ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಮೂರ್ತಿ ಮದನ ಭೀಮರಾವ ಲೋಕುರ ಇವರ ಹೇಳಿಕೆ
ನವ ದೆಹಲಿ – ಹಿಂದೂ ರಾಷ್ಟ್ರ ಬೇಡಿಕೆಗೆ ಸಂವಿಧಾನಾತ್ಮಕ ಅಧಿಕಾರ ಏನು ಇದೆ ? ಇದು ಸಾಧ್ಯವೇ ? ಹಿಂದೂ ರಾಷ್ಟ್ರವಾಗಬೇಕು, ಎಂದು ಯಾರೂ ಹೇಳುತ್ತಿದ್ದರೆ, ಅದು ಅವರ ವಿಚಾರಧಾರೆಯಾಗಿದೆ. ಸಂವಿಧಾನ ಇದಕ್ಕೆ ಅನುಮತಿ ನೀಡುವುದಿಲ್ಲ. ಆದರೂ ಕೂಡ ಹೀಗೆ ಆಗಬೇಕೆಂದು ಯಾರಾದರೂ ಹೇಳುತ್ತಿದ್ದರೆ, ಅವರನ್ನು ಜೈಲಿಗೆ ಅಟ್ಟಿ, ಹೀಗೆ ಅದರ ಅರ್ಥ ಆಗುವುದಿಲ್ಲ. ಜನರನ್ನು ಪ್ರಚೋದಿಸುವ ಕೆಲಸ ಮಾಡುತ್ತಿದ್ದರೆ, ಅದು ತಪ್ಪಾಗಿದೆ. ಚರ್ಚೆಗೆ ಕರೆಯುತ್ತಿದ್ದರೆ, ಆಗ ಚರ್ಚಿಸಬಹುದು, ಎಂದು ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಮೂರ್ತಿ ಮದನ ಭೀಮರಾವ ಲೋಕುರ ಇವರು ಹೇಳಿಕೆ ನೀಡಿದರು. (ಲೋಕಕಲ್ಯಾಣದ ಕಾರ್ಯ ಹಿಂದೂ ರಾಷ್ಟ್ರದ ಬೇಡಿಕೆಗೆ ಮತ್ತು ಪ್ರಚೋದನೆಗೆ ಯಾವುದೇ ಸಂಬಂಧವಿಲ್ಲ. ಜಿಹಾದಿಗಳಿಂದ ಭಾರತವನ್ನು ಇಸ್ಲಾಮಿ ರಾಷ್ಟ್ರ ಮಾಡಲು ಆಗ್ರಹಿಸಲಾಗುತ್ತಿದೆ, ಅದು ಪ್ರಚೋದನಕಾರಿ ಹೇಳಿಕೆ ಆಗಿದೆ, ಹೀಗೆ ಮಾನ್ಯ ಮಾಜಿ ನ್ಯಾಯಮೂರ್ತಿಗಳು ಏಕೆ ಹೇಳುತ್ತಿಲ್ಲ ? – ಸಂಪಾದಕರು) ಇತ್ತೀಚಿಗೆ ಒಂದು ಹಿಂದಿ ಸಮಾಚಾರ ಪತ್ರಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು ಮಾತನಾಡುತ್ತಿದ್ದರು. ನ್ಯಾಯಮೂರ್ತಿ ಲೋಕುರ್ ಇವರು ವಿಶ್ವ ಸಂಸ್ಥೆಯ ಅಂತರ್ಗತ ನ್ಯಾಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಆಗಿದ್ದಾರೆ. ಅವರ ಅವಧಿ ೨೦೨೮ ರ ವರೆಗೆ ಇರುವುದು. ಅವರು ಸರ್ವೋಚ್ಚ ನ್ಯಾಯಾಲಯದಲ್ಲಿ ೬ ವರ್ಷ ಇದ್ದರು.
ನ್ಯಾಯಮೂರ್ತಿಗಳು ಮಾತು ಮುಂದುವರಿಸಿ,
೧. ೧೫೦-೨೦೦ ವರ್ಷಗಳಿಂದ ನ್ಯಾಯ ದೇವತೆಯ ಮೂರ್ತಿಯ ಕಣ್ಣಿಗೆ ಪಟ್ಟಿ ಕಟ್ಟಲಾಗಿತ್ತು. ಅದನ್ನು ಏಕೆ ತೆಗೆದರು ? ಅದನ್ನು ಅವರೇ (ಸರಕಾರ) ಹೇಳಬೇಕು. ನ್ಯಾಯಮೂರ್ತಿ ಇರಲಿ ಅಥವಾ ಸಾಮಾನ್ಯ ಮನುಷ್ಯ ಇರಲಿ ನ್ಯಾಯ ಎಲ್ಲರಿಗೂ ಸಮಾನವಾಗಿರಬೇಕು. ಪಟ್ಟಿ ತೆಗೆದ ಮೇಲೆ ಅವನು ದೊಡ್ಡ ಮನುಷ್ಯ ಅಥವಾ ರಾಜಕೀಯ ನಾಯಕ ಇದ್ದಾನೆ, ಇದು ಬಹುಶಃ ನಿಮಗೆ ಕಾಣುವುದು. ಅವರ ಪರವಾಗಿ ತೀರ್ಪು ನೀಡಬೇಕು. (ನ್ಯಾಯ ದೇವತೆಯ ಕಣ್ಣಿನ ಮೇಲೆ ಪಟ್ಟಿ ಇರುವಾಗಲೂ ಕೂಡ ರಾಜಕೀಯ ನಾಯಕರಾಗಿರಲಿ ಅಥವಾ ಶ್ರೀಮಂತ ಜನರಿರಲಿ ಅವರು ಅನೇಕ ಬಾರಿ ಹಣ ಮತ್ತು ಹುದ್ದೆಯ ಆಧಾರದಲ್ಲಿ ನ್ಯಾಯ ವ್ಯವಸ್ಥೆಯಲ್ಲಿನ ಸೌಲಭ್ಯವನ್ನು ದುರುಪಯೋಗಪಡಿಸಿಕೊಂಡಿದ್ದಾರೆ, ಇದು ಬಹಿರಂಗ ಸತ್ಯವಾಗಿದೆ ಇದನ್ನು ಕೂಡ ಮರೆಯಬಾರದು ! – ಸಂಪಾದಕರು)
೨. ಕ್ರಿಮಿನಲ್ ನ್ಯಾಯ ಹಾಗೂ ದೂರಸಂಪರ್ಕಕ್ಕೆ ಸಂಬಂಧಪಟ್ಟ ನೂತನ ಕಾನೂನಿನ ಕುರಿತು ನ್ಯಾಯಮೂರ್ತಿಯವರು, ಇದರ ಪರಿಣಾಮ ಎಂದರೆ ಸಾಮಾನ್ಯ ಜನರಿಗೆ ಸಂವಿಧಾನದಿಂದ ನೀಡಿರುವ ಮೂಲಭೂತ ಅಧಿಕಾರದ ಮೇಲೆ ನಿಷೇಧ ಬರುವುದು. (ಜನರಿಂದ ಆಯ್ಕೆ ಮಾಡಿರುವ ಸರಕಾರ ಸಂಸತ್ತಿನಲ್ಲಿ ಈ ಕಾನೂನು ಅಂಗೀಕರಿಸಿರುವಾಗ ಮಾನ್ಯ ಮಾಜಿ ನ್ಯಾಯಮೂರ್ತಿಗಳೇ ಈ ರೀತಿಯ ಹೇಳಿಕೆ ನೀಡುವುದು, ಎಂದರೆ ಇದರಿಂದ ಅವರೇ ಪ್ರಜಾಪ್ರಭುತ್ವದ ಕುರಿತು ಅವಿಶ್ವಾಸ ತೋರಿಸಿದ್ದಾರೆ, ಎಂದರೆ ತಪ್ಪಾಗಲಾರದು ! – ಸಂಪಾದಕರು)
ಸಂಪಾದಕೀಯ ನಿಲುವು
|