ಹಿಂದುತ್ವನಿಷ್ಠ ಸಂಘಟನೆಗಳಿಂದ ಸರಕಾರದ ಬಳಿ ಮನವಿ
ಭಾಗ್ಯನಗರ (ತೆಲಂಗಾಣ) – ತೆಲಂಗಾಣ ಸರಕಾರವು ರಾಜ್ಯದ 5 ಜಿಲ್ಲೆಗಳಲ್ಲಿ 230 ಎಕರೆ ಭೂಮಿಯನ್ನು ಸೌರ ಯೋಜನೆಗಳನ್ನು ಸ್ಥಾಪಿಸಲು ಬಳಸಲು ಆದೇಶಿಸಿದೆ. ಈ ನಿಟ್ಟಿನಲ್ಲಿ ಹಿಂದೂ ಜನಜಾಗೃತಿ ಸಮಿತಿ ಹಾಗೂ ಇತರೆ ಹಿಂದುತ್ವನಿಷ್ಠ ಸಂಘಟನೆಗಳು ಭಾಗ್ಯನಗರ ಹಾಗೂ ರಂಗಾರೆಡ್ಡಿ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಮನವಿ ಪತ್ರ ಸಲ್ಲಿಸಿ ವಕ್ಫ್ ಬೋರ್ಡ್ ಹಾಗೂ ಚರ್ಚ್ ನ ಜಾಗವನ್ನು ಈ ಯೋಜನೆಗೆ ಬಳಸಿಕೊಳ್ಳುವಂತೆ ಒತ್ತಾಯಿಸಿದ್ದಾರೆ.
ಈ ಮನವಿಯಲ್ಲಿ,
1. ಈ ದೇಶದಲ್ಲಿ ಸಾವಿರಾರು ಎಕರೆ ವಕ್ಫ್ ಭೂಮಿ ಮತ್ತು ಚರ್ಚ್‌ಗಳ ಬರಡು ಭೂಮಿಯನ್ನು ಸರಕಾರವು ತಮ್ಮ ಯೋಜನೆಗಳಿಗೆ ಬಳಸಿಕೊಳ್ಳಬೇಕು.
2. ಇದುವರೆಗೆ ತೆಲಂಗಾಣದಲ್ಲಿ ಸುಮಾರು 25 ಸಾವಿರ ಎಕರೆ ದೇವಸ್ಥಾನದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಭೂಮಿಯನ್ನು ಮರಳಿ ಪಡೆಯಲು ಸರಕಾರ ಯಾವುದೇ ಕಾನೂನು ಪ್ರಕ್ರಿಯೆ ನಡೆಸುತ್ತಿಲ್ಲ. ಇದನ್ನು ಇಡೀ ಹಿಂದೂ ಸಮಾಜ ಖಂಡಿಸಬೇಕು ಮತ್ತು ದೇವಸ್ಥಾನಗಳನ್ನು ಪ್ರಾರ್ಥನಾ ಸ್ಥಳಗಳನ್ನಾಗಿ ಪರಿವರ್ತಿಸುವ ಸರಕಾರದ ನಿರ್ಧಾರದ ವಿರುದ್ಧ ಧ್ವನಿ ಎತ್ತಬೇಕು.
3. ತೆಲಂಗಾಣ ಸರಕಾರ ಮುಲ್ಲಾಗಳು, ಮೌಲ್ವಿಗಳು, ಚರ್ಚ್ ನೋಡಿಕೊಳ್ಳುವವರಿಗೆ ಸಂಬಳ ನೀಡುತ್ತದೆ. ನಿರ್ವಹಣೆಗಾಗಿ ಲಕ್ಷಾಂತರ ರೂಪಾಯಿ ನೀಡುತ್ತದೆ; ಆದರೆ ಸರಕಾರ ಅವರ ಭೂಮಿಯನ್ನು ಮುಟ್ಟುವುದಿಲ್ಲ. ಸರಕಾರ ಹಿಂದೂ ದೇವಸ್ಥಾನಗಳ ಭೂಮಿಯನ್ನು ಮಾತ್ರ ಕಿತ್ತುಕೊಳ್ಳುತ್ತದೆ.
ಸಂಪಾದಕೀಯ ನಿಲುವುತೆಲಂಗಾಣದಲ್ಲಿ ಕಾಂಗ್ರೆಸ್ ಸರಕಾರವಿದೆ. ಹಾಗಾಗಿ ಹಿಂದೂಗಳ ಬೇಡಿಕೆಯನ್ನು ಸರಕಾರ ಕಡೆಗಣಿಸಿದರೆ ಆಶ್ಚರ್ಯವಿಲ್ಲ. ಈ ಬೇಡಿಕೆಯನ್ನು ಅನಿವಾರ್ಯಗೊಳಿಸಲು ಪರಿಣಾಮಕಾರಿ ಹಿಂದೂ ಸಂಘಟನೆ ಅಗತ್ಯ ! |