ಸರಕಾರ ಯಾವಾಗ ಬೇಕಿದ್ದರೂ ಭಾರತವನ್ನು ‘ಹಿಂದೂ ರಾಷ್ಟ್ರ’ ಎಂದು ಘೋಷಿಸಬಹುದು ! – ಮಹಂತ ಶಂಕರಾನಂದ ಸರಸ್ವತಿ, ಅಧ್ಯಕ್ಷರು, ಆನಂದ ಅಖಾಡ

ಪ್ರಯಾಗರಾಜ – ಕುಂಭಮೇಳದಲ್ಲಿನ ಧರ್ಮ ಸಂಸತ್ತಿನಲ್ಲಿ ಭಾರತವನ್ನು ‘ಹಿಂದೂ ರಾಷ್ಟ್ರ’ ಘೋಷಿಸುವುದರ ಕುರಿತು ಕೇವಲ ಆಗ್ರಹಿಸಬಹುದು; ಆದರೆ ಭಾರತವನ್ನು ‘ಹಿಂದೂ ರಾಷ್ಟ್ರ’ ಎಂದು ಘೋಷಿಸುವುದು ಸರಕಾರದ ಕೈಯಲ್ಲಿದೆ. ಸರಕಾರ ಯಾವಾಗ ಬೇಕಿದ್ದರೂ ಭಾರತವನ್ನು ‘ಹಿಂದೂ ರಾಷ್ಟ್ರ’ ಎಂದು ಘೋಷಿಸಬಹುದು, ಎಂದು ಆನಂದ ಅಖಾಡಾದ ಅಧ್ಯಕ್ಷ ಮಹಂತ ಶಂಕರನಂದ ಇವರು ಹೇಳಿದರು. ಭಾರತವನ್ನು ಹಿಂದೂ ರಾಷ್ಟ್ರಘೋಷಿಸಲು ಮಹಾಕುಂಭ ಮೇಳದಲ್ಲಿ ನಡೆಯುವ ಧರ್ಮ ಸಂಸತ್ತಿನಲ್ಲಿ ಠರಾವನ್ನು ಮಂಡಿಸುವರೆ ? ಇದರ ಕುರಿತು ಪತ್ರಕರ್ತರು ಕೇಳಿರುವ ಪ್ರಶ್ನೆಗೆ ಮಹಂತ ಶಂಕರಾನಂದ ಸರಸ್ವತಿ ಇವರು ಮೇಲಿನ ಉತ್ತರ ನೀಡಿದರು.

೧. ಮಹಾ ಕುಂಭಮೇಳದಲ್ಲಿ ಮುಸಲ್ಮಾನರಿಗೆ ಅಂಗಡಿಗಾಗಿ ಜಾಗ ನೀಡುವ ಬಗ್ಗೆ ಉತ್ತರಪ್ರದೇಶ ಸರಕಾರದಿಂದ ತೆಗೆದುಕೊಂಡಿರುವ ನಿರ್ಣಯದ ಬಗ್ಗೆ ಪತ್ರಕರ್ತರು ಕೇಳಿದಾಗ ಮಹಂತ ಶಂಕರನಂದ ಸರಸ್ವತಿ ಇವರು, “ಯಾರನ್ನು ಮುಸಲ್ಮಾನರೆಂದು ನಾವು ವಿರೋಧಿಸುವುದಿಲ್ಲ; ಆದರೆ ಅದು ನಮ್ಮ ಶ್ರದ್ದೆಗೆ ಹೊಂದುತ್ತಿಲ್ಲವಾದರೆ, ಆಗ ಅಂತಹವರಿಂದ ಕುಂಭಮೇಳದ ಪಾವಿತ್ರ್ಯ ಉಳಿಸಲು ನಾವು ಪ್ರಯತ್ನ ಮಾಡಬೇಕು. ಕುಂಭಮೇಳದ ಪಾವಿತ್ರ್ಯ ಉಳಿಯುವುದಕ್ಕಾಗಿ ಕೆಲವು ನಿಷೇಧ ಅಗತ್ಯವಿತ್ತು.” ಎಂದು ಹೇಳಿದರು.

೨. ಮಹಾಕುಂಭದಲ್ಲಿ ಆಯೋಜಿಸಿರುವ ಧರ್ಮ ಸಂಸತ್ತಿನ ಉದ್ದೇಶದ ಬಗ್ಗೆ ಮಹಂತ ಶಂಕರನಂದ ಸರಸ್ವತಿ ಇವರು, “ಹಿಂದೂ ರಾಷ್ಟ್ರ ಈ ಪರಿಕಲ್ಪನೆಯ ಕುರಿತು ಚರ್ಚೆ ನಡೆಸಲು ಧರ್ಮಸಂಸತ್ತಿನ ಆವಶ್ಯಕತೆ ಇದೆ. ಧರ್ಮಸಂಸತ್ತು ಇದು ಒಂದು ಧಾರ್ಮಿಕ ಕಾರ್ಯಕ್ರಮವಾಗಿದೆ, ಅದರ ರಾಜಕಾರಣ ಆಗಬಾರದು. ಧರ್ಮ, ಸಂಸ್ಕೃತಿ ಮತ್ತು ಶ್ರದ್ಧೆಯ ರಕ್ಷಣೆ ಆಗುವುದಕ್ಕಾಗಿ ಧರ್ಮ ಸಂಸತ್ತಿನ ಆವಶ್ಯಕತೆ ಇದೆ. ಧರ್ಮ ಮತ್ತು ರಾಜಕಾರಣ ಬೇರೆಬೇರೆ ಇರಬೇಕು. ಮಹಾ ಕುಂಭದ ಆಯೋಜನೆಯಲ್ಲಿ ಎಲ್ಲರೂ ಸಹಭಾಗಿ ಆಗಬೇಕು.” ಎಂದು ಹೇಳಿದರು.

೩. ಗಂಗೆಯ ಪಾವಿತ್ರ್ಯದ ಬಗ್ಗೆ ಮಹಂತ ಶಂಕರಾನಂದ ಇವರು, “ಗಂಗೆಯ ನೀರು ಮೂಲತಃ ಶುದ್ಧ ಮತ್ತು ಸ್ನಾನ ಮಾಡಲು ಯೋಗ್ಯವಾಗಿದೆ. ಹೀಗೆ ಇದ್ದರೂ ಕೂಡ, ಗಂಗಾಮಾತೆಯ ಸಂರಕ್ಷಣೆಗಾಗಿ ದೃಢವಾದ ನಿರ್ಣಯ ತೆಗೆದುಕೊಳ್ಳುವುದು ಆವಶ್ಯಕವಾಗಿದೆ.” ಎಂದು ಹೇಳಿದರು.

೪. ಅರ್ಚಕರಿಗೆ ಮಾಸಿಕ ವೇತನ ನೀಡುವುದರ ಕುರಿತು ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜರಿವಾಲ್ ಇವರ ಘೋಷಣೆ ರಾಜಕೀಯದಿಂದ ಕೂಡಿದೆ. ಜನರನ್ನು ಆಕರ್ಷಿತಗೊಳಿಸುವುದಕ್ಕಾಗಿ ಈ ರೀತಿಯ ಘೋಷಣೆಗಳು ಮಾಡಲಾಗುತ್ತದೆ’, ಎಂದು ಮಹಂತ ಶಂಕರನಂದ ಇವರು ಹೇಳಿದರು.
೫. ಸಂಭಲದಲ್ಲಿನ ಹಿಂಸಾಚಾರದಲ್ಲಿನ ಸಂತ್ರಸ್ತರಿಗೆ ಅಖಿಲೇಶ ಯಾದವ ಇವರು ಮಾಡಿರುವ ಆರ್ಥಿಕ ಸಹಾಯ ರಾಜಕೀಯದಿಂದ ಕೂಡಿದೆ ಎಂದು ಕೂಡ ಮಹಾಂತ ಶಂಕರನಂದ ಸರಸ್ವತಿ ಹೇಳಿದರು.