Bangladesh Army Chief Statement : ನಾವು ನೆರೆಯ ದೇಶದ ವಿರೋಧದಲ್ಲಿ ಏನು ಮಾಡುವುದಿಲ್ಲ ಮತ್ತು ಅವರು ಕೂಡ ನಮ್ಮ ವಿರೋಧದಲ್ಲಿ ಏನು ಮಾಡಬಾರದು !

ಬಾಂಗ್ಲಾದೇಶದ ಸೈನಾ ಪ್ರಮುಖ ವಕಾರ-ಉಝ-ಝಮಾನ್ ಇವರ ಹೇಳಿಕೆ

ಬಾಂಗ್ಲಾದೇಶದ ಸೈನ್ಯ ಪ್ರಮುಖ ವಕಾರ-ಉಝ-ಝಮಾನ್

ಢಾಕಾ (ಬಾಂಗ್ಲಾದೇಶ) – ನಾವು ನಮ್ಮ ನೆರೆಯ ದೇಶದೊಂದಿಗೆ ಸೌಹಾರ್ದತೆಯ ಹಿತದ ವಿರುದ್ಧ ಏನೂ ಮಾಡುವುದಿಲ್ಲ. ಹಾಗೂ ನಮ್ಮ ನೆರೆಯ ದೇಶ ನಮ್ಮ ಹಿತದ ವಿರುದ್ಧ ಏನನ್ನು ಮಾಡುವುದಿಲ್ಲ, ಎಂದು ನಾನು ಆಶಿಸುತ್ತೇನೆ, ಯಾವಾಗ ನಾವು ಅವರ ಹಿತದ ಕಾಳಜಿ ವಹಿಸುತ್ತೇವೆ ಆಗ ಅವರು ಕೂಡ ನಮ್ಮ ಹಿತದ ಕಾಳಜಿ ವಹಿಸುತ್ತಾರೆ, ಎಂದು ಬಾಂಗ್ಲಾದೇಶದ ಸೈನ್ಯ ಪ್ರಮುಖ ವಕಾರ-ಉಝ-ಝಮಾನ್ ಇವರು ಒಂದು ದೈನಿಕಗೆ ನೀಡಿರುವ ಸಂದರ್ಶನದಲ್ಲಿ ಹೇಳಿದರು. ಬಾಂಗ್ಲಾದೇಶದಲ್ಲಿ ನಡೆದಿರುವ ಅಧಿಕಾರ ಬದಲಾವಣೆಯಲ್ಲಿ ಅಲ್ಲಿಯ ಸೈನ್ಯ ಮಹತ್ವದ ಪಾತ್ರ ವಹಿಸಿದೆ ಎಂದು ನಂಬಲಾಗಿದೆ. ಅಧಿಕಾರ ಬದಲಾವಣೆಯ ನಂತರ ಭಾರತದ ಜೊತೆಗೆನ ಸಂಬಂಧ ಒತ್ತಡಪೂರಿತವಾಗಿದೆ. ಈ ಹಿನ್ನೆಲೆಯಲ್ಲಿ ವಕಾರ ಝಮಾನ್ ಇವರಿಗೆ ಪ್ರಶ್ನೆ ಕೇಳಲಾಗಿತ್ತು. ಆಗ ಅವರು ಮೇಲಿನ ಉತ್ತರ ನೀಡಿದರು.
ಜನರಲ್ ವಕಾರ್ ಇವರು ಕಳೆದ ವರ್ಷದ ಜನಾಂದೋಲನ ಐತಿಹಾಸಕವಾಗಿತ್ತು ಎಂದು ಹೇಳಿದರು. ಚುನಾವಣೆಯ ಬಗ್ಗೆ ಕೇಳಿರುವಾಗ ಅವರು, ಜನರಿಗೆ ಈಗ ದೇಶದಲ್ಲಿ ನಿಷ್ಪಕ್ಷ ಮತ್ತು ಶಾಂತಿ ಪೂರ್ಣ ಚುನಾವಣೆ ಬೇಕಿದೆ ಮತ್ತು ಮಧ್ಯಂತರ ಸರಕರದ ಉದ್ದೇಶ ಕೂಡ ಇದೆ ಆಗಿದೆ. ಚುನಾವಣಾ ರೂಪ ರೇಖೆ ಕಾರ್ಯಾನ್ವಿತಗೊಳಿಸಲು ಮಧ್ಯಂತರ ಸರಕಾರಕ್ಕೆ ಸೈನ್ಯ ಸಂಪೂರ್ಣ ಸಹಕಾರ ನೀಡುವುದೆಂದು ಹೇಳಿದರು.

‘ಭಾರತ ನಮ್ಮ ಮೇಲೆ ಪ್ರಭಾವ ಬೀರುತ್ತಿದೆ’, ಎಂದು ಬಾಂಗ್ಲಾದೇಶಿಯರಿಗೆ ಅನಿಸಬಾರದು !

ಭಾರತದ ಜೊತೆಗಿನ ಸಂಬಂಧದ ಕುರಿತು ಜನರಲ್ ವಕಾರ ಇವರು, ಭಾರತ ಒಂದು ಮಹತ್ವದ ನೆರೆಯ ದೇಶವಾಗಿದೆ. ನಾವು ಅನೇಕ ರೀತಿಯಲ್ಲಿ ಭಾರತದ ಮೇಲೆ ಅವಲಂಬಿಸಿದ್ದೇವೆ. ಭಾರತಕ್ಕೂ ಕೂಡ ನಮ್ಮಿಂದ ಸೌಲಭ್ಯಗಳು ಸಿಗುತ್ತಿವೆ. ಇಲ್ಲಿಂದ ಅನೇಕ ಜನರು ಚಿಕಿತ್ಸೆಗಾಗಿ ಭಾರತಕ್ಕೆ ಹೋಗುತ್ತಾರೆ. ನಾವು ಅವರಿಂದ ಬಹಳಷ್ಟು ವಸ್ತುಗಳು ಖರೀದಿಸುತ್ತೇವೆ. ಆದ್ದರಿಂದ ಬಾಂಗ್ಲಾದೇಶದ ಸ್ಥಿರತೆಯಲ್ಲಿ ಭಾರತಕ್ಕೆ ಬಹಳ ಆಸಕ್ತಿ ಇದೆ. ಇದು ಕೊಡು ಕೊಳ್ಳುವ ಸಂಬಂಧವಿದೆ. ಅದು ನಿಷ್ಪಕ್ಷತೆಯ ಆಧಾರದಲ್ಲಿ ಇರಬೇಕು. ಸಮಾನತೆಯ ಆಧಾರದಲ್ಲಿ ಒಳ್ಳೆಯ ಸಂಬಂಧ ಹೊಂದಬೇಕಾಗುತ್ತದೆ; ಆದರೆ ಭಾರತ ನಮ್ಮ ಮೇಲೆ ಪ್ರಭಾವ ಬೀರುತ್ತಿದೆ, ಎಂದು ನಮ್ಮ ಜನರಿಗೆ ಅನಿಸಬಾರದು’, ಇದನ್ನು ಕೂಡ ಗಮನಿಸಬೇಕು, ಎಂದು ಹೇಳಿದರು .

ನಮ್ಮದು ಎಲ್ಲರ ಜೊತೆಗೆ ಸ್ನೇಹದ ಮತ್ತು ಯಾರೊಂದಿಗೂ ದ್ವೇಷಿಸದಿರುವ ನೀತಿ

ಮ್ಯಾನ್ಮಾರದಲ್ಲಿ ನಡೆಯುತ್ತಿರುವ ಗೃಹಯುದ್ಧದಿಂದ ಗಡಿಯಲ್ಲಿ ನಿರ್ಮಾಣವಾಗಿರುವ ಅಶಾಂತತೆಯ ಬಗ್ಗೆ ಕೂಡ ಬಾಂಗ್ಲಾದೇಶದ ಸೈನ್ಯ ಮುಖ್ಯಸ್ಥ ವಕಾರ ಇವರು ಹೇಳಿಕೆ ನೀಡಿದರು. ಅವರು, ಮ್ಯಾನ್ಮಾರ್ ಗಡಿಯಲ್ಲಿನ ಸ್ಥಿರತೆ ಹದಗೆಡುವುದಿಲ್ಲ. ಅವರು ನಮ್ಮ ಜನರನ್ನು ಗಡಿಯಲ್ಲಿ ಕೊಲ್ಲುವುದಿಲ್ಲ. ನಮಗೆ ಯಾವುದೇ ಅಡಚಣೆ ಇಲ್ಲ. ಸಂಬಂಧ ಸಮಾನ ಮಟ್ಟದಲ್ಲಿ ಇರಬೇಕು. ನಮ್ಮದು ಎಲ್ಲರ ಜೊತೆಗೆ ಸ್ನೇಹದ ಮತ್ತು ಯಾರ ಜೊತೆಗೂ ದ್ವೇಷಿಸದಿರುವ ಉತ್ಕೃಷ್ಟ ವಿದೇಶ ನೀತಿ ಇರುವುದು ಎಂದು ಹೇಳಿದರು.

ಸಂಪಾದಕೀಯ ನಿಲುವು

ಕೇವಲ ದೇಶದ ವಿರೋಧದಲ್ಲಿ ಅಲ್ಲ, ಸ್ವಂತ ದೇಶದಲ್ಲಿನ ಹಿಂದುಗಳ ವಿರೋಧದಲ್ಲಿ ಕೂಡ ಏನು ಮಾಡಬಾರದೆಂದು ಭಾರತದ ಅಪೇಕ್ಷೆ ಆಗಿದೆ. ಬಾಂಗ್ಲಾದೇಶದಲ್ಲಿನ ಹಿಂದೂಗಳ ರಕ್ಷಣೆ ಏಕೆ ಮಾಡಲಾಗುತ್ತಿಲ್ಲ ? ಇದನ್ನು ಜನರಲ್ ವಕಾರ ಇವರು ಹೇಳಬೇಕು !