ಸದ್ಗುರುಗಳ ಅನುಗ್ರಹ

೧. ಸದ್ಗುರುಗಳು ತಮ್ಮ ಶಿಷ್ಯನಿಗೆ ಶಾರೀರಿಕ ಮತ್ತು ಮಾನಸಿಕ ಹೀಗೆ ಎರಡು ಸ್ವರೂಪದ ಬಲವನ್ನು ನೀಡುವುದು

‘ಸಾಧಕನ ದೃಷ್ಟಿಯಿಂದ ಅತ್ಯಂತ ಮೂಲಭೂತ ಮೂರು ಅವಶ್ಯಕತೆಗಳಿವೆ. ಒಂದು ನಿಶ್ಚಿತ ದಿಕ್ಕು, ಎರಡನೆಯದು ಪರಮ ನಿಷ್ಠೆ, ಮೂರನೆದ್ದು ಮಾರ್ಗಕ್ರಮಣ ಮಾಡಲು ಬೇಕಾಗುವ ಶಕ್ತಿ ಕೇವಲ ದಿಕ್ಕು ತಿಳಿದರೂ ಪ್ರಯೋಜನವಿಲ್ಲ ಅಥವಾ ನಿಷ್ಠೆಯಿದ್ದರೂ ಪ್ರಯೋಜನವಿಲ್ಲ. ಅಷ್ಟೇ ಅಲ್ಲ, ಶಕ್ತಿಯಿರುವುದು ಹೆಚ್ಚು ಮಹತ್ವದ್ದಾಗಿದೆ. ಅಧ್ಯಾತ್ಮದಲ್ಲಿ ಶಾರೀರಿಕ ಮತ್ತು ಮಾನಸಿಕ ಎರಡು ಸ್ವರೂಪದ ಬಲ ಆವಶ್ಯಕವಾಗಿವೆ. ಬಲವಿಲ್ಲದೆ ಉತ್ಸಾಹ ಮತ್ತು ಪ್ರತಿಜ್ಞೆ ನಿರ್ಮಾಣವಾಗುವುದಿಲ್ಲ. ಸದ್ಗುರುಗಳು ತಮ್ಮ ಶಿಷ್ಯನಿಗಾಗಿ ತಮಲ್ಲಿನ ಶಕ್ತಿಯನ್ನು ನೀಡಿ ಅದೇ ಕಾರ್ಯವನ್ನು ಮಾಡುತ್ತಿರುತ್ತಾರೆ.

೨. ಅನುಗ್ರಹವಾದ ಕ್ಷಣವೇ ನಿಜವಾದ ಸಾಧಕದೆಶೆಯ ಜನನವಾಗುವುದು

ಬಲ ಸಂಕ್ರಮಣವು ೪ ರೀತಿಯಲ್ಲಿ ಸಂಭವಿಸುತ್ತದೆ. – ಕಣ್ಣು, ಸ್ಪರ್ಶ, ಶಬ್ದ, ಸಂಕಲ್ಪ. ಯಾವುದೇ ರೀತಿಯಿಂದ ಬಲಸಂಕ್ರಮಣವನ್ನು ಮಾಡಿದರೂ ಪರಿಣಾಮ ಮಾತ್ರ ಒಂದೇ ಆಗಿರುತ್ತದೆ. ಯಾವ ವಿಧಾನವನ್ನು ಬಳಸಬೇಕು, ಎಂಬುದು ಸದ್ಗುರುಗಳಲ್ಲಿರುವ ಕ್ಷಮತೆ ಮತ್ತು ಇಚ್ಛೆಯ ಮೇಲೆ ಅವಲಂಬಿಸಿರುತ್ತದೆ. ಆದರೂ, ಈ ಪ್ರಕ್ರಿಯೆಯನ್ನೇ ‘ಅನುಗ್ರಹ ಎಂದು ಕರೆಯುತ್ತಾರೆ. ಅನುಗ್ರಹವಾದ ಕ್ಷಣವೇ ನಿಜವಾದ ಸಾಧಕನ ಜನ್ಮವಾಗುತ್ತದೆ. ಈ ಕ್ಷಣದಿಂದಲೇ ಗುರು-ಶಿಷ್ಯರಲ್ಲಿನ ಸಂಬಂಧವು ತಂದೆ ಮಗನಂತೆ ಪ್ರತಿಷ್ಠಾಪಿಸುತ್ತದೆ ಮತ್ತು ಇಲ್ಲಿಂದಲೇ ಅಧ್ಯಾತ್ಮಜೀವನದ ಪ್ರಕ್ರಿಯೆ ಮುಂದುವರಿಯುತ್ತದೆ.

– ಸ್ವಾಮಿ ವಿದ್ಯಾನಂದ (ಆಧಾರ : ಗ್ರಂಥ ಚಿಂತನಧಾರಾ)