
೧. ತ್ಯಾಗದ ವಿಧ ಮತ್ತು ಈಶ್ವರಪ್ರಾಪ್ತಿಯಲ್ಲಿ ಮಹತ್ವ

೨. ವಿವಿಧ ವಿಷಯಗಳ ಆಸಕ್ತಿಯಿಂದಾಗುವ ಪರಿಣಾಮ
ವ್ಯಕ್ತಿಯು ದೇಹದ ಮೂಲಕ ವಿವಿಧ ಸುಖಗಳನ್ನು ಉಪಭೋಗಿಸುತ್ತಾನೆ. ಉದಾಹರಣೆಗೆ ಇಷ್ಟವಾದ ಪದಾರ್ಥಗಳನ್ನು ತಿನ್ನುವುದು-ಕುಡಿಯುವುದು, ಮನೋರಂಜನೆ, ತಿರುಗಾಟ, ಸಂಭೋಗ ಇತ್ಯಾದಿ. ದೇಹದ ಮೂಲಕ ಇಂತಹ ಕೃತಿಗಳನ್ನು ಪುನಃ ಪುನಃ ಮಾಡುವುದರಿಂದ ಮತ್ತು ಅವುಗಳಿಂದ ಸಿಗುವ ಸುಖವನ್ನು ಪುನಃ ಪುನಃ ಭೋಗಿಸುವುದರಿಂದ ವ್ಯಕ್ತಿಯ ಅಂತರ್ಮನದಲ್ಲಿ ಇವುಗಳ ದೃಢ ಸಂಸ್ಕಾರಗಳಾಗುತ್ತವೆ ಮತ್ತು ಅವನ ಮನಸ್ಸಿನ ಮೇಲೆ ಈ ಎಲ್ಲ ವಿಷಯಗಳ ಬಗ್ಗೆ ಆಸಕ್ತಿ ಉತ್ಪನ್ನವಾಗುತ್ತದೆ. ಈ ಆಸಕ್ತಿಯು ದಿನೇ ದಿನೇ ಹೆಚ್ಚಾಗುತ್ತಾ ಹೋಗುತ್ತದೆ. ಕಾಲಕ್ರಮೇಣ ವ್ಯಕ್ತಿಗೆ ದೇಹದ ಮಿತಿಗಳು ಅರಿವಾಗತೊಡಗುತ್ತವೆ ಹಾಗೂ ಅವನಿಗೆ ಕೆಲವು ರೋಗಗಳಾಗುತ್ತವೆ; ಆದರೂ ಅವನ ಸುಖವನ್ನು ಅನುಭವಿಸುವ ಆಸಕ್ತಿಯು ಕಡಿಮೆಯಾಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮೊದಲಿನಂತೆ ಸುಖ ಸಿಗದ ಕಾರಣ ಆ ವ್ಯಕ್ತಿಯು ದುಃಖಿಯಾಗುತ್ತಾನೆ.
೩. ತ್ಯಾಗದ ವಿಧಗಳು ಮತ್ತು ತ್ಯಾಗದಿಂದಾಗುವ ಲಾಭಗಳು
೩ ಅ. ತನುವಿನ ತ್ಯಾಗದಿಂದ ಆಗುವ ಲಾಭಗಳು
೩ ಅ ೧. ವಿವಿಧ ವಿಷಯಗಳ ಆಸಕ್ತಿ ಕಡಿಮೆಯಾಗಿ ಜೀವನವು ಆನಂದಮಯವಾಗುವುದು : ಸಾಧಕನು ಗುರುಗಳ ಅಥವಾ ಅಧ್ಯಾತ್ಮ ಪ್ರಸಾರದ ಸೇವೆಯನ್ನು ಮಾಡಿದರೆ ವಿವಿಧ ವಿಷಯಗಳ ಮೂಲಕ ಸುಖ ಪಡೆಯುವ ಅವನ ಸಂಸ್ಕಾರವು ನಿಧಾನವಾಗಿ ಕಡಿಮೆಯಾಗುತ್ತದೆ. ಅವನ ಗಮನ ಗುರು ಮತ್ತು ಗುರುಸೇವೆಯ ಮೇಲೆ ಕೇಂದ್ರೀಕೃತವಾಗುತ್ತದೆ. ಅನಂತರ ಅವನಿಗೆ ಸೇವೆಯ ಹಂಬಲ ಹುಟ್ಟುತ್ತದೆ. ಸೇವೆಯ ಮೂಲಕ ಸಾಧಕನಿಗೆ ಈಶ್ವರೀ ಶಕ್ತಿ ಮತ್ತು ಕೃಪೆ ಲಭಿಸುತ್ತದೆ. ಇದರಿಂದ ಅವನಿಗೆ ಈಶ್ವರೀ ಆನಂದದ ಅನುಭೂತಿ ಬರುತ್ತದೆ. ಈ ಆನಂದವು ಸತತವಾಗಿ ಸಿಗುವುದರಿಂದ ಸಾಧಕನ ಮನಸ್ಸಿನಲ್ಲಿರುವ ವಿವಿಧ ವಿಷಯಗಳ ಆಸಕ್ತಿಯು ಕಡಿಮೆಯಾಗುತ್ತದೆ.
೩ ಅ ೨. ವೃತ್ತಿಯು ತ್ಯಾಗಿಯಾಗುವುದು : ದೇಹದಿಂದ ಸತತವಾಗಿ ಗುರುಗಳ ಸೇವೆಯನ್ನು ಮಾಡುವುದರಿಂದ ಸಾಧಕನ ಮನಸ್ಸಿನಲ್ಲಿನ ಭೋಗಗಳನ್ನು ಭೋಗಿಸುವ ಇಚ್ಛೆಯು ಕಡಿಮೆಯಾಗಿ ಅವನ ವೃತ್ತಿಯು ತ್ಯಾಗಿಯಾಗುತ್ತದೆ. ಇದರಿಂದ ಅವನು ವಿವಿಧ ವಿಷಯಗಳಿಂದ ಸಿಗುವ ಸುಖ ಮತ್ತು ದುಃಖಗಳ ಆಚೆಗಿನ ಆನಂದದ ವಿಶ್ವವನ್ನು ಅನುಭವಿಸತೊಡಗುತ್ತಾನೆ.
೩ ಅ ೩. ದೇಹದಲ್ಲಿನ ರಜ-ತಮವು ಕಡಿಮೆಯಾಗುವುದು : ಸಾಧಕನಲ್ಲಿ ಪ್ರಾರಬ್ಧ, ಕೆಟ್ಟ ಶಕ್ತಿಗಳ ತೊಂದರೆ ಮತ್ತು ಬಾಹ್ಯ ವಾತಾವರಣ’, ಇವುಗಳಿಂದ ರಜ-ತಮವು ನಿರ್ಮಾಣವಾಗಿರುತ್ತದೆ. ಸಾಧಕನಿಗೆ ಸೇವೆಯ ಮೂಲಕ ಈಶ್ವರೀ ಶಕ್ತಿಯು ಲಭಿಸುತ್ತದೆ. ಇದರಿಂದ ಅವನ ಶರೀರದಲ್ಲಿನ ರಜ-ತಮಾತ್ಮಕ ಕಣಗಳು ನಾಶವಾಗುವ ಪ್ರಕ್ರಿಯೆಯು ಆರಂಭವಾಗುತ್ತದೆ.
೩ ಅ ೪. ಆರೋಗ್ಯ ಪ್ರಾಪ್ತಿ : ಸಾಧಕನು ಗುರುಗಳಿಗಾಗಿ ತನುವಿನ ತ್ಯಾಗ ಮಾಡುವುದರಿಂದ ಗುರುಗಳು ಸೂಕ್ಷ್ಮ ರೂಪದಲ್ಲಿ ಅವನ ದೇಹದ ಕಾಳಜಿ ತೆಗೆದುಕೊಳ್ಳುತ್ತಾರೆ. ಕೆಲವು ಸಾಧಕರಿಗೆ ಪ್ರಾರಬ್ಧದಿಂದ ಬರುವ ರೋಗಗಳ ತೊಂದರೆಗಳನ್ನು ಸಹಿಸಬೇಕಾಗುತ್ತದೆ. ಆ ತೊಂದರೆಗಳನ್ನು ಸಹಿಸುವ ಶಕ್ತಿಯನ್ನು ಗುರುಗಳು ಸಾಧಕನಿಗೆ ನೀಡುತ್ತಾರೆ. ಹಾಗೆಯೇ ಕೆಲವು ಸಾಧಕರಿಗೆ ಉತ್ತಮ ಆರೋಗ್ಯ ಪ್ರಾಪ್ತವಾಗುತ್ತದೆ.
೩ ಅ ೫. ದೇಹಬುದ್ಧಿ ಕಡಿಮೆಯಾಗುವುದು : ವ್ಯಕ್ತಿಯ ಶರೀರವು ಪೃಥ್ವಿ, ಆಪ, ತೇಜ, ವಾಯು ಮತ್ತು ಆಕಾಶ ಈ ಪಂಚ ತತ್ತ್ವಗಳಿಂದ ತಯಾರಾಗಿದೆ. ಗುರುಸೇವೆಯ ಮೂಲಕ ಸಾಧಕನಲ್ಲಿನ ರಜ-ತಮವು ಕಡಿಮೆಯಾಗುತ್ತದೆ ಮತ್ತು ಅವನ ದೇಹದಲ್ಲಿನ ಪೃಥ್ವಿತತ್ತ್ವದ ಶುದ್ಧಿಯಾಗುತ್ತದೆ. ಇದರಿಂದ ಸಾಧಕನ ದೇಹಬುದ್ಧಿ ಕಡಿಮೆಯಾಗಿ ಅವನಿಗೆ ಹಗುರತನ ಮತ್ತು ಉತ್ಸಾಹದ ಅರಿವಾಗುತ್ತದೆ.
೩ ಅ ೬. ಅಹಂಕಾರ ಕಡಿಮೆಯಾಗಲು ಸಹಾಯವಾಗುವುದು : ಸಾಧಕನು ವಿವಿಧ ವಿಷಯಗಳಲ್ಲಿ ಸಿಲುಕಿಕೊಳ್ಳದೆ ಗುರುಸೇವೆಗಾಗಿ ದೇಹದ ತ್ಯಾಗ ಮಾಡುವುದರತ್ತ ಗಮನವನ್ನು ಕೇಂದ್ರೀಕರಿಸುತ್ತಾನೆ. ಇದರಿಂದ ಸಾಧಕನಿಗೆ ತನ್ನ ಸ್ವಂತದ ಸುಖದ ವಿಚಾರವು ಕಡಿಮೆಯಾಗುತ್ತದೆ. ಇದರ ಪರಿಣಾಮದಿಂದ ಅವನ ಅಹಂ ಕಡಿಮೆಯಾಗುತ್ತದೆ.
೩ ಅ ೭. ಗುರುಕೃಪೆಯಾಗುವುದು : ಸತತವಾಗಿ ಗುರುಸೇವೆ ಅಥವಾ ಅಧ್ಯಾತ್ಮ ಪ್ರಸಾರಕ್ಕಾಗಿ ಸೇವಾನಿರತನಾಗಿರುವುದರಿಂದ ಸಾಧಕನ ಮೇಲೆ ಗುರುಕೃಪೆಯಾಗುತ್ತದೆ. ಅವನ ಮೇಲೆ ಗುರುಗಳ ಕೃಪಾದೃಷ್ಟಿ ಯಾವಾಗಲೂ ಇರುತ್ತದೆ. ಆದ್ದರಿಂದ ಸಾಧಕನ ಸಾಧನೆಯಲ್ಲಿನ ಅಡಚಣೆಗಳು ಕ್ರಮೇಣ ಕಡಿಮೆಯಾಗತೊಡಗುತ್ತವೆ.
೩ ಅ ೮. ದೇಹದ ಶುದ್ಧಿಯಾಗುವುದು : ತನುವಿನ ತ್ಯಾಗದಿಂದ ಸಾಧಕನ ದೇಹದಲ್ಲಿ ಈಶ್ವರೀ ತತ್ತ್ವ್ವವು ವೃದ್ಧಿಯಾಗುತ್ತದೆ. ಇದರಿಂದ ಸಾಧಕನ ಶರೀರದ ಶುದ್ಧಿಯಾಗತೊಡಗುತ್ತದೆ.
೩ ಅ ೯. ದೇಹದಲ್ಲಿ ದೇವತ್ವವು ನಿರ್ಮಾಣವಾಗುವುದು : ತನುವನ್ನು ಭಗವಂತನಿಗಾಗಿ ಅರ್ಪಿಸುವಾಗ ಸಾಧಕನ ಪ್ರತಿಯೊಂದು ಅವಯವವು ಭಗವಂತನ ಸೇವೆಯಲ್ಲಿ ಸಮರ್ಪಿತವಾಗುತ್ತದೆ. ಆದುದರಿಂದ ಭಗವಂತನು ಪ್ರಸನ್ನನಾಗುತ್ತಾನೆ. ಭಗವಂತನ ಕೃಪೆಯಿಂದ ಸಾಧಕನ ಶರೀರದಲ್ಲಿ ದೇವತ್ವವು ಬರುತ್ತದೆ.
೩ ಆ. ಮನಸ್ಸಿನ ತ್ಯಾಗದಿಂದಾಗುವ ಲಾಭಗಳು
೩ ಆ ೧. ಧ್ಯೇಯದ ಸ್ಮರಣೆ ಇರುವುದು : ಮನಸ್ಸನ್ನು ಸತತವಾಗಿ ದೇವರಿಗೆ ಅರ್ಪಿಸುತ್ತಾ ಹೋದರೆ ಸಾಧಕನಿಗೆ ‘ನಾನು ಸಾಧನೆ ಮಾಡಿ ಈಶ್ವರಪ್ರಾಪ್ತಿಯನ್ನು ಸಾಧಿಸಬೇಕಾಗಿದೆ’ ಎಂಬ ಧ್ಯೇಯದ ಸ್ಮರಣೆ ಉಳಿಯಲು ಸಹಾಯವಾಗುತ್ತದೆ.
೩ ಆ ೨. ವಿವಿಧ ವಿಷಯಗಳಿಂದ ಅಲಿಪ್ತವಾಗುವುದು : ಗುರು ಅಥವಾ ದೇವರ ಸತತ ಸ್ಮರಣೆಯನ್ನು ಮಾಡುವುದರಿಂದ ಸಾಧಕನ ಮನಸ್ಸಿನಲ್ಲಿನ ಇಚ್ಛೆ ಮತ್ತು ವಾಸನಾಯುಕ್ತ ವಿಚಾರಗಳು ಕಡಿಮೆಯಾಗುತ್ತವೆ. ಅದರಿಂದ ಸಾಧಕನ ಮನಸ್ಸು ವಿವಿಧ ವಿಷಯಗಳಿಂದ ಅಲಿಪ್ತವಾಗುತ್ತದೆ. ಇದರ ಪರಿಣಾಮದಿಂದ ಸಾಧಕನ ಮನಸ್ಸು ಸುಖ ಮತ್ತು ದುಃಖದಲ್ಲಿ ಸಿಲುಕದೆ ಅವನಿಗೆ ಸ್ಥಿರವಾಗಿರಲು ಬರುತ್ತದೆ. ಇದರಿಂದ ಅವನ ಪ್ರಾರಬ್ಧದಲ್ಲಿ ಹೊಸದಾಗಿ ಏನೂ ಸೇರ್ಪಡೆಯಾಗುವುದಿಲ್ಲ.
೩ ಆ ೩. ಪ್ರಾರಬ್ಧಭೋಗಗಳು ಕಡಿಮೆಯಾಗುವುದು : ಈಗಿನ ಮತ್ತು ಹಿಂದಿನ ಜನ್ಮಗಳ ಕರ್ಮದೋಷಗಳಿಂದಾಗಿ ಸಾಧಕನ ಅಂತರ್ಮನದಲ್ಲಿ ಕರ್ಮದೋಷಗಳ ಕೇಂದ್ರಗಳು ನಿರ್ಮಾಣ ವಾಗಿರುತ್ತವೆ. ಆದುದರಿಂದ ಸಾಧಕನಿಗೆ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಸಾಧಕನು ಮನಸ್ಸನ್ನು ಸತತವಾಗಿ ಭಗವಂತನಿಗೆ ಅರ್ಪಿಸುವುದರಿಂದ ಅವನ ಕರ್ಮದೋಷಗಳ ತೀವ್ರತೆಯು ಕಡಿಮೆಯಾಗುತ್ತದೆ ಹಾಗೆಯೇ ಅವನಿಗೆ ಕರ್ಮದೋಷಗಳನ್ನು ಭೋಗಿಸುವ ಶಕ್ತಿಯು ಲಭಿಸುತ್ತದೆ. ಇದರಿಂದ ಅವನ ಸಹಿಸಲಾಗದ ಪ್ರಾರಬ್ಧವು ಸಹನೀಯವಾಗುತ್ತದೆ.
೩ ಆ ೪. ಹೊಸ ಕರ್ಮದೋಷಗಳು ನಿರ್ಮಾಣವಾಗುವುದಿಲ್ಲ : ಮನಸ್ಸು ಭಗವಂತನ ನಾಮದ ಮೇಲೆ ಕೇಂದ್ರೀಕೃತವಾಗುವುದರಿಂದ ಸಾಧಕನ ಮನಸ್ಸು ಸಾತ್ತ್ವಿಕವಾಗುತ್ತದೆ. ಇದರಿಂದ ಅವನು ಅಯೋಗ್ಯ ಕರ್ಮಗಳನ್ನು ಮಾಡುವುದರಿಂದ ದೂರವಿರುತ್ತಾನೆ. ಇದರ ಪರಿಣಾಮದಿಂದ ಸಾಧಕನಲ್ಲಿ ಹೊಸ ಕರ್ಮದೋಷಗಳು ಉಂಟಾಗುವುದಿಲ್ಲ.
೩ ಆ ೫. ದುಃಖವನ್ನು ಸಹಿಸುವ ಶಕ್ತಿ ಸಿಗುವುದು : ಪ್ರಾರಬ್ಧದ ತೀವ್ರತೆಯು ಹೆಚ್ಚಿದ್ದರೆ ವ್ಯಕ್ತಿಯು ಹತಾಶನಾಗುತ್ತಾನೆ. ದೇವರ ಸ್ಮರಣೆಯನ್ನು ಸತತವಾಗಿ ಮಾಡುವುದರಿಂದ ಅವನಿಗೆ ದೇವರ ಆಧಾರ ಸಿಗುತ್ತದೆ ಮತ್ತು ದುಃಖವನ್ನು ಸಹಿಸುವ ಶಕ್ತಿಯು ಬರುತ್ತದೆ ಹಾಗೆಯೇ ಸಕಾರಾತ್ಮಕವಾಗಿದ್ದು ಜೀವನವನ್ನು ನಡೆಸಲು ಪ್ರೇರಣೆ ಸಿಗುತ್ತದೆ.
೩ ಆ ೬. ಆಧ್ಯಾತ್ಮಿಕ ತೊಂದರೆಗಳ ನಿವಾರಣೆಯಾಗುವುದು : ಸಾಧಕನು ಸಾಧನೆ ಮಾಡುವಾಗ ‘ಹಿಂದಿನ ಜನ್ಮಗಳ ಕೊಡು-ಕೊಳ್ಳುವಿಕೆಯ ಲೆಕ್ಕಾಚಾರ ಮತ್ತು ಪ್ರಸ್ತುತ ಜನ್ಮದಲ್ಲಿನ ಕೆಟ್ಟ ಶಕ್ತಿಗಳ ತೊಂದರೆ’ಗಳನ್ನು ಎದುರಿಸಬೇಕಾಗುತ್ತದೆ. ಸಾಧಕನಿಗೆ ಶಾರೀರಿಕ, ಮಾನಸಿಕ, ಆಧ್ಯಾತ್ಮಿಕ ಮತ್ತು ಕೌಟುಂಬಿಕ ತೊಂದರೆಗಳನ್ನು ಸಹಿಸಬೇಕಾಗುತ್ತದೆ. ಸತತವಾಗಿ ನಾಮಜಪ ಮಾಡುವುದರಿಂದ ಅವನ ಆಧ್ಯಾತ್ಮಿಕ ತೊಂದರೆಯು ಕಡಿಮೆಯಾಗಿ ಕಾಲಕ್ರಮೇಣ ಅವನ ಈ ತೊಂದರೆಗಳು ಸಂಪೂರ್ಣವಾಗಿ ದೂರವಾಗುತ್ತವೆ; ಏಕೆಂದರೆ ಕೆಟ್ಟ ಶಕ್ತಿಗಳು ಎಷ್ಟೇ ಪ್ರಬಲವಾಗಿದ್ದರೂ ಭಗವಂತನು ಸರ್ವಶಕ್ತಿವಂತನಾಗಿದ್ದಾನೆ.
೩ ಆ ೭. ಮನೋಬಲವು ಹೆಚ್ಚಾಗುವುದು : ವಿವಿಧ ವಿಷಯಗಳಲ್ಲಿ ವ್ಯಕ್ತಿಯ ಮನಸ್ಸಿನ ಶಕ್ತಿಯು ಬಹಳಷ್ಟು ಖರ್ಚಾಗುತ್ತದೆ. ಮನಸ್ಸನ್ನು ನಾಮಜಪದಲ್ಲಿ ತೊಡಗಿಸಿದರೆ ಮನಸ್ಸಿನ ಶಕ್ತಿಯು ಖರ್ಚಾಗುವುದಿಲ್ಲ. ಇದರ ಪರಿಣಾಮದಿಂದ ಸಾಧಕನ ಮನೋಬಲವು ಹೆಚ್ಚಾಗುತ್ತದೆ.
೩ ಆ ೮. ಮನಸ್ಸಿನ ಶುದ್ಧಿಯಾಗುವುದು : ಸಾಧಕನು ನಾಮಜಪದ ಜೊತೆಗೆ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಹಾಗೂ ಗುಣಸಂವರ್ಧನೆ ಪ್ರಕ್ರಿಯೆ ನಡೆಸುವುದು ಮಹತ್ವದ್ದಾಗಿದೆ. ಸಾಧಕನು ಸ್ವಭಾವದೋಷ ಮತ್ತು ಅಹಂನ ನಿರ್ಮೂಲನೆಗಾಗಿ ಪ್ರಯತ್ನಿಸುವುದರಿಂದ ಅವನಲ್ಲಿನ ರಜ-ತಮವು ಕಡಿಮೆಯಾಗುತ್ತದೆ ಹಾಗೂ ಗುಣಸಂವರ್ಧನೆ ಮಾಡುವುದರಿಂದ ಸತ್ತ್ವಗುಣವು ಹೆಚ್ಚಾಗುತ್ತದೆ. ಇದರಿಂದ ಸಾಧಕನ ಮನಸ್ಸಿನ ಶುದ್ಧಿಯು ಪರಿಣಾಮಕಾರಿಯಾಗಿ ಆಗುತ್ತದೆ. ಈ ಪ್ರಕ್ರಿಯೆಯ ಮೂಲಕ ಸಾಧಕನ ಸಾಧನೆಯ ಅಡಿಪಾಯವು ಭದ್ರವಾಗುತ್ತದೆ. ಮನಸ್ಸಿನ ಅಡಚಣೆಯು ಕಡಿಮೆಯಾಗುವುದರಿಂದ ಸಾಧಕನ ಶೀಘ್ರ ಆಧ್ಯಾತ್ಮಿಕ ಪ್ರಗತಿಯ ಮಾರ್ಗವು ಸುಗಮವಾಗುತ್ತದೆ. ಸನಾತನ ಧರ್ಮದಲ್ಲಿ ಈಶ್ವರಪ್ರಾಪ್ತಿಗಾಗಿ ಚಿತ್ತಶುದ್ಧಿಗೆ ಮಹತ್ವ ನೀಡಲಾಗಿದೆ. ತನ್ನನ್ನು ತಾನು ಬದಲಾಯಿಸಿಕೊಳ್ಳುವುದರತ್ತ ಗಮನ ನೀಡುವುದರಿಂದ ಸಾಧಕನ ಚಿತ್ತಶುದ್ಧಿಯ ಪ್ರಕ್ರಿಯೆಯು ನಡೆಯುತ್ತದೆ.
೩ ಆ ೯. ಭಾವ ನಿರ್ಮಾಣವಾಗಿ ದೇವರ ಸಹಾಯ ಲಭಿಸುವುದು : ಸಾಧಕನು ಭಗವಂತನ ಅನುಸಂಧಾನದಲ್ಲಿ ಇರುವುದರಿಂದ ಅವನಲ್ಲಿ ಕ್ರಮೇಣ ಈಶ್ವರನ ಬಗ್ಗೆ ಭಾವ ನಿರ್ಮಾಣವಾಗುತ್ತದೆ. ಆದುದರಿಂದ ಅವನಿಗೆ ಭಗವಂತನ ವಿಚಾರಗಳನ್ನು ಗ್ರಹಿಸಲು ಸಾಧ್ಯವಾಗುತ್ತದೆ. ಈ ಪರಿಣಾಮದಿಂದ ಸಾಧಕನಿಗೆ ‘ಪ್ರಸಂಗಕ್ಕೆ ಅನುಗುಣವಾಗಿ ವರ್ತಿಸುವುದು, ಮಾತನಾಡುವುದು ಮತ್ತು ಸಂಕಟದಿಂದ ಹೊರಬರುವುದು’ ಇವುಗಳ ಜ್ಞಾನವಾಗಿ ಅವನ ಜೀವನವು ಸುಗಮವಾಗುತ್ತದೆ.
೩ ಆ ೧೦. ಮನೋಲಯವಾಗುವುದು : ದೇವರ ಸ್ಮರಣೆಯಿಂದ ಹಾಗೂ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಮತ್ತು ಗುಣಸಂವರ್ಧನೆಯ ಪ್ರಕ್ರಿಯೆಯನ್ನು ನಡೆಸುವುದರಿಂದ ಸಾಧಕನ ಮನಸ್ಸು ನಾಶವಾಗಿ ಅದು ಈಶ್ವರನ ಮನಸ್ಸಾಗುತ್ತದೆ. ಅದರಿಂದ ಸಾಧಕನಿಗೆ ಈಶ್ವರನ ವಿಚಾರಗಳು ಗ್ರಹಣವಾಗತೊಡಗುತ್ತವೆ.
೩ ಆ ೧೧. ನಿರ್ವಿಚಾರ ಸ್ಥಿತಿ ಪ್ರಾಪ್ತವಾಗುವುದು : ಸಾಧಕನು ದೇವರಿಗೆ ಮನಸ್ಸನ್ನು ಸತತವಾಗಿ ಅರ್ಪಿಸಿದಾಗ ಅವನಿಗೆ ಕಾಲಾಂತರದಲ್ಲಿ ನಿರ್ವಿಚಾರ ಸ್ಥಿತಿಯು ಪ್ರಾಪ್ತವಾಗುತ್ತದೆ. ಈ ಸ್ಥಿತಿಯಲ್ಲಿ ಮನಸ್ಸಿನ ಮೂಲಕ ನಿರ್ಮಾಣವಾಗುವ ಅಸಂಖ್ಯಾತ ಭಾವನೆಗಳು ಮುಗಿದು ಹೋಗುತ್ತವೆ. ಆಗ ಅವನಿಗೆ ದೈವೀ ಜೀವನವು ಲಭಿಸುತ್ತದೆ. ಈ ಸ್ಥಿತಿಯಲ್ಲಿ ಸಾಧಕನ ಮೇಲೆ ಒಳ್ಳೆಯ ಮತ್ತು ಕೆಟ್ಟ ಪರಿಸ್ಥಿತಿಯ ಯಾವುದೇ ಪರಿಣಾಮವಾಗುವುದಿಲ್ಲ. ಆಗ ಸಾಧಕನು ಕರ್ಮಬಂಧನದ ಆಚೆಗೆ ಹೋಗಿರುತ್ತಾನೆ.
೩ ಆ ೧೨. ದೇವರ ಸತತ ಸ್ಮರಣೆಯಿಂದ ಅಥವಾ ನಿರ್ವಿಚಾರ ಸ್ಥಿತಿಯಿಂದ ಸಾಧಕನಿಗೆ ಎಲ್ಲ ಪ್ರಸಂಗಗಳಲ್ಲಿ ಆನಂದವಾಗಿರಲು ಸಾಧ್ಯವಾಗುತ್ತದೆ, ಹಾಗೆಯೇ ಅವನಿಗೆ ತನ್ನ ಹೃದಯದಲ್ಲಿ ಭಗವಂತನ ವಾಸ ಮತ್ತು ಪ್ರೇಮವನ್ನು ಅನುಭವಿಸಲು ಸಾಧ್ಯವಾಗುತ್ತದೆ.
೩ ಇ. ಧನದ ತ್ಯಾಗದಿಂದಾಗುವ ಲಾಭಗಳು
೩ ಇ ೧. ಈಶ್ವರನೇ ಸಾಧಕನ ಎಲ್ಲ ಜವಾಬ್ದಾರಿಯನ್ನು ತೆಗೆದುಕೊಳ್ಳುವುದು : ಕಲಿಯುಗದಲ್ಲಿ ಧನದ ಮೂಲಕವೇ ವ್ಯಕ್ತಿಗೆ ಜೀವನವನ್ನು ನಡೆಸಲು ಸಾಧ್ಯವಿದೆ. ಆದ್ದರಿಂದ ಅವನು ಧನದ ಮೇಲೆ ಸಂಪೂರ್ಣವಾಗಿ ಅವಲಂಬಿಸಿರುತ್ತಾನೆ. ಹಣದ ಅಭಾವದಿಂದ ವ್ಯಕ್ತಿಯ ಜೀವನದಲ್ಲಿ ಅಸಂಖ್ಯಾತ ಅಡಚಣೆಗಳು ಬರುತ್ತವೆ. ಆದ್ದರಿಂದ ಇದನ್ನು ಅತ್ಯಂತ ಕಠಿಣ ಪ್ರಾರಬ್ಧವೆಂದು ನಂಬಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಯಾವಾಗ ಸಾಧಕನು ಧನದ ಪೂರ್ಣ ತ್ಯಾಗ ಮಾಡಿ ತನ್ನ ಜೀವನವನ್ನು ಗುರುಗಳಿಗೆ ಅರ್ಪಿಸುತ್ತಾನೋ, ಆಗ ಗುರುಗಳೇ ಸ್ವತಃ ಆ ಸಾಧಕನ ಎಲ್ಲ ಜವಾಬ್ದಾರಿಯನ್ನು ಹೊತ್ತುಕೊಳ್ಳುತ್ತಾರೆ ಮತ್ತು ಅವನನ್ನು ಎಲ್ಲ ರೀತಿಯಿಂದಲೂ ರಕ್ಷಿಸುತ್ತಾರೆ.
೩ ಇ ೨. ಭೋಗಿ ವೃತ್ತಿ ಕಡಿಮೆಯಾಗಿ ಜೀವನವು ಸಮಾಧಾನಕರ ಆಗುವುದು : ವ್ಯಕ್ತಿಯ ಮನಸ್ಸಿನಲ್ಲಿ ಧನದಿಂದಾಗಿ ವಿವಿಧ ಇಚ್ಛೆಗಳು ಮತ್ತು ವಾಸನೆಗಳು ನಿರ್ಮಾಣವಾಗುತ್ತವೆ ಹಾಗೂ ಅವನ ವೃತ್ತಿಯು ಭೋಗಿಯಾಗುತ್ತದೆ. ಇವುಗಳಿಂದ ಅವನ ಅಹಂಕಾರವು ಹೆಚ್ಚುತ್ತಾ ಹೋಗುತ್ತದೆ. ಅದರಿಂದ ಅವನ ಜೀವನವು ಅಸಮಾಧಾನ ಮತ್ತು ಅಶಾಂತಿಯಿಂದ ಕೂಡಿರುತ್ತದೆ. ಸಾಧಕನು ಹಂತಹಂತವಾಗಿ ಧನದ ತ್ಯಾಗ ಮಾಡಿದಾಗ, ಅವನಲ್ಲಿನ ಭೋಗಿ ವೃತ್ತಿಯು ಕಡಿಮೆಯಾಗುತ್ತದೆ. ಅದರಿಂದ ಅವನ ಜೀವನವು ಸಮಾಧಾನಿಯಾಗತೊಡಗುತ್ತದೆ.
೩ ಇ ೩. ಜೀವನದಲ್ಲಿನ ಅಡಚಣೆಗಳು ಕಡಿಮೆಯಾಗುವುದು : ಸಾಧಕನು ಧನದ ತ್ಯಾಗ ಮಾಡತೊಡಗಿದರೆ ಅವನ ಮೇಲೆ ಗುರುಗಳ ಕೃಪಾದೃಷ್ಟಿ ಇರುತ್ತದೆ. ‘ಇಂತಹ ಸಾಧಕನಿಗೆ ವರ್ತಮಾನದಲ್ಲಿ ಮತ್ತು ಭವಿಷ್ಯದಲ್ಲಿ ಆರ್ಥಿಕ ತೊಂದರೆಗಳು ಬಾರದಂತೆ’, ಗುರುಗಳು ಕಾಳಜಿ ವಹಿಸುತ್ತಾರೆ. ಕೆಲವು ಸಾಧಕರ ವಿಷಯದಲ್ಲಿ ಗುರುಗಳು ಪ್ರತ್ಯಕ್ಷವಾಗಿ ಅಥವಾ ಸೂಕ್ಷ್ಮ ರೂಪದಲ್ಲಿ ಆ ಸಾಧಕನ ತೊಂದರೆಗಳನ್ನು ದೂರ ಮಾಡುತ್ತಾರೆ. ಕೆಲವು ಸಾಧಕರಿಗೆ ಆರ್ಥಿಕ ತೊಂದರೆಗಳು ಬಂದರೂ, ಗುರುಗಳು ಅವರಿಗೆ ಅವುಗಳಿಂದ ಹೊರಬರುವ ದಾರಿಯನ್ನು ತೋರಿಸುತ್ತಾರೆ. ವಿವಿಧ ಕಠಿಣ ಪ್ರಸಂಗಗಳಲ್ಲಿ ಗುರುಗಳು ಬೆನ್ನಿಗಿರುವುದರಿಂದ ಸಾಧಕನಿಗೆ ಸ್ಥಿರವಾಗಿರಲು ಸಾಧ್ಯವಾಗುತ್ತದೆ.
೩ ಇ ೪. ಕೆಲವು ಕೊಡು-ಕೊಳ್ಳುವಿಕೆಯ ಲೆಕ್ಕಾಚಾರಗಳು ತೀರುವುದು : ವ್ಯಕ್ತಿಯ ಅನೇಕ ಜನ್ಮಗಳು ಆಗಿರುತ್ತವೆ. ಅವುಗಳಲ್ಲಿ ‘ಅವನು ಎಷ್ಟು ಜನರಿಂದ ಹಣ ಪಡೆದಿದ್ದಾನೆ ? ಮತ್ತು ಅವನಿಗೆ ಎಷ್ಟು ಜನರಿಂದ ಹಣ ಬರಬೇಕಿದೆ ?’ ಎಂಬುದು ಅವನಿಗೆ ತಿಳಿದಿರುವುದಿಲ್ಲ. ಇಂತಹ ಅನೇಕ ಕೊಡು-ಕೊಳ್ಳುವಿಕೆಯ ಲೆಕ್ಕಾಚಾರಗಳು ಉಂಟಾಗಿರುತ್ತವೆ. ಆದುದರಿಂದ ವ್ಯಕ್ತಿಯ ಪ್ರಸ್ತುತ ಜನ್ಮದಲ್ಲಿ ಅನೇಕ ಸಂಕಟಗಳು ಬರುತ್ತಿರುತ್ತವೆ. ಈ ಕೊಡು-ಕೊಳ್ಳುವಿಕೆಯ ಲೆಕ್ಕಾಚಾರಗಳನ್ನು ತೀರಿಸಲು ಸಾಧಕನ ಸಾಧನೆಯು ಖರ್ಚಾಗುತ್ತಿರುತ್ತದೆ. ಗುರುಗಳಿಗೆ ಹಣವನ್ನು ಅರ್ಪಿಸುವುದರಿಂದ ಸಾಧಕನ ಅಂತಹ ಕೆಲವು ಕೊಡು-ಕೊಳ್ಳುವಿಕೆಯ ಲೆಕ್ಕಾಚಾರಗಳು ತೀರಲು ಸಹಾಯವಾಗುತ್ತದೆ.
೩ ಇ ೫. ಲಕ್ಷ್ಮಿಯ ಕೃಪೆಯಾಗುವುದು : ಸಾಧಕನು ಗುರುಗಳ ಕೃಪೆಯನ್ನು ಪಡೆಯಲು ಧನದ ಅಂದರೆ ಲಕ್ಷ್ಮಿಯ ತ್ಯಾಗವನ್ನು ಮಾಡಿರುತ್ತಾನೆ. ಆದ್ದರಿಂದ ಅಂತಹ ಸಾಧಕನ ಮೇಲೆ ಲಕ್ಷ್ಮಿಯ ಕೃಪಾದೃಷ್ಟಿಯು ಇರುತ್ತದೆ.
೩ ಈ. ಸರ್ವಸ್ವವನ್ನು ಅರ್ಪಿಸುವ ಸಿದ್ಧತೆಯಿದ್ದರೆ ಆಗುವ ಲಾಭಗಳು : ಜೀವನವನ್ನು ಜೀವಿಸಲು ಪ್ರಾಣವೇ ಸರ್ವಸ್ವವಾಗಿರುತ್ತದೆ. ಯಾವ ಸಾಧಕನು ತನ್ನ ಸ್ವಂತದ ಬಗ್ಗೆ ಯಾವುದೇ ವಿಚಾರ ಮಾಡದೆ ಗುರು ಅಥವಾ ಗುರುಕಾರ್ಯಕ್ಕಾಗಿ ಎಲ್ಲವನ್ನೂ ಅರ್ಪಿಸಲು ಯಾವಾಗಲೂ ಸಿದ್ಧನಾಗಿರುತ್ತಾನೋ, ಆಗ ಅವನ ತ್ಯಾಗವು ಅತ್ಯಂತ ಶ್ರೇಷ್ಠವಾದುದೆಂದು ಪರಿಗಣಿಸಲ್ಪಟ್ಟಿದೆ. ಇಂತಹ ಸಾಧಕನ ಮೇಲೆ ಸೂಕ್ಷ್ಮ ರೂಪದಲ್ಲಿ ಗುರುಗಳ ಮತ್ತು ಈಶ್ವರನ ಸತತ ಗಮನವಿರುತ್ತದೆ. ಇಂತಹ ಸಾಧಕನ ಆಧ್ಯಾತ್ಮಿಕ ಪ್ರಗತಿಯು ಅತೀ ವೇಗವಾಗಿ ಆಗುತ್ತದೆ.
೪. ತನು-ಮನ-ಧನ ಇವುಗಳ ತ್ಯಾಗ ಮತ್ತು ಸರ್ವಸ್ವವನ್ನು ಅರ್ಪಿಸುವ ಸಿದ್ಧತೆಯಿಂದ ಸಾಧಕನಲ್ಲಿನ ಅಹಂಕಾರವು ಲಯ ಆಗತೊಡಗುತ್ತದೆ. ಅವನ ಸಂಚಿತ ಮತ್ತು ಪ್ರಾರಬ್ಧ ಮುಗಿಯುತ್ತವೆ. ಅವನಿಗೆ ಈಶ್ವರಪ್ರಾಪ್ತಿಯಾಗುತ್ತದೆ ಮತ್ತು ಅವನ ಜೀವನವು ಸಾರ್ಥಕವಾಗುತ್ತದೆ.’
– ಶ್ರೀ. ರಾಮ ಹೊನಪ (ಸೂಕ್ಷ್ಮದಿಂದ ದೊರಕಿದ ಜ್ಞಾನ), ಸನಾತನ ಆಶ್ರಮ, ರಾಮನಾಥಿ, ಗೋವಾ. (ಜ್ಞಾನ ದೊರಕಿದ ದಿನಾಂಕ ೭.೯.೨೦೨೫)
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹಣೆಯಲ್ಲಿ ಮೂಡಿದ ಕಮಲವು ಸ್ಪಷ್ಟವಾಗಿ ಕಾಣುವುದರ ಕಾರಣವೇನು !