ಕೋಲಕಾತಾ ಉಚ್ಚನ್ಯಾಯಾಲಯದಲ್ಲಿ ಮೊಕದ್ದಮೆ
ಕೋಲಕಾತಾ (ಬಂಗಾಳ) – ಬಂಗಾಳದ ರಶೀದಾಬಾದ್ ಗ್ರಾಮ ಪಂಚಾಯತಿಯ ಸರಪಂಚ ಲವ್ಲಿ ಖಾತೂನ ಅವರ ಪೌರತ್ವ ವಿವಾದವು ಮತ್ತಷ್ಟು ತೀವ್ರಗೊಂಡಿದೆ. ಮಾಲದಾ ಜಿಲ್ಲೆಯ ತೃಣಮೂಲ ಕಾಂಗ್ರೆಸ್ ನೇತೃತ್ವದ ರಶೀದಾಬಾದ್ ಗ್ರಾಮ ಪಂಚಾಯತಿಯ ಮುಖ್ಯಸ್ಥೆ ಲವ್ಲಿ ಖಾತೂನ್ ಬಾಂಗ್ಲಾದೇಶಿ ನುಸುಳುಕೋರಳು ಎಂದು ಹೇಳಲಾಗುತ್ತಿದೆ. ಆಕೆಯ ಮೇಲೆ ಪಾಸ್ಪೋರ್ಟ್ ಇಲ್ಲದೆ ಭಾರತಕ್ಕೆ ಪ್ರವೇಶಿಸಿದ ಆರೋಪ ವಿದೆ. ಲವ್ಲಿ ಖಾತೂನ್ ಅವರ ನಿಜವಾದ ಹೆಸರು ನಾಸಿಯಾ ಶೇಖ್ ಎಂದು ಹೇಳಲಾಗುತ್ತಿದೆ. ಕೋಲಕಾತಾ ಉಚ್ಚನ್ಯಾಯಾಲಯವು ಈ ಬಗ್ಗೆ ಆಡಳಿತದಿಂದ ವರದಿ ಕೇಳಿದೆ.
1. ಚಂಚಲ್ ನ ನಿವಾಸಿ ರೆಹಾನಾ ಸುಲ್ತಾನಾ 2024 ರಲ್ಲಿ ಕೋಲಕಾತಾ ಉಚ್ಚನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದರು. ರೆಹಾನಾ 2022 ರಲ್ಲಿ ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಿದ್ದರು; ಆದರೆ ಅವಳು ಲವ್ಲಿ ಖಾತೂನ ಎದುರು ಸೋತಿದ್ದರು. ಖಾತೂನ ಚುನಾವಣೆಯಲ್ಲಿ ಗೆದ್ದ ನಂತರ ಒಂದೆರಡು ತಿಂಗಳಿನಲ್ಲಿ ತೃಣಮೂಲ ಕಾಂಗ್ರೆಸ್ ಸೇರಿದರು.
2. 2015 ರಲ್ಲಿ ಖಾತೂನ ಹೆಸರಿನಲ್ಲಿ ಆಧಾರ್ ಕಾರ್ಡ್ ಮತ್ತು 2018 ರಲ್ಲಿ ಜನನ ಪ್ರಮಾಣಪತ್ರವನ್ನು ನೀಡಲಾಗಿತ್ತು; ಆದರೆ ಈ ಎಲ್ಲಾ ದಾಖಲೆಗಳನ್ನು ನಕಲಿ ದಾಖಲೆಗಳ ಆಧಾರದ ಮೇಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಅರ್ಜಿದಾರರು ಖಾತೂನ ತನ್ನ ಹೆಸರು ಮತ್ತು ಅಧಿಕೃತ ದಾಖಲೆಗಳನ್ನು ಬದಲಾಯಿಸುವುದು ಸೇರಿದಂತೆ ತನ್ನ ಗುರುತನ್ನು ಬದಲಾಯಿಸಿಕೊಂಡಿದ್ದಾಳೆ, ಎಂದು ಅರ್ಜಿದಾರರು ದಾವೆ ಮಾಡಿದ್ದಾರೆ.
3. ರೆಹಾನಾಳ ವಕೀಲ ಭಾದುರಿ ಮಾತನಾಡಿ, ನಾವು ಸ್ಥಳೀಯ ಪೊಲೀಸ್ ಠಾಣೆಗೆ ಮತ್ತು ಆಡಳಿತಕ್ಕೆ ದೂರು ನೀಡಿದ್ದೇವೆ; ಆದರೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಆದ್ದರಿಂದ ನಾವು 2024 ರಲ್ಲಿ ಕೋಲಕಾತಾ ನ್ಯಾಯಾಲಯದ ಮೊರೆ ಹೋಗಿದ್ದೇವೆ’, ಎಂದು ಹೇಳಿದರು.
ಸಂಪಾದಕೀಯ ನಿಲುವುಇದು ತೃಣಮೂಲ ಕಾಂಗ್ರೆಸ್ ಸರಕಾರಕ್ಕೆ ನಾಚಿಕೆಗೇಡು ! ಬಾಂಗ್ಲಾದೇಶಿ ನುಸುಳುಕೋರರಿಗೆ ಸರಕಾರದಿಂದ ಸಹಾಯ ಸಿಗುತ್ತಿದ್ದರೆ, ಅಂತಹ ನುಸುಳುಕೋರರನ್ನು ಯಾರು ಹೊರಹಾಕುತ್ತಾರೆ ? |