ಸಪ್ತರ್ಷಿ ಜೀವನಾಡಿಪಟ್ಟಿಯ ಮಾಧ್ಯಮದಿಂದ ಸಪ್ತರ್ಷಿಗಳ ಆಜ್ಞೆಯಂತೆ ದೇವದ್ ಇಲ್ಲಿನ ಸನಾತನದ ಆಶ್ರಮದಲ್ಲಿ ಫಾಲ್ಗುಣ ಕೃಷ್ಣ ದಶಮಿ, ಅಂದರೆ ೧೭ ಮಾರ್ಚ್ ಈ ದಿನದಂದು ಭಗವಾನ ಶಿವನ ಗುರುರೂಪವಾಗಿರುವ ಶ್ರೀ ದಕ್ಷಿಣಾಮೂರ್ತಿ ದೇವತೆಯ ಕೃಪೆಗಾಗಿ ‘ಮೇಧಾ ದಕ್ಷಿಣಾಮೂರ್ತಿಯಾಗವು ಅತ್ಯಂತ ಭಾವಪೂರ್ಣ ವಾತಾವರಣದಲ್ಲಿ ನೆರವೇರಿತು. ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಆಧ್ಯಾತ್ಮಿಕ ಉತ್ತಾರಾಧಿಕಾರಿಗಳು ಮತ್ತು ಮಹಾಲಕ್ಷ್ಮೀಸ್ವರೂಪರಾಗಿರುವ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರ ವಂದನೀಯ ಉಪಸ್ಥಿತಿಯಲ್ಲಿ ನೆರವೇರಿತು. ಆ ಕ್ಷಣದಲ್ಲಿನ ಚೈತನ್ಯಮಯ ಛಾಯಾಚಿತ್ರಗಳನ್ನು ಈ ಸಂಚಿಕೆಯಲ್ಲಿ ನೋಡೋಣ
ತೇಜಸ್ವೀ ಜ್ಯೋತೀ ಅಂಧಃಕಾರಾ ದೂರ ಸಾರತೀ |
ಪ್ರಕ್ಷೇಪಿತೀ ಚೈತನ್ಯ ಅನ್ ದೈವೀ ಸಾಕ್ಷ ದೇತೀ ||
ಅರ್ಥ : ತೇಜಸ್ವಿ ಜ್ಯೋತಿ ಅಂಧಕಾರವನ್ನು ದೂರ ಸರಿಸಿ ಚೈತನ್ಯವನ್ನು ಪ್ರಕ್ಷೇಪಿಸಿ ದೈವೀ ಸಾಕ್ಷ ನೀಡುತ್ತಿದೆ.
ನಿಧಯೇ ಸರ್ವವಿದ್ಯಾನಾಂ
ಭಿಷಜೇ ಭವರೋಗಿಣಾಮ್ | ಗುರವೇ ಸರ್ವಲೋಕಾನಾಂ ದಕ್ಷಿಣಾಮೂರ್ತಯೇ ನಮಃ ||
ಅರ್ಥ : ಯಾರು ಎಲ್ಲ ವಿದ್ಯೆಗಳ ಭಂಡಾರವಾಗಿದ್ದಾರೆಯೋ, ಜಗತ್ತಿನ ಎಲ್ಲ ರೋಗಗಳ ವೈದ್ಯ (ಔಷಧಿ)ರಾಗಿದ್ದಾರೆಯೋ, ಆ ಎಲ್ಲ ಜನರ ಗುರುಗಳಾಗಿರುವ ದಕ್ಷಿಣಾಮೂರ್ತಿಗಳಿಗೆ ನಮಸ್ಕಾರವಿರಲಿ.
ಓಂ ನಮಃ ಪ್ರಣವಾರ್ಥಾಯ ಶುದ್ಧಜ್ಞಾನೈಕಮೂರ್ತಯೇ | ನಿರ್ಮಲಾಯ ಪ್ರಶಾನ್ತಾಯ ದಕ್ಷಿಣಾಮೂರ್ತಯೇ ನಮಃ |
ಅರ್ಥ : ಯಾರು ಪ್ರಣವದ (ಓಂಕಾರದ) ಅರ್ಥ ಮತ್ತು ಶುದ್ಧ ಅದ್ವೈತ ಜ್ಞಾನದ ಮೂರ್ತ ರೂಪರಾಗಿರುವರೋ, ಅಂತಹ ನಿರ್ಮಲ ಮತ್ತು ಶಾಂತ ದಕ್ಷಿಣಾಮೂರ್ತಿಗಳಿಗೆ ನನ್ನ ನಮಸ್ಕಾರಗಳು.
ಚೈತನ್ಯಮಯ ದೀಪಗಳು
‘ಸಾಧನೆಯ ಅಡಚಣೆಗಳನ್ನು ದೂರ ಮಾಡಿ ಬೆಳಕನ್ನು ತುಂಬಲಿವೆ, ಎಂದು ಕತ್ತಲನ್ನು ನಾಶ ಮಾಡುವ ಈ ದೀಪಗಳು ಸಾಧಕರಿಗೆ ಹೇಳುತ್ತಿವೆ !