
೧. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರು ತಮ್ಮ ಆಧ್ಯಾತ್ಮಿಕ ಉತ್ತರಾಧಿಕಾರಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ ಅಂಜಲಿ ಮುಕುಲ ಗಾಡಗೀಳ ಮಾಡುವ ಸಮಷ್ಟಿ ಕಾರ್ಯದ ಬಗ್ಗೆ ಹೇಳಿದ ವೈಶಿಷ್ಟ್ಯ
‘೯.೪.೨೦೨೦ ರಂದು ನಾವು (ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ) ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರನ್ನು ಭೇಟಿಯಾದೆವು. ಆ ಸಮಯದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರು ನನಗೆ ಹೀಗೆ ಕೇಳಿದರು, “ಕಳೆದ ಕೆಲವು ದಿನಗಳಿಂದ ದೈವೀ ಪ್ರವಾಸವಿಲ್ಲದ ಕಾರಣ, ಬಹಳ ಸಮಯದ ನಂತರ ನೀವು ಇಷ್ಟು ದಿನ ಆಶ್ರಮದಲ್ಲಿ ಉಳಿದಿದ್ದೀರಲ್ಲವೇ ! ಆದ್ದರಿಂದ ನಿಮಗೆ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಅವರ ಸೇವೆಯ ವ್ಯಾಪ್ತಿಯನ್ನು ನೋಡಲು ಸಾಧ್ಯವಾಯಿತಲ್ಲವೇ !” ಎಂದು ಹೇಳಿ ಅವರು ಸ್ವಲ್ಪ ಸಮಯ ಸುಮ್ಮನಾದರು ಮತ್ತು ಕೆಲವು ಕ್ಷಣಗಳ ಕಾಲ ಕಣ್ಣುಗಳನ್ನು ಮುಚ್ಚಿಕೊಂಡರು. ನಂತರ ಅವರು ಮೆಲ್ಲನೆ ಕಣ್ಣುಗಳನ್ನು ತೆರೆದರು ಮತ್ತು ತಮ್ಮ ಎರಡೂ ಕೈಗಳ ಬೆರಳುಗಳನ್ನು ನಮಸ್ಕಾರ ಮಾಡುವಂತೆ ಜೋಡಿಸಿ ಹೀಗೆಂದರು, “ನಿಮ್ಮಿಬ್ಬರ ಸೇವೆಯು ಸಮಷ್ಟಿ ರೂಪದ್ದೇ ಆಗಿದೆ. ನಿಮ್ಮಿಬ್ಬರ ಕಾರ್ಯವು ಒಂದೇ ರೀತಿಯಲ್ಲಿ ಮುಂದೆ ಸಾಗುವುದಾಗಿದೆ. ಕೇವಲ ಆ ಕಾರ್ಯದ ಸ್ವರೂಪವು ವಿಭಿನ್ನವಾಗಿದೆ. (ಹೀಗೆ ಹೇಳುವಾಗ ಅವರು ನಮಸ್ಕಾರದ ಮುದ್ರೆಯಲ್ಲಿದ್ದ ತಮ್ಮ ಎರಡೂ ಕೈಗಳನ್ನು ಮೇಲೆತ್ತಿದರು.) ಶ್ರೀಸತ್‌ಶಕ್ತಿ ಬಿಂದಾ ಸಿಂಗಬಾಳ ಇವರ ಕಾರ್ಯವು ಸ್ಥೂಲ ರೂಪದ್ದಾಗಿದ್ದರೆ, ನಿಮ್ಮ (ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಅವರ) ಕಾರ್ಯವು ಸೂಕ್ಷ್ಮ ರೂಪದ್ದಾಗಿದೆ.”
|
|
|
೨. ‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರು ಸ್ಥೂಲ ಮತ್ತು ಸೂಕ್ಷ್ಮ ಎರಡೂ ಸ್ತರಗಳಲ್ಲಿ ನಡೆಯುತ್ತಿರುವ ಕಾರ್ಯದ ಮಹಾಮೇರು ಆಗಿದ್ದಾರೆ’, ಎಂದು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಅವರು ಹೇಳುವುದು
ನಾನು ಅವರಿಗೆ ಹೀಗೆ ಹೇಳಿದೆ, “ಪರಮ ಪೂಜ್ಯರೇ, ಎಲ್ಲಿ ಎರಡೂ ಕಾರ್ಯಗಳು ಒಂದಾಗುತ್ತವೆಯೋ, ಆ ನಮಸ್ಕಾರದ ಮುದ್ರೆಯ ಅತ್ಯಂತ ಮೇಲ್ಭಾಗದ ತುದಿಯೇ ನೀವು. ನೀವು ಈ ಕಾರ್ಯದ ಮಹಾಮೇರು ಆಗಿದ್ದೀರಿ. ನಿಮ್ಮ ಅಧಿಕಾರವು ಅತ್ಯಂತ ಅಗಾಧವಾದುದಾಗಿದೆ. ನೀವು ಸ್ಥೂಲ ಮತ್ತು ಸೂಕ್ಷ್ಮ ಎರಡೂ ಸ್ತರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದೀರಿ. ನಮಗಾದರೋ ದೇವರು ಕಾರ್ಯವನ್ನು ಹಂಚಿಕೊಟ್ಟಿದ್ದಾನೆ. ನಿಮ್ಮ ಶಕ್ತಿಯೇ ನಮ್ಮ ಮೂಲಕ ಈ ಈಶ್ವರೀ ಕಾರ್ಯವನ್ನು ಮಾಡಿಸಿಕೊಳ್ಳುತ್ತಿದೆ.”
– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ


|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಶ್ರೀ ರಾಜಮಾತಂಗಿ ಮಹಾಯಜ್ಞ !