
ನವದೆಹಲಿ – ಕೂಡು ಕುಟುಂಬ ಪದ್ಧತಿಯ ನಿರಂತರ ಕುಸಿತ ಮತ್ತು ವಿಭಕ್ತ ಕುಟುಂಬಗಳಲ್ಲಿ ಮಕ್ಕಳೊಂದಿಗೆ ಸಮಯ ಕಳೆಯುವ ಬದಲು ಅವರ ಕೈಯಲ್ಲಿ ಮೊಬೈಲ್ ಫೋನ್ ಮತ್ತು ಗ್ಯಾಜೆಟ್‌ಗಳನ್ನು (ಎಲೆಕ್ಟ್ರಾನಿಕ್ ವಸ್ತುಗಳನ್ನು) ನೀಡುವ ಪ್ರವೃತ್ತಿಯ ಬಗ್ಗೆ ಸರ್ವೋಚ್ಚ ನ್ಯಾಯಾಲಯವು ತೀವ್ರ ಕಳವಳ ಹಾಗೂ ಅಸಮಾಧಾನ ವ್ಯಕ್ತಪಡಿಸಿದೆ. ಮೊಬೈಲ್ ಫೋನ್ ಪೋಷಕರ ಜಾಗವನ್ನು ಆಕ್ರಮಿಸಿಕೊಳ್ಳುತ್ತಿರುವುದು ಕಳವಳಕಾರಿಯಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯವು ಅಭಿಪ್ರಾಯಪಟ್ಟಿದೆ. ಇಂತಹ ಪರಿಸ್ಥಿತಿಯು ಸಮಾಜಕ್ಕೆ ವಿನಾಶಕಾರಿಯಾಗಲಿದೆ ಮತ್ತು ಭವಿಷ್ಯದ ಪೀಳಿಗೆಯು ಕೌಟುಂಬಿಕ ಸಂಬಂಧಗಳಿಂದ ಸಂಪೂರ್ಣವಾಗಿ ಅನಭಿಜ್ಞವಾಗಿರಲಿದೆ.
೧. ಸೋನಮ್ ರಘುವಂಶಿ ಪ್ರಕರಣ ಸೇರಿದಂತೆ ದೇಶದಲ್ಲಿ ಜೀವನ ಸಂಗಾತಿಯ ಕೊಲೆಯ ಇತ್ತೀಚಿನ ಘಟನೆಗಳನ್ನು ವಿಶ್ಲೇಷಿಸುತ್ತಾ, ನ್ಯಾಯಮೂರ್ತಿ ಎಮ್.ಎಮ್. ಸುಂದರೇಶ ಮತ್ತು ನ್ಯಾಯಮೂರ್ತಿ ಪಿ.ಬಿ. ವರಾಳೆ ಅವರ ಪೀಠವು, ಇಂತಹ ಪ್ರಕರಣಗಳು ಸಮಾಜದ ಬದಲಾಗುತ್ತಿರುವ ಸ್ವರೂಪವನ್ನು ತೋರಿಸುತ್ತವೆ ಎಂದು ಟಿಪ್ಪಣಿ ಮಾಡಿದೆ.
೨. ಇಂದಿನ ಪೀಳಿಗೆಯು ಹೆಚ್ಚು ಬುದ್ಧಿವಂತ ಮತ್ತು ಜ್ಞಾನಿಯಾಗಿದ್ದರೂ, ಅವರಲ್ಲಿ ಮಾನಸಿಕ ಒತ್ತಡವನ್ನು ನಿಭಾಯಿಸುವ ಸಾಮರ್ಥ್ಯವಿಲ್ಲ. ಇಂದು ಜನರು ವಾಟ್ಸಾಪ್ ನಲ್ಲಿ ಹರಿದಾಡುವ ಸಂದೇಶಗಳನ್ನೇ ಅವಲಂಬಿಸಿರುತ್ತಾರೆ ಮತ್ತು ಅದನ್ನೇ ನಿಜವಾದ ಜ್ಞಾನವೆಂದು ಮಾನುತ್ತಾರೆ ಎಂದು ನ್ಯಾಯಾಲಯವು ವಿಷಾದ ವ್ಯಕ್ತಪಡಿಸಿದೆ.
೩. ನ್ಯಾಯಾಲಯದ ಕಳವಳಕ್ಕೆ ಸಹಮತ ವ್ಯಕ್ತಪಡಿಸಿದ ಸಾಲಿಸಿಟರ್ ಜನರಲ್ (ಸರಕಾರದ ಹಿರಿಯ ಕಾನೂನು ಸಲಹೆಗಾರ) ತುಷಾರ ಮೆಹತಾ ಅವರು, ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಸುದೀರ್ಘ ಅವಧಿಗೆ ಬಳಸುವುದು ಒಂದು ಸಾಮಾಜಿಕ ಸಮಸ್ಯೆಯಾಗಿ ಪರಿಣಮಿಸಿದೆ ಎಂದು ತಿಳಿಸಿದರು. ಇದರಿಂದಾಗಿ ಮಾನವ ಸಂಬಂಧಗಳ ಮೇಲಿನ ನಂಬಿಕೆ ಕಡಿಮೆಯಾಗುತ್ತಿದ್ದು, ಸಹಿಷ್ಣುತೆಯ ಅಭಾವ ಹೆಚ್ಚುತ್ತಿದೆ.
ಮನುಷ್ಯನು ಯಂತ್ರವಾಗಿ ಮಾರ್ಪಡುತ್ತಿದ್ದಾನೆ!
ನ್ಯಾಯಮೂರ್ತಿ ಸುಂದರೇಶ್ ಅವರು ಇತ್ತೀಚೆಗೆ ಒಂದು ರೆಸ್ಟೋರೆಂಟ್‌ಗೆ ಹೋಗಿದ್ದರು. ಅಲ್ಲಿ ತಮಗಾದ ಅನುಭವವನ್ನು ಅವರು ಈ ಸಂದರ್ಭದಲ್ಲಿ ಹಂಚಿಕೊಂಡರು. ಅವರು, ಕುಟುಂಬವೊಂದರ ಸದಸ್ಯರು ಊಟಕ್ಕಾಗಿ ಬಂದಿದ್ದುದನ್ನು ನಾನು ನೋಡಿದೆ. ಅವರೊಂದಿಗಿದ್ದ ಮಗುವನ್ನು ಸುಮ್ಮನಿರಿಸಲು (ಹಿರಿಯರು ಶಾಂತವಾಗಿ ಊಟ ಮಾಡಲು ಸಾಧ್ಯವಾಗಲಿ ಎಂದು) ಮಗುವಿನ ಕೈಗೆ ಮೊಬೈಲ್ ಫೋನ್ ನೀಡಲಾಗಿತ್ತು. ಇಂತಹ ಕೃತ್ಯಗಳು ಭವಿಷ್ಯದಲ್ಲಿ ಇನ್ನೂ ಹೆಚ್ಚಾಗಲಿವೆ. ಜಂಟಿ ಕುಟುಂಬ ಪದ್ಧತಿಯು ಒಂದು ದೊಡ್ಡ ಸಂಪತ್ತಾಗಿದೆ, ಆದರೂ ಜನರಿಗೆ ಇದರ ಅರಿವಿಲ್ಲ. ಆನಂದವು ಭೌತಿಕ ವಸ್ತುಗಳಿಂದ ಸಿಗುವುದಿಲ್ಲ, ಬದಲಾಗಿ ಮಾನವ ಬಾಂಧವ್ಯ ಮತ್ತು ಸಂಬಂಧಗಳಿಂದ ಸಿಗುತ್ತದೆ. ನಾವು ಯಂತ್ರಗಳಾಗಿ ಮಾರ್ಪಡುತ್ತಿದ್ದೇವೆ, ಎಂದು ಹೇಳಿದರು.
ನೈಸರ್ಗಿಕ ವಿಕೋಪದಿಂದ ೧ ಸಾವಿರ ಕೋಟಿ ರೂಪಾಯಿ ಹಾನಿ : Himachal Pradesh Natural Disasters
ಸೋನಮ್ ವಾಂಗ್ಚುಕ್ ಅವರು ಉಪವಾಸ ಮುಕ್ತಾಯ !
ಶಿಕ್ಷಣ ಸಚಿವರ ಸ್ಥಳಾಂತರ: ಹೊಸ ಕಾನೂನು ಸಹ ರೂಪಿಸಲಾಗುವುದು! – ಪ್ರಧಾನಿ ನರೇಂದ್ರ ಮೋದಿ
ಖೋಪೋಲಿಯ ಶ್ರೀ ಭಗವಾನ ವೀರೇಶ್ವರ ದೇವಸ್ಥಾನದಲ್ಲಿ ಕಳ್ಳತನ ಮಾಡಿದ ನಾಲ್ವರ ಬಂಧನ!
ಅಸ್ಸಾಂ: ನೆರೆಗೆ ೪೧ ಜನರ ಸಾವು !
‘ಉಪವಾಸ ಎಂದರೆ ಅರಾಜಕತೆ’, ಇದು ಡಾ. ಅಂಬೇಡ್ಕರ್ ಅವರ ಹೇಳಿಕೆ ! — ಸೋನಮ್ ವಾಂಗ್ಚುಕ್ ಅವರಿಗೆ ತಿರುಗೇಟು!