ಒಬ್ಬ ಬೇಟೆಗಾರನು ಬೇಟೆಯಾಡಲು ಕಾಡಿಗೆ ಹೋದನು. ಅವನು ಬಯಸಿದ್ದ ಬೇಟೆ ಅವನಿಗೆ ಸಿಗಲಿಲ್ಲ. ಅವನು ಬೇಸರಗೊಂಡು ಕಾಡಿನಲ್ಲಿ ಬೇಟೆಯನ್ನು ಹುಡುಕುತ್ತಾ ಅಲೆದಾಡುತ್ತಿದ್ದನು. ಅಲ್ಲಿ ಅವನಿಗೆ ಒಂದು ಗುಡಿಸಲು ಕಾಣಿಸಿತು. ಅಲ್ಲಿ ಒಬ್ಬ ಸಾಧು ಮಹಾರಾಜರು ಕುಳಿತಿದ್ದರು. ಬೇಟೆಗಾರನು ಗುಡಿಸಲಿಗೆ ನುಗ್ಗಿ ಅವರ ಸಮಾಧಿಸ್ಥಿತಿಯನ್ನು ಭಂಗಗೊಳಿಸಿದನು. ಅವನು ‘ನೀವು ಇಲ್ಲಿ ಏಕೆ ವಾಸ ಮಾಡುತ್ತಿದ್ದೀರಿ ? ಎಂದು ಕೇಳಿದನು, ಸಾಧು ಮಹಾರಾಜರು ಸಂಕ್ಷಿಪ್ತವಾಗಿ ಉತ್ತರಿಸಿ ಮುಗಿಸುವ ಸಲುವಾಗಿ ‘ನಾನೂ ಕೂಡ ಬೇಟೆಗಾರನೇ ಆಗಿದ್ದೇನೆ. ಇಲ್ಲಿ ನಾನು ನನ್ನ ಬೇಟೆಯ ದಾರಿ ಕಾಯುತ್ತಿದ್ದೇನೆ ಎಂದು ಹೇಳುತ್ತಾರೆ. ಬೇಟೆಗಾರನು ಕುತೂಹಲದಿಂದ ‘ಯಾವ ಬೇಟೆ ಹುಡುಕುತ್ತಿದ್ದೀರಿ ? ನನ್ನ ಬೇಟೆಯಂತೂ ನನಗೆ ಸಿಗುತ್ತಿಲ್ಲ, ಆದರೆ, ನಾನು ನಿಮಗೆ ನಿಮ್ಮ ಬೇಟೆಯನ್ನು ಹುಡುಕಲು ಸಹಾಯ ಮಾಡಬಲ್ಲೆನು, ಎಂದು ಹೇಳಿದನು,
ಸಾಧು ಮಹಾರಾಜರು ಮನಸ್ಸಿನಲ್ಲಿಯೇ, ಇವನಿಂದ ಬಿಡಿಸಿಕೊಳ್ಳಲು ಸುಳ್ಳು ಹೇಳಿದೆನು, ಆದರೆ ಇವನು ನನಗೆ ಮತ್ತಷ್ಟು ಸುಳ್ಳು ಹೇಳುವಂತೆ ಮಾಡುತ್ತಿದ್ದಾನೆ ಎಂದು ಅಂದುಕೊಳ್ಳುತ್ತಾರೆ. ಬೇಟೆಗಾರನು ಬೇಟೆಯ ವಿವರವನ್ನು ನೀಡುವಂತೆ ಕೇಳಿದನು. ಅದಕ್ಕೆ ಸಾಧು ಮಹಾರಾಜರು, ‘ನನ್ನ ಬೇಟೆ ಕೃಷ್ಣವರ್ಣದವನಿದ್ದಾನೆ. ಅವನ ತಲೆಯಲ್ಲಿ ನವಿಲುಗರಿ ಯಿದೆ. ಅವನು ಯಾರ ಕೈಗೂ ಸಿಗುವುದಿಲ್ಲ ಎಂದರು. ಆಗ ಬೇಟೆಗಾರನು, ‘ನಾನು ಹುಡುಕಿ ತರುತ್ತೇನೆ. ನೀವು ಶಾಂತಚಿತ್ತ ದಿಂದ ಗುಡಿಸಲಿನಲ್ಲಿಯೇ ಕುಳಿತುಕೊಳ್ಳಿರಿ ಎಂದು ಹೇಳಿದನು.
ಇದಾದ ನಂತರ ಸಾಧು ಮಹಾರಾಜರು ನಗುತ್ತ ಮತ್ತೆ ತಪಸ್ಸಿನಲ್ಲಿ ಮಗ್ನರಾದರು. ಬೇಟೆಗಾರನು ಬೇಟೆಯನ್ನು ಹುಡುಕಲು ಹೊರಟನು. ಅವನು ಆ ಬೇಟೆಯ ಧ್ಯಾನವನ್ನೇ ಹಿಡಿದನು. ಹಗಲು ರಾತ್ರಿ ಕಾಡಿನ ಇಂಚಿಂಚೂ ಹುಡುಕಿ ನೋಡಿದನು. ನೀರಿನ ಹನಿಯನ್ನೂ ಕುಡಿಯಲಿಲ್ಲ. ತಿನ್ನುವ ನೆನಪೂ ಇರಲಿಲ್ಲ. ಹೀಗೆಯೇ ೪ ದಿನ ಕಳೆಯಿತು. ಕೊನೆಗೂ ಶ್ರೀಕೃಷ್ಣನಿಗೆ ದಯೆ ಬಂದಿತು. ಅವನ ಮುಗ್ಧತೆಯನ್ನು ನೋಡಿ ಕೃಷ್ಣನು ಅವನಿಗೆ ದರ್ಶನವನ್ನು ನೀಡಿದನು. ಬೇಟೆಗಾರನಿಗೆ ಆನಂದವಾಯಿತು. ಅವನು ಕೃಷ್ಣನ ಕೈಹಿಡಿದುಕೊಂಡು ಅವನನ್ನು ಸಾಧು ಮಹಾರಾಜರ ಬಳಿಗೆ ಕರೆದುಕೊಂಡು ಬಂದನು. ಸಾಧು ಮಹಾರಾಜರು ಆಶ್ಚರ್ಯಚಕಿತರಾದರು. ಅವರು ಶ್ರೀಕೃಷ್ಣನಿಗೆ ನಮಸ್ಕರಿಸಿ, ‘ದೇವಾ, ಇಷ್ಟು ವರ್ಷ ಕಾಡಿನಲ್ಲಿದ್ದು ನಾನು ನಿನ್ನ ಧ್ಯಾನವನ್ನು ಮಾಡುತ್ತಿದ್ದೇನೆ; ಆದರೆ ನೀನು ನನ್ನನ್ನು ಭೇಟಿಯಾಗದೇ ಆ ಬೇಟೆಗಾರನಿಗೆ ಭೇಟಿಯಾದೆ, ಇದು ಹೇಗೆ ? ಎಂದು ಕೇಳಿದನು. ಶ್ರೀಕೃಷ್ಣನು ‘ಬೇಟೆಗಾರನು ಇತರ ಯಾವುದೇ ವಿಷಯಗಳ ವಿಚಾರ ವನ್ನು ಮಾಡದೇ ನನ್ನದೇ ಧ್ಯಾನ ವನ್ನು ಮಾಡುತ್ತಾ, ತನ್ನ ಹಸಿವು, ನೀರಡಿಕೆಗಳನ್ನು ಕೂಡ ಮರೆತಿದ್ದನು. ಗುರಿಯನ್ನು ಸಾಧಿಸಲು ಯಾರು ಇಷ್ಟು ಸಮರ್ಪಣಾ ಭಾವದಿಂದ ಮಾಡುತ್ತಾರೆಯೋ, ಅವರಿಗೇ ನಾನು ಸಿಗುತ್ತೇನೆ. ನೀವು ಇಷ್ಟು ವರ್ಷಗಳ ವರೆಗೆ ಧ್ಯಾನ ಮಾಡುತ್ತಿದ್ದರೂ, ಇತರ ವಿಷಯಗಳಿಂದ ನಿಮ್ಮ ಮನಸ್ಸು ವಿಚಲಿತವಾಗಿತ್ತು. ತದ್ವಿರುದ್ಧ ಆ ಬೇಟೆಗಾರನು ಸಂಪೂರ್ಣ ಸಮರ್ಪಿತಭಾವವನ್ನಿಟ್ಟುಕೊಂಡು ನನ್ನನ್ನು ಪಡೆದನು ಎಂದನು.
ನಾಮದ ಮಹಾತ್ಮೆ ಎಷ್ಟು ಅದ್ಭುತವಾಗಿದೆಯೆಂದರೆ, ನಾಮ ಉಚ್ಛರಿಸುವವನು ಮತ್ತು ಅದನ್ನು ಕೇಳುವವನು ಇಬ್ಬರ ಉದ್ಧಾರವಾಗುತ್ತಾರೆ. ಭಕ್ತನ ಎಲ್ಲ ದೋಷಗಳನ್ನು ನಿವಾರಣೆ ಮಾಡಿ, ನಾಮ ಅವನನ್ನು ದೋಷಮುಕ್ತಗೊಳಿಸುತ್ತದೆ; ಆದ್ದರಿಂದ ಜಡವಾಗಿರುವ ಜೀವಿಗಳನ್ನು ನಾಮಸ್ಮರಣೆಯೇ ರಕ್ಷಿಸುತ್ತದೆ.
(‘ಪೂ. (ಪ್ರಾ.) ಕೆ.ವಿ ಬೆಲಸರೆ ಇವರ ಆಧ್ಯಾತ್ಮಿಕ ಸಾಹಿತ್ಯ ಈ ಫೇಸ್‌ಬುಕ್ ಆಧಾರ)
ಗುರುದೇವರ ಸಾನಿಧ್ಯ ಮತ್ತು ಗುರುದೇವರ ದೀಕ್ಷೆಯೇ ಸಾಧಕರನ್ನು ಉದ್ಧರಿಸುವುದು‘ಜಗತ್ತಿನಲ್ಲಿನ ಎಲ್ಲ ಸ್ನೇಹಿತರು ಒಟ್ಟಿಗೆ ಸೇರಿ, ಎಲ್ಲ ಸಾಧನಗಳನ್ನು ಒಟ್ಟುಗೂಡಿಸಿ, ಎಲ್ಲ ವಸ್ತುಗಳನ್ನು ದೊರಕಿಸಿ ಮತ್ತು ಎಲ್ಲ ಧನಸಂಪತ್ತನ್ನು ಒಟ್ಟುಗೂಡಿಸಿದರೂ ಮನುಷ್ಯನನ್ನು ಜನ್ಮ-ಮರಣದ ಚಕ್ರಗಳಿಂದ ಬಿಡಿಸಲು ಸಾಧ್ಯವಿಲ್ಲ. ಗುರುದೇವರ ಸಾನಿಧ್ಯದಲ್ಲಿ ಮತ್ತು ಗುರುದೇವರ ದೀಕ್ಷೆಯಲ್ಲಿಯೇ ಸಾಧಕರನ್ನು ಉದ್ಧರಿಸುವ ಸಾಮರ್ಥ್ಯವಿರುತ್ತದೆ. (ಆಧಾರ : ಗ್ರಂಥ ‘ಸದಾ ದೀಪಾವಳಿ) |
ನಿಜವಾದ ಗುರುಗಳು ತಮಗೆ ದೊರಕಿದ ಎಲ್ಲವನ್ನು ಸಮಾಜಕ್ಕೇ ಕೊಡುತ್ತಿರುವುದುನಿಜವಾದ ಗುರುಗಳು, ಕೊಡಲು ಇಷ್ಟಪಡುತ್ತಾರೆ ಮತ್ತು ತೆಗೆದುಕೊಳ್ಳುತ್ತಾರೆ, ಅದೂ ಸಹ ಕೊಡುವುದಕ್ಕಾಗಿಯೇ ತೆಗೆದುಕೊಳ್ಳುತ್ತಾರೆ. ಅವರು ತೆಗೆದುಕೊಳ್ಳುವುದು ಕಾಣಿಸುತ್ತದೆ; ಆದರೆ ತೆಗೆದುಕೊಂಡಿರುವ ವಸ್ತುಗಳನ್ನು ಅವರು ಮರಳಿ ಪುನಃ ಅದನ್ನು ಸಮಾಜದ ಹಿತಕ್ಕಾಗಿ ಮತ್ತು ಸೇವೆಗಾಗಿಯೇ ಕೊಟ್ಟುಬಿಡುತ್ತಾರೆ. (ಆಧಾರ : ಗ್ರಂಥ ‘ಸದಾ ದೀಪಾವಳಿ) |