ಮಹಾಕುಂಭ ಪರ್ವದಲ್ಲಿ ರಕ್ತಪಾತ ಮಾಡುವುದಾಗಿ ಮತಾಂಧ ಮುಸ್ಲಿಮರಿಂದ ಬೆದರಿಕೆ !

1 ಸಾವಿರ ಹಿಂದೂಗಳು ಕೊಲ್ಲಲ್ಪಡುತ್ತಾರೆ, ಅಲ್ಲಾ ಮಹಾನ್ ಆಗಿದ್ದಾನೆ !

ಪ್ರಯಾಗರಾಜ (ಉತ್ತರ ಪ್ರದೇಶ) – ‘ನೀವೆಲ್ಲರೂ, ನೀವೆಲ್ಲರೂ ಅಪರಾಧಿಗಳಾಗಿದ್ದೀರಿ. ಮಹಾಕುಂಭದಲ್ಲಿ ಬಾಂಬ್ ಸ್ಫೋಟ ಮಾಡುತ್ತೇವೆ. 1 ಸಾವಿರ ಹಿಂದೂಗಳನ್ನು ಕೊಲ್ಲುತ್ತೇವೆ. ‘ಅಲ್ಲಾಹ್ ಈಸ್ ಗ್ರೇಟ್’ (ಅಲ್ಲಾಹ್ ಮಹಾನ್ ಇದ್ದಾನೆ)’ ಎಂದು ‘ಎಕ್ಸ್’ ನಲ್ಲಿ ನಸರ್ ಪಠಾಣ ಹೆಸರಿನ ಖಾತೆಯಿಂದ ಬೆದರಿಕೆ ಹಾಕಲಾಗಿದೆ. ಡಿಸೆಂಬರ್ 31 ರಂದು ವಿಪಿನ ಗೌರ ಎಂಬ ಯುವಕ ಈ ಬಗ್ಗೆ ಉತ್ತರ ಪ್ರದೇಶ ಪೊಲೀಸರಿಗೆ ಇದರ ಮಾಹಿತಿ ನೀಡಿದನು. ‘ಪೊಲೀಸರು ಈ ಪ್ರಕರಣವನ್ನು ದಾಖಲಿಸಿಕೊಂಡು ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ’, ಎಂದು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ ದ್ವಿವೇದಿ ತಿಳಿಸಿದ್ದಾರೆ. ಇದಕ್ಕೂ ಮುನ್ನ ಅಮೇರಿಕಾ ಪುರಸ್ಕೃತ ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್‌ಸಿಂಗ ಪನ್ನು ಮಹಾಕುಂಭ ಮೇಳದ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದ್ದನು.

ಬೆದರಿಕೆ ಹಾಕಿದ ವ್ಯಕ್ತಿ ತನ್ನ ಖಾತೆಯಲ್ಲಿನ ಪರಿಚಯದಲ್ಲಿ, ‘ನಾನು ಮುಸ್ಲಿಂ ಆಗಿರುವುದು ಹೆಮ್ಮೆಪಡುತ್ತೇನೆ.’ ಎಂದು ಬರೆದಿದ್ದಾನೆ. ಹಾಗೆಯೇ ಅವನು ಹಿಂದೂಗಳ ವಿರುದ್ಧ ಅಶ್ಲೀಲ ಭಾಷೆಯಲ್ಲಿ ಟೀಕಿಸಿದ್ದಾನೆ. ಈ ಖಾತೆಯಲ್ಲಿ ಯುವಕನೊಬ್ಬನ ಭುಜದ ಮೇಲೆ ಬ್ಯಾಗ್ ಇರುವ ಚಿತ್ರವಿದೆ. ಈತ ಬಿಹಾರದ ಪೂರ್ಣಿಯಾದ ಭವಾನಿಪುರ ನಿವಾಸಿ ಎಂದು ಹೇಳಿದ್ದಾನೆ.

ಸಂಪಾದಕೀಯ ನಿಲುವು

ಮಹಾಕುಂಭ ಮೇಳದಲ್ಲಿ ರಕ್ತಪಾತ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ ಎಂದು ಈ ಹಿಂದೆ ವರದಿಯಾಗಿತ್ತು. ಆ ನಿಟ್ಟಿನಲ್ಲಿ ಪೊಲೀಸರು ಇಂತಹ ಬೆದರಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ಜಾಗರೂಕತೆ ವಹಿಸಿ ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಆವಶ್ಯಕವಾಗಿದೆ !