ಇಂದು ಭಾರತದಲ್ಲಿ ೨ ರೀತಿಯ ಸಂಸ್ಥೆಗಳಿವೆ. ಒಂದು ಸಾಮಾಜಿಕ ಸಂಸ್ಥೆ, ಇದು ಸಮಾಜದ ಹಣದಿಂದ ಸಮಾಜಕ್ಕಾಗಿ ಕೆಲಸ ಮಾಡುತ್ತದೆ ಮತ್ತು ಎರಡನೇಯದು ಸ್ವಯಂಸೇವಿ ಸಂಸ್ಥೆ, ಇದು ಸಮಾಜಕ್ಕಾಗಿ ಅಲ್ಲ, ಬದಲಿಗೆ ಕೆಲವು ವ್ಯಕ್ತಿಗಳ ವೈಯಕ್ತಿಕ ಹಿತಾಸಕ್ತಿಗಾಗಿ ವಿದೇಶಿ ಹಣವನ್ನು ಅಥವಾ ಕೆಲವು ಜನರ ವೈಯಕ್ತಿಕ ಹಣವನ್ನು ಬಳಸಿಕೊಂಡು ಕೆಲಸ ಮಾಡುತ್ತದೆ.

೧. ನಿರಪೇಕ್ಷವಾಗಿ ಕಾರ್ಯವನ್ನು ಮಾಡುವ ಸಾಮಾಜಿಕ ಸಂಸ್ಥೆಗಳು ಮತ್ತು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಮೂಲಕ ಅಡ್ಡಿಪಡಿಸುವ ಕೆಲವು ಸ್ವಯಂಸೇವಿ ಸಂಸ್ಥೆಗಳು !
ಕೋಟಿಗಟ್ಟಲೆ ಫಲಾನುಭವಿಗಳಿರುವ, ಆದರೆ ಇದುವರೆಗೂ ಅವರಿಂದ ಯಾವುದೇ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿರದ ಕೆಲವು ದೊಡ್ಡ ಸಾಮಾಜಿಕ ಸಂಸ್ಥೆಗಳ ಹೆಸರುಗಳನ್ನು ನಾನು ನೀಡುತ್ತಿದ್ದೇನೆ, ವನವಾಸಿ ಕಲ್ಯಾಣ ಆಶ್ರಮ, ಸನಾತನ ಸಂಸ್ಥೆ, ಇಸ್ಕಾನ್, ಭಾರತ ಸೇವಾಶ್ರಮ ಸಂಘ, ರಾಮಕೃಷ್ಣ ಮಿಶನ, ಸೇವಾ ಭಾರತಿ, ಭಾರತ ವಿಕಾಸ ಪರಿಷದ್, ಗಾಯತ್ರಿ ಪರಿವಾರ, ಏಕಲ ಅಭಿಯಾನ, ಅಕ್ಷಯ ಪಾತ್ರ ಫೌಂಡೇಶನ ಇವು ಅಂತಹ ಸಂಸ್ಥೆಗಳಾಗಿವೆ. ಇನ್ನೊಂದೆಡೆ, ಕೆಲವು ಸ್ವಯಂಸೇವಿ ಸಂಸ್ಥೆಗಳ ಏಕೈಕ ಉದ್ದೇಶವೆಂದರೆ, ‘ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೂಲಕ ರಾಷ್ಟ್ರೀಯ ಹಿತಾಸಕ್ತಿಯ ಸರಕಾರದ ನಿರ್ಧಾರಗಳನ್ನು ತಡೆಯುವುದು ಅಥವಾ ಸ್ಥಗಿತಗೊಳಿಸುವುದು. ಅವುಗಳಲ್ಲಿ ಸಬರಂಗ ಟ್ರಸ್ಟ್, ಸಿಜೆಪಿ (ಸಿಟಿಜನ್ಸ್ ಫಾರ್ ಜಸ್ಟಿಸ್ ಅಂಡ್ ಪೀಸ್), ಸಿಯಿಎಸ್. (ಸೆಂಟರ್ ಫಾರ್ ಇಕ್ವಿಟಿ ಸ್ಟಡೀಸ್), ಸಿಪಿಐಎಲ್ (ಸೆಂಟರ್ ಫಾರ್ ಪಬ್ಲಿಕ್ ಇಂಟರೆಸ್ಟ್ ಲಿಟಿಗೇಶನ್) ಇಂಡಿಯನ್ ಯಂಗ್ ಲಾಯರ್ಸ್ ಅಸೋಸಿಯೇಶನ್, ಗ್ರೀನಪೀಸ್ ಇಂಡಿಯಾ ಇವು ಆ ಕೆಲವು ಸ್ವಯಂಸೇವಿ ಸಂಸ್ಥೆಗಳ ಹೆಸರುಗಳಾಗಿವೆ.

೨. ಸರ್ವೋಚ್ಚ ನ್ಯಾಯಾಲಯದ ಬಳಿ ಈಗಲೂ ಧರ್ಮದ ಬಗ್ಗೆ ಯೋಗ್ಯ ವ್ಯಾಖ್ಯೆಯಿಲ್ಲ !
ಶಬರಿಮಲೈ ದೇವಸ್ಥಾನದಲ್ಲಿ ಮಹಿಳೆಯರಿಗೆ ಪ್ರವೇಶ ಸಿಗಬೇಕೆಂದು ಧರ್ಮದೊಂದಿಗೆ ಸಂಬಂಧವಿಲ್ಲದ ‘ಇಂಡಿಯನ್ ಯಂಗ್ ಲಾಯರ್ಸ್ ಅಸೋಸಿಯೇಶನ್’ ಸರ್ವೋಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಿತು. ದುರ್ದೈವದಿಂದ ಸರ್ವೋಚ್ಚ ನ್ಯಾಯಾಲಯಕ್ಕೆ ಇದುವರೆಗೂ ಅಧಿಕೃತವಾಗಿ ಧರ್ಮವನ್ನು ವ್ಯಾಖ್ಯಾನಿಸಲು ಸಾಧ್ಯ ಆಗಿಲ್ಲ. ಧರ್ಮ ಎಂದರೇನು ? ಪಂಥ ಅಥವಾ ಸಂಪ್ರದಾಯ ಎಂದರೇನು ? ಧಾರ್ಮಿಕ ಸ್ವಾತಂತ್ರ್ಯದ ಹೆಸರಿನಲ್ಲಿ ಇಂತಹ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸ್ವೀಕರಿಸಿ ಸರ್ವೋಚ್ಚ ನ್ಯಾಯಾಲಯವೇ ಅನಗತ್ಯ ಹೊಸ ವಿವಾದಗಳನ್ನು ಸೃಷ್ಟಿಸುತ್ತಿದೆ.
೩. ಜಾತ್ಯತೀತ ನ್ಯಾಯಮೂರ್ತಿಗಳು ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ತೀರ್ಪು ನೀಡುವುದು ವಿರೋಧಾಭಾಸ !
ಸರ್ವೋಚ್ಚ ನ್ಯಾಯಾಲಯದ ೫ ನ್ಯಾಯಮೂರ್ತಿಗಳ ಪೀಠದ ಎದುರು ನಡೆದ ನಿರ್ಧಾರಗಳ ವಿಚಾರಣೆಯು ನ್ಯಾಯಮೂರ್ತಿಗಳ ವಿಭಾಗೀಯಪೀಠದ ಮೂಲಕ ಪುನಃ ವಿಚಾರಣೆ ನಡೆಯಲಿದೆ. ನ್ಯಾಯಾಂಗದ ಈ ನ್ಯಾಯಮೂರ್ತಿಗಳನ್ನು ಯಾರಾದರೂ ಕೇಳಬೇಕು ನಿಮ್ಮ ಪ್ರಕರಣದಲ್ಲಿ ಬಡ ವ್ಯಕ್ತಿಯ ವೈಯಕ್ತಿಕ ಹಿತಾಸಕ್ತಿಗಳಿಗೆ ಸಂಬಂಧಿಸಿದ ವಿಷಯಗಳು ಹೆಚ್ಚು ಮಹತ್ವದ್ದಾಗಿವೆಯೋ ಅಥವಾ ಸಾಮಾನ್ಯ ಮನುಷ್ಯನಿಗೆ ಸಂಬಂಧವೇ ಇಲ್ಲದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಮಹತ್ವದ್ದಾಗಿವೆಯೋ ? ನ್ಯಾಯಮೂರ್ತಿಗಳು ಜಾತ್ಯತೀತರಾಗಿದ್ದಾರೆ. ದೇಶದ ಸಂವಿಧಾನ ಜಾತ್ಯತೀತವಾಗಿದೆ ಮತ್ತು ಯಾವಾಗ ಇಬ್ಬರೂ ಜಾತ್ಯತೀತರಾಗಿರುತ್ತಾರೆಯೋ, ಆಗ ಅವರು ಧಾರ್ಮಿಕ ಸ್ವಾತಂತ್ರ್ಯದ ಅಂಶಗಳನ್ನು ಹೇಗೆ ತಾನೆ ಅರ್ಥ ಮಾಡಿಕೊಳ್ಳಬಲ್ಲರು ? ಅವರಿಗೆ ಧರ್ಮವೇ ಅರ್ಥವಾಗದ ಮೇಲೆ ಅವರು ಅದರ ಬಗ್ಗೆ ನಿರ್ಧಾರಗಳನ್ನು ಹೇಗೆ ನೀಡಲು ಸಾಧ್ಯ ? ಗೌರವಾನ್ವಿತ ನ್ಯಾಯಮೂರ್ತಿಗಳು ಈ ವಾಸ್ತವವನ್ನೂ ಪರಿಗಣಿಸಿರಬಹುದು ಎಂದು ನಾವು ಆಶಿಸುತ್ತೇವೆ – ಅದೆಂದರೆ, ಮಹಿಳೆಯರು ಒಂದು ನಿರ್ದಿಷ್ಟ ಸಮಯದಲ್ಲಿ ಎಲ್ಲಿ ದೇವರ ಪ್ರಸಾದವನ್ನು ಸಿದ್ಧಪಡಿಸಲಾಗುತ್ತದೆಯೋ, ಅಂತಹ ಪ್ರಸಾದದ ಮನೆಗಳಿಗೆ ಪ್ರವೇಶಿಸುವುದಿಲ್ಲ. ಸ್ವಂತ ಅಡುಗೆಮನೆಯಲ್ಲಿಯೂ ಪ್ರವೇಶಿಸುವುದಿಲ್ಲ, ಮನೆಯಲ್ಲಿರುವ ದೇವರಕೋಣೆಯಲ್ಲಿರುವ ದೇವತೆಗಳ ಪೂಜೆಯನ್ನೂ ಮಾಡುವುದಿಲ್ಲ. ಹೀಗಿರುವಾಗ ಧಾರ್ಮಿಕ ಸ್ವಾತಂತ್ರ್ಯದ ಹೆಸರಿನಲ್ಲಿ ಇಂತಹ ನಿರ್ಣಯ ನ್ಯಾಯಸಮ್ಮತವೇ ?
೪. ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಕಾಳಸಂತೆಯನ್ನು ತಡೆಯುವುದು ಆವಶ್ಯಕ !
ಒಂದು ರೀತಿಯಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ೫ ನೇ ಸ್ತಂಭದಂತಾಗಿವೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೂಲಕ ಈ ಸ್ವಯಂಸೇವಿ ಸಂಸ್ಥೆಗಳು ಯಾವುದೇ ಸರಕಾರಿ ಆದೇಶವನ್ನು ಅಂತ್ಯವಿಲ್ಲದ ಕಾನೂನುಬದ್ಧ ಗೊಂದಲಗಳಲ್ಲಿ ತಳ್ಳಲು ಪ್ರಯತ್ನಿಸುತ್ತವೆ ಮತ್ತು ಅನೇಕ ಬಾರಿ ಹಾಗೆ ಮಾಡುವಲ್ಲಿ ಯಶಸ್ವಿಯೂ ಆಗುತ್ತವೆ. ಈಗ ನಾನು ನಿಮಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸುವುದಕ್ಕಾಗಿಯೇ ಸಿದ್ಧಪಡಿಸಲಾದ ಒಂದು ವಿಭಿನ್ನ ರೀತಿಯ ಸ್ವಯಂಸೇವಿ ಸಂಸ್ಥೆಯ ಬಗ್ಗೆ ಹೇಳುತ್ತೇನೆ. ಅದರ ಹೆಸರು ‘ಸೆಂಟರ್ ಫಾರ್ ಪಬ್ಲಿಕ್ ಇಂಟರೆಸ್ಟ್ ಲಿಟಿಗೇಶನ್.’ ಅದರ ಎಲ್ಲಾ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸರಕಾರವನ್ನು ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲಿಸುವುದಕ್ಕಾಗಿಯೇ ಇವೆ ಮತ್ತು ಈ ಸಾರ್ವಜನಿಕ ಹಿತಾಸಕ್ತಿ ಸಾಮಾನ್ಯ ಮನುಷ್ಯನಿಗೂ ಯಾವುದೇ ಸಂಬಂಧವಿಲ್ಲ. ನ್ಯಾಯವಾದಿ ಪ್ರಶಾಂತ ಭೂಷಣ ಈ ಸ್ವಯಂಸೇವಿ ಸಂಸ್ಥೆಯ ರೂವಾರಿಯಾಗಿದ್ದಾರೆ. ಈ ಹೆಸರಿನಿಂದಲೇ ನೀವು ಎಲ್ಲವನ್ನೂ ಅರ್ಥಮಾಡಿಕೊಳ್ಳಬಹುದು.
೫. ‘ಸೆಂಟರ್ ಫಾರ್ ಪಬ್ಲಿಕ್ ಇಂಟರೆಸ್ಟ್ ಲಿಟಿಗೇಶನ್’ನ ಮೂಲಕ ಯಾವುದೇ ಸಂಬಂಧವಿಲ್ಲದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮಾಡಲಾಗುತ್ತದೆ !
‘ಸೆಂಟರ್ ಫಾರ್ ಪಬ್ಲಿಕ್ ಇಂಟರೆಸ್ಟ್ ಲಿಟಿಗೇಶನ್’ ಎಂಬ ಈ ಸಂಸ್ಥೆಯು ೨೦೨೫ ರಲ್ಲಿ ಕೇಂದ್ರದ ವಿರುದ್ಧ ೨ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ದಾಖಲಿಸಿದೆ. ಒಂದು ‘ಕಾಗ್’ದಲ್ಲಿನ (ದೇಶದ ಮಹಾಲೇಖಾಪಾಲರ) ನೇಮಕಾತಿಯ ವಿಷಯ ಮತ್ತು ಎರಡನೇಯದು ‘೧೭ ಎ’ ಕಾಯ್ದೆಯ ಸಿಂಧುತ್ವದ ಕುರಿತಾಗಿದೆ. ಈ ಎರಡೂ ಅರ್ಜಿಗಳು ಪ್ರಸ್ತುತ ಸರಕಾರದ ವಿರುದ್ಧವಾಗಿವೆ. ೨೦೧೩ ರಲ್ಲಿ ಕಾಂಗ್ರೆಸ್ ಸರಕಾರವು ವಕ್ಫ್ ಬೋರ್ಡ ಕಾಯ್ದೆಯಲ್ಲಿ ಸುಧಾರಣೆ ತಂದು ಅದಕ್ಕೆ ಅಪಾರವಾದ ಅಧಿಕಾರಗಳನ್ನು ನೀಡಿತ್ತು. ಆದರೆ ಅದನ್ನು ‘ಸೆಂಟರ್ ಫಾರ್ ಪಬ್ಲಿಕ್ ಇಂಟರೆಸ್ಟ್ ಲಿಟಿಗೇಶನ್’ ಸಂಸ್ಥೆಯು ಹಿಂಪಡೆಯಲಿಲ್ಲ. ನಾನು ಹೇಳುವುದೆಂದರೆ, ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸರಕಾರಗಳಿಂದಲೂ ದುರುಪಯೋಗಪಡಿಸಿ ಕೊಳ್ಳಲಾಗುತ್ತಿದೆ. ಆದ್ದರಿಂದ ಇವುಗಳನ್ನು ತಡೆಯುವ ಅವಶ್ಯಕತೆಯಿದೆ.
೬. ನ್ಯಾಯಾಂಗ ಅಥವಾ ಸರಕಾರ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸೂಕ್ತ ವ್ಯಾಖ್ಯೆಯನ್ನು ನೀಡಬೇಕು
ನ್ಯಾಯಾಲಯ ಅಥವಾ ಸರಕಾರ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಬಗ್ಗೆ ಈ ಕೆಳಗಿನ ಅಂಶಗಳನ್ನು ಗಮನಿಸಬೇಕು.
ಅ. ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕೇವಲ ಸಮಾಜದ ಹಣದಿಂದ ನಡೆಯುವ ಸಂಸ್ಥೆಗಳಿಗೆ ಮಾತ್ರ ಸಿಗಬೇಕು.
ಆ. ವಿದೇಶಿ ಸಂಸ್ಥೆಗಳಿಂದ ಆರ್ಥಿಕ ಸಹಾಯ ಪಡೆಯುವ ಯಾವುದೇ ಸಂಸ್ಥೆಯು ಅರ್ಜಿ ಸಲ್ಲಿಸಲು ಅರ್ಹವಲ್ಲ
ಇ. ಸಂಸ್ಥೆಗೆ ಸಾಮಾಜಿಕ ಕಾರ್ಯದ ಇತಿಹಾಸವಿರಬೇಕು.
ಈ. ಸಂಸ್ಥೆಯ ಬಳಿ ಆರ್ಥಿಕ ಹಿಂದುಳಿದವರ ಬಗ್ಗೆ ಸ್ಪಷ್ಟತೆ ಇರಬೇಕು.
– ಶ್ರೀ. ವಿಮಲ ಜೈಸ್ವಾಲ, ಹಿಂದುತ್ವನಿಷ್ಠರು, ಕೋಲಕಾತಾ, ಬಂಗಾಳ (೫.೨.೨೦೨೬)
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಆರ್ಥಿಕ ಶಿಸ್ತು