ದಾಳಿಕೋರ 42 ವರ್ಷದ ಮಾಜಿ ಸೇನಾಧಿಕಾರಿ ಶಂಸುದ್ದೀನ್ ಜಬ್ಬಾರ ಎಂದು ಗುರುತಿಸಲಾಗಿದೆ !

ನ್ಯೂ ಓರ್ಲಿಯನ್ಸ್‌ (ಅಮೇರಿಕಾ)ನಲ್ಲಿ ನಡೆದ ಟ್ರಕ್ ದಾಳಿಯಲ್ಲಿ 15 ಜನರ ದುರ್ಮರಣದ ಪ್ರಕರಣ

ನ್ಯೂ ಓರ್ಲಿಯನ್ಸ್ (ಅಮೇರಿಕಾ) – ಒಂದು ಟ್ರಕ್ ವೇಗವಾಗಿ ಬಂದು ಕ್ರೈಸ್ತರ ಹೊಸ ವರ್ಷವನ್ನು ಸ್ವಾಗತಿಸಲು ನೆರೆದಿದ್ದ ಜನರ ಮೇಲೆ ಹಾಯಿಸಿದ ಘಟನೆ ಅಮೇರಿಕಾದ ನ್ಯೂ ಓರ್ಲಿಯನ್ಸ್‌ನಲ್ಲಿ ನಡೆದಿದೆ. ಇದರಲ್ಲಿ 15 ಮಂದಿ ಸಾವನ್ನಪ್ಪಿದ್ದರು. ನಂತರ ಪೊಲೀಸರು ಟ್ರಕ್ ಚಾಲಕನ ಮೇಲೆ ಗುಂಡು ಹಾರಿಸಿ ಆತನನ್ನು ಕೊಂದರು. ದಾಳಿಕೋರನನ್ನು ಅಮೇರಿಕಾದ ಪ್ರಜೆ 42 ವರ್ಷದ ಶಂಸುದ್ದೀನ್ ಜಬ್ಬಾರ್ ಎಂದು ಗುರುತಿಸಲಾಗಿದ್ದೂ ಆತ ಟೆಕ್ಸಾಸ್ ರಾಜ್ಯದ ನಿವಾಸಿಯಾಗಿದ್ದನು.

1. ಜಬ್ಬಾರನು ಜಾರ್ಜಿಯಾ ಸ್ಟೇಟ್ ವಿಶ್ವವಿದ್ಯಾಲಯದ ಪದವೀಧರನಾಗಿದ್ದು, ಸುಮಾರು 10 ವರ್ಷಗಳ ಕಾಲ ಅಮೇರಿಕಾ ಸೈನ್ಯದಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದನು. ಸಧ್ಯಕ್ಕೆ ಅವನು ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನು. ಅಲ್ಲಿ ಅವನಿಗೆ ವಾರ್ಷಿಕ 1 ಲಕ್ಷದ 20 ಸಾವಿರ ಡಾಲರ್ ಅಂದರೆ ಸುಮಾರು ಒಂದು ಕೋಟಿ ರೂಪಾಯಿ ಸಂಬಳವಿತ್ತು.

2. ಜಬ್ಬಾರ್ ನ ಟ್ರಕ್ ಮೇಲೆ ಇಸ್ಲಾಮಿಕ್ ಸ್ಟೇಟ್ ಧ್ವಜ ಇತ್ತು. ಟ್ರಕ್‌ನಲ್ಲಿ ಎ.ಆರ್. ಸ್ಟೈಲ್ ರೈಫಲ್‌ಗಳು, ಪಿಸ್ತೂಲ್‌ಗಳು ಮತ್ತು ಕೆಲವು ಬಾಂಬ್‌ಗಳನ್ನು ಸಿಕ್ಕಿದೆ. ಜಬ್ಬಾರ್ ರಕ್ಷಾಕವಚ ಧರಿಸಿದ್ದನು. ಅವನ ಬಳಿ ರೈಫಲ್ ಇತ್ತು.

3. ಘಟನೆ ಕುರಿತು ಮಾಹಿತಿ ನೀಡಿರುವ ಅಮೆರಿಕಾದ ಗುಪ್ತಚರ ಸಂಸ್ಥೆ ಎಫ್‌.ಬಿ.ಐ. ಅಧಿಕಾರಿ ಅಲೆಥಿಯಾ ಡಂಕನ್, ಜಬ್ಬಾರ್ ಒಬ್ಬನೇ ಈ ಕೊಲೆ ಮಾಡಿಲ್ಲ. ಅವನೊಂದಿಗೆ ಅನೇಕ ಜನರು ಭಾಗಿಯಾಗಿದ್ದಾರೆ. ಅವರ ಹುಡುಕಾಟಕ್ಕೆ ಸಾರ್ವಜನಿಕರ ಸಹಕಾರ ಬೇಕು ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಭಯೋತ್ಪಾದನೆಗೆ ಬಲಿಯಾಗಿರುವವರ ಧರ್ಮ ಯಾವುದೇ ಆಗಿದ್ದರೂ, ಭಯೋತ್ಪಾದಕರಿಗೆ ಧರ್ಮವಿರುತ್ತದೆ, ಎಂಬುದನ್ನು ಈ ಘಟನೆ ಮತ್ತೊಮ್ಮೆ ಸ್ಪಷ್ಟ ಪಡಿಸುತ್ತದೆ !