ಇರಾನ್ ಸ್ಥಿತಿ ಅತ್ಯಂತ ಶೋಚನೀಯ ! – ಡೊನಾಲ್ಡ್ ಟ್ರಂಪ್

ಅಮೆರಿಕದಿಂದ ಇರಾನ್‌ ನ ೪ ಪ್ರಾಂತ್ಯಗಳ ಮೇಲೆ ದಾಳಿ

ಡೊನಾಲ್ಡ್ ಟ್ರಂಪ್

ಟೆಹರಾನ್ (ಇರಾನ್) – ಇರಾನ್‌ ನ ಸ್ಥಿತಿ ಅತ್ಯಂತ ಶೋಚನೀಯವಾಗಿದೆ, ಎಂದು  ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಮೇಲಿನ ಅಮೆರಿಕದ ದಾಳಿಯ ಬಗ್ಗೆ ಮಾಹಿತಿ ನೀಡಿದರು.

​ಅಮೆರಿಕ ಸತತ ೧೨ ನೇ ದಿನ, ಅಂದರೆ ಜುಲೈ ೨೨ ರಂದು ಇರಾನ್ ಮೇಲೆ ದಾಳಿ ನಡೆಸಿತು. ಈ ಬಾರಿ ಅಮೆರಿಕ, ಇರಾನ್‌ ನ ಖುಜೆಸ್ತಾನ್, ಬುಶೆಹರ್, ಹೊರ್ಮೊಜಗಾನ್ ಮತ್ತು ಇಲಾಮ್ ಪ್ರಾಂತ್ಯಗಳ ಹಲವು ಸ್ಥಳಗಳಲ್ಲಿ ಕ್ಷಿಪಣಿ ಮತ್ತು ವೈಮಾನಿಕ ದಾಳಿಗಳನ್ನು ನಡೆಸಿದೆ. ಇರಾನ್ ಅಧಿಕಾರಿಗಳು ನೀಡಿದ ಮಾಹಿತಿಯ ಪ್ರಕಾರ, ಇರಾನ್‌ ನ ಹಲವು ‌ಸೇನಾ ನೆಲೆಗಳು ಮತ್ತು ಆಯಕಟ್ಟಿನ ಸ್ಥಳಗಳನ್ನು ಗುರಿಯಾಗಿಸಲಾಗಿದೆ.

ಯೆಮೆನ್‌ ನ ಹುತಿ ಬಂಡುಕೋರರಿಂದ ಸೌದಿ ಅರೇಬಿಯಾದ ತೈಲ ನೌಕೆಗಳ ಮೇಲೆ ದಾಳಿ

​ಮತ್ತೊಂದೆಡೆ, ಯೆಮೆನ್‌ ನ ಹುತಿ ಬಂಡುಕೋರರು ಕೆಂಪು ಸಮುದ್ರದಲ್ಲಿ ಸೌದಿ ಅರೇಬಿಯಾದ ‘ಎನ್ಸೆಲಿಯಾ’ ಮತ್ತು ‘ಲೈಲಾ’ ಎಂಬ ತೈಲ ನೌಕೆಗಳ ಮೇಲೆ ಕ್ಷಿಪಣಿಗಳು ಮತ್ತು ಡ್ರೋನ್‌ ಗಳ ಮೂಲಕ ದಾಳಿ ನಡೆಸಿದ್ದಾರೆ. ಸೌದಿ ಅರೇಬಿಯಾ ಕೂಡ ಈ ದಾಳಿ ನಡೆದಿರುವುದನ್ನು ಖಚಿತಪಡಿಸಿದೆ. ಹುತಿ ಬಂಡುಕೋರರು ಎಲ್ಲಾ ನೌಕೆಗಳಿಗೆ ಸೌದಿ ಅರೇಬಿಯಾದ ಬಂದರುಗಳಿಂದ ದೂರವಿರಲು ಎಚ್ಚರಿಕೆ ನೀಡಿದ್ದಾರೆ. ಹುತಿ ಬಂಡುಕೋರರ ಈ ದಾಳಿಯಿಂದಾಗಿ ಬಾಬ್-ಅಲ್-ಮಂದೇಬ್ ಜಲಸಂಧಿಯಲ್ಲಿ ಉದ್ವಿಗ್ನತೆ ನಿರ್ಮಾಣವಾಗಿದ್ದು, ಇದರ ಪರಿಣಾಮ ಜಾಗತಿಕ ತೈಲ ಪೂರೈಕೆಯ ಮೇಲೆ ಬೀರುವ ಸಾಧ್ಯತೆಯನ್ನು ವ್ಯಕ್ತಪಡಿಸಲಾಗಿದೆ.

​…ಹಾಗಿದ್ದರೆ ಇರಾನ್ ಮೇಲೆ ಬಾಂಬ್ ದಾಳಿ ಮಾಡುತ್ತೇವೆ ! – ಟ್ರಂಪ್

​ಇರಾನ್ ಏನಾದರೂ ಹೊರ್ಮುಜ್ ಜಲಸಂಧಿಯಲ್ಲಿನ ಯಾವುದೇ ನೌಕೆಯ ಮೇಲೆ ದಾಳಿ ನಡೆಸಿದರೆ, ಅಮೆರಿಕ ಇರಾನ್‌ ನಲ್ಲಿನ ಸೇತುವೆಗಳು ಮತ್ತು ವಿದ್ಯುತ್ ಕೇಂದ್ರಗಳ ಮೇಲೆ ಬಾಂಬ್ ದಾಳಿ ಮಾಡುವುದು. ಅಲ್ಲದೇ ಟೆಹರಾನ್‌ ನಲ್ಲಿರುವ ಸ್ಥಳಗಳ ಮೇಲೂ ದಾಳಿ ಮಾಡಲಾಗುವುದು ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.