ಪಾಕಿಸ್ತಾನದಲ್ಲಿ ಎಲ್ಲಿಯವರೆಗೆ ಮತಾಂಧರ ಮೇಲೆ ಕ್ರಮ ಕೈಗೊಳ್ಳಲ್ಲ, ಅಲ್ಲಿಯ ವರೆಗೆ ಹಿಂದು ದೇವಸ್ಥಾನಗಳ ಮೇಲೆ ದಾಳಿ ನಿಲ್ಲದು ! – ಮಾನವಹಕ್ಕು ಆಯೋಗದ ಕಳವಳ

ಪಾಕಿಸ್ತಾನದಲ್ಲಿನ ಸಿಂಧ ಪ್ರಾಂತದಲ್ಲಿನ ಹಿಂದೂಗಳ ದೇವಸ್ಥಾನದ ಮೇಲೆ ನಡೆಯುತ್ತಿರುವ ದಾಳಿಯಿಂದ ಅಲ್ಲಿಯ ‘ಪಾಕಿಸ್ತಾನ ದೇರಾವರ ಇತ್ತೆಹಾದ್’ ಈ ಮಾನವ ಹಕ್ಕುಗಳ ಸಂಘಟನೆಯ ಮುಖ್ಯಸ್ಥ ಶಿವ ಕಾಛಿ ಇವರು ಸಿಂಧ ಸರಕಾರದ ಬಳಿ ಕಳವಳ ವ್ಯಕ್ತಪಡಿಸುತ್ತ ದೇವಸ್ಥಾನಗಳ ಮೇಲಿನ ದಾಳಿ ನಡೆಸಿದವರಿಗೆ ಶಿಕ್ಷೆ ನೀಡುವಂತೆ ಒತ್ತಾಯಿಸಿದ್ದಾರೆ.

ಪಾಕಿಸ್ತಾನದ ಸಿಂಧ ಪ್ರಾಂತ್ಯದಲ್ಲಿನ ದೇವಾಲಯಗಳ ಭದ್ರತೆಗಾಗಿ 400 ಹಿಂದೂ ಪೊಲೀಸರ ನೇಮಕ !

ಕಳೆದ 3 ದಿನಗಳಲ್ಲಿ ಪಾಕಿಸ್ತಾನದ ಸಿಂಧ ಪ್ರಾಂತ್ಯದಲ್ಲಿ ಹಿಂದೂಗಳ 2 ದೇವಾಲಯಗಳ ಮೇಲೆ ದಾಳಿ ನಡೆದ ಬಳಿಕ ಇಲ್ಲಿನ ಸರಕಾರವು ಸಿಂಧ ಪ್ರಾಂತ್ಯದಲ್ಲಿನ ದೇವಾಲಯಗಳ ಭದ್ರತೆಗಾಗಿ 400 ಕ್ಕೂ ಹೆಚ್ಚು ಹಿಂದೂ ಪೊಲೀಸರನ್ನು ನಿಯೋಜಿಸಿದೆ.

ಪಾಕಿಸ್ತಾನಕ್ಕೆ ಬೇಹುಗಾರಿಕೆ ಮಾಡುತ್ತಿದ್ದ ಮೂರು ಜನರಿಗೆ ಜೀವಾವಧಿ ಶಿಕ್ಷೆ !

ಇಂತಹ ದೇಶದ್ರೋಹಿಗಳನ್ನು ಜೀವಾವಧಿ ಶಿಕ್ಷೆಯ ಬದಲು ಗಲ್ಲು ಶಿಕ್ಷೆ ವಿಧಿಸಿದರೆ ಇತರರಿಗೆ ಕೂಡ ಇದರಿಂದ ಭಯ ಹುಟ್ಟುವುದು, ಎಂದು ದೇಶಭಕ್ತ ಭಾರತೀಯರಿಗೆ ಅನಿಸುವುದು !

ಎರಡನೇಯ ದಿನವೂ ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳದಿಂದ ಸೀಮಾ ಹೈದರ ಮತ್ತು ಸಚಿನ ಇವರ ವಿಚಾರಣೆ

ಪಾಕಿಸ್ತಾನದಿಂದ ಬಂದಿರುವ ಸೀಮಾ ಹೈದರ ಮತ್ತು ಅವಳ ನೋಯ್ಡಾದ ಪ್ರಿಯಕರ ಸಚಿನ ಅವರನ್ನು ಜುಲೈ 17 ರಂದು ಉತ್ತರಪ್ರದೇಶ ಭಯೋತ್ಪಾದನಾ ನಿಗ್ರಹ ದಳವು ವಿಚಾರಣೆಗಾಗಿ ಅವರ ಕಚೇರಿಗೆ ಕರೆದೊಯ್ದ ಬಳಿಕ ಸುಮಾರು 8 ಗಂಟೆ ಅವರ ವಿಚಾರಣೆ ನಡೆಸಿದರು.

ಸೀಮಾ ಹೈದರ ಇವಳನ್ನು 3 ದಿನಗಳಲ್ಲಿ ಪಾಕಿಸ್ತಾನಕ್ಕೆ ಗಡಿಪಾರು ಮಾಡಿ ಇಲ್ಲದಿದ್ದರೆ ತೀವ್ರ ಪ್ರತಿಭಟನೆ ! – ಗೋರಕ್ಷ ಹಿಂದೂ ದಳದ ಎಚ್ಚರಿಕೆ

ಪಾಕಿಸ್ತಾನಿ ಸೀಮಾ ಹೈದರ ವಿವಾಹಿತ ಮಹಿಳೆಯು ತನ್ನ 4 ಮಕ್ಕಳೊಂದಿಗೆ ಪರಾರಿಯಾಗಿ ಭಾರತಕ್ಕೆ ಬಂದಿದ್ದು, ಸದ್ಯ ನೋಯ್ಡಾದಲ್ಲಿ ಸಚಿನ ಎಂಬ ತನ್ನ ಪ್ರೇಮಿಯೊಂದಿಗೆ ನೆಲೆಸಿದ್ದಾಳೆ. ಇಬ್ಬರು ಆನ್‌ಲೈನ್ ಗೇಮ್ PUBG ಮೂಲಕ ಪರಸ್ಪರ ಪರಿಚಯವಾದರು ಮತ್ತು ಅದರಿಂದ ಪ್ರೀತಿ ಹುಟ್ಟಿತು. ಇದರಿಂದ ಸೀಮಾ ಕರಾಚಿಯಿಂದ ದುಬೈಗೆ, ದುಬೈನಿಂದ ನೇಪಾಳಕ್ಕೆ ಮತ್ತು ನೇಪಾಳದಿಂದ ದೆಹಲಿಗೆ ಬಂದಿದ್ದಾಳೆ.

ಹಸಿವಿನಿಂದ ಕಂಗೆಟ್ಟಿರುವ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ವಿದೇಶಿ ಸಂಸ್ಥೆಯು ನಡೆಸಲಿದೆ !

ಹಸಿವಿನಿಂದ ಕಂಗೆಟ್ಟಿರುವ ಹಾಗೂ ಸಾಲದ ಹೊರೆಯಿಂದ ತತ್ತರಿಸಿರುವ ಜಿಹಾದಿ ಪಾಕಿಸ್ತಾನಕ್ಕೆ ತನ್ನ ರಾಜಧಾನಿಯಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ವಿದೇಶಿ ಸಂಸ್ಥೆಗೆ ನಡೆಸಲು ನೀಡುವ ಪ್ರಮೇಯ ಬಂದಿದೆ. ಇದಕ್ಕಾಗಿ ಅದು ಒಂದು ಸಮಿತಿಯನ್ನು ಸ್ಥಾಪಿಸಿದೆ.

ಪಾಕಿಸ್ತಾನದಲ್ಲಿ ಹಿಂದೂ ದೇವಸ್ಥಾನದ ಮೇಲೆ ರಾಕೆಟ್ ದಾಳಿ !

ಪಾಕಿಸ್ತಾನದಲ್ಲಿ ಕಳೆದ ೪೮ ಗಂಟೆಯಲ್ಲಿ ಹಿಂದುಗಳ ೨ ದೇವಸ್ಥಾನಗಳ ಮೇಲೆ ದಾಳಿ ಮಾಡಲಾಗಿದೆ. ಒಂದು ದೇವಸ್ಥಾನ ನೆಲೆಸಮ ಮಾಡಲಾಗಿದೆ ಮತ್ತು ಇನ್ನೊಂದರ ಮೇಲೆ ಗುಂಡಿನದಾಳಿ ಮತ್ತು ರಾಕೆಟ್ ಹಾರಿಸಲಾಗಿದೆ.

ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡಿದ ಕಾಶ್ಮೀರದ 3 ಅಧಿಕಾರಿಗಳ ವಜಾ !

‘ಪೊಲೀಸ ಪಡೆಯಲ್ಲಿ ಹೆಚ್ಚಿನ ಮುಸಲ್ಮಾನರನ್ನು ಭರ್ತಿ ಮಾಡಿರಿ’ ಎಂದು ಒತ್ತಾಯಿಸುವವರಿಗೆ ಅಲ್ಲಿಯ ಮತಾಂಧ ಪೊಲೀಸರಿಂದ ನಡೆಸುತ್ತಿರುವ ದೇಶದ್ರೋಹಿ ಕೃತ್ಯಗಳ ವಿಷಯದಲ್ಲಿ ಏನು ಹೇಳುವರು ?

‘ಪಾಕಿಸ್ತಾನದಲ್ಲಿ ಕಾರ್ಯಾಚರಣೆ ನಡೆಸುವ ತಾಲೀಬಾನಿ ಭಯೋತ್ಪಾದಕರಿಗೆ ಅಪಘಾನಿಸ್ತಾನದಲ್ಲಿ ಸಿಗುವ ಆಶ್ರಯ ಸಹಿಸಲು ಸಾಧ್ಯವಿಲ್ಲವಂತೆ !’- ಪಾಕಿಸ್ತಾನದ ರಕ್ಷಣಾ ಸಚಿವ

ಪಾಕಿಸ್ತಾನದ ರಕ್ಷಣಾ ಸಚಿವರಿಂದ ಅಪಘಾನಿಸ್ತಾನ ಸರಕಾರಕ್ಕೆ ಎಚ್ಚರಿಕೆ !

ಭಯೋತ್ಪಾದನೆಯನ್ನು ಪೋಷಿಸುವ ಸಂಪೂರ್ಣ ವ್ಯವಸ್ಥೆಯನ್ನು ನಾಶಪಡಿಸುವುದು ಆವಶ್ಯಕ !

ಪಾಕಿಸ್ತಾನ ಬೆಂಬಲಿತ ಜಿಹಾದಿ ಭಯೋತ್ಪಾದಕರ ಕುರಿತು ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ ಇವರ ಹೇಳಿಕೆ