ಪ್ರಯಾಗರಾಜ ಕುಂಭ ಮೇಳ 2025
ಪ್ರಯಾಗರಾಜ್ (ಉತ್ತರ ಪ್ರದೇಶ) – ಅಟಲ್ ಆಖಾಡದ ಸುಮಾರು 3 ಸಾವಿರ ಸಾಧು-ಸಂತರು ಒಂದು ಭವ್ಯ ಪೇಶ್ವಾಯಿ ಮೂಲಕ ಕುಂಭಕ್ಷೇತ್ರವನ್ನು ಪ್ರವೇಶಿಸಿದರು. ಇದರಲ್ಲಿ ನಾಗಾ ಸಾಧುಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರು.
ಪೇಶ್ವಾಯಿಯಲ್ಲಿ ಭಾಗವಹಿಸಿದ ಸಾಧುಗಳು ದೇಹಕ್ಕೆ ಭಸ್ಮ ಹಚ್ಚಿಕೊಂಡಿದ್ದರು, ಹಾಗೆಯೇ ಅವರು ಶಸ್ತ್ರಾಸ್ತ್ರಗಳೊಂದಿಗೆ ವಿವಿಧ ಸಮರ ಕಲೆಗಳನ್ನು ಪ್ರದರ್ಶಿಸಿದರು. ಸುಮಾರು 5 ಕಿ.ಮೀ. ನಡೆದ ಈ ಪೇಶ್ವಾಯಿಗಾಗಿ ಪೊಲೀಸರು ಭಾರೀ ಬಂದೋಬಸ್ತ್ ಮಾಡಿದ್ದರು.
ಈ ಸಂದರ್ಭದಲ್ಲಿ ಅಟಲ್ ಆಖಾಡದ ಪೀಠಾಧೀಶ್ವರರಾದ ಮಹಾಮಂಡಳೇಶ್ವರ ಶ್ರೀ ಶ್ರೀ ಸ್ವಾಮಿ ವಿಶ್ವಾತ್ಮಾನಂದ ಸರಸ್ವತಿ ಮಹಾರ ಅವರನ್ನು ಬೆಳ್ಳಿ ರಥದಲ್ಲಿ ಕೂರಿಸಲಾಗಿತ್ತು. ಈ ಪೇಶ್ವಾಯಿ ನೋಡಲು ರಸ್ತೆಯ ಎರಡೂ ಬದಿಗಳಲ್ಲೂ ಭಕ್ತರು ನೆರೆದಿದ್ದರು.