|
ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಇಲ್ಲಿನ ಹೋಟೆಲ್‌ವೊಂದರಲ್ಲಿ ಒಂದೇ ಕುಟುಂಬದ 5 ಮಂದಿಯ ಶವ ಪತ್ತೆಯಾಗಿವೆ. ಇದರಲ್ಲಿ 4 ಸಹೋದರಿಯರು ಮತ್ತು ಅವರ ತಾಯಿ ಸೇರಿದ್ದಾರೆ. ಈ ಪ್ರಕರಣದಲ್ಲಿ ಮೃತ ಮಹಿಳೆಯ 24 ವರ್ಷದ ಅರ್ಷದ್ ಎಂಬ ಮಗನನ್ನು ಪೊಲೀಸರು ಬಂಧಿಸಿದ್ದಾರೆ. ಮೊದಲು ಕೌಟುಂಬಿಕ ಕಲಹದಿಂದ ಕೊಲೆಗಳು ನಡೆದಿವೆ ಎಂದು ಹೇಳಲಾಗಿತ್ತು; ಆದರೆ ಅರ್ಷದ್ ನ ಒಂದು ವೀಡಿಯೋ ಪ್ರಸಾರವಾಗಿದೆ. ಅದರಲ್ಲಿ ಅವನು ನಾವು ಮೂಲತಃ ಬದಾಯುವಿನವರಾಗಿದ್ದು, ನಮ್ಮ ಪ್ರದೇಶದ ಮುಸ್ಲಿಮರು ಹುಡುಗಿಯರನ್ನು ಅಪಹರಿಸಿ ಹೈದರಾಬಾದ್‌ಗೆ (ಭಾಗ್ಯನಗರ) ಕರೆದೊಯ್ದು ಮಾರಾಟ ಮಾಡುತ್ತಿದ್ದರು. ಅವರಿಂದ ನನ್ನ ಸಹೋದರಿಯರ ಶೀಲ ರಕ್ಷಿಸಲು, ನಾನು ಅವರನ್ನು ಕತ್ತು ಹಿಸುಕಿ ಸಾಯಿಸಿದೆ’, ಎಂದು ಹೇಳಿದ್ದಾನೆ.
49 ವರ್ಷದ ಅಸ್ಮಾನ, ಅಲಿಸಿಯಾ (19 ವರ್ಷ), ರಹಮೀನ (18 ವರ್ಷ), ಅಕ್ಷ (16 ವರ್ಷ) ಮತ್ತು ಆಲಿಯಾ (9 ವರ್ಷ) ಎಂದು ಮೃತರನ್ನು ಗುರುತಿಸಲಾಗಿದೆ. ಹಂತಕ ಅರ್ಷದನ ತಂದೆ ಪರಾರಿಯಾಗಿದ್ದಾನೆ. ಹೆಚ್ಚಿನ ತನಿಖೆ ನಡೆಯುತ್ತಿದೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಸಾವಿಗೆ ನಿಖರ ಕಾರಣ ತಿಳಿಯಬಹುದು’, ಎಂದು ಪೊಲೀಸರು ತಿಳಿಸಿದ್ದಾರೆ.
ಅರ್ಷದ್ ವಿಡಿಯೋದಲ್ಲಿ, ನಮ್ಮ ಮನೆಯಲ್ಲಿ ದೇವಸ್ಥಾನ ಸ್ಥಾಪಿಸಿದ್ದೇವೆ. ನಮ್ಮ ಪ್ರದೇಶದಲ್ಲಿರುವ ಮುಸ್ಲಿಮರು ಹೆಣ್ಣು ಮಕ್ಕಳನ್ನು ಮಾರಾಟ ಮಾಡಿ ಸ್ಥಳೀಯ ಪೊಲೀಸ್ ಠಾಣೆಗೆ ಹಣ ಕೊಟ್ಟು ಪೊಲೀಸರನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡಿದ್ದಾರೆ. ಕಳೆದ 10-12 ದಿನಗಳ ಹಿಂದೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಈ ವಿಷಯದ ಬಗ್ಗೆ ದೂರು ನೀಡಲು ಲಕ್ಷ್ಮಣಪುರಿಗೆ ಬಂದಿದ್ದೆವು; ಆದರೆ ಮುಖ್ಯಮಂತ್ರಿಗಳ ಭೇಟಿ ನಮಗೆ ಸಿಗಲಿಲ್ಲ. ಮುಖ್ಯಮಂತ್ರಿಗಳು ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ ಮತ್ತು ನಾನು ಅವರಲ್ಲಿ, ನನಗೆ ಏನಾದರೂ ಶಿಕ್ಷೆ ಕೊಡಿ, ಆದರೆ ಮರಣದ ನಂತರವಾದರೂ ನಮಗೆ ನ್ಯಾಯ ಕೊಡಿ ಎಂದು ವಿನಂತಿಸುತ್ತೇನೆ !’, ಎಂದು ಹೇಳಿದ್ದಾನೆ.