ಖೋಪೋಲಿಯ ಶ್ರೀ ಭಗವಾನ ವೀರೇಶ್ವರ ದೇವಸ್ಥಾನದಲ್ಲಿ ಕಳ್ಳತನ ಮಾಡಿದ ನಾಲ್ವರ ಬಂಧನ!

ನಾಲ್ವರೂ ಹಿಂದೂಗಳು ಎಂಬುದು ಬಹಿರಂಗ

ಖೋಪೋಲಿ (ರಾಯಗಡ ಜಿಲ್ಲೆ) – ಖೋಪೋಲಿಯ ೧೮ ನೇ ಶತಮಾನದ ಐತಿಹಾಸಿಕ ಶ್ರೀ ಭಗವಾನ ವೀರೇಶ್ವರ (ವಿಶ್ವೇಶ್ವರ) ದೇವಸ್ಥಾನದಲ್ಲಿ ಜುಲೈ ೧೯ ರ ಮಧ್ಯರಾತ್ರಿ ಕಳ್ಳತನ ನಡೆದಿದೆ. ಅಜ್ಞಾತ ಕಳ್ಳರು ದೇವಸ್ಥಾನದ ಗರ್ಭಗುಡಿಯನ್ನು ಪ್ರವೇಶಿಸಿ ೨೮ ಲಕ್ಷ ರೂಪಾಯಿ ಮೌಲ್ಯದ ಹಾಗೂ ೧೭ ಕೆಜಿ ತೂಕದ ಬೆಳ್ಳಿಯ ಸಂಪೂರ್ಣ ಪಿಂಡವನ್ನು (ಮುಖವಾಡ ಮತ್ತು ಕವಚ/ಹೊದಿಕೆ) ಕದ್ದೊಯ್ದಿದ್ದಾರೆ. ಪೊಲೀಸರು ತನಿಖೆ ನಡೆಸಿ ಪುಣೆ ಮತ್ತು ಅಹಿಲ್ಯಾನಗರ ಜಿಲ್ಲೆಗಳಿಂದ ೪ ಜನ ಸರಣಿ ಕಳ್ಳರನ್ನು ಬಂಧಿಸಿದ್ದಾರೆ. ಅಮೋಲ ಕಸಬೆ, ವಿಕಾಸ ಅಗಿವಲೆ, ದಿಲೀಪ ಜಾಧವ ಮತ್ತು ಸಖಾರಾಮ ಗಾಯಕ್ವಾಡ ಇವರು ಬಂಧಿತ ಆರೋಪಿಗಳು.

ಭಕ್ತರಿಗೆ ಕೇವಲ ಮುಂಭಾಗದ ಬಾಗಿಲಿನಿಂದ ಮಾತ್ರ ಪ್ರವೇಶ ನೀಡಲಾಗುತ್ತಿದ್ದುದರಿಂದ ದೇವಸ್ಥಾನದ ಹಿಂಭಾಗದ ಬಾಗಿಲು ಯಾವಾಗಲೂ ಮುಚ್ಚಿರುತ್ತಿತ್ತು; ಆದರೆ ಕಳ್ಳರು ಹಿಂಭಾಗದ ಬಾಗಿಲಿನ ಸರಪಳಿ ಮತ್ತು ಬೀಗವನ್ನು ಮುರಿದು ಗರ್ಭಗುಡಿಯನ್ನು ಪ್ರವೇಶಿಸಿ ಕಳ್ಳತನ ಮಾಡಿದ್ದಾರೆ. ಮರುದಿನ ಮುಂಜಾನೆ ವಾಡಿಕೆಯಂತೆ ದೇವಸ್ಥಾನವನ್ನು ತೆರೆಯಲು ಬಂದ ಸಹಾಯಕ ಅರ್ಚಕರಾದ ಕಿಶೋರ ಶಿಗವಾನ ರವರಿಗೆ ಕಳ್ಳತನದ ಬಗ್ಗೆ ತಿಳಿಯುತ್ತಲೇ ಅವರು ದೇವಸ್ಥಾನದ ಟ್ರಸ್ಟಿಗಳಿಗೆ ಈ ಬಗ್ಗೆ ತಿಳಿಸಿದರು.  ಅವರು ದೂರು ದಾಖಲಿಸಿದರು. ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಕಳ್ಳತನದ ಕೃತ್ಯ ಬಯಲಿಗೆ ಬಂದಿದೆ. ಪೊಲೀಸರು ಆರೋಪಿಗಳಿಂದ ಎಲ್ಲಾ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಸಂಪಾದಕೀಯ ನಿಲುವು

ದೇವಸ್ಥಾನದಲ್ಲಿ ಕಳ್ಳತನ ಮಾಡುವ ಹಿಂದೂಗಳು ಹಿಂದೂ ಧರ್ಮಭಕ್ಷಕರಾಗಿದ್ದಾರೆ ! ಇಂತಹವರಿಗೆ ಸರಕಾರವು ಕಠಿಣ ಶಿಕ್ಷೆ ವಿಧಿಸುವುದು ಅಗತ್ಯ!