ಆದಿ ಶಂಕರಾಚಾರ್ಯರು ಈ ಯಾತ್ರೆ ಪ್ರಾರಂಭಿಸಿದ್ದರು !
ಪ್ರಯಾಗರಾಜ (ಉತ್ತರ ಪ್ರದೇಶ) – ಸನಾತನ ಧರ್ಮದ ಜ್ಯೋತಿಯನ್ನು ನಿರಂತರವಾಗಿ ಬೆಳಗುವಂತೆ ಇಡಲು ಪ್ರಾಚೀನ ‘ಛಡಿ ಯಾತ್ರೆ’ ಶೀಘ್ರದಲ್ಲೇ ಪ್ರಯಾಗರಾಜ್‌ನ ಕುಂಭಕ್ಷೇತ್ರಕ್ಕೆ ಆಗಮಿಸಲಿದೆ. ಕೆಲವು ದಿನಗಳ ಹಿಂದೆ ಈ ಯಾತ್ರೆ ಹರಿದ್ವಾರದಿಂದ ಹೊರಟಿದೆ. ಸಂಪ್ರದಾಯದ ಪ್ರಕಾರ, ಶ್ರೀ ಪಂಚ ದಶನಾಮ ಆವಾಹನ ಆಖಾಡದ ಸಾಧು ಮತ್ತು ಸಂತರು ಈ ಛಡಿ ಯಾತ್ರೆಯ ಜೊತೆಯಲ್ಲಿದ್ದಾರೆ. ಈ ಯಾತ್ರೆಯ ನೇತೃತ್ವವನ್ನು ಆವಾಹನ ಆಖಾಡಾದ ದಾದಾಜಿ ಧವುನಿವಾಲೆ ಶ್ರೀಮಹಂತ ಗೋಪಾಲ ಗಿರಿ ಮಹಾರಾಜ ಇವರು ವಹಿಸಿದ್ದಾರೆ. ಫೆಬ್ರವರಿ 27 ರವರೆಗೆ ಕುಂಭ ಕ್ಷೇತ್ರ ಆವಾಹನ ಅಖಾಡದಲ್ಲಿ ಪ್ರತಿಯೊಬ್ಬರೂ ಈ ಪವಿತ್ರ ಛಡಿಯ ದರ್ಶನವನ್ನು ಪಡೆಯಬಹುದು.
ಈ ವರ್ಷದ ಯಾತ್ರೆಗೆ 1 ಸಾವಿರ 220ನೇ ವರ್ಷ !
ಈ ವರ್ಷ ಈ ಯಾತ್ರೆಗೆ 1 ಸಾವಿರ 220 ನೇ ವರ್ಷವಾಗಿದೆ ಎಂದು ಹೇಳಲಾಗುತ್ತಿದೆ. ಭಾರತದ ದೇವಸ್ಥಾನಗಳ ಜೀರ್ಣೋದ್ಧಾರ ಮಾಡಲು ಆದಿ ಶಂಕರಾಚಾರ್ಯರು ಅವಾಹನ ಆಖಾಡದ 550 ನಾಗಾ ಸಾಧುಗಳೊಂದಿಗೆ ಮೊಟ್ಟ ಮೊದಲು ಛಡಿ ಯಾತ್ರೆಯನ್ನು ಪ್ರಾರಂಭಿಸಿದ್ದರು, ಎಂದು ನಂಬಲಾಗಿದೆ.