತ ದೇವರ ನಾಮ ಜಪಿಸಲು ಹೇಳಿದ್ದಲ್ಲಿ ಮುಂದಿನ ಸಂಪರ್ಕದಲ್ಲಿ ಜಿಜ್ಞಾಸು ನಾಮಜಪ ಪ್ರಾರಂಭಿಸಿದ್ದಾನೆಯೇ ? ಅದರಲ್ಲಿ ಅವನಿಗೆ ಏನಾದರೂ ಅಡಚಣೆ ಇದೆಯೇ ಅಥವಾ ನಾಮಜಪ ಮಾಡುವಾಗ ಅವನಿಗೆ ಏನಾದರೂ ಅನುಭೂತಿಗಳು ಬಂದಿವೆಯೇ ? ಅವನು ‘ಸನಾತನ ಪ್ರಭಾತ ಓದಿ ಅದರಲ್ಲಿನ ಯಾವುದಾದರೂ ವಿಷಯವನ್ನು ಕೃತಿಯಲ್ಲಿ ತಂದಿದ್ದಾನೆಯೇ ? ಸಾಧಕರು ಈ ರೀತಿ ಅಧ್ಯಯನ ಮಾಡುವ ಅಭ್ಯಾಸ ಆಗಬೇಕು. ಜಿಜ್ಞಾಸುಗಳನ್ನು ಸಂಪರ್ಕಿಸಿದ ನಂತರ ಸಾಧಕರು ಜಿಜ್ಞಾಸುಗಳ ಬಗ್ಗೆ ಬರೆದಿಟ್ಟಿದ್ದರೆ ಅವರಿಗೆ ಅದರಿಂದ ಲಾಭವಾಗುತ್ತದೆ.

೨. ಅ. ಜಿಜ್ಞಾಸುಗಳ ನಿರೀಕ್ಷಣೆಗಳನ್ನು ಬರೆದಿಡುವುದರ ಲಾಭ !

೧. ‘ಜಿಜ್ಞಾಸುವಿನ ರಾಷ್ಟ್ರ, ಧರ್ಮ ಅಥವಾ ಸಾಧನೆ ಇವುಗಳ ಪೈಕಿ ಯಾವುದರ ಬಗ್ಗೆ ಒಲವಿದೆ ?, ಎಂಬುದನ್ನು ಈಶ್ವರನು ನಮ್ಮ ಗಮನಕ್ಕೆ ತಂದು ಕೊಡುತ್ತಾನೆ.

೨. ಸಂಪರ್ಕದ ಬಗ್ಗೆ ನಿಯಮಿತವಾಗಿ ಬರೆದಿಡುವುದರಿಂದ ಯೋಗ್ಯ ಪದ್ಧತಿಯಲ್ಲಿ ಜಿಜ್ಞಾಸುವಿನ ಪ್ರಕೃತಿಯ ಅಧ್ಯಯನ ಆಗಿ ಅವನಿಗೆ ಸಾಧನೆಯಲ್ಲಿ ಸಹಾಯ ಮಾಡಲು ಸುಲಭವಾಗುತ್ತದೆ ಇದರಿಂದ ಸಾಧಕರಿಂದ ದೇವರಿಗೆ ಅಪೇಕ್ಷಿತವಿರುವ ಸಂಪರ್ಕ ಸೇವೆಯಾಗುತ್ತದೆ.

೩. ಜಿಜ್ಞಾಸುವಿನ ಸಕಾರಾತ್ಮಕ ಭಾಗ ಗಮನಕ್ಕೆ ಬರುತ್ತದೆ. ಜಿಜ್ಞಾಸುವಿನಲ್ಲಾದ ಬದಲಾವಣೆಯ ಅಭ್ಯಾಸವಾಗಿ ಅವನಿಗೆ ಸಾಧನೆಗಾಗಿ ಆಗಾಗ ಪ್ರೋತ್ಸಾಹ ನೀಡಲು ಸಾಧ್ಯವಾಗುತ್ತದೆ.

೨ ಆ. ಜಿಜ್ಞಾಸುಗಳ ನಿರೀಕ್ಷಣೆಯನ್ನು ಬರೆದಿಡದಿದ್ದರೆ ಆಗುವ ಹಾನಿ ! : ಸಾಧಕನಿಗೆ ಎದುರಿಗಿನ ವ್ಯಕ್ತಿಯೊಂದಿಗೆ ಮಾತನಾಡುವಾಗ ‘ಅವನು ಜಿಜ್ಞಾಸು ಆಗಿದ್ದಾನೆಯೇ ಅಥವಾ ಇಲ್ಲ ?, ಇದುವೇ ಸರಿಯಾಗಿ ತಿಳಿಯದಿರುವುದರಿಂದ ಸಾಧಕನ ಮಾತುಗಳು ವಿಷಯಕ್ಕನುಸಾರ ಆಗುವುದಿಲ್ಲ ಅಥವಾ ಸಾಧಕನು ಜಿಜ್ಞಾಸುವಿಗೆ ಅವನಿಗೆ ಬೇಕಾದ ರೀತಿಯಲ್ಲಿ ಮತ್ತು ಹಂತಹಂತಗಳಲ್ಲಿ ಸಾಧನೆಯನ್ನು ಹೇಳದಿರುವುದರಿಂದ ಅವನಿಗೆ ಆ ವಿಷಯ ತಿಳಿದುಕೊಳ್ಳಲು ಕಠಿಣವಾಗುತ್ತದೆ. ಪರಾತ್ಪರ ಗುರು ಡಾ. ಆಠವಲೆಯವರು ‘ಮಟ್ಟಕ್ಕನುಸಾರ ಸಾಧನೆ ಈ ವಿಷಯವನ್ನು ಹೇಳಿದ್ದಾರೆ. ಅದಕ್ಕನುಸಾರ ಜಿಜ್ಞಾಸುವಿಗೆ ಸಾಧನೆಯನ್ನು ಹೇಳಿದರೆ ಅವನಿಗೆ ಕೂಡಲೇ ತಿಳಿಯುತ್ತದೆ ಮತ್ತು ಸಾಧನೆ ಮಾಡಬೇಕೆಂದು ಅನಿಸುತ್ತದೆ; ಇಲ್ಲದಿದ್ದರೆ ಅವನಿಗೆ ಅದು ಕಠಿಣ ಮತ್ತು ಬೇಡವೆಂದು ಅನಿಸುತ್ತದೆ. ಇದರಿಂದ ಜಿಜ್ಞಾಸುವಿನ ಜೊತೆಗೆ ಸಾಧಕನ ಸುಸಂವಾದ ಆಗುವುದಿಲ್ಲ ಮತ್ತು ಅವನೊಂದಿಗೆ ಆತ್ಮೀಯತೆ ಮೂಡುವುದಿಲ್ಲ. ಆದ್ದರಿಂದ ಜಿಜ್ಞಾಸು ಸಾಧಕನಿಂದ ದೂರವಾಗುತ್ತಾನೆ; ಅದರಿಂದಾಗಿ ಸಂಪರ್ಕದ ಫಲನಿಷ್ಪತ್ತಿ ಕಡಿಮೆಯಾಗುತ್ತದೆ.

೩. ಸೂಕ್ಷ್ಮದಲ್ಲಿನ ವಿಷಯಗಳು ತಿಳಿಯುವುದು

೩ ಅ. ಅಧ್ಯಾತ್ಮಪ್ರಸಾರದ ಸೇವೆಯನ್ನು ಮಾಡುವಾಗ ಸಾಧಕರಿಗೆ ಸೂಕ್ಷ್ಮದಲ್ಲಿನ ವಿಷಯಗಳು ತಿಳಿಯುವುದರ ಮಹತ್ವ ! : ‘ಸ್ಥೂಲದ ಜೊತೆಗೆ ಸೂಕ್ಷ್ಮದಿಂದ ಜಿಜ್ಞಾಸುವಿನ  ನಿರೀಕ್ಷಣೆಯನ್ನು ಹೇಗೆ ಮಾಡಬೇಕು  ? ಇದನ್ನೂ ಈಶ್ವರನು ನನಗೆ ಕಲಿಸಿದನು. ಇದರಿಂದ ಸೂಕ್ಷ್ಮದಲ್ಲಿನ ವಿಷಯಗಳು ತಿಳಿಯುವುದರ ಮಹತ್ವ ನನ್ನ ಗಮನಕ್ಕೆ ಬಂದಿತು.

೧. ಈಶ್ವರೀತತ್ತ್ವ ಸೂಕ್ಷ್ಮತಮವಾಗಿದೆ (ಸೂಕ್ಷ್ಮಾತಿಸೂಕ್ಷ್ಮ). ಈ ಆಪತ್ಕಾಲದಲ್ಲಿ ಈಶ್ವರನು ಸಾಧಕರಿಗೆ ಸೂಕ್ಷ್ಮದಿಂದ ಅಖಂಡ ಮಾರ್ಗದರ್ಶನ ಮಾಡುತ್ತಲೇ ಇದ್ದಾನೆ; ಆದರೆ ‘ಈಶ್ವರನು ಮಾಡಿದ ಮಾರ್ಗದರ್ಶನವನ್ನು ತಿಳಿದುಕೊಳ್ಳಲು ಸಾಧಕರಿಗೆ ಸೂಕ್ಷ್ಮ ವಿಷಯಗಳು ತಿಳಿಯುವುದು ಆವಶ್ಯಕವಾಗಿದೆ.

೨. ಸೂಕ್ಷ್ಮದಲ್ಲಿನ ವಿಷಯಗಳು ತಿಳಿಯತೊಡಗಿದರೆ ಸಾಧಕನ ಸಮಷ್ಟಿ ಸೇವೆ ಇನ್ನೂ ಒಳ್ಳೆಯ ರೀತಿಯಿಂದ ಆಗುತ್ತದೆ. ಸೂಕ್ಷ್ಮದಲ್ಲಿನ ವಿಷಯಗಳು ತಿಳಿಯುವುದರಿಂದ ಜಿಜ್ಞಾಸುಗಳ ಸಂಪರ್ಕ ತಪ್ಪುಗಳಿಲ್ಲದೇ ಮತ್ತು ದೇವರಿಗೆ ಅಪೇಕ್ಷೆಯಿರುವಂತೆ ಆಗಲು ಸಹಾಯವಾಗುತ್ತದೆ. ‘ನನಗೆ ಸೂಕ್ಷ್ಮದಲ್ಲಿನ ಕೆಲವು ವಿಷಯಗಳು ತಿಳಿಯ ತೊಡಗಿದರೆ ನನ್ನ ಅಹಂ ಹೆಚ್ಚಾಗಬಹುದೇ ?, ಎಂಬ ಭಯ ದೇವರಿಗೆ ಶರಣಾಗುವುದರಿಂದ ಉಳಿಯುವುದಿಲ್ಲ. ‘ಈಶ್ವರನು ಎಲ್ಲವನ್ನೂ ನೋಡುವನು, ಎಂದು ಅನಿಸುತ್ತದೆ.

೩ ಆ. ಸೂಕ್ಷ್ಮದಿಂದ ಜಿಜ್ಞಾಸುವಿನ ಅಧ್ಯಯನ ಮಾಡುವ ಸಂಬಂಧದಲ್ಲಿನ ವಿವಿಧ ಅಂಗಗಳು : ಪ್ರತಿವಾರ ಸಾಧಕರ ಸ್ವಭಾವದೋಷ-ನಿರ್ಮೂಲನೆ ಸತ್ಸಂಗ ಇರುತ್ತದೆ. ಅದರಲ್ಲಿ ಸಾಧಕರು ತಮ್ಮಿಂದಾದ ತಪ್ಪುಗಳ ವಿವಿಧ ಪ್ರಸಂಗಗಳನ್ನು ಹೇಳುತ್ತಾರೆ. ಸಾಧಕರಿಗೆ ಅವುಗಳನ್ನು ಮುಂದಿನಂತೆ ನಿರೀಕ್ಷಣೆ ಮಾಡಲು ಬರಬೇಕು, ‘ಸಾಧಕರು ತಮ್ಮ ತಪ್ಪುಗಳನ್ನು ಹೇಳುವಾಗ ಅಂತರ್ಮುಖರಾಗಿ ಹೇಳುತ್ತಾರೆಯೇ ? ಯಾವ ಸಾಧಕನಲ್ಲಿ ಭಾವವಿದೆ ? ಯಾರು ಮೇಲುಮೇಲಿನಿಂದಷ್ಟೇ ಮಾತನಾಡುತ್ತಾರೆ ? ಇದರಿಂದ ಈಶ್ವರನು ಸಾಧಕರಲ್ಲಿ ಸೂಕ್ಷ್ಮದಲ್ಲಿನ ವಿಷಯಗಳನ್ನು ತಿಳಿದುಕೊಳ್ಳುವ ಕ್ಷಮತೆಯನ್ನು ನಿರ್ಮಿಸುತ್ತಿರುತ್ತಾನೆ. ಜಿಜ್ಞಾಸುಗಳನ್ನು ಸಂಪರ್ಕಿಸುವಾಗ ಅದರಿಂದ ಲಾಭವಾಗುತ್ತದೆ. ಅದರಿಂದ ಸಾಧಕರಿಗೆ ಜಿಜ್ಞಾಸುಗಳನ್ನು ಸೂಕ್ಷ್ಮದಿಂದ ಅಧ್ಯಯನ ಮಾಡಲು ಸಹಾಯವಾಗುತ್ತದೆ. ಈ ವಿಷಯದಲ್ಲಿ ಅರಿವಾದ ಅಂಶಗಳನ್ನು ಇಲ್ಲಿ ಕೊಡಲಾಗಿದೆ.

೧. ಜಿಜ್ಞಾಸುವನ್ನು ನೋಡಿದಾಗ ಏನು ಅರಿವಾಗುತ್ತದೆ ? ಆಗ ನಿಮ್ಮ ಮನಸ್ಸಿನಲ್ಲಿ ಯಾವ ವಿಚಾರಗಳು ಬರುತ್ತವೆ ?

೨. ಅವನ ಮೇಲೆ ತೊಂದರೆದಾಯಕ ಶಕ್ತಿಯ ಆವರಣವಿದೆಯೆ ?

೩. ಅವನಲ್ಲಿ ಅಹಂ ಅರಿವಾಗುತ್ತದೆಯೇ ?

೪. ಅವನ ಕಡೆಗೆ ನೋಡಿ ನಿಮ್ಮ ಮನಸ್ಸಿಗೆ ಆನಂದದ ಅರಿವಾಗು ತ್ತದೆಯೇ  ? ಅಥವಾ  ನಿಮ್ಮ ಭಾವಜಾಗೃತವಾಗುತ್ತದೆಯೇ ?

೫. ಅವನಲ್ಲಿ ಅಂತರ್ಮುಖತೆ ಮತ್ತು ಸಾಧಕತ್ವವಿದೆಯೇ ?

೬. ಅವನೊಂದಿಗೆ ಮಾತನಾಡಿದ ನಂತರ ಅವನ ಮನಸ್ಸಿನ ಸ್ಥಿತಿಯ ಬಗ್ಗೆ ಏನು  ಅರಿವಾಗುತ್ತದೆ ?

೭. ನಾವು ಅವನಲ್ಲಿನ ಗುಣ-ದೋಷಗಳ ನಿರೀಕ್ಷಣೆಯನ್ನು ಮಾಡುತ್ತೇವೆಯೇ ?

ಜಿಜ್ಞಾಸುಗಳ ವಿಷಯದಲ್ಲಿ ಈ ರೀತಿ ಸಾಧಕರಿಂದ ಸ್ಥೂಲ ಮತ್ತು ಸೂಕ್ಷ್ಮ ಅಧ್ಯಯನ ಆಗುವುದು ಮಹತ್ವದ್ದಾಗಿದೆ. ಇದರಿಂದ ಸಾಧಕರಿಗೆ ಅವರೊಂದಿಗೆ ಮಾತನಾಡಲು ತುಂಬಾ ಸುಲಭವಾಗುತ್ತದೆ.

– ಶ್ರೀ. ಧನಂಜಯ ಹರ್ಷೆ, ಸನಾತನ ಆಶ್ರಮ,ರಾಮನಾಥಿ ಗೋವಾ. (೪.೩.೨೦೨೧)

(ಮುಂದುವರಿಯುವುದು)

* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.