Mahakumbh Mela 2025 : ಕುಂಭಮೇಳದಲ್ಲಿ ಹಿಂದೂಯೇತರರರಿಗೆ ಅಂಗಡಿಗಳನ್ನು ಹಾಕಲು ಬಿಡಬೇಡಿ ! – ಆಖಾಡಾ ಪರಿಷತ್ತು

ಮಹಂತ ರವೀಂದ್ರ ಪುರಿ, ಆಖಾಡಾ ಪರಿಷತ್ತು

ಪ್ರಯಾಗರಾಜ (ಉತ್ತರ ಪ್ರದೇಶ) – ಪ್ರಯಾಗರಾಜನಲ್ಲಿ ನಡೆಯುವ ಕುಂಭಮೇಳದಲ್ಲಿ ಹಿಂದೂಯೇತರ ಅಂಗಡಿಕಾರರು ಚಹಾ, ಹಣ್ಣಿನ ರಸ ಮತ್ತು ಹೂವಿನ ಅಂಗಡಿಗಳನ್ನು ಸ್ಥಾಪಿಸಲು ಅನುಮತಿಸಬಾರದು. ಅವರಿಗೆ ಅವಕಾಶ ನೀಡಿದರೆ ಅವರು ಅವುಗಳಲ್ಲಿ ಉಗುಳುತ್ತಾರೆ, ಮೂತ್ರ ವಿಸರ್ಜಿಸುತ್ತಾರೆ. ಒಂದು ವೇಳೆ ಅವರಿಗೆ ಅನುಮತಿ ನೀಡಿದರೆ ನಾಗಾ ಸಾಧುಗಳಿಗೆ ಬಲವಂತವಾಗಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗಬಹುದು, ಎಂದು ಅಖಿಲ ಭಾರತೀಯ ಆಖಾಡಾ ಪರಿಷತ್ ಮುಖ್ಯಸ್ಥ ಮಹಂತ್ ರವೀಂದ್ರ ಪುರಿ ಎಚ್ಚರಿಸಿದ್ದಾರೆ. ಪ್ರಯಾಗರಾಜ್‌ನಲ್ಲಿ ಜನವರಿ 13 ರಿಂದ ಮಹಾಕುಂಭಮೇಳ ಆರಂಭವಾಗಲಿದೆ. ಮಹಂತ ರವೀಂದ್ರ ಪುರಿ ಅವರು ಈ ಹಿಂದೆಯೂ ಕುಂಭಮೇಳದಲ್ಲಿ ಮುಸ್ಲಿಂ ಮಾರಾಟಗಾರರನ್ನು ನಿಷೇಧಿಸಬೇಕೆಂದು ಒತ್ತಾಯಿಸಿದ್ದರು.

1. ಮಹಂತ್ ಪುರಿ ಅವರು ಮಾತು ಮುಂದುವರಿಸಿ, ಒಂದು ವೇಳೆ ಅಂತಹ ಘಟನೆ ನಡೆದರೆ ಮತ್ತು ಯಾರ ಭಾವನೆಗಳಿಗೆ ನೋವುಂಟು ಮಾಡಿದರೆ ಅದು ಪ್ರಪಂಚದಾದ್ಯಂತ ತಪ್ಪು ಸಂದೇಶವನ್ನು ರವಾನಿಸುತ್ತದೆ. ನಮ್ಮ ಕುಂಭಮೇಳವು ಸುಂದರ, ಸ್ವಚ್ಛ, ಭವ್ಯ-ದಿವ್ಯ ಮತ್ತು ಶಾಂತಿಯುತವಾಗಿರಬೇಕು. ಕುಂಭಮೇಳದ ಸುರಕ್ಷತೆ ಮತ್ತು ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಲು ಹಿಂದೂಯೇತರರನ್ನು ಕುಂಭಮೇಳದಿಂದ ದೂರವಿಡುವ ಆವಶ್ಯಕತೆಯಿದೆಯೆಂದು ಹೇಳಿದ್ದಾರೆ.

2. ರವೀಂದ್ರ ಪುರಿ ಅವರು ಸಂಭಲ್‌ನ ಮಂದಿರ ಮತ್ತು ಮಸೀದಿ ವಿವಾದದ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ. ಅವರು, ಈ ವಿಚಾರ ಕೇವಲ ಸಂಭಲ್‌ಗೆ ಸಂಬಂಧಿಸಿದ್ದಲ್ಲ ನೀವು ಭಾರತದಾದ್ಯಂತ ಎಲ್ಲಿಗೆ ಹೋದರೂ ಅಲ್ಲಿ ಈಗ ಯಾವ ಸ್ಥಾನದಲ್ಲಿ ಮಸೀದಿ ಇದೆಯೋ ಅಲ್ಲಿ ಮೊದಲು ದೇವಸ್ಥಾನವಿತ್ತು.

3. ಅಖಿಲ ಭಾರತೀಯ ಆಖಾಡಾ ಪರಿಷತ್ ‘ಶಾಹಿ ಸ್ನಾನ’ ಮತ್ತು ‘ಪೇಶ್ವಾಯಿ’ ಪದಗಳನ್ನು ಬದಲಾಯಿಸಿ  ‘ರಾಜಸಿ ಸ್ನಾನ’ ಮತ್ತು ‘ಛಾವಣಿ ಪ್ರವೇಶ’ ಎಂದು ಮರುನಾಮಕರಣ ಮಾಡಲು ನಿರ್ಣಯಿಸಿತ್ತು.

4. ರವೀಂದ್ರ ಪುರಿ ಮಾತು ಮುಂದುವರೆಸಿ, ‘ಶಾಹಿ’ ಎಂಬುದು ಉರ್ದು ಪದ ಆಗಿದೆ. ಹೀಗಿದ್ದರೂ ನಾವು ಉರ್ದುವನ್ನು ದ್ವೇಷಿಸುವುದಿಲ್ಲ. ಉರ್ದು ಮತ್ತು ಹಿಂದಿ ನಿಕಟ ಸಂಬಂಧ ಹೊಂದಿವೆ; ಆದರೆ ಧರ್ಮ, ಸಂಪ್ರದಾಯ ಅಥವಾ ಸಂಸ್ಕೃತಿಯ ವಿಚಾರ ಬಂದಾಗ, ನಾವು ಯಾವಾಗಲೂ ಸಂಸ್ಕೃತ ಅಥವಾ ಹಿಂದಿ ಪದಗಳನ್ನು ಹೆಚ್ಚಾಗಿ ಬಳಸಲು ಪ್ರಯತ್ನಿಸುತ್ತೇವೆ, ಏಕೆಂದರೆ ಅವುಗಳು ಹೆಚ್ಚು ಸೂಕ್ತವಾಗಿವೆ’, ಎಂದು ಹೇಳಿದರು.

ಸಂಪಾದಕೀಯ ನಿಲುವು

ಅಖಿಲ ಭಾರತಿಯ ಆಖಾಡಾ ಪರಿಷತ್ತಿನ ಈ ಬೇಡಿಕೆಯಿಂದಾಗಿ ಜಾತ್ಯತೀತವಾದಿಗಳ ಗುಂಪು ಟೀಕಿಸಿದರೆ ಆಶ್ಚರ್ಯಪಡಬೇಕಾಗಿಲ್ಲ. ಮಹಾಕುಂಭ ಹಿಂದೂಗಳ ಧಾರ್ಮಿಕ ಹಬ್ಬವಾಗಿರುವುದರಿಂದ ಅಲ್ಲಿ ಏನಾಗಬೇಕು ಮತ್ತು ಇರಬಾರದು ಎಂಬುದನ್ನು ನಿರ್ಧರಿಸುವ ಹಕ್ಕು ಹಿಂದೂಗಳಿಗೆ ಇರಬೇಕು. ಆದ್ದರಿಂದ ಆಡಳಿತ ಈ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು !