ಅಗ್ನಿದೇವನ ಮಾಧ್ಯಮದಿಂದ ಬಂದ ಅನುಭೂತಿ !
ಸಪ್ತರ್ಷಿಗಳು ನಾಡಿಪಟ್ಟಿಯಲ್ಲಿ ಉಲ್ಲೇಖಿಸಿದಂತೆ ೧೬.೪.೨೦೨೦ ರಂದು ಗೋವಾದ ರಾಮನಾಥಿಯ ಸನಾತನದ ಆಶ್ರಮದಲ್ಲಿ ‘ಸಂಜೀವನಿ ಹವನ’ವನ್ನು ಆಯೋಜಿಸಲಾಗಿತ್ತು. ‘ ಕೊರೊನಾ ಸೊಂಕು ಹರಡಬಾರದು ಮತ್ತು ಈ ಸಂಕಟದಿಂದ ಸಾಧಕರ ರಕ್ಷಣೆ ಆಗಬೇಕು’, ಎನ್ನುವ ಉದ್ದೇಶಕ್ಕಾಗಿ ಈ ಹವನ ಮಾಡಬೇಕಾಗಿತ್ತು.

೧. ಪುರೋಹಿತ ಸಾಧಕನು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಅವರಿಗೆ ‘ನಿಮಗಾಗಿ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಅವರಿಗಾಗಿ ಸಂಪಿಗೆ ಹೂವಿನ ಮಾಲೆಯನ್ನು ಮಾಡಿ ಕೊಡಲೇ ?’, ಎಂದು ಕೇಳುವುದು
೧೬.೪.೨೦೨೦ ರಂದು ಒಬ್ಬ ಪುರೋಹಿತ ಸಾಧಕನು ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಅವರ ಬಳಿಗೆ ಕೆಲವು ಸಂಪಿಗೆ ಹೂವುಗಳನ್ನು ತೆಗೆದುಕೊಂಡು ಬಂದನು. ಅವನು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಅವರಿಗೆ ‘ನಮ್ಮ ಬಳಿ ಕೆಲವು ಸಂಪಿಗೆ ಹೂವುಗಳಿವೆ. ನೀವು ಯಜ್ಞಕುಂಡದ ಬಳಿ ಕುಳಿತುಕೊಳ್ಳಲಿದ್ದೀರಿ, ಹಾಗಾಗಿ ನಿಮಗಾಗಿ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಅವರಿಗಾಗಿ ಈ ಹೂವುಗಳ ಮಾಲೆಯನ್ನು ಮಾಡಿಕೊಡಲೇನು ?’ ಎಂದು ಕೇಳಿದನು. ಆಗ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಅವರು “ನೀನು ಒಮ್ಮೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಅವರಲ್ಲಿ ಕೇಳಿ ನೋಡು’ ಎಂದು ಹೇಳಿದರು. ನಂತರ ಆ ಸಾಧಕನು ಸೇವೆಯ ಗಡಿಬಿಡಿಯಲ್ಲಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಅವರಿಗೆ ಕೇಳುವುದನ್ನು ಮರೆತನು.
೨. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಅವರಿಗೆ ಸೂಕ್ಷ್ಮದಲ್ಲಿ ‘ಯಜ್ಞದ ಜ್ವಾಲೆಗಳಿಂದ ಸಂಪಿಗೆ ಹೂವುಗಳು ಕಾರಂಜಿಯಂತೆ ಹೊರಬರುತ್ತಿವೆ’, ಎಂದು ಕಾಣುವುದು
|
|
|
ಸಂಜೆ ಯಜ್ಞ ನಡೆಯುವ ಸ್ಥಳದಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಕುಳಿತಿದ್ದರು. ಆಗ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಅವರಿಗೆ ಸೂಕ್ಷ್ಮದಿಂದ ‘ಯಜ್ಞದ ಜ್ವಾಲೆಗಳಿಂದ ಅನೇಕ ಸಂಪಿಗೆಯ ಹೂವುಗಳು ಕಾರಂಜಿಯಂತೆ ಹೊರ ಬರುತ್ತಿದ್ದಂತೆ’ ಕಾಣುತ್ತಿತ್ತು. ಅವರಿಗೆ ಆಶ್ಚರ್ಯವೆನಿಸಿತು. ಅವರು ತಕ್ಷಣವೇ ಈ ವಿಷಯವನ್ನು ತಮ್ಮ ಜೊತೆಗಿದ್ದ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಅವರಿಗೆ ಹೇಳಿದರು. ಆಗ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಅವರಿಗೆ ಮಧ್ಯಾಹ್ನ ಪುರೋಹಿತ ಸಾಧಕನೊಂದಿಗೆ ನಡೆದ ಸಂಭಾಷಣೆಯ ನೆನಪಾಯಿತು ಮತ್ತು ಅವರು ನಡೆದ ಆ ಘಟನೆಯನ್ನು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಅವರಿಗೆ ವಿವರಿಸಿದರು.
೩. ‘ನಾವು ಮಾಡುತ್ತಿರುವ ಪ್ರತಿಯೊಂದು ವಿಚಾರ, ಕೃತಿ ಅಥವಾ ನಮ್ಮ ಬಾಯಿಯಿಂದ ಬರುವ ಪ್ರತಿಯೊಂದು ಮಾತಿನ ದಾಖಲೆಯನ್ನು ಭಗವಂತನು ವಿಶ್ವಮನಸ್ಸು ಮತ್ತು ವಿಶ್ವಬುದ್ಧಿಯಲ್ಲಿ ಇಡುತ್ತಾನೆ, ಎನ್ನುವುದರ ಸಾಕ್ಷಾತ್ಕಾರವಾಯಿತು’ ಎಂದು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಅವರು ಹೇಳಿದರು
ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಅವರು ಯಜ್ಞ ಸ್ಥಳದಲ್ಲಿದ್ದ ಎಲ್ಲ ಸಾಧಕರಿಗೆ, ಈ ಅನುಭೂತಿಯನ್ನು ತಿಳಿಸುತ್ತಾ ಹೀಗೆ ಹೇಳಿದರು, ‘ನಾವು ಮಾಡುತ್ತಿರುವ ಪ್ರತಿಯೊಂದು ವಿಚಾರ, ಕೃತಿ ಅಥವಾ ನಮ್ಮ ಬಾಯಿಯಿಂದ ಬರುವ ಪ್ರತಿಯೊಂದು ಮಾತು ಇವುಗಳ ದಾಖಲೆಯನ್ನು ಭಗವಂತನು ವಿಶ್ವಮನಸ್ಸು ಮತ್ತು ವಿಶ್ವಬುದ್ಧಿಯಲ್ಲಿ ಇಡುತ್ತಿರುತ್ತಾನೆ. ನಾವು ಯಾವುದೇ ಕಾರಣದಿಂದ ಮರೆತರೂ ದೇವರು ಅದನ್ನು ಮರೆಯುವುದಿಲ್ಲ. ಇಂದು ಅಗ್ನಿನಾರಾಯಣನು ನಮಗೆ ಸಂಪಿಗೆಯ ಹೂವುಗಳ ನೆನಪು ಮಾಡಿಕೊಟ್ಟಿದ್ದನು. ಹೂವಿನ ಮಾಲೆ ಮಾಡುವುದು ಕೇವಲ ಒಂದು ನೆಪವಾಗಿತ್ತು. ದೇವರಿಗೆ ನಮ್ಮಿಂದ ಈ ಹೂವುಗಳನ್ನು ಅರ್ಪಿಸಿಕೊಳ್ಳುವ ಇಚ್ಛೆ ಇದ್ದಿರಬಹುದು. ‘ಇದರ ಹಿಂದಿನ ಕಾರ್ಯಕಾರಣ ಭಾವ ಏನೇ ಇದ್ದರೂ ದೇವರು ನಮ್ಮಿಂದ ಆ ಕರ್ಮವು ತಪ್ಪದಂತೆ ನೋಡಿಕೊಳ್ಳುತ್ತಾನೆ. ಅದಕ್ಕಾಗಿ ನಾವು ಭಗವಂತನ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞರಾಗಿದ್ದೇವೆ’.
ಸಾಧಕರಿಗೆ ಅಗ್ನಿನಾರಾಯಣನ ಮಾಧ್ಯಮದಿಂದ ಸಂಪಿಗೆ ಹೂವುಗಳ ಮೂಲಕ ದೇವಿತತ್ತ್ವದ ಆಶೀರ್ವಾದ ಲಭಿಸುವುದು
ನಂತರ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಶ್ರೀಚಿತ್‌ಶಕ್ತಿ ಮತ್ತು (ಸೌ.) ಅಂಜಲಿ ಗಾಡಗೀಳ ಅವರು ಅಗ್ನಿನಾರಾಯಣನಿಗೆ ಸಂಪಿಗೆ ಹೂವುಗಳನ್ನು ಅರ್ಪಿಸಿ, ಭಾವಪೂರ್ಣವಾಗಿ ಯಜ್ಞ ಕುಂಡದ ಪೂಜೆ ಮಾಡಿದರು. ಸಂಪಿಗೆ ಹೂವು ದೇವಿತತ್ತ್ವದ ಸಂಕೇತವಾಗಿದೆ. ಸಾಧಕರಿಗೆ ಅಗ್ನಿನಾರಾಯಣನ ಮಾಧ್ಯಮದಿಂದ ಸಂಪಿಗೆ ಹೂವುಗಳ ಮೂಲಕ ದೇವಿತತ್ತ್ವದ ಆಶೀರ್ವಾದ ಲಭಿಸಿತು. ಯಜ್ಞಸ್ಥಳದಲ್ಲಿದ್ದ ಸಂತರು ಯಜ್ಞಕುಂಡಕ್ಕೆ ಹೂವುಗಳನ್ನು ಅರ್ಪಿಸುವ ಮೊದಲೇ ಸೂಕ್ಷ್ಮದಿಂದ ಸಂಪಿಗೆ ಹೂವಿನ ಸುಗಂಧವನ್ನು ಅನುಭವಿಸಿದ್ದರು. ಇದೆಲ್ಲವೂ ಆ ಅಗ್ನಿ ನಾರಾಯಣನ ಕೃಪೆಯಾಗಿದೆ.
– ಸಂಗ್ರಾಹಕ : ಓರ್ವ ಸಾಧಕ, ಸನಾತನ ಆಶ್ರಮ, ರಾಮನಾಥಿ, ಗೋವಾ.


ದೇಶದ ದೇವಾಲಯಗಳಿಗಾಗಿ ಪ್ರತ್ಯೇಕ ‘ಸನಾತನ ಸಂರಕ್ಷಣಾ ಮಂಡಳಿ’ ಅಥವಾ ಸಮಿತಿಯನ್ನು ಸ್ಥಾಪಿಸಬೇಕು! : Shankaracharya Sadanand Saraswati
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !
ಆಧ್ಯಾತ್ಮಿಕ ಉಪಾಯಗಳ ವಿಷಯದಲ್ಲಿ ಇದನ್ನು ನೆನಪಿನಲ್ಲಿಡಿ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರು ಸಾಧಕರಿಗೆ ಮಾಡಿದ ಮಾರ್ಗದರ್ಶನ !