‘ಉಪವಾಸ ಎಂದರೆ ಅರಾಜಕತೆ’, ಇದು ಡಾ. ಅಂಬೇಡ್ಕರ್ ಅವರ ಹೇಳಿಕೆ ! — ಸೋನಮ್ ವಾಂಗ್ಚುಕ್ ಅವರಿಗೆ ತಿರುಗೇಟು!

ದೆಹಲಿ: ಕಥಿತ ವಿದ್ಯಾರ್ಥಿ ಚಳವಳಿ; ಲೇಖಕ ಡಾ. ಆನಂದ್ ರಂಗನಾಥನ್ ವಾಗ್ದಾಳಿ

ನವದೆಹಲಿ – ಕಾಕ್ರೋಚ್ ಜನತಾ ಪಕ್ಷದ ಹೋರಾಟವು ಮೂರು ಅಥವಾ ನಾಲ್ಕು ವಿಷಯಗಳ ಮಿಶ್ರಣವಾಗಿದೆ. ಜಂತರ್ ಮಂತರ್ ಹೋರಾಟ ಹಾಗೂ ಸೋನಮ್ ವಾಂಗ್ಚುಕ್ ಅವರ ಉಪವಾಸದ ಸಂದರ್ಭದಲ್ಲಿ ಯಾವ ಸಂವಿಧಾನದ ಉಲ್ಲೇಖ ನೀಡಿ ಯಾರ ವಿಚಾರಗಳನ್ನು ಮೊಳಗಿಸಲಾಗುತ್ತಿದೆಯೋ, ಆ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಆಲೋಚನೆಗಳನ್ನು ಮೊದಲು ಅರ್ಥಮಾಡಿಕೊಳ್ಳಬೇಕು. ‘‘ನಾವು ಪ್ರಜಾಪ್ರಭುತ್ವವನ್ನು ಕೇವಲ ಹೆಸರಿಗಷ್ಟೇ ಅಲ್ಲದೆ, ಪ್ರತ್ಯಕ್ಷವಾಗಿ ಉಳಿಸಿಕೊಳ್ಳಬೇಕಾದರೆ ನಾವು ಏನು ಮಾಡಬೇಕು? ನನ್ನ ಪ್ರಕಾರ ನಾವು ಮೊದಲನೆಯದಾಗಿ ಮಾಡಬೇಕಾದದ್ದು ಎಂದರೆ — ನಮ್ಮ ಸಾಮಾಜಿಕ ಮತ್ತು ಆರ್ಥಿಕ ಗುರಿಗಳನ್ನು ಸಾಧಿಸಲು ಸಾಂವಿಧಾನಿಕ ಮಾರ್ಗಗಳನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುವುದು. ಇದರರ್ಥ ನಾವು ಕ್ರಾಂತಿಯ ಹಿಂಸಾತ್ಮಕ ಮಾರ್ಗಗಳನ್ನು ತೊರೆಯಬೇಕು. ಅಂದರೆ ನಾವು ಶಾಸನಭಂಗ, ಅಸಹಕಾರ ಮತ್ತು ಸತ್ಯಾಗ್ರಹದ ಮಾರ್ಗಗಳನ್ನು ಬಿಟ್ಟುಬಿಡಬೇಕು. ಇವು (ಉಪವಾಸದಂತಹ ಮಾರ್ಗಗಳು) ಬೇರೇನೂ ಅಲ್ಲ, ‘ಅರಾಜಕತೆಯ ವ್ಯಾಕರಣ’ವಾಗಿವೆ ಮತ್ತು ಇವುಗಳನ್ನು ಎಷ್ಟು ಬೇಗ ಬಿಟ್ಟರೆ ನಮಗೆ ಅಷ್ಟು ಒಳ್ಳೆಯದು’’ ಎಂದು ಪ್ರಸಿದ್ಧ ಲೇಖಕ ಮತ್ತು ವಿಜ್ಞಾನಿ ಡಾ. ಆನಂದ್ ರಂಗನಾಥನ್ ಪ್ರಮುಖ ಹೇಳಿಕೆ ನೀಡಿದ್ದಾರೆ. ಅವರು ವಾಹಿನಿಯೊಂದರಲ್ಲಿ ‘ಕಾಕ್ರೋಚ್ ಜನತಾ ಪಕ್ಷ’ದಿಂದ ನಡೆಯುತ್ತಿರುವ ಹೋರಾಟ ಮತ್ತು ಸಂಬಂಧಿತ ಬೆಳವಣಿಗೆಗಳ ಕುರಿತು ಮಾತನಾಡುತ್ತಿದ್ದರು.

ಡಾ. ರಂಗನಾಥನ್ ಅವರು,  ನವೆಂಬರ್ 25. 1949 ರ ಸಂವಿಧಾನ ಸಭೆಯಲ್ಲಿ ಡಾ. ಅಂಬೇಡ್ಕರ್ ಅವರು ಈ ಐತಿಹಾಸಿಕ ಭಾಷಣದಲ್ಲಿ, ಉಪವಾಸವು ಒಂದು ರೀತಿಯ ನೈತಿಕ ‘ಬ್ಲಾಕ್‌ಮೇಲ್’ ಮತ್ತು ಒತ್ತಡವಾಗಿದೆ ಎಂದು ಹೇಳಿದ್ದರು. ಉಪವಾಸ ಎದುರಾಳಿಯನ್ನು ಅಸಾಧ್ಯ ಪರಿಸ್ಥಿತಿಗೆ ತಳ್ಳುತ್ತವೆ — ಅಂದರೆ ‘ಒಂದೋ ಹಿಂದೆ ಸರಿಯಿರಿ, ಇಲ್ಲವೇ ಯಾರಾದರೂ ಸತ್ತರೆ ಅದರ ಹೊಣೆ ಸ್ವೀಕರಿಸಿ.’ ಸ್ವತಂತ್ರ ಭಾರತದಲ್ಲಿ ಇಂತಹ ಮಾರ್ಗಗಳು ಶಾಸನಸಭೆ, ಚುನಾವಣೆಗಳು ಮತ್ತು ನ್ಯಾಯಾಂಗವನ್ನು ಬದಿಗೊತ್ತುತ್ತವೆ. ಪ್ರತಿಯೊಂದು ಗುಂಪು ತನ್ನ ಬೇಡಿಕೆಗಳಿಗಾಗಿ ಉಪವಾಸ ಅಥವಾ ಸತ್ಯಾಗ್ರಹದ ಮಾರ್ಗವನ್ನು ಅನುಸರಿಸಿದರೆ, ಪ್ರಜಾಪ್ರಭುತ್ವ ಹೆಸರಿಗಷ್ಟೇ ಉಳಿದು ಅರಾಜಕತೆ ನಿರ್ಮಾಣವಾಗುತ್ತದೆ. ಪ್ರಜಾಪ್ರಭುತ್ವ ಸಂಸ್ಥೆಗಳು ದುರ್ಬಲಗೊಳ್ಳುತ್ತವೆ ಮತ್ತು ಸರ್ವಾಧಿಕಾರದ ಅಪಾಯ ಉಂಟಾಗುತ್ತದೆ. ಭಾರತಕ್ಕೆ ಹೋರಾಟಗಳ ಜನಪ್ರಿಯ ಅಥವಾ ಭಾವನಾತ್ಮಕ ವಿಧಾನಗಳಿಗಿಂತ ಸಾಂವಿಧಾನಿಕ ನೈತಿಕತೆ, ಸಂವಿಧಾನ ಮತ್ತು ಅದರ ಪ್ರಕ್ರಿಯೆಯ ಬಗ್ಗೆ ಗೌರವದ ಅಗತ್ಯವಿದೆ. ರಾಜಕೀಯ ಮತ್ತು ಸಾಂವಿಧಾನಿಕ ಮಾರ್ಗಗಳ ಮೂಲಕವೇ ಬೆನ್ನತ್ತಬೇಕು, ಶಿಕ್ಷಣ ನೀಡಬೇಕು, ಹೋರಾಟ ಹಾಗೂ ಸಂಘಟನೆ ಮಾಡಬೇಕು ಎಂದು ಹೇಳಿದರು.

ಡಾ. ರಂಗನಾಥನ್ ಅವರು ಮಂಡಿಸಿದ ಪ್ರಮುಖ ಅಂಶಗಳು

1. ಯಾವ ನಾಯಕನೂ ಪರಿಪೂರ್ಣನಲ್ಲ, ಎಷ್ಟು ಜನರ ರಾಜೀನಾಮೆ ಕೇಳುತ್ತೀರಿ?

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯನ್ನು ಕೇಳಲಾಗುತ್ತಿದೆ. ವಾಸ್ತವವಾಗಿ ನಾನು ನಿಮಗೆ ಒಂದು ಪಟ್ಟಿಯನ್ನು ನೀಡಬಲ್ಲೆ. ಈ ದೇಶದಲ್ಲಿ 543 ಸಂಸದರಿದ್ದಾರೆ, ಕೇಂದ್ರದಲ್ಲಿ 70 ಕ್ಯಾಬಿನೆಟ್ ಸಚಿವರಿದ್ದಾರೆ ಮತ್ತು ರಾಜ್ಯಗಳಲ್ಲಿ ಎಷ್ಟಿದ್ದಾರೋ ಯಾರಿಗೆ ಗೊತ್ತು. ಪ್ರತಿಯೊಬ್ಬರೂ ಪರಿಪೂರ್ಣತೆಯಿಂದ ತುಂಬಾ ದೂರವಿದ್ದಾರೆ. ರಾಜಕಾರಣಿಯಾಗಿರುವುದರಿಂದ ಪ್ರತಿಯೊಬ್ಬರೂ ಯಾವುದೋ ಒಂದು ರೀತಿಯಲ್ಲಿ ರಾಜಿ, ಸಂಧಾನ ಮಾಡಿಕೊಳ್ಳುತ್ತಾರೆ, ಮಾಡಬೇಕಾದ ಕೆಲಸವನ್ನು ಮಾಡುವುದಿಲ್ಲ ಎಂದು ನಾನು ಹೇಳುತ್ತೇನೆ. ಆದ್ದರಿಂದ ನೀವು ರಾಜೀನಾಮೆ ಕೇಳಲು ಪ್ರಾರಂಭಿಸಿದರೆ, ಈ ಪಟ್ಟಿ ಎಷ್ಟು ಬೆಳೆಯುತ್ತದೆ ಎಂದರೆ ಅದನ್ನು ತಡೆಯಲು ನಿಮಗೆ ಸಾಧ್ಯವಾಗುವುದಿಲ್ಲ.

2. ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಕೇಂದ್ರ ಸರಕಾರ ಹೊಣೆಗಾರಿಕೆ ಸ್ವೀಕರಿಸಬೇಕಿತ್ತು!

ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆಯಾದ ದಿನವೇ ಸರಕಾರ ಅದರ ಹೊಣೆ ವಹಿಸಿಕೊಳ್ಳಬೇಕಿತ್ತು. ಅದರ ಜವಾಬ್ದಾರಿಯನ್ನು ನಿಗದಿಪಡಿಸಬೇಕಿತ್ತು. ಅಷ್ಟೇ ಅಲ್ಲದೆ, ಸರಕಾರ ಬಡ ಮಕ್ಕಳಿಗೆ 5 ರಿಂದ 1೦,೦೦೦ ರೂಪಾಯಿ ಆರ್ಥಿಕ ಪರಿಹಾರ ನೀಡಬೇಕಿತ್ತು. ಇದನ್ನು ನಾನು ಆಗಲೇ ಹೇಳಿದ್ದೆ. ಪ್ರಶ್ನೆಪತ್ರಿಕೆ ಸೋರಿಕೆಯಾಗಿ 23 ಲಕ್ಷ ವಿದ್ಯಾರ್ಥಿಗಳು ಕಷ್ಟಕ್ಕೊಳಗಾದರು. ಅನೇಕ ಬಡ ಮಕ್ಕಳು ಆತ್ಮಹತ್ಯೆ ಮಾಡಿಕೊಂಡರು. ಅದರ ಹೊಣೆ ಎಲ್ಲಿದೆ? ಶಿಕ್ಷಣ ಸಚಿವರ ರಾಜೀನಾಮೆ ಬೇಡಿಕೆ ಸರಿಯಾಗಿದೆ.

3. ಹೋರಾಟಗಾರರು ಸರ್ವೋಚ್ಚ ನ್ಯಾಯಾಲಯದ ನಿಷ್ಕ್ರಿಯತೆಯನ್ನು ಏಕೆ ಪ್ರತಿಭಟಿಸುತ್ತಿಲ್ಲ?

ಹೋರಾಟಗಾರರು ತಪ್ಪು ಸಾಂವಿಧಾನಿಕ ಸಂಸ್ಥೆಯನ್ನು (ಸರಕಾರವನ್ನು) ವಿರೋಧಿಸುತ್ತಿದ್ದಾರೆ. ಅವರು ಸರ್ವೋಚ್ಚ ನ್ಯಾಯಾಲಯದ ನಿಷ್ಕ್ರಿಯತೆಯನ್ನು ಪ್ರತಿಭಟಿಸಬೇಕು. ಕೇವಲ ಸರ್ವೋಚ್ಚ ನ್ಯಾಯಾಲಯ ಮಾತ್ರ ಸರಕಾರಕ್ಕೆ ಪ್ರತಿಯೊಬ್ಬ ವಿದ್ಯಾರ್ಥಿಗೂ ಪರಿಹಾರ ನೀಡಲು, ಸಂಬಂಧಪಟ್ಟವರನ್ನು ವಜಾಗೊಳಿಸಲು ಮತ್ತು ಉತ್ತಮ ವ್ಯವಸ್ಥೆಯನ್ನು ನಿರ್ಮಿಸಲು ಆದೇಶ ನೀಡಬಹುದು.

4. ಸರಕಾರಕ್ಕೆ ಇದು ನಾಚಿಕೆಗೇಡಿನ ಸಂಗತಿ!

ಪ್ರಶ್ನೆಪತ್ರಿಕೆ ಸೋರಿಕೆಯಾದ ದಿನವೇ ನಾನು ಹೇಳಿದ್ದೆ, ‘ನೀಟ್’ ಪರೀಕ್ಷೆಗಾಗಿ 23 ಲಕ್ಷ ಪ್ರಶ್ನೆಪತ್ರಿಕೆಗಳನ್ನು ಮುಂಚಿತವಾಗಿಯೇ ಮುದ್ರಿಸಿಡುವುದು ಅರ್ಥಹೀನ. ಏಕೆಂದರೆ ಇದರಿಂದ ಪ್ರಶ್ನೆಪತ್ರಿಕೆ ಸೋರಿಕೆಯಾಗುವ ಸಾಧ್ಯತೆ ನಿರ್ಮಾಣವಾಗುತ್ತದೆ. ಮುಂದಿನ ವರ್ಷದಿಂದ ಇದನ್ನು ಡಿಜಿಟಲ್ ಮಾಡುತ್ತೇವೆ ಎಂದು ನೀವು ಹೇಳುತ್ತಿದ್ದೀರಿ, ಹಾಗಾದರೆ ಸದ್ಯ ನೀವು ನಿದ್ರಿಸುತ್ತಿದ್ದೀರಾ? 15 ಲಕ್ಷ ವಿದ್ಯಾರ್ಥಿಗಳು ‘ಜೆಇಇ ಮೇನ್ಸ್’ (JEE Mains – ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆ) ಬರೆಯುತ್ತಾರೆ. ಅದು ಮುದ್ರಿತ ಪ್ರಶ್ನೆಪತ್ರಿಕೆ ಮೂಲಕ ನಡೆಯುವುದಿಲ್ಲ, ಅದು ಗಣಕೀಕೃತ (Computerised) ಆಗಿರುತ್ತದೆ. 15 ಲಕ್ಷ ಜನರಿಗಾಗಿ ಡಿಜಿಟಲ್ ಮಾಡಲು ಸಾಧ್ಯವಾದಾಗ, 20 ಲಕ್ಷ ಜನರಿಗಾಗಿಯೂ ಮಾಡಬಹುದು. ಪ್ರಧಾನಮಂತ್ರಿಯವರೇ ‘ಅಭಿನಂದನೆಗಳು! ನೀವು ‘ನೀಟ್’ ಪರೀಕ್ಷೆಯನ್ನು ಮತ್ತೆ ಆಯೋಜಿಸಿದ್ದೀರಿ’ ಎಂದು ಹೇಳುವುದು ಒಂದು ಟ್ರ್ಯಾಜಿಡಿ (ದುರಂತ). ಇದು ಸಂಭವಿಸಿದ್ದೇ ನಾಚಿಕೆಗೇಡಿನ ಸಂಗತಿ ಎಂಬುದನ್ನು ನಾವು ಏಕೆ ನೆನಪಿಟ್ಟುಕೊಳ್ಳುವುದಿಲ್ಲ?

5. ಅಭಿಜಿತ್ ದೀಪಕೆ ಅವರು ಅರವಿಂದ್ ಕೇಜ್ರಿವಾಲ್ ಅವರ, ಹಾಗೂ ಸೋನಮ್ ವಾಂಗ್ಚುಕ್ ಅವರು ಅಣ್ಣಾ ಹಜಾರೆ ಅವರ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ!

2011 ರಲ್ಲಿ ಭ್ರಷ್ಟಾಚಾರದ ವಿರುದ್ಧ ಯಾವ ರೀತಿ ಅರವಿಂದ್ ಕೇಜ್ರಿವಾಲ್ ಮತ್ತು ಅಣ್ಣಾ ಹಜಾರೆ ಹೋರಾಟ ನಡೆಸಿದ್ದರೋ, ಅದೇ ಸ್ವರೂಪದ ಹೋರಾಟವನ್ನು ಇಂದು ಮಾಡಲಾಗುತ್ತಿದೆ. ‘ಕಾಕ್ರೋಚ್ ಜನತಾ ಪಕ್ಷ’ದ ಮುಖ್ಯಸ್ಥ ಅಭಿಜಿತ್ ದೀಪಕೆ ಅವರು ಅರವಿಂದ್ ಕೇಜ್ರಿವಾಲ್ ಆಗಿದ್ದರೆ, ಉಪವಾಸಕ್ಕೆ ಕುಳಿತಿರುವ ಸೋನಮ್ ವಾಂಗ್ಚುಕ್ ಅವರು ಅಣ್ಣಾ ಹಜಾರೆ ಅವರ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

ಸಂಪಾದಕೀಯ ನಿಲುವು

ಯಾವ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರ ಹೆಸರನ್ನು ಜಪಿಸುತ್ತಾ, ಹೋರಾಟದ ಮೂಲಕ ಸಂವಿಧಾನವನ್ನು ಉಲ್ಲೇಖಿಸಲಾಗುತ್ತಿದೆಯೋ, ಅದೇ ಅಂಬೇಡ್ಕರ್ ಅವರು "ಉಪವಾಸ ಎಂಬ ಅಸ್ತ್ರ ಸ್ವತಂತ್ರ ಭಾರತದಲ್ಲಿ ಅಗತ್ಯವಿಲ್ಲ" ಎಂದು ಸ್ಪಷ್ಟಪಡಿಸುತ್ತಾ ಅದನ್ನು ‘ಅರಾಜಕತೆಯ ವ್ಯಾಕರಣ’ ಎಂದು ಕರೆದಿದ್ದರು. ಡಾ. ರಂಗನಾಥನ್ ಅವರ ಈ ಮಾತಿನ ಬಳಿಕ, ತಮ್ಮನ್ನು ಡಾ. ಅಂಬೇಡ್ಕರ್ ಅವರ ಅನುಯಾಯಿಗಳು ಎಂದು ಕರೆದುಕೊಳ್ಳುವ ಹೋರಾಟಗಾರರ ನಕಲಿ ಅಂಬೇಡ್ಕರ್ ಪ್ರೇಮವನ್ನು ತೋರಿಸುತ್ತದೆ ಎಂದೇ ಹೇಳಬೇಕಾಗಿದೆ!