ಆರೋಗ್ಯಕರ ಜೀವನಕ್ಕಾಗಿ ವ್ಯಾಯಾಮ – ೪೨
ಈ ಹಿಂದಿನ ಲೇಖನ ೪೧ ಓದಲು ಈ ಲಿಂಕ್‌ಮೇಲೆ ಕ್ಲಿಕ್ ಮಾಡಿ : https://sanatanprabhat.org/kannada/177383.html
‘ಆಧುನಿಕ ಜೀವನಶೈಲಿಯಿಂದ ಉಂಟಾಗುವ ಅನೇಕ ದೈಹಿಕ ಸಮಸ್ಯೆಗಳಿಗೆ ‘ವ್ಯಾಯಾಮ’ ಒಂದು ಪರಿಣಾಮಕಾರಿ ಉಪಾಯವಾಗಿದೆ. ಪ್ರಾಚೀನ ಗ್ರಂಥಗಳಲ್ಲಿನ ವ್ಯಾಯಾಮದ ತತ್ವಜ್ಞಾನವು ಇಂದಿಗೂ ಅಷ್ಟೇ ಉಪಯುಕ್ತವಾಗಿದ್ದು, ನಾವು ಅದರಿಂದ ಪ್ರೇರಣೆ ಪಡೆಯಬಹುದು. ಈ ಲೇಖನಮಾಲೆಯ ಮೂಲಕ ನಾವು ‘ವ್ಯಾಯಾಮದ ಮಹತ್ವ, ವ್ಯಾಯಾಮದ ಬಗೆಗಿನ ಸಂದೇಹಗಳ ನಿವಾರಣೆ, ‘ಅರ್ಗೋನಾಮಿಕ್ಸ್’ ತತ್ವ ಮತ್ತು ವ್ಯಾಧಿಗನುಗುಣವಾಗಿ ಯೋಗ್ಯ ವ್ಯಾಯಾಮ’, ಇವುಗಳ ಬಗ್ಗೆ ಮಾಹಿತಿಯನ್ನು ನೀಡಲಿದ್ದೇವೆ. ವ್ಯಾಯಾಮದ ಮಾಧ್ಯಮದಿಂದ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಈ ಪ್ರಯಾಣವು ಎಲ್ಲರಿಗೂ ಖಂಡಿತವಾಗಿಯೂ ಪ್ರೇರಣಾದಾಯಿಯಾಗಲಿದೆ !

೧. ನರಗಳ ಕಾಯಿಲೆಗಳ ಕಾರಣಗಳು
೧ ಇ. ಅಯೋಗ್ಯ ಭಂಗಿಗಳಿಂದ ಸ್ನಾಯು ಮತ್ತು ಕೀಲುಗಳ ಮೇಲಾಗುವ ಪರಿಣಾಮಗಳು : ನಾವು ಸೇವೆ ಮಾಡುವಾಗ ಹಲವು ಬಾರಿ ಅಯೋಗ್ಯ ರೀತಿಯಲ್ಲಿ ಕುಳಿತುಕೊಳ್ಳುತ್ತೇವೆ ಅಥವಾ ಅಯೋಗ್ಯ ಭಂಗಿಗಳಲ್ಲಿ ಕೆಲಸ ಮಾಡುತ್ತೇವೆ. ಇದರಿಂದಾಗಿ ಸ್ನಾಯುಗಳು ಮತ್ತು ಕೀಲುಗಳು ದೀರ್ಘಕಾಲದ ವರೆಗೆ ಒಂದೇ ಸ್ಥಿತಿಯಲ್ಲಿ ಇರುತ್ತವೆ ಅಥವಾ ಅವುಗಳ ಮೇಲೆ ಅತಿಯಾದ ಒತ್ತಡ ಬೀಳುತ್ತದೆ. ಇದರ ಪರಿಣಾಮವಾಗಿ ಆ ಭಾಗಗಳಲ್ಲಿ ಬಾವು ಕಾಣಿಸಿಕೊಳ್ಳುತ್ತದೆ. ಈ ಊತವು ಕ್ರಮೇಣ ನರಗಳ ಮೇಲೆ ಒತ್ತಡ ಹೇರಲು ಪ್ರಾರಂಭಿಸುತ್ತದೆ. ಒಮ್ಮೆ ನರಗಳಿಗೆ ಹಾನಿಯಾದರೆ ಅಥವಾ ನೋವು ಪ್ರಾರಂಭವಾದರೆ, ಅದು ಗುಣಮುಖವಾಗಲು ಹಲವು ತಿಂಗಳುಗಳೇ ಬೇಕಾಗಬಹುದು.
೨. ಕೀಲು, ಸ್ನಾಯು ಮತ್ತು ನರಗಳ ಕಾಯಿಲೆಗಳನ್ನು ತಡೆಗಟ್ಟಲು ಮಾಡಬೇಕಾದ ಪ್ರಯತ್ನಗಳು

ದೈಹಿಕವಾಗಿ ಆರೋಗ್ಯವಾಗಿರುವ ವ್ಯಕ್ತಿಗಳು ನರಗಳ ಕಾಯಿಲೆ ಬರದಂತೆ ತಡೆಯಲು ಕೆಲವು ಸರಳ ವ್ಯಾಯಾಮ ಗಳನ್ನು ಮಾಡುವುದು ಮತ್ತು ದೈನಂದಿನ ಕೆಲಸದ ಶೈಲಿಯನ್ನು ಸರಿಯಾಗಿ ಇಟ್ಟು ಕೊಳ್ಳುವುದು ಸಾಕಾಗುತ್ತದೆ.
ಅ. ಸಾಮಾನ್ಯ ದೈಹಿಕ ವ್ಯಾಯಾಮಗಳು ಮತ್ತು ಸೂರ್ಯನಮಸ್ಕಾರಗಳನ್ನು ಮಾಡುವುದರಿಂದ ದೇಹದ ಎಲ್ಲಾ ಕೀಲುಗಳು ಸುಗಮ ವಾಗಿ ಚಲಿಸುತ್ತವೆ
ಆ. ತೂಕ ಎತ್ತುವ ವ್ಯಾಯಾಮಗಳು ಅಥವಾ ದಂಡ-ಬೈಠಕ್ ಮಾಡುವುದರಿಂದ ಸ್ನಾಯುಗಳು ಬಲಗೊಳ್ಳುತ್ತವೆ. ಬಲಿಷ್ಠವಾದ ಸ್ನಾಯುಗಳು ನರಗಳಿಗೆ ಉತ್ತಮ ಆಧಾರವನ್ನು ನೀಡುತ್ತವೆ.
ಇ. ಪ್ರತಿದಿನ ಕೆಲಸ ಮಾಡುವಾಗ ಸರಿಯಾದ ಭಂಗಿಗಳನ್ನು ಅನುಸರಿಸುವ ಮೂಲಕ ನಾವು ಕೀಲು, ಸ್ನಾಯು ಮತ್ತು ನರಗಳ ಕಾಯಿಲೆಗಳನ್ನು ಖಂಡಿತವಾಗಿಯೂ ತಡೆಗಟ್ಟಬಹುದು.
ದೇವರು ಈ ದೇಹವನ್ನು ಸದೃಢವಾಗಿಡಲು ನಮಗೆ ನೀಡಿರುವ ಮಾರ್ಗಗಳು ಅತ್ಯಂತ ಸರಳವಾಗಿವೆ. ಆದರೆ ನಾವು ಅವುಗಳಿಗೆ ಸರಿಯಾದ ಮಹತ್ವ ನೀಡದ ಕಾರಣ ನಮಗೆ ನಾವೇ ಹಾನಿ ಮಾಡಿಕೊಳ್ಳುತ್ತಿದ್ದೇವೆ. (ಮುಕ್ತಾಯ)
– ಶ್ರೀ. ನಿಮಿಷ ಮ್ಹಾತ್ರೆ, ಭೌತಿಕೋಪಚಾರ ತಜ್ಞ (ಫಿಜಿಯೋಥೆರಪಿಸ್ಟ್), ಫೋಂಡಾ, ಗೋವಾ. (೨೯.೧೨.೨೦೨೪)
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಬಿಳಿ ಸೆರಗಿನ ಸಮಸ್ಯೆ (ಲ್ಯುಕೋರಿಯಾ) ಮತ್ತು ಆಯುರ್ವೇದ
ವ್ಯಾಯಾಮದಲ್ಲಿ ನೈಸರ್ಗಿಕ ಗುಣಗಳ ಮಹತ್ವ !
ಮಕ್ಕಳ ಅನಾರೋಗ್ಯದ ಬಗ್ಗೆ ವಹಿಸಬೇಕಾದ ಮುನ್ನೆಚ್ಚರಿಕೆಗಳು !
ಟ್ರೆಂಡ್ – ತೂಕ ಇಳಿಸುವ ಸೆಳೆತ ಮತ್ತು ನಾವು !
ಕೋಟಿ ಕೋಟಿ ನಮನಗಳು