ಗುರುಗಳ ಮೇಲೆ ಅಪಾರ ಶ್ರದ್ಧೆ ಇರುವ ಪ.ಪೂ. ಭಕ್ತರಾಜ ಮಹಾರಾಜರು !

ಗುರು ಶ್ರೀ ಅನಂತಾನಂದ ಸಾಯೀಶರು ತಮ್ಮ ಶಿಷ್ಯ ಪ.ಪೂ. ಭಕ್ತರಾಜ ಮಹಾರಾಜರಿಗೆ ವಿವಿಧ ಪ್ರಸಂಗಗಳಿಂದ ಗುರುತತ್ತ್ವದ ಅನುಭೂತಿಯನ್ನು ಹೇಗೆ ನೀಡಿದರು ?

ಈ ಬಗೆಗಿನ ವೈಶಿಷ್ಟ್ಯಪೂರ್ಣ ಲೇಖನ ವನ್ನು ಗುರುಪೂರ್ಣಿಮೆಯ ನಿಮಿತ್ತವಾಗಿ ಇಲ್ಲಿ ಕೊಡಲಾಗಿದೆ.

೧. ಶ್ರೀ ಅನಂತಾನಂದ ಸಾಯೀಶ ಇವರು ‘ದಿನು ಪ್ರತಿದಿನ ಉಪವಾಸ ಮಾಡುತ್ತಾನೆ, ಎಂದು ಹೇಳುವುದು ಮತ್ತು ಅದು ಸತ್ಯ ಇರುವುದಾಗಿ ದಿನುವಿಗೆ ಅನುಭೂತಿ ಬರುವುದು

‘ಒಂದು ಸಲ ಶ್ರೀ ಅನಂತಾನಂದ ಸಾಯೀಶರ ಹತ್ತಿರ ಓರ್ವ ಕರ್ಮಠ ಬ್ರಾಹ್ಮಣನು ಬಂದನು ಮತ್ತು ಅವರ ದರ್ಶನ ಪಡೆದು, “ನಾನು ಇಡೀ ಶ್ರಾವಣಮಾಸ ಉಪವಾಸ ಮಾಡುತ್ತೇನೆ, ಎಂದು ಹೇಳಿದನು. ಅದನ್ನು ಕೇಳಿ ಶ್ರೀ ಅನಂತಾನಂದ ಸಾಯೀಶರು ಅವರಿಗೆ, “ನಮ್ಮ ದಿನು (ಟಿಪ್ಪಣಿ) ಯಾವಾಗಲೂ ಉಪವಾಸ ಮಾಡುತ್ತಾನೆ, ಎಂದು ಹೇಳಿದರು. ಇದನ್ನು ಕೇಳಿ ದಿನಕರನಿಗೆ, ‘ನಾನು ದಿನದಲ್ಲಿ ೪-೫ ಸಲ ತಿನ್ನುತ್ತೇನೆ ಮತ್ತು ಸದ್ಗುರುಗಳು, ‘ಇವನು ಉಪವಾಸ ಮಾಡುತ್ತಾನೆ; ಎಂದು ಹೇಳುತ್ತಾರೆ, ಎಂಬ ವಿಚಾರ ಬಂದಿತು. ಆದರೆ ದಿನಕರನ ಮನಸ್ಸಿನಲ್ಲಿ, ಸದ್ಗುರುಗಳು ಏನು ಹೇಳುವರೋ, ಅದು ಯೋಗ್ಯವೇ ಆಗಿರುತ್ತದೆ, ಎಂಬ ಪೂರ್ಣ ವಿಶ್ವಾಸವಿತ್ತು.

ಟಿಪ್ಪಣಿ – ಶ್ರೀ ಅನಂತಾನಂದ ಸಾಯೀಶರು ಪ.ಪೂ. ಭಕ್ತರಾಜ ಮಹಾರಾಜರಿಗೆ ‘ಭಕ್ತರಾಜ ಎಂದು ನಾಮಕರಣ ಮಾಡುವ ಮೊದಲಿನ ಹೆಸರು ‘ದಿನಕರ ಎಂದಿತ್ತು.
ಒಂದು ಸಲ ದಿನಕರ ಲೋಧಿಪುರ ದಿಂದ ರಾಮಜಿಯವರ ಕಡೆಗೆ (ಪ.ಪೂ. ರಾಮಾನಂದ ಮಹಾರಾಜರ ಕಡೆಗೆ) ನಡೆಯುತ್ತಾ (ಆಗ ನಡೆಯುವುದು ಅಥವಾ ಸೈಕಲ್ ಮೇಲೆ ತಿರುಗಾಡುವುದು ಇರುತ್ತಿತ್ತು.) ಹೋಗುತ್ತಿರುವಾಗ ಅವನಿಗೆ ಇಂದೂರಿನ ಎರಡೂ ಅರಮನೆಗಳ ಮಧ್ಯದಲ್ಲಿ ಮುದ್ರಿತ ಕಾಗದದ ಒಂದು ಪುಟ ಕಾಣಿಸಿತು. ಅವನು ಅದನ್ನು ಎತ್ತಿಕೊಂಡು ಓದಿದನು. ಅದು ಸಂತ ತುಕಾರಾಮರ ಕಥೆಯಲ್ಲಿನ ಪುಟವಾಗಿತ್ತು ಮತ್ತು ಅದರಲ್ಲಿ, ‘ನಾಮ ಘೆತಾ ಗ್ರಾಸೋಗ್ರಾಸಿ ತೊ ನರ ಜೆವುನಿ ಉಪವಾಸಿ | (ಒಂದೊಂದು ತುತ್ತಿನೊಂದಿಗೆ ನಾಮಜಪವನ್ನು ಮಾಡುತ್ತಾ ಭೋಜನ ಮಾಡಿದರೂ ಅವನು ಉಪವಾಸವಿದ್ದ ಹಾಗೆ) ಎಂದು ಬರೆಯಲಾಗಿತ್ತು. ಇದನ್ನು ಓದಿದ ನಂತರ ಅವನಿಗೆ ಸದ್ಗುರುಗಳ ಶಬ್ದಗಳ ನೆನಪಾಯಿತು ಮತ್ತು ಅವನ ಮನಸ್ಸು ಶಾಂತವಾಗಿ ಅವನಿಗೆ ಸಮಾಧಾನವೆನಿಸಿತು.

ಶ್ರೀ ಭಕ್ತರಾಜರಿಗೆ ಸದ್ಗುರುಗಳ ಸಹವಾಸ ಕೇವಲ ೧ ವರ್ಷ ೧೦ ತಿಂಗಳು ಮಾತ್ರ ಸಿಕ್ಕಿತು; ಆದರೆ ಈ ಕಾಲದಲ್ಲಿ ಅವರು ದಿನುವಿಗೆ ಪೂರ್ಣತ್ವವನ್ನು ನೀಡಿದರು. ಸದ್ಗುರುಗಳು, “ನಾನು ದಿನುವಿನ ಹೆಸರನ್ನು ಜಪಿಸುತ್ತೇನೆ (ಮೈ ದಿನುಕಿ ಮಾಲಾ ಜಪತಾ ಹುಂ) ನಾನು ಅವನಿಗೆ ಎಲ್ಲವನ್ನೂ ನೀಡಿದ್ದೇನೆ, (ಮೈನೆ ಉಸಕೊ ಸಬಕುಛ ದಿಯಾ) ಎಂದು ಹೇಳುತ್ತಿದ್ದರು.

೨. ಔಷಧಿಗಳ ಮಾರಾಟದ ವ್ಯವಸಾಯ ಮಾಡುವಾಗಲೂ ಯಾವಾಗಲೂ ಹರಿಚಿಂತನದಲ್ಲಿರುವ ಮತ್ತು ಅದರಿಂದ ಭಜನೆಗಳು ಹೊಳೆದು ಅವುಗಳನ್ನು ಬರೆಯುವ ಪ.ಪೂ. ಭಕ್ತರಾಜರು !

ಶ್ರೀ ಭಕ್ತರಾಜ ಮಹಾರಾಜರು ತ್ರಿಶುಲ ದಂತಮಂಜನ, ಮನೋಹರ ಚೂರ್ಣ, ಕೆಮ್ಮಿನ ಮಾತ್ರೆಗಳು, ನೇತ್ರಬಿಂದು, ಚಂದ್ರಬಿಂದು, ಇವುಗಳನ್ನು ಮಾರಾಟ ಮಾಡಿ ಸಂಸಾರ ನಡೆಸುತ್ತಿದ್ದರು; ಆದರೆ ಇವೆಲ್ಲವನ್ನು ಮಾಡುತ್ತಿರುವಾಗ ಅವರ ಎಲ್ಲ ಗಮನ ಹರಿಚಿಂತನೆ ಮತ್ತು ಭಜನೆ ಇವುಗಳಲ್ಲಿಯೇ ಇರುತ್ತಿತ್ತು. ಹೀಗೆ ಒಂದು ಬಾರಿ ಔಷಧಿಗಳನ್ನು ಮಾರಾಟ ಮಾಡಲು ಅವರು ಮಧ್ಯಪ್ರದೇಶದ ಧಾರ ಮತ್ತು ಮಾಂಡವಕ್ಕೆ ಹೋದಾಗ ಮಾರ್ಗದಲ್ಲಿ ಅವರು ‘ದೇವಾ, ತುಝೆಚ ಮಿ ಲೇಕರು | ಮತ್ತು ‘ಕಸೆ ಆಳವು ಮಿ, ಈ ಭಜನೆಗಳನ್ನು ಬರೆದರು ಮತ್ತು ಹಿಂದಿರುಗಿ ಬಂದ ನಂತರ ಗುರುಗಳಿಗೆ ಹಾಡಿ ತೋರಿಸಿದರು.

ಶ್ರೀ ಅನಂತಾನಂದ ಸಾಯೀಶ (ಮುಂದೆ) ಇವರೊಂದಿಗೆ ಶಿಷ್ಯ ಪ.ಪೂ. ಭಕ್ತರಾಜರು

ಒಂದು ಬಾರಿ ನಾನು ಅವರೊಂದಿಗೆ ಮಾರಾಟಕ್ಕಾಗಿ ಇಂದೂರಿನಿಂದ ಬಸ್ ಮೂಲಕ ಉಜ್ಜೈನಿಗೆ ಹೊರಟೆನು. ನಾವು ದಾರಿಯಲ್ಲಿ ‘ತ್ರಿಶುಲ ದಂತಮಂಜನ ಮಾರಿ ಮುಂದೆ ಬಸ್‌ನಲ್ಲಿ ಹೊರಟೆವು. ಬಸ್‌ನಲ್ಲಿ ಕುಳಿತಾಗ ಸ್ವಲ್ಪ ಸಮಯದ ನಂತರ ಶ್ರೀ ಭಕ್ತರಾಜ ಮಹಾರಾಜರು, “ಕಾಗದ ಮತ್ತು ಪೆನ್ ಕೊಡು, ಎಂದು ಹೇಳಿದರು. ಅವರು ನನ್ನೆದುರು ‘ತ್ರೈಲೋಕ್ಯದ ಯೋಗಿರಾಜ ಹೆ ಅವತರಲೆ ಭೂವರಿ, ಈ ಭಜನೆಯನ್ನು ಚಿತ್ತುಕಾಟು ಮಾಡದೇ ಬರೆದರು. ಅವರು ಭಜನೆಯನ್ನು ಬರೆದಾದ ನಂತರ ನಾನು ಅವರಿಗೆ, “ಇದು ನಿಮಗೆ ಹೇಗೆ ಹೊಳೆಯಿತು ? ಎಂದು ಕೇಳಿದೆನು. ಆಗ ಅವರು, “ನನಗೆ ಈ ಶಬ್ದಗಳು ಮೇಲಿಂದ ಬರುತ್ತಿರುವುದು ಕಾಣಿಸುತ್ತಿತ್ತು. ಅದನ್ನೇ ನಾನು ಬರೆದೆ, ಎಂದು ಹೇಳಿದರು.

– ಶ್ರೀ. ವಸಂತ (ಅಣ್ಣಾ) ಧಾಡಕರ (ಪ.ಪೂ. ಭಕ್ತರಾಜ ಮಹಾರಾಜರ ಭಕ್ತ), ಇಂದೂರ, ಮಧ್ಯಪ್ರದೇಶ.

(ಆಧಾರ : ಭಕ್ತರಾಜ ಗಾರುಡಿ ಆಲಾ)