ವಾಸ್ತುಶಾಸ್ತ್ರ ವಿಷಯದ ಲೇಖನಮಾಲೆ : ಲೇಖನ ೧೬
ಮನೆಯ ಎತ್ತರಕ್ಕಿಂತ ದುಪ್ಪಟ್ಟು ಅಂತರಕ್ಕಿಂತ ಹೆಚ್ಚಿನ ದೂರದಲ್ಲಿರುವ ವೇಧದಿಂದ ದೋಷವು ತಗಲುವುದಿಲ್ಲ. – ಶ್ರೀ. ಶ್ರೇಯಸ ಪಿಸೋಳಕರ
ಹಿಂದಿನ ವಾರದ ಲೇಖನದಲ್ಲಿ ನಾವು ಪ್ರವೇಶದ್ವಾರದ ವಿವಿಧ ವಿಧಗಳ ಬಗ್ಗೆ ತಿಳಿದುಕೊಂಡೆವು. ಅದಕ್ಕನುಸಾರ ನಾವು ನಮ್ಮ ವಾಸ್ತುವಿನ ಪ್ರವೇಶವನ್ನು ನಿಗದಿಪಡಿಸುವುದು ಆವಶ್ಯಕವಾಗಿರುತ್ತದೆ. ಈ ಲೇಖನದಲ್ಲಿ ನಾವು ‘ದ್ವಾರವೇಧ’ದ ಬಗ್ಗೆ ತಿಳಿದುಕೊಳ್ಳುವವರಿದ್ದೇವೆ.

ವೇಧ ಎಂದರೆ ಅಡಚಣೆ. ದ್ವಾರವೇಧ ಎಂದರೆ ಬಾಗಿಲಿನ ಎದುರಿಗಿನ ಅಡಚಣೆ. ನಮ್ಮ ಮನೆಯ ಪ್ರವೇಶದ್ವಾರದ ಮುಂದೆ ಕೆಲವು ವಸ್ತುಗಳು ಅಡ್ಡ ಬಂದಾಗ, ಉದಾಹರಣೆಗೆ – ಮರ, ಕಂಬ, ತಗ್ಗು ಇತ್ಯಾದಿ, ಅದನ್ನು ‘ದ್ವಾರವೇಧ’ ಎಂದು ಕರೆಯುತ್ತಾರೆ. ವಾಸ್ತುಶಾಸ್ತ್ರದಲ್ಲಿ ಈ ದ್ವಾರವೇಧದ ವಿವಿಧ ವಿಧಗಳನ್ನು ಹೇಳಿದ್ದಾರೆ. ಅದೇ ರೀತಿ ಅವುಗಳ ಪರಿಣಾಮಗಳೂ ಭಿನ್ನವಾಗಿವೆ. ಅವುಗಳ ಬಗ್ಗೆ ಈಗ ಅಧ್ಯಯನ ಮಾಡೋಣ.
ಈ ಹಿಂದಿನ ಲೇಖನ- ೧೫ ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ : https://sanatanprabhat.org/kannada/177373.html
೧. ‘ಮತ್ಸ್ಯಪುರಾಣ’ಕ್ಕನುಸಾರ ವೇಧದ ವಿಧಗಳು ಮತ್ತು ಅದರ ಪರಿಣಾಮಗಳು
‘ಮತ್ಸ್ಯಪುರಾಣ’ದ ಪ್ರಕಾರ ವೇಧದ ವಿಧಗಳು ಮತ್ತು ಅವುಗಳ ಪರಿಣಾಮಗಳು ಈ ಕೆಳಗಿನಂತಿವೆ
ತಥಾ ವಾಸ್ತುಷು ಸರ್ವತ್ರ ವೇಧಂ ದ್ವಾರಸ್ಯ ವರ್ಜಯೇತ್ |
ದ್ವಾರೇ ತು ರಥ್ಯಯಾ ವಿದ್ಧೇ ಭವೇತ್ ಸರ್ವಕುಲಕ್ಷಯಃ ||
ತರುಣಾ ದ್ವೇಷ ಬಾಹುಲ್ಯಂ ಶೋಕಃ ಪಂಕೇನ ಜಾಯತೇ |
ಅಪಸ್ಮಾರೋ ಭವೇನ್ನೂನಂ ಕೂಪವೇಧೇನ ಸರ್ವದಾ ||
ವ್ಯಥಾ ಪ್ರಸ್ರವಣೇನ ಸ್ಯಾತ್ ಕೀಲೇನಾಗ್ನಿಭಯಂ ಭವೇತ್ |
ವಿನಾಶೋ ದೇವತಾವಿದ್ಧೇ ಸ್ತಂಭೇನ ಸ್ವೀಕೃತೋ ಭವೇತ್ ||
ಗೃಹಭರ್ತುವಿನಾಶಃ ಸ್ಯಾದ್ ಗೃಹೇಣ ಚ ಗೃಹೇ ಕೃತೇ |
ಅಮೇಧ್ಯಾವಸ್ಕರೈರ್ವಿದ್ಧೇ ಗೃಹಿಣೀ ಬಂಧಕೀ ಭವೇತ್ ||
ತಥಾ ಶಸ್ತ್ರಭಯಂ ವಿಂದ್ಯಾದಂತ್ಯಜಸ್ಯ ಗೃಹೇಣ ತು |
ಉಚ್ಛ್ರಾಯಾದ್ ದ್ವಿಗುಣಾಂ ಭೂಮಿಂ ತ್ಯಕ್ತ್ವಾ ವೇಧೋ ನ ಜಾಯತೇ || – ಮತ್ಸ್ಯಪುರಾಣ, ಅಧ್ಯಾಯ ೨೫೫, ಶ್ಲೋಕ ೧೦ ರಿಂದ ೧೪
ಅರ್ಥ : ಎಲ್ಲಾ ರೀತಿಯ ವಾಸ್ತುಗಳಲ್ಲಿ ದ್ವಾರವೇಧವನ್ನು ತ್ಯಜಿಸಬೇಕು. ಬಾಗಿಲಿನ ಮುಂದೆ ಗಲ್ಲಿ, ಸಣ್ಣ ಬೀದಿ ಅಥವಾ ರಸ್ತೆ ಇವುಗಳಿಂದಾಗಿ ಅಡೆತಡೆಯುಂಟಾದರೆ ಅದು ವಂಶದ ನಾಶಕ್ಕೆ ಕಾರಣವಾಗುತ್ತದೆ. ಮರದಿಂದ ಅಡೆತಡೆ ಉಂಟಾದರೆ ದ್ವೇಷವು ಹೆಚ್ಚಾಗುತ್ತದೆ. ಕೆಸರಿನಿಂದ ಅಡೆತಡೆಯುಂಟಾದರೆ ದುಃಖ ಪ್ರಾಪ್ತಿಯಾಗುತ್ತದೆ. ಬಾವಿಯ ವೇಧವಿದ್ದರೆ ಮನೆಯ ಯಜಮಾನನಿಗೆ ಅಪಸ್ಮಾರ (ಫಿಟ್ಸ್) ರೋಗವು ಬರುತ್ತದೆ. ಮೊಳೆಗಳು ಅಥವಾ ಗೂಟಗಳಿಂದ ವೇಧವಾದರೆ ಅಗ್ನಿಭಯ ಕಾಡುತ್ತದೆ. ದೇವತೆಗಳ ವೇಧವಾದರೆ ಅಂದರೆ ಬಾಗಿಲಿನ ಮುಂದೆ ದೇವಸ್ಥಾನವಿದ್ದರೆ ವಿನಾಶ ಸಂಭವಿಸುತ್ತದೆ. ಅಪವಿತ್ರ ದ್ರವ್ಯಗಳ ವೇಧವಿದ್ದರೆ ಮನೆಯ ಸ್ತ್ರೀ ಸಂತಾನಹೀನಳಾಗುತ್ತಾಳೆ. ಕೆಳವರ್ಗದ ಅಥವಾ ಅಸ್ಪೃಶರ ಮನೆಯ ದೋಷ ಉಂಟಾದರೆ ಶಸ್ತ್ರಾಸ್ತ್ರಗಳಿಂದ ಅಪಾಯವಾಗುವ ಭಯವಿರುತ್ತದೆ.

೨. ‘ವಿಶ್ವಕರ್ಮಪ್ರಕಾಶ’ ಈ ಗ್ರಂಥದ ವಿಧ ದ್ವಾರವೇಧ ಮತ್ತು ಅದರ ಪರಿಣಾಮಗಳು
ಪ್ರಧಾನ ಯನ್ಮಹಾದ್ವಾರಂ ಬಾಹ್ಯಭಿತ್ತಿಷು ಸಂಸ್ಥಿತಮ್ |
ರಥ್ಯಾವಿದ್ಧಂ ನ ಕರ್ತವ್ಯಂ ನೃಪೇಣ ಭೂಮಿಮಿಚ್ಛತಾ ||– ವಿಶ್ವಕರ್ಮಪ್ರಕಾಶ, ಅಧ್ಯಾಯ ೭, ಶ್ಲೋಕ ೭೨
ಅರ್ಥ : ಹೊರಗಿನ ಗೋಡೆಯ ಮೇಲೆ ನಿರ್ಮಿಸಲಾದ ಮುಖ್ಯದ್ವಾರವು ರಾಜಮಾರ್ಗದಿಂದ (ಮುಖ್ಯ ರಸ್ತೆ) ವೇಧಿತವಾಗಿರಬಾರದು. ಭೂಮಿಯ ಆಕಾಂಕ್ಷೆಯುಳ್ಳ ಅರಸನು ಮುಖ್ಯ ದ್ವಾರವನ್ನು ರಥ್ಯದಿಂದ (ರಸ್ತೆಯಿಂದ ಉಂಟಾಗುವ ವೇಧದಿಂದ) ರಕ್ಷಿಸಬೇಕು.
ಸರಲೇನ ಚ ಮಾರ್ಗೇಣ ಪ್ರವೇಶೋ ಯತ್ರ ವೇಶ್ಮನಿ |
ಮಾರ್ಗವೇಧಂ ವಿಜಾನೀಯಾನ್ನಾಶೋಕಫಲಪ್ರದಮ್ ||– ವಿಶ್ವಕರ್ಮಪ್ರಕಾಶ, ಅಧ್ಯಾಯ ೭, ಶ್ಲೋಕ ೭೩
ಅರ್ಥ : ಯಾವುದಾದರೊಂದು ಮನೆಯನ್ನು ನೇರ ಮಾರ್ಗದಿಂದ ಪ್ರವೇಶ ಮಾಡಿದರೆ (ಸಾರ್ವಜನಿಕ ರಸ್ತೆಯಿಂದ ನೇರವಾಗಿ ನಮ್ಮ ಮುಖ್ಯದ್ವಾರಕ್ಕೆ ಬರುತ್ತಿದ್ದರೆ) ಆಗ ಅದು ಮಾರ್ಗವೇಧ ಆಗುತ್ತದೆ. ಇಂತಹ ವೇಧವು ದುಃಖವನ್ನುಂಟು ಮಾಡುತ್ತದೆ.
ತರುವೇಧಂ ವಿಜಾನೀಯಾದ್ಯದಿ ದ್ವಾರಮುಖೇ ಸ್ಥಿತಮ್ |
ಕುಮಾರಮರಣಂ ಜ್ಞೇಯಂ ನಾನಾರೋಗಶ್ಚ ಜಾಯತೇ ||– ವಿಶ್ವಕರ್ಮಪ್ರಕಾಶ, ಅಧ್ಯಾಯ ೭, ಶ್ಲೋಕ ೭೪
ಅರ್ಥ : ಬಾಗಿಲಿನ ಎದುರೇ ಮರವಿದ್ದರೆ ಅದನ್ನು ‘ತರುವೇಧ’ ಎಂದು ಹೇಳುತ್ತಾರೆ. ಅದರಿಂದ ಬಾಲ್ಯಾವಸ್ಥೆಯಲ್ಲಿರುವ ಮಕ್ಕಳು ಸಾವನ್ನಪ್ಪುವ ಸಾಧ್ಯತೆ ಇರುತ್ತದೆ ಮತ್ತು ಮನೆಯು ರೋಗ ಗ್ರಸ್ತವಾಗುತ್ತದೆ. ಮನೆಯಲ್ಲಿನ ಜನರು ಅಪಸ್ಮಾರ (ಫಿಟ್ಸ್) ರೋಗಕ್ಕೆ ತುತ್ತಾಗುತ್ತಾರೆ.
ಜಲಸ್ರಾವಸ್ತಥಾ ದ್ವಾರೇ ಮೂಲೇಽನರ್ಥಂಚ ಯೋ ಭವೇತ್ |
ದ್ವಾರಾಗ್ರೇ ದೇವಸದನಂ ಬಾಲಾನಾಮಾರ್ತಿದಾಯಕಮ್ ||– ವಿಶ್ವಕರ್ಮಪ್ರಕಾಶ, ಅಧ್ಯಾಯ ೭, ಶ್ಲೋಕ ೭೬
ಅರ್ಥ : ಮನೆಯ ಬಾಗಿಲಿನ ಎದುರಿಗೆ ನೀರು ಹರಿಯುತ್ತಿದ್ದರೆ, ಅದರಿಂದ ಅನರ್ಥಕಾರಿ ಘಟನೆಗಳು ಘಟಿಸುತ್ತವೆ. ಬಾಗಿಲಿನ ಎದುರಿಗೆ ದೇವಸ್ಥಾನವಿದ್ದರೆ ಸಣ್ಣ ಮಕ್ಕಳಿಗೆ ಆರೋಗ್ಯ ಸಮಸ್ಯೆಗಳು ಕಾಡುತ್ತವೆ.
ಶ್ಮಶಾನಾಭಿಮುಖೇ ಗೇಹೇ ರಾಕ್ಷಸಾದ್ ಭಯಮಾದಿಶೇತ್ | – ವಿಶ್ವಕರ್ಮಪ್ರಕಾಶ, ಅಧ್ಯಾಯ ೭, ಶ್ಲೋಕ ೮೧
(ಅರ್ಥ : ಮನೆಯ ಮುಖ್ಯ ದ್ವಾರವು ಸ್ಮಶಾನಾಭಿಮುಖ ಆಗಿದ್ದರೆ ರಾಕ್ಷಸರ ಭಯವಿರುತ್ತದೆ.)
ಆದರೆ, ಎಲ್ಲಾ ವಾಸ್ತುಶಾಸ್ತ್ರದ ಗ್ರಂಥಗಳೂ ದ್ವಾರವೇಧವನ್ನು ತಪ್ಪಿಸಬೇಕು ಎಂದೇ ಹೇಳುತ್ತವೆ. ಒಟ್ಟಾರೆ ಮುಖ್ಯಪ್ರವೇಶ ದ್ವಾರದ ಎದುರಿಗೆ ಕಂಬ, ಗುಂಡಿ, ಕೆಸರು, ಗೂಟ, ದೊಡ್ಡ ಕಲ್ಲು, ಮರ, ನೇರ ರಸ್ತೆ, ದೇವಸ್ಥಾನ, ಬಾವಿ ಮುಂತಾದವುಗಳು ಇರಬಾರದು. ಅದರಿಂದ ಬಾಗಿಲಿಗೆ ವೇಧವು ಉಂಟಾಗಿ ಅದರ ಅಶುಭ ಪರಿಣಾಮವನ್ನು ವಾಸ್ತುಮಾಲೀಕನು ಭೋಗಿಸಬೇಕಾಗುತ್ತದೆ. ಇದರೊಂದಿಗೆ, ಒಂದು ಬಾಗಿಲಿಗೆ ಎದುರಾಗಿ ಮತ್ತೊಂದು ಬಾಗಿಲು ಇರಬಾರದು, ಅಂದರೆ ಮನೆಯ ಬಾಗಿಲುಗಳು ಒಂದೇ ಸಾಲಿನಲ್ಲಿ ಇರಬಾರದು. ಅದನ್ನು ‘ಭಿನ್ನದೇಹಿ ವಾಸ್ತು’ ಎಂದು ಕರೆಯುತ್ತಾರೆ.
ಅದೇ ರೀತಿ, ಸುರಕ್ಷಾ ಬಾಗಿಲನ್ನು (Safety Door) ಮಾಡುವಾಗ ಅದನ್ನು ಮುಖ್ಯ ದ್ವಾರಕ್ಕಿಂತ ದೊಡ್ಡದು ಅಥವಾ ಚಿಕ್ಕದಾಗಿ ಮಾಡಬಾರದು ಅಥವಾ ಮುಖ್ಯ ಪ್ರವೇಶದ್ವಾರಕ್ಕಿಂತ ಅದನ್ನು ಹೆಚ್ಚು ಅಲಂಕರಿಸಬಾರದು. ಹೀಗಾದಾಗ, ಅದು ಸಂಕಷ್ಟಗಳಿಗೆ ಕಾರಣವಾಗಬಹುದು. ಇದರಲ್ಲಿ ವೇಧದ ಪರಿಣಾಮಗಳು ವಾಸ್ತುಶಾಸ್ತ್ರದ ಗ್ರಂಥಗಳಿಗನುಸಾರ ಭಿನ್ನವಾಗಿ ಇದ್ದರೂ ದ್ವಾರವೇಧವು ದೋಷಕಾರಕವೆಂಬ ವಿಷಯದಲ್ಲಿ ಎಲ್ಲ ಶಾಸ್ತ್ರಜ್ಞರು ಒಮ್ಮತದ ಅಭಿಪ್ರಾಯವನ್ನು ಹೊಂದಿದ್ದಾರೆ. ಆದ್ದರಿಂದ ವಾಸ್ತುವನ್ನು ನಿರ್ಮಿಸುವಾಗ ಮೇಲೆ ಉಲ್ಲೇಖಿಸಿದ ವಾಸ್ತುವೇಧಗಳನ್ನು ಖಂಡಿತವಾಗಿಯೂ ತಪ್ಪಿಸಬೇಕು.
(ಆಧಾರ ಗ್ರಂಥ : ‘ವಿಶ್ವಕರ್ಮಪ್ರಕಾಶ’, ‘ಮತ್ಸ್ಯಪುರಾಣ’, ‘ಸಮರಾಂಗಣಸೂತ್ರಧಾರ’)
– ಶ್ರೀ. ಶ್ರೇಯಸ ಪಿಸೋಳಕರ (ವಾಸ್ತುವಿಶಾರದ, ಜ್ಯೋತಿಷ್ಯ ಹೋರಾಭೂಷಣ, ಹೋರಾರತ್ನ), ಫೋಂಡಾ, ಗೋವಾ. (೪.೩.೨೦೨೬)
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಆರ್ಥಿಕ ಶಿಸ್ತು