ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ವಿಷಯವಾಗಿ ಪಾಕಿಸ್ತಾನಕ್ಕೆ ಭಾರತದ ತಿರುಗೇಟು

ನ್ಯೂಯಾರ್ಕ್ (ಅಮೆರಿಕ): ಗಡಿಯಾಚೆಗಿನ ಭಯೋತ್ಪಾದನೆಯಿಂದಾಗಿ ಸಹಕಾರದ ಆಧಾರವೇ ಮುಗಿದಿದೆ ಎಂದು ಭಾರತದ ರಾಯಭಾರಿ ಪಿ. ಹರೀಶ್ ಅವರು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ವಿಷಯವಾಗಿ ಪಾಕಿಸ್ತಾನಕ್ಕೆ ತಿರುಗೇಟು ನೀಡಿದರು. ಪರಸ್ಪರ ನಂಬಿಕೆ ಮತ್ತು ಸದ್ಭಾವನೆ ಇಲ್ಲದೆ ಸಿಂಧೂ ಒಪ್ಪಂದದಡಿಯಲ್ಲಿ ಸಹಕಾರ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
India Dismantles Pakistan's Propaganda at the UN: Terrorism Ends Trust, Not India's Resolve
India firmly rejected Pakistan's narrative at the UN Security Council, declaring that cross-border terrorism has destroyed the foundation of cooperation under the Indus Waters Treaty.… pic.twitter.com/Xgeo2tV8TJ
— Sanatan Prabhat (@SanatanPrabhat) July 23, 2026
ಪಿ. ಹರೀಶ್ ಅವರು ಮಾತನಾಡುತ್ತಾ, ಪಾಕಿಸ್ತಾನವು ವಿಶ್ವಸಂಸ್ಥೆಯ ವೇದಿಕೆಯನ್ನು ಸುಳ್ಳು ವರದಿಗಳನ್ನು ಹರಡಲು ಬಳಸಿಕೊಂಡಿದೆ. ಸಿಂಧೂ ನೀರು ಹಂಚಿಕೆ ಒಪ್ಪಂದದ ಕುರಿತು ಭಾರತದ ನಿಲುವು ಸ್ಪಷ್ಟವಾಗಿದೆ ಮತ್ತು ಸ್ಥಿರವಾಗಿದೆ. ಗಡಿಯಾಚೆಗಿನ ಭಯೋತ್ಪಾದನೆಯನ್ನು ಸರಕಾರದ ನೀತಿಯ ಸಾಧನವಾಗಿ ಬಳಸಿಕೊಳ್ಳುತ್ತಿರುವಾಗ, ಪರಸ್ಪರ ನಂಬಿಕೆ ಮತ್ತು ಸದ್ಭಾವನೆಯ ಆಧಾರದ ಮೇಲೆ ಸಹಕಾರವನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಕೇಂದ್ರಾಡಳಿತ ಪ್ರದೇಶವಾದ ಜಮ್ಮು- ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿತ್ತು, ಆಗಿದೆ ಮತ್ತು ಎಂದೆಂದಿಗೂ ಭಾರತದ ಭಾಗವಾಗಿರಲಿದೆ. ಪಾಕಿಸ್ತಾನವು ಈ ಸಾಂವಿಧಾನಿಕ ಮತ್ತು ಕಾನೂನಾತ್ಮಕ ವಾಸ್ತವವನ್ನು ಬೇಕೂಂತ ನಿರ್ಲಕ್ಷಿಸುತ್ತಿದೆ ಎಂದು ಹೇಳಿದರು.
ಮಾನವೀಯತೆಯ ಆಧಾರದ ಮೇಲೆ ಪಾಕಿಸ್ತಾನಕ್ಕೆ ಪ್ರವಾಹದ ಮುನ್ನೆಚ್ಚರಿಕೆ ನೀಡುತ್ತಲೇ ಇರುತ್ತೇವೆ! – ಭಾರತ
ನಾವು ಮಾನವೀಯತೆಯ ಆಧಾರದ ಮೇಲೆ ಪಾಕಿಸ್ತಾನಕ್ಕೆ ಪ್ರವಾಹದ ಮುನ್ನೆಚ್ಚರಿಕೆಗಳನ್ನು ನೀಡುತ್ತಲೇ ಇರುತ್ತೇವೆ, ಎಂದು ಭಾರತ ಸ್ಪಷ್ಟಪಡಿಸಿದೆ. ಭಾರತದ ಪಾಲಿನ ಜಲಸಂಪನ್ಮೂಲಗಳ ಉತ್ತಮ ಬಳಕೆಗಾಗಿ ಭಾರತದ ಕಡೆಯಿಂದ ಜಲವಿದ್ಯುತ್ ಯೋಜನೆಗಳನ್ನು ತ್ವರಿತಗೊಳಿಸಲಾಗುವುದು ಎಂದು ಭಾರತ ತಿಳಿಸಿದೆ.
ಇರಾನ್ ಸ್ಥಿತಿ ಅತ್ಯಂತ ಶೋಚನೀಯ ! – ಡೊನಾಲ್ಡ್ ಟ್ರಂಪ್
ಗಲ್ಲಿಗೇರಿಸಬಹುದು, ಎಂಬುದು ತಿಳಿದಿದ್ದರೂ ನಾನು ಬಾಂಗ್ಲಾದೇಶಕ್ಕೆ ಹಿಂದಿರುಗುತ್ತೇನೆ! – ಮಾಜಿ ಪ್ರಧಾನಿ ಶೇಖ ಹಸೀನಾ, ಬಾಂಗ್ಲಾದೇಶ
ಇಬ್ಬರು ಜಿಹಾದಿ ಭಯೋತ್ಪಾದಕರ ಮನೆಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆ : Bulldozer Operation
15 ವರ್ಷಕ್ಕಿಂತ ಕಡಿಮೆ ಮಕ್ಕಳಿಗೆ ಸೋಷಿಯಲ್ ಮೀಡಿಯಾ ನಿಷೇಧ: ಫ್ರಾನ್ಸ್ : France Social Media Ban
ಅಮೆರಿಕ: ಧರ್ಮದತ್ತ ಒಲವು ತೋರುತ್ತಿರುವ ಜೆನ್-ಜ಼ಿ ಹುಡುಗರು!
ಬ್ರಿಟನ್ ಸಚಿವ ಸಂಪುಟದಲ್ಲಿ ಭಾರತೀಯ ಮೂಲದ ಕನಿಷ್ಕ ನಾರಾಯಣ ಮತ್ತು ಲಿಜಾ ನಂದಿ ಅವರಿಗೆ ಸ್ಥಾನ