ಪಾಕಿಸ್ತಾನದಲ್ಲಿ ಪರಮಾಣು ಬಾಂಬ್ ವಸ್ತುಗಳ ಉತ್ಪಾದನೆಗೆ ಸ್ಥಾಪಿಸಲಾದ ಯುರೇನಿಯಂ ಪುಷ್ಟಿಕರಣ ಯೋಜನೆ ಪೂರ್ಣಗೊಂಡಿದೆ !

ಇಸ್ಲಾಮಾಬಾದ – ಪಾಕಿಸ್ತಾನದಲ್ಲಿನ ಕಹುಟ ಮತ್ತು ಗಡವಾಲದಲ್ಲಿ ಪರಮಾಣು ಬಾಂಬ್ ವಸ್ತುಗಳ ಉತ್ಪಾದನೆಗಾಗಿ ಸ್ಥಾಪಿಸಲಾದ ಯೋಜನೆ ಪೂರ್ಣಗೊಂಡಿದೆ. ಈ ಎಲ್ಲಾ ಯೋಜನೆ ಯುರೇನಿಯಂ ಪುಷ್ಟಿಕರಣದ ಯೋಜನೆ ಆಗಿದೆ. ‘ಫೆಡರೆಶನ್ ಆಫ್ ಅಮೆರಿಕನ್ ಸೈಂಟಿಸ್ಟ್’ನ ಈ ಪರಮಾಣು ಮಾಹಿತಿ ಯೋಜನೆಯ ಬಗ್ಗೆ ಸಂಶೋಧಕ ಇಲಿಯಾನಾ ಜೋನ್ಸ್ ಮತ್ತು ಮ್ಯಾಟ್ ಕೊರ್ಡ ಇವರು ಪಾಕಿಸ್ತಾನದ ಪರಮಾಣು ಕಾರ್ಯಕ್ರಮದ ಬಗ್ಗೆ ಉಪಗ್ರಹದ ಚಿತ್ರಗಳ ಆಧಾರದಲ್ಲಿ ತಯಾರಿಸಿರುವ ವರದಿಯಲ್ಲಿ ಈ ಮಾಹಿತಿ ನೀಡಲಾಗಿದೆ.

ಮ್ಯಾಟ್ ಕೊರ್ಡ್, ”ನಮ್ಮ ಅಂದಾಜಿನ ಪ್ರಕಾರ ಭಾರತ ಮತ್ತು ಪಾಕಿಸ್ತಾನದ ಬಳಿ ಸಮಾನ ಪ್ರಮಾಣದ ಪರಮಾಣು ಸಂಗ್ರಹವಿದೆ. ಎರಡು ದೇಶ ಕೇವಲ ಅದರ ಪರಮಾಣು ಸಿದ್ದತೆ ಹೆಚ್ಚಿಸುತ್ತಿಲ್ಲ, ಅದರ ಜೊತೆಗೆ ಸಂಘರ್ಷದ ಸಮಯದಲ್ಲಿ ಹೆಚ್ಚು ವೇಗದಿಂದ ಪರಮಾಣು ಅಸ್ತ್ರಗಳನ್ನು ಪ್ರಕ್ಷೇಪಿತ ಗೊಳಿಸಬಹುದಾದಂತಹ ವ್ಯವಸ್ಥೆ ಕೂಡ ಸಿದ್ದಗೊಳಿಸಿದೆ. ಭಾರತ ಮತ್ತು ಪಾಕಿಸ್ತಾನ ಇವರಲ್ಲಿ ಯುದ್ಧದ ಬಗೆಗಿನ ಪರಿಸ್ಥಿತಿ ದಿನೇ ದಿನೇ ಸೂಕ್ಷ್ಮವಾಗುತ್ತಿದೆ.” ಪಾಕಿಸ್ತಾನದ ಪಂಜಾಬ ಪ್ರಾಂತ್ಯದಲ್ಲಿನ ಖುಶಾಬದ ದಕ್ಷಿಣಕ್ಕೆ ಇರುವ ಖುಶಾಬ ಕಟ್ಟಡದಲ್ಲಿ ನಾಲ್ಕು ಹೊಸದಾಗಿ ಕಟ್ಟಿರುವ ‘ಹೆವಿ ವಾಟರ್ ಪ್ಲೋಟೋನಿಯಂ ಉತ್ಪಾದನೆಯ ಪರಮಾಣು’ ಕುಲಮೆಗಳು ಕಾರ್ಯನಿರತವಿದೆ, ಎಂದು ಈ ವರದಿಯಲ್ಲಿ ಹೇಳಲಾಗಿದೆ. (ಇದರಿಂದ ಪಾಕಿಸ್ತಾನದ ಪರಮಾಣು ಶಕ್ತಿಯ ನಿರ್ಮಾಣದ ಪ್ರಮಾಣ ಹೆಚ್ಚಿರುವುದು ಗಮನಕ್ಕೆ ಬರುತ್ತದೆ. ಸಮಯ ಇರುವಾಗಲೇ ಭಾರತ ಎಚ್ಚೆತ್ತುಕೊಳ್ಳಬೇಕು ! – ಸಂಪಾದಕರು)

ಸಂಪಾದಕೀಯ ನಿಲುವು

ಆಕ್ರಮಣ ಇದು ರಕ್ಷಣೆಯ ಸರ್ವೋತ್ತಮ ಮಾರ್ಗವಾಗಿದೆ’, ಈ ನೀತಿಯ ಪ್ರಕಾರ ಭಾರತವು ಮೊದಲೇ ಪಾಕಿಸ್ತಾನವನ್ನು ನಾಶಗೊಳಿಸುವುದು ಆವಶ್ಯಕವಾಗಿದೆ !