ಗಿಲಗಿಟ-ಬಾಲ್ಟಿಸ್ತಾನ ಇಲ್ಲಿ ಶಿಯಾ ಮುಸ್ಲಿಮರಿಂದ ಪಾಕಿಸ್ತಾನ ಸೈನ್ಯದ ವಿರುದ್ಧ ಪ್ರತಿಭಟನೆ !

  • ಶಿಯಾ ಮುಸ್ಲಿಮರಿಗೆ ಭಾರತಕ್ಕೆ ಬರುವ ಇಚ್ಛೆ !

  • ಕಾರ್ಗಿಲ್ ಹೆದ್ದಾರಿ ಆರಂಭಿಸಲು ಆಗ್ರಹ !

ನವ ದೆಹಲಿ – ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಗಿಲಗಿಟ-ಬಾಲ್ಟಿಸ್ತಾನ ಅಲ್ಲಿಯ ಶಿಯಾ ಮುಸಲ್ಮಾನರಿಂದ ಪಾಕಿಸ್ತಾನಿ ಸೈನ್ಯ ಮತ್ತು ಸುನ್ನಿ ಮುಸಲ್ಮಾನ ಸಂಘಟನೆಗಳ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ. ಇಲ್ಲಿಯ ಶಿಯಾ ಸಂಘಟನೆಗಳಿಂದ ಇದೇ ಮೊದಲ ಬಾರಿಗೆ ಸೈನ್ಯದ ವಿರುದ್ಧ ಧ್ವನಿಯುತ್ತಲಾಗಿದೆ. ಶಿಯಾ ಮುಸ್ಲಿಮರಿಂದ ಭಾರತದಕಡೆಗೆ ಹೋಗುವ ಕಾರ್ಗಿಲ್ ಹೆದ್ದಾರಿ ತೆರೆಯಲು ಒತ್ತಾಯಿಸಲಾಗುತ್ತಿದೆ. ಅವರು ಗಿಲಗಿಟ-ಬಾಲ್ಟಿಸ್ತಾನದಲ್ಲಿ ವಾಸಿಸದೆ ಭಾರತಕ್ಕೆ ಹೋಗುವುದಿದೆ.

೧. ಇಲ್ಲಿಯ ೨೦ ಲಕ್ಷ ಜನಸಂಖ್ಯೆಯಲ್ಲಿ ೮ ಲಕ್ಷ ಶಿಯಾ ಮುಸಲ್ಮಾನರಿಂದ ಪ್ರತಿಭಟನೆ ಮಾಡಲಾಗುತ್ತಿದೆ. ಇದರಿಂದ ಪಾಕಿಸ್ತಾನದ ಸೈನ್ಯವು ಇಲ್ಲಿ ೨೦ ಸಾವಿರ ಹೆಚ್ಚುವರಿ ಸೈನಿಕರನ್ನು ನೇಮಕಗೊಳಿಸಿದೆ. ಇಲ್ಲಿ ಮೊಬೈಲ್ ಇಂಟರ್ನೆಟ್ ಬಂದ್ ಮಾಡಲಾಗಿದೆ.

೨. ಗಿಲಗಿಟ-ಬಾಲ್ಟಿಸ್ತಾನದಲ್ಲಿ ೧೯೪೭ ನಂತರ ಶಿಯಾ ಮುಸಲ್ಮಾನರನ್ನು ಇಲ್ಲಿಂದ ಓಡಿಸಿರುವ ಆರೋಪ ಮಾಡಿದ್ದಾರೆ. ಸೈನ್ಯದಿಂದ ಇಲ್ಲಿ ಉದ್ದೇಶಪೂರ್ವಕವಾಗಿ ಸುನ್ನಿ ಮುಸಲ್ಮಾನರನ್ನು ನೆಲೆಸುವಂತೆ ಮಾಡಿದ್ದಾರೆ. ಶೀಯಾ ಬಹು ಸಂಖ್ಯಾತ ಪ್ರದೇಶದಲ್ಲಿ ಈಗ ಶಿಯಾ ಅಲ್ಪಸಂಖ್ಯಾತರಾಗಿದ್ದಾರೆ.