|
|
|
೧. ಕಲಿಯುವ ವೃತ್ತಿ
ಸೌ. ಸಂಗೀತಾ ಪ್ರತಿಯೊಂದು ಪರಿಸ್ಥಿತಿ ಮತ್ತು ಸಾಧಕರಿಂದ ಏನನ್ನಾದರೂ ಕಲಿಯಲು ಪ್ರಯತ್ನಿಸುತ್ತಾಳೆ. ಇದು ಅವಳ ಒಂದು ಪ್ರಮುಖ ಗುಣವಾಗಿದೆ. ಅವಳು ಸಾಧಕರಲ್ಲಿನ ಸ್ವಭಾವದೋಷಗಳನ್ನು ನೋಡದೆ ಅವರಲ್ಲಿರುವ ಗುಣಗಳನ್ನು ನೋಡುತ್ತಾಳೆ. ಯಾರಾದರೂ ಸಾಧಕರು ಮಾಡುತ್ತಿರುವ ಪ್ರಯತ್ನಗಳನ್ನು ಗಮನಿಸಿದಾಗ, ‘ಆ ಸಾಧಕರಿಂದ ನಾನು ಏನು ಕಲಿಯಬಹುದು ಮತ್ತು ನನ್ನ ಸಾಧನೆಯ ದೃಷ್ಟಿಯಿಂದ ಅದರ ಲಾಭವನ್ನು ನಾನು ಹೇಗೆ ಪಡೆದುಕೊಳ್ಳಬಹುದು ?’ ಎಂಬ ಬಗ್ಗೆ ಅವಳು ಚಿಂತನೆ ಮಾಡುತ್ತಾಳೆ.
೨. ನಿರ್ಮಲ ಮನಸ್ಸು
ಅವಳು ಮನಮುಕ್ತವಾಗಿ ಮಾತನಾಡುತ್ತಾಳೆ. ಅವಳಿಂದ ಏನಾದರೂ ತಪ್ಪಾದಲ್ಲಿ ಅದನ್ನು ತಕ್ಷಣವೇ ಒಪ್ಪಿಕೊಳ್ಳುತ್ತಾಳೆ ಮತ್ತು ಕ್ಷಮೆಯಾಚಿಸುತ್ತಾಳೆ.
೩. ಅಂತರ್ಮುಖತೆ
ಅವಳು ಕೇವಲ ಕೃತಿ ಮಾಡುವುದಕ್ಕೆ ಮಾತ್ರವಲ್ಲ, ಅಂತರ್ಮನಸ್ಸಿನ ಶುದ್ಧಿ ಮತ್ತು ಆತ್ಮನಿರೀಕ್ಷಣೆ ಮಾಡುವುದಕ್ಕೆ ಹೆಚ್ಚಿನ ಮಹತ್ವ ನೀಡುತ್ತಾಳೆ. ಮನಸ್ಸಿನ ವಿಚಾರಗಳು, ಭಾವನೆಗಳು ಮತ್ತು ಪ್ರತಿಕ್ರಿಯೆಗಳನ್ನು ಸತತವಾಗಿ ಗಮನಿಸುತ್ತಾ, ಗುರುದೇವರಿಗೆ ಅಪೇಕ್ಷಿತವಾಗಿರುವಂತೆ ತನ್ನಲ್ಲಿ ಸುಧಾರಣೆ ಮಾಡಿಕೊಳ್ಳಲು ಪ್ರಯತ್ನಿಸುತ್ತಾಳೆ. ಈ ಪ್ರಯತ್ನಗಳಿಂದ ಅವಳಲ್ಲಿ ಕೃತಜ್ಞತಾಭಾವವು ವೃದ್ಧಿಯಾಗಿದೆ.
೪. ಅವಳು ಎಲ್ಲರೊಂದಿಗೆ ಸಮಭಾವ, ಪ್ರೀತಿ, ಆಪ್ತತೆ ಮತ್ತು ಗೌರವದಿಂದ ವರ್ತಿಸುತ್ತಾಳೆ.
೫. ಪರಿಸ್ಥಿತಿಯನ್ನು ಶ್ರದ್ಧೆಯ ಬಲದಿಂದ ಎದುರಿಸುವುದು
ಸಾಧನೆಯಲ್ಲಿ ಅಥವಾ ವ್ಯವಹಾರದಲ್ಲಿ ಅಡಚಣೆಗಳು ಎದುರಾದಾಗಲೂ ಅವಳು ಸ್ಥಿರವಾಗಿರುತ್ತಾಳೆ. ಪ್ರತಿಯೊಂದು ಪರಿಸ್ಥಿತಿಯಲ್ಲಿ ಪ.ಪೂ. ಗುರುದೇವರಿಗೆ ಅಪೇಕ್ಷಿತ ರೀತಿಯಲ್ಲಿ ವರ್ತಿಸಲು ಪ್ರಯತ್ನಿಸುತ್ತಾಳೆ. ಸಮಸ್ಯೆಯನ್ನು ತಾಳ್ಮೆ ಮತ್ತು ಶ್ರದ್ಧೆಯಿಂದ ಪರಿಹಾರವಾಗುವ ತನಕ ಪ್ರಯತ್ನ ಮಾಡುತ್ತಾಳೆ.
೬. ಆಧ್ಯಾತ್ಮಿಕ ಅನುಭವ ನೀಡುವ ಸಂವಾದ
ಸೌ. ಸಂಗೀತಾ ಅವಳ ಜೀವನವೇ ಸಾಧನಾಮಯವಾಗಿದೆ. ಅವರ ವರ್ತನೆ, ಮಾತು, ಆಲೋಚನೆ ಮತ್ತು ನಿರ್ಧಾರಗಳು ಸಾಧನೆಗೆ ಪೂರಕವಾಗಿರುತ್ತವೆ. ಆದ್ದರಿಂದ ಅವಳೊಂದಿಗೆ ಮಾತನಾಡುವುದು ಒಂದು ಆಧ್ಯಾತ್ಮಿಕ ಅನುಭವದಂತಿರುತ್ತದೆ.
೭. ಸೌ. ಸಂಗೀತಾ ಕೇವಲ ನನ್ನ ಪತ್ನಿಯಷ್ಟೇ ಅಲ್ಲ, ಆಧ್ಯಾತ್ಮಿಕ ಗೆಳತಿಯೂ ಆಗಿದ್ದಾಳೆ.
೮. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಬಗ್ಗೆ ಭಾವ
ಗುರುದೇವರ ಬೋಧನೆ ಅಥವಾ ಸಾಧಕರ ಪ್ರಯತ್ನಗಳ ಬಗ್ಗೆ ಮಾತನಾಡುವಾಗ ಅವಳ ವಾಣಿಯಲ್ಲಿ ನಮ್ರತೆ ಮತ್ತು ದೃಢ ಶ್ರದ್ಧೆ ಕಂಡುಬರುತ್ತದೆ. ಅವಳ ಮಾತುಗಳನ್ನು ಕೇಳಿದಾಗ ಇತರರಲ್ಲೂ ಗುರುಗಳ ಬಗ್ಗೆ ಭಾವಜಾಗೃತವಾಗುತ್ತದೆ.
೯. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಮೇಲೆ ಶ್ರದ್ಧೆ
ಅ. ಅವಳಲ್ಲಿನ ಆಂತರಿಕ ಬದಲಾವಣೆಗಳನ್ನು ನೋಡಿದಾಗ, ಅವಳು ಪ.ಪೂ. ಗುರುದೇವರ ಮೇಲೆ ದೃಢ ಶ್ರದ್ಧೆಯನ್ನಿಟ್ಟು ಗಾಂಭೀರ್ಯದಿಂದ ಮತ್ತು ಸಂಪೂರ್ಣ ನಿಷ್ಠೆಯಿಂದ ಸಾಧನೆ ಮಾಡುತ್ತಿದ್ದಾಳೆ ಎಂದು ತಿಳಿಯುತ್ತದೆ.
ಆ. ಸಂಗೀತಾಳಲ್ಲಿ ಗುರುದೇವರ ಬಗ್ಗೆ ಅಪಾರ ಶ್ರದ್ಧೆ ಮತ್ತು ಸಮರ್ಪಣಾ ಭಾವವಿದೆ. ಅವಳ ಸಾಧನೆಗೆ ಗುರುಗಳೇ ಆಧಾರಸ್ತಂಭ. ಜೀವನದಲ್ಲಿ ನಡೆಯುವ ಪ್ರತಿಯೊಂದು ಘಟನೆಯೂ ಗುರುಗಳ ಇಚ್ಛೆ ಮತ್ತು ಕೃಪೆಯಿಂದಲೇ ನಡೆಯುತ್ತಿದೆ ಎಂದು ಅವಳಲ್ಲಿ ಶ್ರದ್ಧೆ ಇದೆ.
‘ಸೌ. ಸಂಗೀತಾಳ ಮುಂದಿನ ಆಧ್ಯಾತ್ಮಿಕ ಪ್ರಗತಿಯು ವೇಗವಾಗಿ ಆಗಲಿ ಎಂದು ಪ.ಪೂ. ಗುರುದೇವರ ಚರಣಗಳಲ್ಲಿ ಪ್ರಾರ್ಥಿಸುತ್ತೇನೆ. ಗುರುಗಳಿಂದಲೇ ಅವಳ ಗುಣವೈಶಿಷ್ಟ್ಯಗಳನ್ನು ಬರೆಯಲು ಸಾಧ್ಯವಾಯಿತು, ಅದಕ್ಕಾಗಿ ನಾನು ಕೋಟಿ ಕೋಟಿ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ.’
– ಶ್ರೀ. ಶ್ರೀಕಾಂತ ಚೌಧರಿ (ಸೌ. ಸಂಗೀತಾ ಚೌಧರಿ ಅವರ ಪತಿ), ಬೆಂಗಳೂರು (೬.೩.೨೦೨೬)
![]() ಪತ್ನಿಯ ಗುಣಗಳನ್ನು ಗುರುತಿಸಿ ಅವಳನ್ನು ಪ್ರಶಂಸಿಸುವವರು ಬಹಳ ವಿರಳ ! ಶ್ರೀ. ಶ್ರೀಕಾಂತ ಚೌಧರಿ (ಡಾ. ಸಂಗೀತಾ ಅವರ ಪತಿ) ಅವರು ತಮ್ಮ ಪತ್ನಿಯ ಗುಣಗಳನ್ನು ಗುರುತಿಸಿ ಶ್ಲಾಘಿಸಿದ್ದಾರೆ. ಇದು ಶ್ರೀಕಾಂತ ಚೌಧರಿ ಅವರಲ್ಲಿರುವ ‘ಕಲಿಯುವ ವೃತ್ತಿ ಮತ್ತು ನಮ್ರತೆ’ಯನ್ನು ಎತ್ತಿ ತೋರಿಸುತ್ತದೆ. ಕುಟುಂಬದ ಸದಸ್ಯರು ಪರಸ್ಪರರ ಗುಣಗಳನ್ನು ಕಂಡು ಅದರಿಂದ ಕಲಿಯಲು ಆರಂಭಿಸಿದರೆ ಪ್ರತಿಯೊಬ್ಬರ ಸಾಧನೆಯೂ ಉತ್ತಮವಾಗಲು ಸಹಾಯವಾಗುತ್ತದೆ. ಸಾಧಕನ ಕುಟುಂಬದವರು ಆತನನ್ನು ಯಾವ ದೃಷ್ಟಿಕೋನದಿಂದ ನೋಡಬೇಕು ಎಂಬುದನ್ನು ಈ ಲೇಖನದ ಮೂಲಕ ಎಲ್ಲರೂ ಕಲಿಯಬಹುದು. – ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ (೨೬.೩.೨೦೨೬) |



ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !