ಭಾರತವು ವಿಜ್ಞಾನಿಗಳಿಂದಲೇ ಚಂದ್ರನಲ್ಲಿ ತಲುಪಿತು; ಆದರೆ ಪಾಕಿಸ್ತಾನದ ವಿಜ್ಞಾನಿಗಳು ಸೂಜಿಯನ್ನು ಸಹ ನಿರ್ಮಿಸಲು ಸಾಧ್ಯವಿಲ್ಲ ! – ಪಾಕಿಸ್ತಾನಿ ಮೌಲ್ವಿ

(ಮೌಲ್ವಿ ಎಂದರೆ ಇಸ್ಲಾಂನ ಧರ್ಮಗುರು)

ಇಸ್ಲಾಮಾಬಾದ್‌ – ಭಾರತ ಸೇರಿದಂತೆ ಸಂಪೂರ್ಣ ಜಗತ್ತು ‘ಚಂದ್ರಯಾನ ೩’ ಇದರ ಯಶಸ್ಸಿನಲ್ಲಿ ಮುಳುಗಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಸಾಧನೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಭಾರತೀಯ ವಿಜ್ಞಾನಿಗಳನ್ನು ಹೊಗಳಲಾಗುತ್ತಿದೆ. ಪಾಕಿಸ್ತಾನದ ಮೌಲ್ವಿ ಇಬ್ತಿಸಾಮ್‌ ಇಲೈ ಜಹೀರ್‌ ಕೂಡ ಭಾರತೀಯ ವಿಜ್ಞಾನಿಗಳನ್ನು ಹೊಗಳಿದ್ದಾರೆ. ‘ಭಾರತವು ಚಂದ್ರನನ್ನು ತಲುಪಿದೆ ಅದರೆ, ಆದರೆ ಪಾಕಿಸ್ತಾನದ ವಿಜ್ಞಾನಿಗಳು ಮಾತ್ರ ಸೂಜಿಯನ್ನು ನಿರ್ಮಿಸಲು ಸಾದ್ಯವಿಲ್ಲʼ, ಎಂದು ಮೌಲ್ವಿಯು ಹೇಳಿದ್ದಾರೆ. ಬಾಹ್ಯಾಕಾಶ ಕ್ಷೇತ್ರದಲ್ಲಿನ ವೈಫಲ್ಯಕ್ಕೆ ಅವರು ಪಾಕಿಸ್ತಾನದ ವಿಜ್ಞಾನಿಗಳೇ ಹೊಣೆ ಎಂದು ಹೇಳಿದ್ದಾರೆ.

(ಸೌಜನ್ಯ – NETA GIRI)

ಮೌಲ್ವಿ ಜಾಹಿರ್‌ ಇವರು ಒಂದು ವೀಡಿಯೋ ಪ್ರಸಾರ ಮಾಡಿ ಅದರಲ್ಲಿ, ಹಿಂದೂ ಪಂಡಿತರು ಭಾರತವನ್ನು ಚಂದ್ರನತ್ತ ಕೊಂಡೊಯ್ಯಲ್ಲಿಲ್ಲ, ಅಮೆರಿಕಾದ ಪಾದ್ರಿಗಳಿಂದ ಚಂದ್ರನಲ್ಲಿ ತಲುಪಲಿಲ್ಲ. ಭಾರತ ಇಂದು ಚಂದ್ರನಲ್ಲಿ ತಲುಪಿದ್ದು ವಿಜ್ಞಾನಿಗಳ ಬಲದಿಂದ, ʼಇಸ್ಲಾಂ ಇದು ಪಾಕಿಸ್ತಾನದ ವಿಜ್ಞಾನಿಗಳ ಪ್ರಗತಿಗೆ ಅಡೆತೆಡೆಯಾಗಿದೆʼ, ಈ ಪಾಕಿಸ್ತಾನದ ಪ್ರತ್ಯೇಕತಾವಾದಿಗಳು ಮತ್ತು ಉದಾರವಾದಿಗಳ ಯುಕ್ತಿವಾದವನ್ನು ಅವರು ತಿರಸ್ಕರಿಸಿದ್ದಾರೆ.