ಶಿಷ್ಯನ ಜೀವನದಲ್ಲಿ ಗುರುಗಳ ಮಹತ್ವ

೧. ಶಿಷ್ಯನು ಗುರುಗಳ ಋಣದಿಂದ ಮುಕ್ತನಾಗಲು ‘ಗುರುಗಳಿಗೆ ಇಷ್ಟವಾಗುವ (ಅಪೇಕ್ಷಿತ) ಸಾಧನೆಯನ್ನು ಮಾಡುವುದು ಇಷ್ಟನ್ನೇ ಮಾಡಬಲ್ಲನು. ಅದರ ಆಚೆಗೆ ಶಿಷ್ಯನ ಕೈಯಲ್ಲೇನೂ ಇರುವುದಿಲ್ಲ.

೨. ಗುರುಗಳು ಹೇಳಿದ ಸಾಧನೆಯನ್ನು ಮಾಡುವುದರಿಂದ ಶಿಷ್ಯನ ಪ್ರಾರಬ್ಧದಲ್ಲಿ ಗ್ರಹಗತಿಯಿಂದಾಗುವ ತೊಂದರೆ ಕಡಿಮೆಯಾಗುವುದು : ಗುರುಗಳ ‘ಅನುಗ್ರಹವು ಶಿಷ್ಯನ ಜೀವನದಲ್ಲಿ ಅತ್ಯಂತ ಮಹತ್ವದ್ದಾಗಿರುತ್ತದೆ. ಗುರುಗಳು ಹೇಳಿದ ಸಾಧನೆಯನ್ನು ಮಾಡುವುದರಿಂದ ಶಿಷ್ಯನ ಪ್ರಾರಬ್ಧದಲ್ಲಿ ಗ್ರಹಗತಿಯಿಂದಾಗುವ ತೊಂದರೆಯೂ ಕಡಿಮೆಯಾಗುತ್ತದೆ; ಆದ್ದರಿಂದ ನವಗ್ರಹಗಳ ತೊಂದರೆಯ ಬಗ್ಗೆ ಸಾಮಾನ್ಯ ಮನುಷ್ಯರಿಗಾಗುವಂತಹ ಚಿಂತೆಯು ಶಿಷ್ಯನ ಜೀವನದಲ್ಲಿ ಚಿಂತೆ ಇರುವುದಿಲ್ಲ. ಗುರುಕೃಪೆಯು ಶಿಷ್ಯನ ಜೀವನದಲ್ಲಿನ ದುಃಖಗಳನ್ನು ಕಡಿಮೆ ಮಾಡುತ್ತದೆ.

೩. ಪರಾತ್ಪರ ಗುರು ಡಾ. ಆಠವಲೆಯವರ ಮಹಾನತೆಯ ಬಗ್ಗೆ ಸಮಾಜದಲ್ಲಿನ ಸಂತರ ವಿಚಾರ ! : ಪರಾತ್ಪರ ಗುರು ಡಾ. ಆಠವಲೆಯವರು ಸನಾತನದ ಸಾಧಕರಿಗೆ ಗುರುಮಂತ್ರವನ್ನು ನೀಡಿಲ್ಲ; ಆದರೆ ಸಾಧಕರೆಲ್ಲರ ಮೇಲೆ ಅವರ ಕೃಪೆಯಿದೆ. ಗುರುದೇವರು ನೀಡಿದ ಈ ಅನುಗ್ರಹವು ಸಾಮಾನ್ಯ ವ್ಯಕ್ತಿಯ ಗಮನಕ್ಕೆ ಬರುವುದಿಲ್ಲ. ಸನಾತನದ ಸಾಧಕರು ಸಮಾಜದಲ್ಲಿನ ಸಂತರ ಬಳಿ ಹೋದಾಗ ಆ ಸಂತರು ಸಾಧಕರಿಗೆ, “ಸನಾತನದ ಸಾಧಕರ ಮೇಲೆ ಅಪಾರ ಗುರುಕೃಪೆಯಿದೆ ಎಂದು ಹೇಳುತ್ತಾರೆ.

– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ

ಗುರು ಮತ್ತು ಶಿಷ್ಯ ಇವರ ಸಾಧನೆಗೆ ಆವಶ್ಯಕ ವಿಚಾರ 

ದೈಹಿಕ ಕ್ರಿಯೆಯು ಶಿಷ್ಯತ್ವದ ಪ್ರಜ್ಞೆಯೊಂದಿಗೆ ಸಂಬಂಧ ಹೊಂದಿದ್ದು, ಕರ್ಮದ ಚಿಂತನೆಯು ಗುರುತತ್ವದ ಪ್ರಜ್ಞೆಯೊಂದಿಗೆ ಸಂಬಂಧ ಹೊಂದಿದ್ದರೆ, ಜೀವದ ಉನ್ನತಿ ಶೀಘ್ರದಲ್ಲಾಗುತ್ತದೆ. ಶಿಷ್ಯತ್ವದ ಅರಿವು ಎಂದರೆ ಗುರುಗಳೇ ಎಲ್ಲವನ್ನೂ ಮಾಡುತ್ತಿದ್ದಾರೆ. ನಾನು ನಿಮಿತ್ತ ಮಾತ್ರ ಇದ್ದೇನೆ, ಮತ್ತು ಗುರುತತ್ತ್ವದ ಅರಿವು ಎಂದರೆ ‘ಈಶ್ವರನೇ ಎಲ್ಲವನ್ನೂ ಮಾಡುತ್ತಿದ್ದು ನನ್ನ ಜನ್ಮ ಶಿಷ್ಯ ನಿರ್ಮಿತಿಗಾಗಿ ಆಗಿದೆ.

– ಶ್ರೀಚಿತ್‌ಶಕ್ತಿ ಸೌ. ಅಂಜಲಿ ಮುಕುಲ ಗಾಡಗೀಳ (ಸಚ್ಚಿದಾನಂದ ಪರಬ್ರಹ್ಮ ಡಾ. ಅಠವಲೆ ಇವರ ಓರ್ವ ಆಧ್ಯಾತ್ಮಿಕ ಉತ್ತರಾಧಿಕಾರಿ), ಸನಾತನ ಸಂಸ್ಥೆ.

‘ಯಾವನು ತನ್ನ ಬೋಧಪ್ರದ (ಉಪದೇಶಿಸುವ) ಶಕ್ತಿಯನ್ನು ಜಾಗೃತಗೊಳಿಸಿದ್ದಾನೆಯೋ ಮತ್ತು ಎಲ್ಲ ಕರ್ಮಗಳ (ಆಸಕ್ತಿಗಳ) ತ್ಯಾಗವನ್ನು ಮಾಡಿದ್ದಾನೆಯೋ, ಇಂತಹ ಯೋಗಿಯು (ಗುರುಗಳು) ಸಹಜಾವಸ್ಥೆಯನ್ನು ಪ್ರಾಪ್ತಿ ಮಾಡಿ ಕೊಂಡಿರುತ್ತಾನೆ. ಅವನು ಯಾವಾಗಲೂ ಆತ್ಮಚೈತನ್ಯದಲ್ಲಿ ಮೈಮರೆಯುತ್ತಾನೆ. (ಮಹೋಪನಿಷತ್, ಅಧ್ಯಾಯ ೪)

ಗುರು-ಶಿಷ್ಯ ಸಂಬಂಧದ ಅಸಾಧಾರಣ ಮಹತ್ವ !

ಗುರು-ಶಿಷ್ಯರ ನಡುವಿನ ಅತ್ಯುನ್ನತ ಸಂಬಂಧವು ಶಬ್ದಾತೀತ ಜ್ಞಾನದ ಮಟ್ಟಿಗೆ ಸೀಮಿತವಾಗಿರುತ್ತದೆ. ಗುರು ಶಿಷ್ಯನನ್ನು ಚಿತ್ತದ ಸ್ತರಕ್ಕೆ ಕರೆದೊಯ್ದು ಅವನಲ್ಲಿ ಜ್ಞಾನರೂಪಿ ನಿಗೂಢವನ್ನು ಚೈತನ್ಯದ ಭಾಷೆಯಲ್ಲಿ ಸಂಸ್ಕಾರಿತಗೊಳಿಸಿ ಅವನಿಗೆ ಮಾಯಾರೂಪಿ ಭವಸಾಗರವನ್ನು ದಾಟುವ ಶಿಕ್ಷಣ ನೀಡುತ್ತಾರೆ. ಗುರುಗಳು ಜ್ಞಾನದ ಮೂಲಕ ಜೀವದ ಅಹಂ ಕಡಿಮೆ ಮಾಡುತ್ತಾರೆ. ಗುರುಗಳ ಕಾರ್ಯ ಮುಗಿದಾಗ, ಗುರು-ಶಿಷ್ಯ ಸಂಬಂಧ ಕೊನೆಗೊಳ್ಳುತ್ತದೆ; ಏಕೆಂದರೆ ಶಿಷ್ಯನಿಗೆ ಗುರುತನ ಬಂದಿರುತ್ತದೆ. ಗುರುಗಳು ‘ಈಗ ಇತರರ ಕಲ್ಯಾಣಕ್ಕಾಗಿ ಮಾತ್ರ ಇದ್ದೇನೆ ಎಂಬ ಸ್ತರದಲ್ಲಿ ಕಾರ್ಯ ಮಾಡುತ್ತಿರುತ್ತಾರೆ. ಶಿಷ್ಯನಿಗೆ ಗುರುತನ ಬಂದ ನಂತರ ಅವನ ಜ್ಞಾನಸಹಿತ ಕಾರ್ಯವು ಆರಂಭವಾಗುತ್ತದೆ, ಮತ್ತು ಗುರುಗಳಿಂದ ಜ್ಞಾನೋತ್ತರ ಕಾರ್ಯವು ಆರಂಭವಾಗುತ್ತದೆ .

(ಆಧಾರ : ಸನಾತನ ಗ್ರಂಥ – ‘ಶಿಷ್ಯ)

ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಗುರುಪೂರ್ಣಿಮಾ ಮಹೋತ್ಸವ

ಗುರುಕೃಪಾ ಹಿ ಕೇವಲಂ | ಶಿಷ್ಯ ಪರಮಮಂಗಲಮ್ |

ಜುಲೈ ೨೧, ರವಿವಾರ ಗುರುಪೂರ್ಣಿಮೆ ನಡೆಯುವ ಸ್ಥಳವನ್ನು ತಿಳಿಯಲು ಸಂಪರ್ಕಿಸಿ