ಕಷ್ಟ ಕಾಲದಲ್ಲಿ ದೇವರ ನೆನಪು ಪ್ರಬಲವಾಗುವುದು

ದ್ರೌಪದಿಗೆ ತನ್ನ ಶೀಲವನ್ನು ರಕ್ಷಿಸಲು ಪತಿ ಮತ್ತು ಮಾವಂದಿರು ಅಸಮರ್ಥರು ಎಂದು ತಿಳಿದಾಗ ಅವಳು ಕೃಷ್ಣನನ್ನು ಸ್ಮರಿಸಿದಳು ಮತ್ತು ದಯಾಳು ಕೃಷ್ಣನು ಪ್ರತ್ಯಕ್ಷವಾಗಿ ಅವಳಿಗೆ ಅಗಣಿತ ವಸ್ತ್ರಗಳನ್ನು ನೀಡಿದನು.

‘ಶ್ರೀ ಗುರುಗಳೇ ಅಜ್ಞಾನವನ್ನು ದೂರ ಗೊಳಿಸುವ ‘ಬ್ರಹ್ಮ’ ಸ್ವರೂಪರಾಗಿದ್ದಾರೆ.

‘ಗುರುಗಳ ಮಾರ್ಗದರ್ಶನವನ್ನು ಭಕ್ತರು, ಸಾಧಕರು ಅಥವಾ ಶಿಷ್ಯರು ಆಚರಣೆಯಲ್ಲಿ ತಂದರೆ, ಅವರ ಸಾಧನೆಯನ್ನು ಶ್ರೀ ಗುರುಗಳೇ ಮಾಡಿಸಿ ಕೊಳ್ಳುತ್ತಾರೆ. ಗುರುಗಳು ಅವನಿಗೆ ಅನುಭೂತಿ ಮತ್ತು ಪ್ರತ್ಯಕ್ಷ ಸ್ವರೂಪದ ಜ್ಞಾನವನ್ನು ನೀಡಿ ಅವನ ಅಜ್ಞಾನವನ್ನು ದೂರ ಮಾಡುತ್ತಾರೆ.

ಅಹಂಕಾರವನ್ನು ನಾಶಪಡಿಸುವ ಉಪಾಯ

ಭಗವಂತ ಮತ್ತು ನಮ್ಮ ನಡುವೆ ಅಭಿಮಾನದ (ಅಹಂಕಾರದ) ಪರದೆ(ತೆರೆ) ಇದೆ. ಇದು ತೊಲಗಿದರೆ ನಮಗೆ ಭಗವತ್ಪ್ರಾಪ್ತಿಯಾಗುತ್ತದೆ. ಭಕ್ತಿಮಾರ್ಗವು ಸುಲಭವಾಗಿದೆ. ಭಕ್ತಿ ಎಂದರೆ ಅಭಿಮಾನರಹಿತರಾಗಿ ಭಗವಂತನಿಗೆ ಅನನ್ಯ ಶರಣಾಗುವುದು.

‘ಗುರುಗಳ ಸಂಕಲ್ಪದಿಂದ ಶಿಷ್ಯನ ಆಧ್ಯಾತ್ಮಿಕ ಪ್ರಗತಿಯಾಗುವುದೇ’, ಗುರುಕೃಪೆ !

‘ಶ್ರೀ ಗುರುಗಳೇ ಅಜ್ಞಾನವನ್ನು ದೂರ ಗೊಳಿಸುವ ‘ಬ್ರಹ್ಮ’ ಸ್ವರೂಪರಾಗಿದ್ದಾರೆ.’ಗುರುಗಳ ಮಾರ್ಗದರ್ಶನವನ್ನು ಭಕ್ತರು, ಸಾಧಕರು ಅಥವಾ ಶಿಷ್ಯರು ಆಚರಣೆಯಲ್ಲಿ ತಂದರೆ, ಅವರ ಸಾಧನೆಯನ್ನು ಶ್ರೀ ಗುರುಗಳೇ ಮಾಡಿಸಿ ಕೊಳ್ಳುತ್ತಾರೆ.

ಗುರು ಮತ್ತು ಶಿಷ್ಯ ಇವರ ಬಗ್ಗೆ ಪ.ಪೂ. ಭಕ್ತರಾಜ ಮಹಾರಾಜರ ಬೋಧನೆ ಮತ್ತು ಭಾವಾರ್ಥ

ಸುಖವು ಪ್ರಕೃತಿಯದ್ದಾಗಿದೆ, ಆದ್ದರಿಂದ ಅದು ಅಶಾಶ್ವತವಾಗಿದ್ದು, ಗುರುಗಳಲ್ಲಿ ಅದನ್ನು ಬೇಡಬಾರದು. ಹಾಗೆಯೇ ಶಾಶ್ವತ ಆನಂದವನ್ನು ನೀಡು ವುದೇ ಗುರುಗಳ ನಿಜವಾದ ಕಾರ್ಯವಾಗಿರುತ್ತದೆ ಎಂಬುದನ್ನೂ ಗಮನದಲ್ಲಿಡಬೇಕು.

ಪ.ಪೂ. ಡಾಕ್ಟರರ ದಾರ್ಶನಿಕತೆ ಬಗ್ಗೆ ಪಡೆದ ಸಾಧಕನು ಪಡೆದ ಅನುಭವ !

1994 ರಲ್ಲಿ ನಾನು ಪ.ಪೂ. ಡಾಕ್ಟರರ ಕೃಪೆಯಿಂದ ಸಾಧನೆ ಆರಂಭಿಸಿದೆನು. ಸತ್ಸಂಗ ತೆಗೆದುಕೊಳ್ಳುವುದು, ಪ್ರವಚನ ಮಾಡುವುದು ಹಾಗೂ ಅಭ್ಯಾಸವರ್ಗ ತೆಗೆದುಕೊಳ್ಳುವುದು ಇತ್ಯಾದಿ ಪ್ರಸಾರದ ಸೇವೆಗಳನ್ನು ನಾನು ಮಾಡುತ್ತಿದ್ದೆನು.

ಭಾರತೀಯ ಪರಂಪರೆಯಲ್ಲಿ ಶ್ರೀ ಗುರುಗಳ ವಿವಿಧ ರೂಪ, ಅವರ ಆಧ್ಯಾತ್ಮಿಕ ಮಹತ್ವ ಮತ್ತು ಗುರುತತ್ತ್ವದ ಗುಣಲಕ್ಷಣಗಳಿಂದ ಪರಿಪೂರ್ಣರಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !

ಯಾರು ನಿರಂತರವಾಗಿ ಸಚ್ಚಿದಾನಂದ ಸ್ಥಿತಿಯನ್ನು ಅನುಭವಿಸುತ್ತಾರೆಯೋ, ಅವರನ್ನು `ಸದ್ಗುರು’ಗಳು ಎನ್ನುತ್ತಾರೆ. ಸದ್ಗುರುಗಳು ಜಿಜ್ಞಾಸು, ಮುಮುಕ್ಷು, ಸಾಧಕ ಮತ್ತು ಶಿಷ್ಯರಿಗೆ ಮಾತ್ರವಲ್ಲ, ಸಂತರಿಗೂ ಸಾಧನೆಯ ವಿಷಯದಲ್ಲಿ ವ್ಯಷ್ಟಿ ಮತ್ತು ಸಮಷ್ಟಿ ಎರಡೂ ಸ್ತರಗಳಲ್ಲಿ ಮಾರ್ಗದರ್ಶನ ಮಾಡುತ್ತಿರುತ್ತಾರೆ.

ಭಗವಂತ ಮತ್ತು ಪರಾತ್ಪರ ಗುರು ಡಾ. ಆಠವಲೆ ಅವರಲ್ಲಿನ ಸಮಾನ ಗುಣ !

ಭಗವಂತನು `ಸುಶ್ರೋತೃ’ ಆಗಿದ್ದಾನೆ. `ಸು’ ಎಂದರೆ ಉತ್ತಮ ಮತ್ತು `ಶ್ರೋತೃ’ ಎಂದರೆ ಕೇಳುವವನು. ಭಗವಂತನಿಗೆ ಭಕ್ತನು ತನ್ನ ಜೀವನದ ಸಣ್ಣಪುಟ್ಟ ವಿಷಯಗಳನ್ನು, ಎಷ್ಟೇ ಬಾರಿ ಮತ್ತು ಯಾವುದೇ ಸಮಯದಲ್ಲಿ ಹೇಳುತ್ತಾನೆ ಮತ್ತು ಭಗವಂತ ಅದನ್ನು ಕೇಳುತ್ತಾನೆ.

ರಾಷ್ಟ್ರೋತ್ಥಾನದ ಜವಾಬ್ದಾರಿ ಮತ್ತೆ ಹೊರಬೇಕಾಗಿದೆ !

ಅನೇಕ ಬಾರಿ ಗುರು-ಶಿಷ್ಯ ಪರಂಪರೆಯನ್ನು ಕೇವಲ ಆಧ್ಯಾತ್ಮಿಕ ದೃಷ್ಟಿಯಿಂದ ನೋಡಲಾಗುತ್ತದೆ; ಆದರೆ ವಾಸ್ತವದಲ್ಲಿ ಹಾಗಲ್ಲ. ಗುರು-ಶಿಷ್ಯ ಪರಂಪರೆಯು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ವೃತ್ತಿಪರ ಮುಂತಾದ ಸಮಾಜದ ಎಲ್ಲಾ ವರ್ಗಗಳ ಮೇಲೆ ಪ್ರಭಾವ ಬೀರುತ್ತದೆ.

‘ರಾಷ್ಟ್ರಗುರು’ ಮತ್ತು `ಧರ್ಮಗುರು’ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !

`ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ವು ಕೇವಲ ಸನಾತನ ಸಂಸ್ಥೆಗೆ ಸೀಮಿತವಾಗಿಲ್ಲ. ಅದರಲ್ಲಿ ಮಹಾನ ಸಂತರು, ಕೇಂದ್ರ ಸಚಿವರು, ಗೋವಾ ಸರಕಾರದ ಸಾಂಸ್ಕೃತಿಕ ವಿಭಾಗ, ಗೋವಾದ ಮುಖ್ಯಮಂತ್ರಿಗಳು ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಉಪಸ್ಥಿತರಿದ್ದರು.