ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿ.ಐ.ಎಲ್.) ಅಂದರೆ ಸರಕಾರವನ್ನು ನ್ಯಾಯಾಲಯಕ್ಕೆ ಎಳೆದು ತರುವ ಪ್ರಜಾಪ್ರಭುತ್ವ ವಿರೋಧಿ ವ್ಯವಸ್ಥೆ (?)
ಇಂದು ಭಾರತದಲ್ಲಿ ೨ ರೀತಿಯ ಸಂಸ್ಥೆಗಳಿವೆ. ಒಂದು ಸಾಮಾಜಿಕ ಸಂಸ್ಥೆ, ಇದು ಸಮಾಜದ ಹಣದಿಂದ ಸಮಾಜಕ್ಕಾಗಿ ಕೆಲಸ ಮಾಡುತ್ತದೆ ಮತ್ತು ಎರಡನೇಯದು ಸ್ವಯಂಸೇವಿ ಸಂಸ್ಥೆ, ಇದು ಸಮಾಜಕ್ಕಾಗಿ ಅಲ್ಲ, ಬದಲಿಗೆ ಕೆಲವು ವ್ಯಕ್ತಿಗಳ ವೈಯಕ್ತಿಕ ಹಿತಾಸಕ್ತಿಗಾಗಿ ವಿದೇಶಿ ಹಣವನ್ನು ಅಥವಾ ಕೆಲವು ಜನರ ವೈಯಕ್ತಿಕ ಹಣವನ್ನು ಬಳಸಿಕೊಂಡು ಕೆಲಸ ಮಾಡುತ್ತದೆ.