ಪಾಕಿಸ್ತಾನದಲ್ಲಿ ಮತಾಂಧರಿಂದ ಹಿಂದೂಗಳ ಅಪಹರಣದ ವಿರುದ್ಧ ಅಲ್ಪಸಂಖ್ಯಾತರ ಮೋರ್ಚಾ !

ಇಸ್ಲಾಮಾಬಾದ್ – ಪಾಕಿಸ್ತಾನದಲ್ಲಿ ಹಿಂದೂಗಳ ಸಹಿತ ಇತರ ಅಲ್ಪಸಂಖ್ಯಾತರ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿದೆ. ಅಲ್ಪಸಂಖ್ಯಾತರ ಧಾರ್ಮಿಕ ಸ್ಥಳಗಳ ಮೇಲೆ ಪ್ರತಿದಿನ ದಾಳಿ ನಡೆಯುತ್ತಿದೆ. ಈಗ ಪಾಕಿಸ್ತಾನದ ಹಿಂದೂ ಅಲ್ಪಸಂಖ್ಯಾತ ಸಮುದಾಯ ಸೇರಿದಂತೆ ಇತರ ಸಮುದಾಯಗಳು ಈ ದಬ್ಬಾಳಿಕೆಯ ವಿರುದ್ಧ ಬೀದಿಗಿಳಿದಿವೆ. ಪಾಕಿಸ್ತಾನದ ಸುಕ್ಕೂರ್ನಲ್ಲಿ ಮತಾಂಧರು ಹಿಂದೂಗಳನ್ನು ಅಪಹರಿಸಿದ್ದರು. ಅಪಹರಣ ಮಾಡಿರುವ ಮತಾಂಧರನ್ನು ಹಡುಕುವಲ್ಲಿ ಪೊಲೀಸರು ವಿಫಲರಾಗಿರುವ ಹಿನ್ನೆಲೆಯಲ್ಲಿ ಸಾವಿರಾರು ಜನರು ಇತ್ತೀಚೆಗೆ ಮೆರವಣಿಗೆ ನಡೆಸಿದ್ದರು ಮತ್ತು ಕಂಧಕೋಟ ನಗರದ ಘಂಟಾಘರ್ ಚೌಕ್ ನಲ್ಲಿ ಧರಣಿ ನಡೆಸಿದರು.

ಪ್ರಸಾರಮಾಧ್ಯಮಗಳು ನೀಡಿರುವ ವರದಿಗಳ ಪ್ರಕಾರ, ಪ್ರತಿಭಟನಾಕಾರರು ಕಾಶ್ಮೀರ ಜಿಲ್ಲೆಯ ಅಪರಾಧಗ್ರಸ್ತ ಕಂಧಕೋಟ್ ನಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಪುನರ್ ಸ್ಥಾಪಿಸಬೇಕೆಂದು ಕೋರಿ ಪ್ರತಿಭಟನೆ ನಡೆಸಿದರು. ಜಿಲ್ಲೆಯ ವಿವಿಧ ಪ್ರದೇಶಗಳ ಹಿಂದೂ ಮುಖಂಡರಾದ ಜಗದೀಶ್ ಕುಮಾರ್, ಜಯದೀಪ್ ಕುಮಾರ್, ಸಾಗರ್ ಕುಮಾರ್, ಗುಡ್ಡು, ಮುನೀರ್ ನಾಯಚ ಸೇರಿದಂತೆ ಹಲವರ ಅಪಹರಣವನ್ನು ಖಂಡಿಸಿ ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿದರು.